ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುವ ರಶ್ಮಿಕ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಮೂಲಕ ಅಭಿನಯ ಆರಂಭಿಸಿದರು ಕೂಡ ಇಂದು ಅತೀ ಕಡಿಮೆ ವಯಸ್ಸಿಗೆ ಇಡೀ ದೇಶದ ಪ್ರಮುಖ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿ ಎನ್ನುವ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ತುಂಬಾ ಸಿಂಪಲ್ ಹುಡುಗಿಯಂತೆ ಮುಗ್ಧವಾಗಿ ಕನ್ನಡಿಗರ ಎದುರು ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಕನ್ನಡದಲ್ಲಿ ಮುದ್ದಾಗಿ ಮಾತನಾಡುತ್ತಿದ್ದ ರಶ್ಮಿಕ ಮಂದಣ್ಣ ಅವರು ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗದ ಬಳಿಕ ಕನ್ನಡ ಭಾಷೆಯನ್ನು ಕಷ್ಟ ಎಂದು ಅವಮಾನಿಸತೊಡಗಿದರು. ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಜೊತೆಗಿನ ಪ್ರೀತಿ ಹಾಗೂ ಅವರೊಂದಿಗೆ ಮಾಡಿಕೊಂಡಿದ್ದ ನಿಶ್ಚಿತಾರ್ಥವನ್ನು ಮುರಿದುಕೊಂಡ ಬಳಿಕ ಮತ್ತಷ್ಟು ಜನರ ಕೆಂಗಣ್ಣಿಗೆ ಗುರಿಯಾದರು.
ಇದಾದ ಬಳಿಕ ಕನ್ನಡಿಗರು ಇವರನ್ನು ಟ್ರೋಲ್ ಮಾಡಲು ಶುರು ಮಾಡಿದರು. ಜೊತೆಗೆ ಇತ್ತೀಚೆಗೆ ರಶ್ಮಿಕ ಮಂದಣ್ಣ ಅವರ ವರ್ತನೆಯ ಕೂಡ ಟ್ರೋಲ್ ಮಾಡುವವರ ಬಾಯಿಗೆ ಆಹಾರವಾಗುವಂತಿತ್ತು. ಹಾಗಾಗಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ವಿವಾದ ಮಾಡಿಕೊಂಡು ಎಡವಟ್ಟಾಗಿ ನಡೆದುಕೊಂಡು ಅಥವಾ ಯೋಚನೆ ಮಾಡದೆ ಮಾತನಾಡಿ ನಟಿ ರಶ್ಮಿಕ ಮಂದಣ್ಣ ಅವರು ಟ್ರೋಲಿಗೆ ಒಳಗಾಗುತ್ತಿದ್ದರು. ಉದ್ದೇಶಪೂರ್ವಕವಾಗಿ ಇವರ ಪ್ರತಿಯೊಂದು ಪೋಸ್ಟ್ಗಳನ್ನು ಕೂಡ ಗೇಲಿ ಮಾಡಿ ಟ್ರೊಲ್ ಮಾಡುವ ಜನರು ಕೂಡ ಕರ್ನಾಟಕದಲ್ಲಿದ್ದಾರೆ. ಇವರ ಎಲ್ಲಾ ಕೋಪಕ್ಕೆ ಕೂಡ ನೇರ ಹೊಣೆ ರಶ್ಮಿಕ ಮಂದಣ್ಣ ಅವರು ಎಂದರೆ ಅದು ಕೂಡ ತಪ್ಪಾಗಲಾರದು. ತಾಯಿನಾಡು ಹಾಗೂ ತಾಯಿ ಭಾಷೆ ಮೇಲೆ ಅಭಿಮಾನವನ್ನು ಮರೆತ ಕಾರಣ ಇವರು ಇಷ್ಟು ಟ್ರೋಲ್ ದಾಳಿಗೆ ಒಳಗಾಗುತ್ತಿದ್ದಾರೆ ಎಂದೂ ಕೂಡ ಊಹಿಸಬಹುದು.
ಕೆಲವೊಮ್ಮೆ ಯಾವುದಕ್ಕೂ ಕೇರ್ ಮಾಡದ ನಟಿ ಕೆಲವೊಮ್ಮೆ ಲೈವ್ ಗೆ ಬಂದು ಟ್ರೋಲ್ ಮಾಡುವವರ ವಿರುದ್ಧ ಮಾತುಗಳನ್ನು ಸಹ ಆಡುತ್ತಾರೆ. ಏನೇ ಆದರೂ ಕೂಡ ರಶ್ಮಿಕ ಮಂದಣ್ಣ ಅವರ ನಡವಳಿಕೆಗಳಲ್ಲಿ ಉಳುಕು ಹುಡುಕಿ ಹೀಯಾಳಿಸುವುದನ್ನು ಕನ್ನಡದ ಟ್ರೋಲಿಗರು ಬಿಡುವುದಿಲ್ಲ. ಈಗ ವೈರಲ್ ಆಗುತ್ತಿರುವ ಅವರ ಮತ್ತೊಂದು ವಿಡಿಯೋ ಇಂದ ಮತ್ತೊಮ್ಮೆ ಕರ್ನಾಟಕದಾದ್ಯಂತ ರಶ್ಮಿಕ ಮಂದಣ್ಣ ಸನ್ಯಾಸಿ ಆಗುತ್ತಿದ್ದಾರೆ ಎನ್ನುವ ಹೆಸರಿನಲ್ಲಿ ಫೇಮಸ್ ಆಗುತ್ತಿದ್ದಾರೆ. ಇವರು ಈ ರೀತಿ ಅನಿಸಿಕೊಳ್ಳುವುದಕ್ಕೆ ಕಾರಣ ಏನೆಂದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ ರಶ್ಮಿಕ ಮಂದಣ್ಣ ಅವರು ಕಾವಿ ಬಣ್ಣದ ಉಡುಗೆ ತೊಟ್ಟು ಕಾಣಿಸಿಕೊಂಡಿದ್ದರು. ಕಾವಿ ಬಣ್ಣದ ಟಾಪ್ ಹಾಗೂ ಟ್ರೌಸರ್ ಧರಿಸಿದ ರಶ್ಮಿಕ ಮಂದಣ್ಣ ಅವರು ಕಾರಿನಿಂದ ಇಳಿದು ಫ್ಲಾಟ್ ಒಂದರ ಒಳಗೆ ಹೋಗುತ್ತಿದ್ದರು.
ಆಗ ಅಲ್ಲಿದ್ದ ಮಾಧ್ಯಮದವರು ಹಿಂದಿಯಲ್ಲಿ ಮಾತನಾಡಿ ಅವರಿಗೆ ಫೋಸ್ ಕೊಡಲು ಹೇಳಿದರು ಮಾಧ್ಯಮವದವರ ನಿರೀಕ್ಷೆಯಂತೆ ಕಾರಿನಿಂದ ಇಳಿದು ಎರಡು ನಿಮಿಷ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ರಶ್ಮಿಕ ಮಂದಣ್ಣ ಅವರು ಅಷ್ಟೇ ಬೇಗ ಫ್ಲಾಟ್ ಒಳಗೆ ಹೋದರು. ಈ ವಿಡಿಯೋವನ್ನು ನೋಡುತ್ತಿದ್ದರೆ ಅದು ಅವರ ಹಿಂದಿ ಪ್ರಾಜೆಕ್ಟ್ ಗಳಿಗೆ ಸಂಬಂಧಿಸಿದ ಸಮಯದಲ್ಲಿ ಮಾಡಿರುವ ವಿಡಿಯೋ ಇರಬಹುದು ಎನಿಸುತ್ತದೆ. ಆದರೆ ರಶ್ಮಿಕ ಆ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿರುವುದರಿಂದ ಕನ್ನಡಿಗರು ಮಾತ್ರ ರಶ್ಮಿಕಾ ಮಂದಣ್ಣ ಅವರು ಎಲ್ಲವನ್ನು ತ್ಯಜಿಸಿ ಸನ್ಯಾಸಿ ಆಗಲು ಹೊರಟಿದ್ದಾರೆ ಎನ್ನುವ ಪಟ್ಟಿ ಕಟ್ಟಿ ನಟಿಯ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಈ ವಿಚಾರದ ನಿಮ್ಮ ಅಭಿಪ್ರಾಯವೇನು.? ರಶ್ಮಿಕಾ ಸನ್ಯಾಸಿ ಆಗೋದೆ ಸರಿ ಅಂತಿರಾ.? ತಪ್ಪದೆ ನಿಮ್ಮ ಉತ್ತರವನ್ನು ಕಾಮೆಂಟ್ ನಲ್ಲಿ ತಿಳಿಸಿ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.