ಜೀವನದಲ್ಲಿ ಪ್ರತಿಯೊಬ್ಬರಿಗೂ ಶತ್ರುಗಳು ಇರುತ್ತಾರೆ. ಈ ರೀತಿ ಶತ್ರುಗಳಾಗುವುದಕ್ಕೆ ಕೆಲವೊಮ್ಮೆ ಕಾರಣಗಳು ಬೇಕಾಗಿರುವುದಿಲ್ಲ. ನಮ್ಮ ಏಳಿಗೆಯನ್ನು ಸಹಿಸದೆ ಅಥವಾ ಯಾವುದೇ ಒಂದು ಕ್ಷುಲ್ಲಕ ಕಾರಣಕ್ಕೆ ಶತ್ರುಗಳಾಗಿ ಬಿಡುತ್ತಾರೆ.
ನಮ್ಮ ಜೊತೆಗಿದ್ದು ಕೆಟ್ಟದ್ದನ್ನು ಬಯಸುವುವವರನ್ನು ಹಿತ ಶತ್ರುಗಳು ಎನ್ನುತ್ತಾರೆ ಇವರು ನಮ್ಮ ಅಕ್ಕಪಕ್ಕ ಮನೆಯವರಾಗಿರಬಹುದು ಅಥವಾ ನಮ್ಮ ಸಹೋದ್ಯೋಗಿಗಳು ಅಥವಾ ಸ್ನೇಹಿತರರು, ಸಂಬಂಧಿಕರು ಆಗಿರಬಹುದು. ಶತ್ರುಗಳ ದೃಷ್ಟಿಯು ನಮ್ಮ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ ಮನೆ ಹಾಗೂ ಮನಸ್ಸಿನಲ್ಲಿ ಸದಾ ಕಿರಿಕಿರಿ ಹಾಗೂ ಜೀವನ ಏರುಪೇರಾಗುತ್ತದೆ.
ಈ ಕಾಟವನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಒಂದು ಸಣ್ಣ ಉಪಾಯ ಇದೆ. ಈ ತಂತ್ರದ ಸಹಾಯದಿಂದ ಜೀವನದಲ್ಲಿ ನಿಮಗಿರುವ ಶತ್ರುಗಳ ಕಾಟವನ್ನು ಒಂದೇ ವಾರದಲ್ಲಿ ಪರಿಹಾರ ಮಾಡಿಕೊಳ್ಳಬಹುದು. ಮತ್ತು ನೀವೇ ಅದರ ಫಲಿತಾಂಶವನ್ನು ಪರೀಕ್ಷಿಸಿಕೊಳ್ಳಬಹುದು.
ಕಲಿಗಾಲದಲ್ಲಿ ಮಂತ್ರ ಹಾಗೂ ಯಂತ್ರಗಳ ಶಕ್ತಿಯಂತೆ ತಂತ್ರಗಳು ಕೂಡ ಕೆಲಸ ಮಾಡುತ್ತವೆ ಹಾಗಾಗಿ ಶತ್ರುಗಳ ಕಾಟವನ್ನು ನಿವಾರಣೆ ಮಾಡಿಕೊಳ್ಳುವಂತಹ ಒಂದು ಸುಲಭ ತಂತ್ರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇದೆ. ಇದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇಲ್ಲ ಮತ್ತು ಪ್ರತಿಯೊಬ್ಬರೂ ಮಾಡಬಹುದು, ಸಮಯಾವಕಾಶ ಕೂಡ ಹೆಚ್ಚಿಗೆ ಬೇಕಾಗಿರುವುದಿಲ್ಲ ಮತ್ತು ಯಾವುದೇ ಅಡ್ಡ ಪರಿಣಾಮಯಿಲ್ಲದೆ ನೂರಕ್ಕೆ ನೂರರಷ್ಟು ಗ್ಯಾರಂಟಿ ನಿಮಗೆ ಇದು ಫಲಿತಾಂಶವನ್ನು ನೀಡುತ್ತದೆ.
ಯಾವುದೇ ಮಂಗಳವಾರ ಅಥವಾ ಶುಕ್ರವಾರ ಈ ತಂತ್ರವನ್ನು ಮಾಡಬೇಕು.ಒಂದು ವಾರದಲ್ಲಿ ಮಂಗಳವಾರ ಹಾಗೂ ಶನಿವಾರ ಎರಡು ದಿನ ಮಾಡಬೇಡಿ ಮೊದಲ ವಾರದಲ್ಲೇ ನಿಮಗೆ ಫಲಿತಾಂಶ ಕಾಣುತ್ತದೆ ಒಂದು ವೇಳೆ ನಿಮಗೆ ಸಮಾಧಾನ ಇಲ್ಲದಿದ್ದರೆ ನಿರಂತರ ಮೂರು ಮಂಗಳವಾರ ಅಥವಾ ಮೂರು ಶನಿವಾರದಂದು ಇದನ್ನು ಮಾಡಬಹುದು.
ಮತ್ತೊಂದು ಮುಖ್ಯವಾದ ವಿಚಾರ ಏನೆಂದರೆ ನೀವು ಈ ತಂತ್ರವನ್ನು
ಮನೆಯಲ್ಲಿ ಮಾಡಲು ಸಾಧ್ಯವಿಲ್ಲ ಅಥವಾ ಮನೆಯ ಮೇಲೆ ಕೂಡ ಮಾಡಲು ಸಾಧ್ಯವಿಲ್ಲ. ಮನೆಯಿಂದ ಹೊರಗಡೆ ನಿರ್ಜನ ಪ್ರದೇಶದಲ್ಲಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಇದನ್ನು ಮಾಡುವ ಸಮಯದಲ್ಲಿ ನಿಮ್ಮನ್ನು ಯಾರು ನೋಡದೆ ಇದ್ದರೆ ಇನ್ನು ಒಳ್ಳೆಯದು.
ಇದರೊಂದಿಗೆ ಇರುವ ಇನ್ನೊಂದು ಕಂಡಿಶನ್ ಏನೆಂದರೆ ನೀವು ಈ ತಂತ್ರವನ್ನು ಮಾಡುವಾಗ ನಿಮ್ಮನ್ನು ಯಾರು ತಡೆಯಬಾರದು ಇದನ್ನು ಮಾಡಲು ಮನೆಯಿಂದ ಹೊರಡುವಾಗ ಯಾರು ನಿಮ್ಮನ್ನು ಎಲ್ಲಿಗೆ, ಏನು ಮಾಡಲು ಎಂದು ಪ್ರಶ್ನೆಗಳನ್ನು ಕೇಳಬಾರದು. ಬೆಳಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ಬೇಕಾದರೂ ಇದನ್ನು ಮಾಡಬಹುದು.
ನಿಮಗೆ ಅನುಕೂಲಕರವಾದ ಸಮಯದಲ್ಲಿ ಮನೆಯಿಂದ ಹೊರಡಿ ಮನೆಯಿಂದ ಹೊರಡುವಾಗ ನಿಮ್ಮ ಅಡುಗೆ ಮನೆಯಲ್ಲಿರುವ ಐದು ಒಣಮೆಣಸಿನಕಾಯಿ ಹಾಗೂ ಚಿಕ್ಕದಾಗಿ ಗುಂಡಿ ಮಾಡಲು ನಿಮಗೆ ಅನುಕೂಲವಾಗುವ ಒಂದು ಯಾವುದಾದರೂ ವಸ್ತುವನ್ನು ತೆಗೆದುಕೊಂಡು ಹೊರಡಿ.
ನಿಮಗೆ ಈ ತಂತ್ರವನ್ನು ಮಾಡಲು ಸೂಕ್ತ ಜಾಗ ಎನಿಸಿದ ಕಡೆ ನಿಂತುಕೊಳ. ಳಿ ಒಂದು ಚಿಕ್ಕದಾದ ಗುಂಡಿಯನ್ನು ಮಾಡಿ ಮತ್ತು ನೀವು ಮನೆಯಿಂದ ತಂದ 5 ಒಣಮೆಣಸಿಕಾಯಿ ಕೈಯಲ್ಲಿ ಹಿಡಿದು ನಿಮ್ಮ ಶತ್ರುವಿವ ಹೆಸರನ್ನು ಹೇಳಿಕೊಂಡು ಅವರ ಕಾಟ, ಕೆಟ್ಟ ದೃಷ್ಟಿ ನಿಮಗೆ ತಪ್ಪಬೇಕು, ನಿಮ್ಮ ಜೀವನದಿಂದ ಅವರು ಹೋಗಬೇಕು.
ಅವರು ನಿಮ್ಮ ಮೇಲೆ ಮಾಡುತ್ತಿರುವ ಯಾವ ಕೆಟ್ಟ ಪರಿಣಾಮ ನಿಮ್ಮ ಮೇಲೆ ಬೀರಬಾರದು ಎಂದು ಹೇಳಿಕೊಳ್ಳಿ. ಮೆಣಸಿಕಾಯಿಗಳನ್ನು ಗುಂಡಿಗೆ ಹಾಕಿ ಮಣ್ಣು ಮುಚ್ಚಿ ಹಿಂದೆ ತಿರುಗಿ ನೋಡದಂತೆ ಬನ್ನಿ. ಈ ಸಮಯದಲ್ಲಿ ಹಿಂದಿನಿಂದ ಯಾರೇ ಕರೆದರೂ ಕೂಡ ತಿರುಗಿ ನೋಡಬೇಡಿ. ಮನೆಗೆ ಬಂದ ತಕ್ಷಣ ತಪ್ಪದೇ ಕೈ ಕಾಲು ಮುಖ ತೊಳೆದುಕೊಳ್ಳಿ. ಇಷ್ಟು ಮಾಡಿ ನೋಡಿ ಸಾಕು ಬಹಳ ಪರಿಣಾಮಕಾರಿಯಾಗಿ ಇದು ನಿಮ್ಮ ಜೀವನದಲ್ಲಿ ಬದಲಾವಣೆ ಮಾಡುತ್ತದೆ.