ಇಡೀ ಕರುನಾಡಿನ ಜನರನ್ನೇ ತನ್ನ ಕುಟುಂಬದವರು ಎನ್ನುತ್ತಾ ಅಷ್ಟೇ ಪ್ರೀತಿಯಿಂದ ಕಾಳಜಿಯಿಂದ ಎಲ್ಲರ ಬಗ್ಗೆ ಕೇರ್ ಮಾಡುತ್ತಿದ್ದ ಕರ್ನಾಟಕದ ಕಣ್ಮಣಿ ನಮ್ಮೆಲ್ಲರ ಪ್ರೀತಿಯ ಅಪ್ಪು ಈಗ ಎಲ್ಲರ ಮನೆ ಮಗ ಹಾಗೂ ಕರುನಾಡಿನಲ್ಲಿ ಯುದ್ಧವೇ ಮಾಡದೆ ರಾಜ್ಯ ಗೆದ್ದ ರಾಜಕುಮಾರ. ಇವರು ಅಭಿಮಾನಿಗಳ ಮನಸ್ಸನ್ನು ಮನಸೂರೆ ಮಾಡಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ ಹಾಗೆಯೇ ತಮ್ಮ ಸಹೃದಯ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಮತ್ತು ಸಮಾಜದಲ್ಲಿ ಅವರನ್ನು ತೊಡಗಿಸಿಕೊಂಡ ಪರಿಯಿಂದ ನೂರಾರು ಜನರಿಗೆ ಆದರ್ಶವಾಗಿ ಇಂದಿನ ಪೀಳಿಗೆಯವರಿಗೆ ರೋಲ್ ಮಾಡಲ್ ಕೂಡ ಆಗಿದ್ದಾರೆ.
ಅಪ್ಪು ಬಗ್ಗೆ ಹೊಗಳಲು ಶುರುಮಾಡಿದರೆ ಪದಗಳೇ ಸಾಲದು. ಆತನೊಬ್ಬ ಅಪ್ರತಿಮಾ ಕಲಾವಿದನಾಗಿ, ಗಾಯಕ ನಾಗಿ, ಡ್ಯಾನ್ಸರ್ ಆಗಿ ಮತ್ತು ಅಡ್ವೆಂಚರ್ ಪ್ರಿಯ ಕೂಡ ಆಗಿದ್ದರು ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಒಬ್ಬ ಫ್ಯಾಮಿಲಿ ಮ್ಯಾನ್ ಎನ್ನುವುದು ನೂರಾರು ಬಾರಿ ಸಾಬೀತಾಗಿದೆ. ಪ್ರೀತಿಸಿ ಮದುವೆಯಾದ ಅಶ್ವಿನಿ ಪಾಲಿಗೆ ಪುನೀತ್ ಕೊನೆಯ ದಿನದವರೆಗೂ ಬೆಸ್ಟ್ ಫ್ರೆಂಡ್ ಆಗಿದ್ದರು. ಮದುವೆ ಆದ ದಿನದಿಂದ ಇಲ್ಲಿಯವರೆಗೆ ಸುಮಾರು 23 ವರ್ಷಗಳ ದಾಂಪತ್ಯದಲ್ಲಿ ಎಂದಿಗೂ ಕೂಡ ಒಂದು ಸಣ್ಣ ವಿವಾದವು ಇಲ್ಲದಂತೆ ಬದುಕಿ ಪ್ರೀತಿಸಿ ಮದುವೆಯಾಗುವವರ ಪಾಲಿಗೆ ಮಾದರಿ ಆದವರು ಈ ಜೋಡಿ.
ಅವರು ಯಾವುದೇ ಸಭೆ ಸಮಾರಂಭಗಳಿಗೆ ಹೋದರು ಕೂಡ ತಪ್ಪದೆ ಅಶ್ವಿನಿ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಅಭಿಮಾನಿಗಳ ಕುಟುಂಬದ ಫಂಕ್ಷನ್ ಗಳಿಗೆ ಆಹ್ವಾನ ಇದ್ದಾಗ ಅಲ್ಲಿಗೂ ಕೂಡ ಪತ್ನಿಯ ಜೊತೆಗೆ ತೆರಳಿ, ಉಡುಗೊರೆ ಕೊಟ್ಟು ಹರಸಿ ಬರುತ್ತಿದ್ದರು. ಮತ್ತು ಅವಕಾಶ ಸಿಕ್ಕಾಗಲಿಲ್ಲ ವೇದಿಕೆಗಳಲ್ಲಿ ಪತ್ನಿ ಹಾಗೂ ಮಕ್ಕಳ ಬಗ್ಗೆ ಮಾತನಾಡುತ್ತಿದ್ದರು. ಸಮಯ ಆದಾಗಲೆಲ್ಲ ಬಿಡುವು ಮಾಡಿಕೊಂಡು ಮಡದಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು ಹಾಗೂ ಮಕ್ಕಳ ಜೊತೆಗೆ ಹೆಚ್ಚಿನ ಸಮಯ ಕಳೆದು ಅವರ ಇಷ್ಟ ಕಷ್ಟಗಳನ್ನು ಅರ್ಥ ಮಾಡಿಕೊಂಡು ಖುಷಿ ಪಡಿಸುತ್ತಿದ್ದರು.
ಅವರೇ ಹೇಳಿಕೊಂಡಂತೆ ಅವರ ಕಿರಿಯ ಮಗಳು ವಂದಿತ ಅವರನ್ನು ರಾತ್ರಿ ಹೊತ್ತು ಒಂದು ರೌಂಡ್ ವಾಕಿಂಗ್ ಕರೆದುಕೊಂಡು ಹೋಗದೆ ಇದ್ದರೆ ನಿದ್ದೆ ಬರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಅಪ್ಪು ಅವರನ್ನು ಕಳೆದುಕೊಂಡು ಮಕ್ಕಳ ಪಾಲಿಗೆ ಆಗಿರುವ ನೋವು ಹಾಗೂ ಅವರ ಮನಸ್ಸಿನಲ್ಲಿ ಆಗುತ್ತಿರುವ ಗೊಂದಲವನ್ನು ಅಳೆಯಲು ಪದಗಳೇ ಸಾಲದಾಗಿದೆ. ಅವರು ಅವರ ಇಬ್ಬರು ಮಕ್ಕಳನ್ನು ಕೂಡ ಬಹಳ ಪ್ರೀತಿಸುತ್ತಿದ್ದರು ಹಿರಿಯ ಮಗಳು ದೃತಿ, ವಿದೇಶದಲ್ಲಿ ಸ್ಕಾಲರ್ಶಿಪ್ ಪಡೆದು ಓದುತ್ತಿದ್ದಾರೆ.
ಇದರ ಬಗ್ಗೆ ಅಪ್ಪುಗೆ ಹೆಮ್ಮೆ ಇತ್ತು ಯಾವಾಗಲೂ ಹೆಣ್ಣು ಮಕ್ಕಳು ನಮ್ಮ ಅಮ್ಮನ ರೀತಿ ಸ್ಟ್ರಾಂಗ್ ಆಗಿ ಇರಬೇಕು, ಎಕನಾಮಿಕಲಿ ಇಂಡಿಪೆಂಡೆಂಟ್ ಆಗಿರಬೇಕು ಎಂದು ಅಪ್ಪು ಹೇಳುತ್ತಿದ್ದರು. ಹೆಣ್ಣು ಮಕ್ಕಳನ್ನು ತುಂಬಾ ಸಪೋರ್ಟ್ ಮಾಡುತ್ತಿದ್ದ ಅಪ್ಪು ಅವರು ಒಮ್ಮೆ ಕಿರಿಯ ಮಗಳು ವಂದಿತಾ ಅವರ ಶಾಲೆಗೆ ಸರ್ಪ್ರೈಸ್ ವಿಸಿಟ್ ಕೂಡ ಕೊಟ್ಟಿದ್ದರು. ಶಾಲೆಯಲ್ಲಿ ಅಪ್ಪನನ್ನು ನೋಡಿ ಮಗಳು ಆಶ್ಚರ್ಯದಿಂದ ಕುಣಿದು ಕುಪ್ಪಳಿಸಿದರೆ ಮಗಳ ಶಾಲೆಯಲ್ಲಿ ಓದುತ್ತಿದ್ದ ಪುಟ್ಟ ಮಕ್ಕಳು ಅಪ್ಪು ಬಂದರೆಂದು ಖುಷಿ ಪಟ್ಟು ಓಡಿಬಂದು ಸುತ್ತುವರೆದಿದ್ದರು ಅಪ್ಪು ಎಂದರೆ ಹೀಗೆ ಅಪ್ಪು ಕಂಡರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಬಹಳ ಇಷ್ಟಪಡುತ್ತಾರೆ ಅಂತಹ ಅಪರೂಪದ ವ್ಯಕ್ತಿತ್ವ ಈ ಮರೆಯಲಾಗದ ಮಾಣಿಕ್ಯನದು. ಈ ವಿಡಿಯೋ ನೋಡಿದಂತಹ ಕೆಲವು ಅಭಿಮಾನಿಗಳು ಅಪ್ಪು ಅವರಿಗೆ ನೀವು ಅವತ್ತು ವಂದಿತಾಳನ್ನು ನೋಡುವುದಕ್ಕೆ ಸರ್ಪ್ರೈಸ್ ಆಗಿ ಶಾಲೆಗೆ ಹೋದ ಮಾದರಿಯಲ್ಲೇ ಇಂದು ಭೂಮಿಗೆ ಸರ್ಪ್ರೈಸ್ ಆಗಿ ಬಂದು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.