ಕುಂಭ ರಾಶಿಯವರ ಏಪ್ರಿಲ್ ತಿಂಗಳ ಭವಿಷ್ಯ ಹೇಗಿರುತ್ತದೆ ಎಂದು ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಬಹುದು. ಈ ಮಾತಿನಿಂದಲೇ ಅರ್ಥ ಆಗುತ್ತದೆ ಅವರಿಗೆ ಈ ತಿಂಗಳಿನಲ್ಲಿ ಶುಭಫಲಗಳು ಎಷ್ಟಿವೆ ಮತ್ತು ಅಶುಭ ಫಲಗಳು ಎಷ್ಟಿವೆ ಎಂದು ಯಾಕೆಂದರೆ ಈಗಾಗಲೇ ಕುಂಭ ರಾಶಿಯವರು ಕಳೆದ ಒಂದು ವರ್ಷದಿಂದ ಸಾಕಷ್ಟು ಕ’ಷ್ಟಗಳನ್ನು ಎದುರಿಸುತ್ತಾರೆ/
ಮತ್ತು ಈಗಿನ ಪರಿಸ್ಥಿತಿ ಅದಕ್ಕೆ ಹೊರತೇನಲ್ಲ ಏಪ್ರಿಲ್ ತಿಂಗಳಿನಲ್ಲಿ ಕೂಡ ಇದೇ ರೀತಿ ಪರಿಸ್ಥಿತಿ ಮುಂದುವರೆದಿದ್ದು ಕೆಲವು ವಿಚಾರಗಳಲ್ಲಿ ನೀವು ಬಹಳಷ್ಟು ಎಚ್ಚರಿಕೆಯಿಂದ ಇದ್ದರೆ ತುಂಬಾ ಒಳ್ಳೆಯದು ಮತ್ತು ಕೆಲವು ವಿಚಾರಗಳಲ್ಲಿ ಸುಧಾರಣೆ ಕೂಡ ಕಂಡುಬರುತ್ತದೆ. ಅದರ ಬಗ್ಗೆ ಈ ಲೇಖನದಲ್ಲಿ ತಿಳಿಸಲು ಬಯಸುತ್ತಿದ್ದೇವೆ.
ನೇರವಾಗಿ ಹೇಳಬೇಕು ಎಂದರೆ ಕುಂಭ ರಾಶಿಯವರಿಗೆ ಅವರೇ ಅವರ ಮನಸಾಕ್ಷಿಯೇ ಹೇಳುತ್ತಿರುತ್ತದೆ ತಾನು ಮಾಡುತ್ತಿರುವುದು ಸರಿ ಅಲ್ಲ ಹೀಗೆ ಮಾಡಿದರೆ ತೊಂದರೆಗೆ ಸಿಲುಕುತ್ತೇನೆ ಎಂದು ಉದಾಹರಣೆಗೆ, ನೀವು ಹೊರಗೆ ಹೋಗುವುದು ಬೇಡ ಎಂದುಕೊಂಡಿರುತ್ತೀರಾ ಆದರೂ ಸ್ನೇಹಿತರ ಒತ್ತಾಯದ ಮೇರೆಗೆ ಹೊರಗೆ ಹೋಗಿರುತ್ತೀರಾ ಲೇಟ್ ಆದ ಕಾರಣ ಮನೆಗೆ ಬರದೆ ಸಮಸ್ಯೆ ಆಗಬಹುದು ಅಥವಾ ನೀವಲ್ಲಿ ತಿಂದ ಆಹಾರ ನಿಮಗೆ ಸೆಟ್ ಆಗದೆ ಇರಬಹುದು.
ತಿನ್ನುವುದೋ ಬೇಡವೋ ಎನ್ನುವ ಗೊಂದಲದಲ್ಲಿ ನೀವು ಈ ತಪ್ಪು ಮಾಡಿದ್ದರು ಶಿಕ್ಷೆ ಅನುಭವಿಸಲೇಬೇಕು ಅಥವಾ ನಿಮ್ಮ ನಿರೀಕ್ಷೆಗೂ ಮೀರಿದ ಖರ್ಚಿನ ಹೊರೆ ಬರಬಹುದು ಹಾಗಾಗಿ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ ಮುಂದುವರೆಯುವುದು ಬಹಳ ಒಳ್ಳೆಯದು.
ಯಾಕೆಂದರೆ, ನಿಮ್ಮ ಮನಸಾಕ್ಷಿ ಹೇಳಿದಂತೆ ಕೇಳಿದರೆ ಬಹಳ ಶುಭಫಲಗಳು ಹಾಗೂ ಒತ್ತಾಯದಿಂದ ಮಾಡುವ ಕಾರ್ಯಗಳಿಗೆ ಅಶುಭ ಫಲಗಳನ್ನು ಈ ತಿಂಗಳಿನಲ್ಲಿ ಪಡೆಯುತ್ತೀರಿ. ಹೊಸ ಸಂವತ್ಸರ ಅಂದರೆ ಯುಗಾದಿ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು. ಆದರೆ ಆ ಸಮಯದಲ್ಲೂ ನೀವಾಯಿತು ನಿಮ್ಮ ಕೆಲಸವಾಯಿತು ಎಂದು ನೀವು ಇರುವುದೇ ನಿಮಗೆ ಒಳ್ಳೆಯದು.
ಮಾತಿನ ಬಗ್ಗೆ ಬಹಳ ನಿಗಾ ಇರಲಿ ಮಾತಿನಿಂದ ಕೂಡ ಸಮಸ್ಯೆಗೆ ಸಿಲುಕುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಮಾತು ಕೊಡುವ ಮುನ್ನ ಅಥವಾ ಮಾತಿನ ಮೂಲಕ ನಡೆಯುವ ವ್ಯವಹಾರಗಳಲ್ಲಿ ಕಟ್ಟು ಬೀಳದಿರಿ ಪ್ರಯಾಣದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು, ಆದಷ್ಟು ಅನಾವಶ್ಯಕ ಪ್ರಯಾಣಗಳನ್ನು ತಪ್ಪಿಸುವುದೇ ಹೆಚ್ಚು ಉತ್ತಮ. ನೀವು ಯಾವುದೇ ಕಾರ್ಯ ಮಾಡಲು ಹೋದರು ವಿಘ್ನಗಳು ಬರುವುದು ಗ್ಯಾರಂಟಿ ಆದರೆ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ.
ಅತಿಯಾಗಿ ಭ’ಯ ಬೀಳುವ ಅಗತ್ಯ ಇಲ್ಲ, ಆತಂಕವೂ ಬೇಡ. ಈ ಮೇಲೆ ತಿಳಿಸಿದಂತೆ ಜಾಗ್ರತೆ ಒಂದಿದ್ದರೆ ಸಾಕು. ಯಾವುದೇ ಸಂದರ್ಭ ಬಂದರೂ ನಿಮ್ಮ ಮನಸ್ಸಿನ ಮಾತನ್ನು ಕೇಳಿ ಹೊರತು ಇತರರ ಸಲಹೆಯನ್ನು ಕಡಿಮೆ ಮಾಡಿ ಎನ್ನುವುದನ್ನು ಬಲವಾಗಿ ಹೇಳಬಹುದು. ಹಣಕಾಸಿನ ಪರಿಸ್ಥಿತಿಯು ಮಧ್ಯಮವಾಗಿರುತ್ತದೆ.
ಮಾತಿನ ಹಿಡಿತದಿಂದ ಮತ್ತು ಇಲ್ಲ ಸಲ್ಲದ ಕೆಲಸಗಳಲ್ಲಿ ತಲೆ ಹಾಕುವುದನ್ನು ತಪ್ಪಿಸುವುದರಿಂದ ಆರ್ಥಿಕ ನ’ಷ್ಟ ಆಗುವುದನ್ನು ತಪ್ಪಿಸಬಹುದು. ಈ ತಿಂಗಳ ನಾಲ್ಕು ಶನಿವಾರಗಳಂದು ಶನೇಶ್ವರ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯ ದರ್ಶನ ಮಾಡಿ ನವಗ್ರಹಗಳ ಆರಾಧನೆ ಮಾಡಿ ಇನ್ನು ಉತ್ತಮ ಫಲಗಳನ್ನು ಪಡೆಯುತ್ತೀರಿ. ಇರುಳು ಕಳೆದು ಬೆಳಕು ಹರಿವಂತೆ ನಿಮ್ಮ ಬದುಕು ಕೂಡ ಉತ್ತಮವಾಗುತ್ತದೆ ಧೈರ್ಯದಿಂದ ಇರಿ.