ನಾವೀಗ ನೂತನ ಸಂವತ್ಸರದ ಆಗಮನದ ತುದಿಯಲ್ಲಿದ್ದೇವೆ. ಏಪ್ರಿಲ್ 09, 2024 ರಂದು ಉತ್ತರಾಯಣ, ವಸಂತ ಮಾಸ, ಚೈತ್ರ ಮಾಸ, ಕ್ರೋಧಿ ಸಂವತ್ಸರ ಆರಂಭವಾಗುತ್ತಿದೆ. ಈ ಸಮಯದಲ್ಲಿ ನವಗ್ರಹಗಳ ಸಂಚಾರದಲ್ಲೂ ಬದಲಾವಣೆಯಾಗುತ್ತಿದೆ. ಏಪ್ರಿಲ್ 09ರಂದು ಬುಧ ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಾರೆ, ಏಪ್ರಿಲ್ 13ರಂದು ಸೂರ್ಯ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾರೆ.
ಏಪ್ರಿಲ್ 23ರಂದು ಕುಜ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾರೆ, ಏಪ್ರಿಲ್ 24ರಂದು ಶುಕ್ರ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾರೆ. ಈ ಎಲ್ಲಾ ಗ್ರಹ ಪರಿವರ್ತನೆ ಪರಿಣಾಮವು ದ್ವಾದಶ ರಾಶಿಗಳೆಂದರೆ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಏಪ್ರಿಲ್ ತಿಂಗಳಲ್ಲಿ ತುಲಾ ರಾಶಿಯ ಮಾಸ ಭವಿಷ್ಯ ಹೇಗಿರುತ್ತದೆ ಎನ್ನುವ ವಿಚಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ತುಲಾ ರಾಶಿಯ ಲಗ್ನ ರಾಶಿಯಾಧಿಪತಿಯಾದ ಶುಕ್ರನು ಉಚ್ಛ ಸ್ಥಾನದಲ್ಲಿದ್ದಾರೆ ಪರಿಣಾಮವಾಗಿ ಶುಭಫಲಗಳನ್ನೇ ಪಡೆಯುತ್ತಿದ್ದೀರಿ. ಆರೋಗ್ಯದಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ, ಒಂದು ವೇಳೆ ಈ ಹಿಂದೆ ಆರೋಗ್ಯ ಸಮಸ್ಯೆ ಇದ್ದರೆ ಕೂಡ ಅದು ಸುಧಾರಣೆ ಆಗಲಿದೆ. ದ್ವಿತೀಯ ಭಾಗ್ಯಾಧಿಪತಿ ಕುಜ ಷಷ್ಠದಲ್ಲಿ ಸಂಚಾರ ಮಾಡುತ್ತಿರುತ್ತಾರೆ.
ಈ ಸುದ್ದಿ ಓದಿ:- ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!
ಪಾಪ ಗ್ರಹಗಳಿಗೆ 3, 6, 11 ಶುಭ ಸ್ಥಾನವೇ ಆದ್ದರಿಂದ ಶುಭ ಫಲಿತಾಂಶಗಳೇ ಸಿಗುತ್ತಿದೆ. ಸ್ವಲ್ಪ ರಾಹುಗ್ರಸ್ತನಾಗಿರುವುದರಿಂದ ಮಾತಿನ ಮೇಲೆ ಹಿಡಿತ ಇರಬೇಕು. ಮಾತು ಕೊಡುವಾಗ ಮಾತಿಗೆ ಸಿಲುಕುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಮತ್ತು ನಿಮ್ಮ ಮಾತಿನಿಂದಲೇ ಕ’ಲ’ಹ, ಜ’ಗ’ಳ, ಮ’ನ’ಸ್ತಾ’ಪ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಯಾರ ಜೊತೆ ಮಾತನಾಡಬೇಕಾದರೂ ಮಾತು ಮಿತವಾಗಿರಲಿ ಹಿತವಾಗಿರಲಿ.
ಹಣಕಾಸಿನ ವಿಚಾರದಲ್ಲಿ ವಿಳಂಬವಾದರೂ ಶುಭವಾಗುತ್ತದೆ. ಧನಕಾರಕ ಶುಕ್ರನು ಉಚ್ಛ ಸ್ಥಾನದಲ್ಲಿರುವುದರಿಂದ ಧನಯೋಗವಿದೆ. ಮೇಷ ರಾಶಿಯನ್ನು ಶುಕ್ರ ಪ್ರವೇಶ ಮಾಡಿದರು ಕೂಡ ಶುಕ್ರನು ಜನ್ಮ ರಾಶಿಯನ್ನು ನೋಡುತ್ತಾರೆ, ಇದು ಕೂಡ ಶುಭಫಲಗಳನ್ನು ನೀಡುತ್ತಿದೆ. ಇದರಿಂದಾಗಿ ನೂತನ ವರ್ಷದ ಪ್ರಾರಂಭವೂ ತುಲಾ ರಾಶಿಯವರಿಗೆ ಬಹಳ ಉತ್ತಮ ರೀತಿಯಲ್ಲಿ ಆರಂಭವಾಗುತ್ತಿದೆ ಎಂದೇ ಹೇಳಬಹುದು.
3ನೇ ಮನೆ ಅಧಿಪತಿಯಾದ ಗುರುವು 7ನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದು ಏಪ್ರಿಲ್ ಅಂತ್ಯದಲ್ಲಿ ಅಷ್ಟಮ ಭಾವವನ್ನು ಪ್ರವೇಶ ಮಾಡುತ್ತಾರೆ. ಈ ತೃತೀಯ ಭಾವವನ್ನು ಸಹೋದರ ಸ್ಥಾನ ಎಂದು ಕೂಡ ಹೇಳುವುದರಿಂದ ಒಡಹುಟ್ಟಿದವರು ಜೊತೆಗಿನ ಒಡನಾಟವನ್ನು ಸೂಚಿಸುತ್ತದೆ.
ಈ ಸುದ್ದಿ ಓದಿ:- ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!
ಇದರ ಪರಿಣಾಮ ಹೇಗಿರುತ್ತದೆ ಎಂದರೆ ನೀವು ಎಷ್ಟು ಚೆನ್ನಾಗಿ ನಿಮ್ಮ ಒಡ ಹುಟ್ಟಿದವರ ಜೊತೆ ಹೊಂದಿಕೊಂಡಿರುತ್ತೀರೋ ಅಷ್ಟು ಒಳ್ಳೆಯ ಫಲಗಳು ಒಂದು ವೇಳೆ ಮನಸ್ತಾಪಗಳಾದರೆ ಅಷ್ಟೇ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾದ ಫಲಗಳನ್ನು ಹೊಂದಿದೆ ಎಂದು ಹೇಳುತ್ತದೆ.
ಎಲ್ಲ ವಿಚಾರಗಳನ್ನು ಕೂಡ ಒಳ್ಳೆ ರೀತಿಯ ಫಲಿತಾಂಶಗಳನ್ನು ಪಡೆದಿದ್ದರೂ ಗುರುಬಲದ ಕೊರತೆ ಹಾಗೂ ಶನಿ ದೋಷ ತುಲಾ ರಾಶಿಯವರನ್ನು ಖಂಡಿತವಾಗಿಯೂ ಕಾಡುತ್ತದೆ. ಇದರಿಂದ ಕೆಲ ಸಣ್ಣ ಪುಟ್ಟ ಸಮಸ್ಯೆಗಳು ಬಂದು ಹೋಗಬಹುದು ಇವುಗಳನ್ನು ಎದುರಿಸಲು ಪರಿಹಾರ ಮಾಡಿಕೊಳ್ಳುವುದು ಸೂಕ್ತ.
ದಿನನಿತ್ಯ ಮಾಡುವ ಪೂಜೆಗಳಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಳ್ಳುವುದೇ ಇದಕ್ಕೆ ಪರಿಹಾರ ಆಗಿದೆ. ಈಶ್ವರನ ದರ್ಶನ ಮಾಡುವುದು, ಆಂಜನೇಯನ ಸೇವೆ ಮಾಡುವುದು, ಶನೇಶ್ವರನ ದರ್ಶನ ಮಾಡುವುದು, ನವಗ್ರಹ ಆರಾಧನೆ ಮಾಡುವುದು ಇದೆಲ್ಲವೂ ಕೂಡ ಸರಳ ಪರಿಹಾರಗಳಾಗಿವೆ. ಈ ರೀತಿ ಮಾಡುವುದರಿಂದ ಕಷ್ಟಗಳು ಕಡಿಮೆಯಾಗಿ ಅದೃಷ್ಟವು ದುಪ್ಪಟ್ಟಾಗುತ್ತದೆ.