ಜೀವನದಲ್ಲಿ ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಬಹಳ ಇದೆ. ಆದರೆ ಸಂಪಾದನೆ ಮಾಡಿದ ಹಣವೆಲ್ಲಾ ಒಂದೇ ಸಮ ಪೋಲಾಗುತ್ತಿದ್ದರೆ ಬಹಳ ಬೇಸರವಾಗುತ್ತದೆ. ನಿಮ್ಮ ಮನೆಯಲ್ಲಿರುವ ವಾಸ್ತು ದೋಷ ಕೂಡಾ ಇದಕ್ಕೆ ಕಾರಣವಿರಬಹುದು. ಆದ್ದರಿಂದ ಇನ್ನಾದರೂ ಈ ವಾಸ್ತು ದೋಷಗಳನ್ನು ಸರಿಪಡಿಸಿಕೊಳ್ಳಿ.
* ಕುಬೇರನ ಪ್ರತಿಮೆ ಕುಬೇರನು ಸಂಪತ್ತಿನ ಅಧಿಪತಿ. ಅವರ ಮೂರ್ತಿಯನ್ನು ಖರೀದಿಸಿ ಮನೆಯ ಉತ್ತರ ಭಾಗದಲ್ಲಿ ಇಟ್ಟರೆ ಹಣದ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
* ಮನೆಯ ಬಾಗಿಲಿಗೆ ಅಭಿಮುಖವಾಗಿ ಗಣಪತಿ ಕುಳಿತಿರುವಂತೆ ಕಾಣುವ, ಗಣೇಶನ ಮೂರ್ತಿಯನ್ನು ಇಟ್ಟರೆ ಆದಾಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
* ಶಂಖವು ಲಕ್ಷ್ಮಿಯ ಅತ್ಯಂತ ಪೂಜ್ಯನೀಯ ವಸ್ತುಗಳಲ್ಲಿ ಒಂದಾಗಿದೆ. ಇದನ್ನು ಪೂಜಾ ಕೋಣೆಯಲ್ಲಿ ಇಟ್ಟು ಪೂಜಿಸಿದರೆ ಮನೆಯಲ್ಲಿ ಸಕಲ ಸಂಪತ್ತು ದೊರೆಯುತ್ತದೆ ಎಂದು ಹೇಳಲಾಗುತ್ತದೆ.
* ತೆಂಗಿನಕಾಯಿಗೆ ಧನಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯವಿದೆ. ತೆಂಗಿನಕಾಯಿಯನ್ನು ಮನೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಸದಾ ಇಟ್ಟುಕೊಂಡರೆ ಹಣದ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
* ಕೊಳಲು ಲಕ್ಷ್ಮಿಯ ಮಂಗಳಕರ ವಸ್ತುವಾಗಿದೆ. ಮನೆಯಲ್ಲಿ ಇಟ್ಟರೆ ಎಲ್ಲಾ ರೀತಿಯ ದೋಷಗಳು ನಿವಾರಣೆಯಾಗಿ ಧನ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
* ಅರಿಶಿನವನ್ನು ಲಾಕರ್ನಲ್ಲಿ ಇರಿಸಿ ಹಣದ ಸಮಸ್ಯೆಗಳನ್ನು ಪರಿಹರಿಸಲು ಒಂದು ಮುಖ್ಯವಾದ ತಂತ್ರವೆಂದರೆ ಹಳದಿ ಅಥವಾ ಕೆಂಪು ಬಟ್ಟೆಯ ತುಂಡಿನಲ್ಲಿ ಅರಿಶಿನವನ್ನು ಉಂಡೆಯಂತೆ ಕಟ್ಟಿ ಅದನ್ನು ನಿಮ್ಮ ಮನೆಯ ಲಾಕರ್ನಲ್ಲಿರಿಸುವುದು.
ಅರಿಶಿನದ ಉಂಡೆ ಇರಿಸುವ ಮೊದಲು ನಿಮ್ಮ ಲಾಕರ್ ಅನ್ನು ಮೊದಲು ಸ್ವಚ್ಛವಾಗಿರಿಸಬೇಕು ಮತ್ತು ಈಶಾನ್ಯ ದಿಕ್ಕಿನಲ್ಲಿ ಉಂಡೆ ಇರಿಸಬೇಕು. ಇದರಿಂದ ನಿಮ್ಮ ಹಣಕಾಸು ಸಮಸ್ಯೆಗಳು ದೂರವಾಗಿ ಅನಗತ್ಯ ಕಾರಣಗಳಿಗೆ ಹಣ ಖರ್ಚು ಮಾಡುವ ಜನರಿಗೂ ಈ ವಾಸ್ತು ಸಲಹೆಯು ಉಪಯುಕ್ತವಾಗಬಹುದು.
* ಅರಿಶಿನದಿಂದ ಸ್ವಸ್ತಿಕವನ್ನು ಬಿಡಿಸಿ ಅರಿಶಿನವನ್ನು ಬಳಸಿ ಮನೆಯ ಪ್ರವೇಶದ್ವಾರದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬಿಡಿಸುವುದರಿಂದ ನಿಮಗೆ ಸಮೃದ್ಧಿ ಒಲಿದು ಬರುತ್ತದೆ ಮತ್ತು ವಾಸ್ತು ದೋಷಗಳು ಪರಿಹಾರವಾಗು ತ್ತದೆ. ಅರಿಶಿನ ಮತ್ತು ಸ್ವಸ್ತಿಕ ಎರಡನ್ನೂ ಮಂಗಳಕರವೆಂದು ಪರಿಗಣಿಸ ಲಾಗುತ್ತದೆ ಮತ್ತು ಇವು ಲಕ್ಷ್ಮಿ ದೇವಿಯನ್ನು ಮೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅರಿಶಿನವು ಮನೆಯೊಳಗೆ ಪಾಸಿಟಿವ್ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ದುಷ್ಟ ಶಕ್ತಿಗಳನ್ನು ಓಡಿಸುತ್ತದೆ.
* ನಿಮ್ಮ ಮನೆಯಲ್ಲಿ ಯಾವುದೇ ವಾಸ್ತು ದೋಷವನ್ನು ತೊಡೆದು ಹಾಕಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮನೆಯ ಪ್ರವೇಶದ್ವಾರದ ಬಲಭಾಗದಲ್ಲಿ ಸ್ವಸ್ತಿಕದ ಚಿಹ್ನೆಯನ್ನು ಬಿಡಿಸಬೇಕು. ಅಡುಗೆಗೆ ಬಳಸಿದ ಅರಿಶಿನವನ್ನು ಬಳಸಬಾರದು. ಸ್ವಸ್ತಿಕವನ್ನು ಬಿಡಿಸುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಮತ್ತು ಸ್ವಸ್ತಿಕದ ವಿನ್ಯಾಸವು ನಿಖರವಾಗಿರಬೇಕು.
* ಪ್ರವೇಶದ್ವಾರದಲ್ಲಿ ಅರಿಶಿನ ನೀರನ್ನು ಸಿಂಪಡಿಸಿ ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಅರಿಶಿನ ನೀರನ್ನು ಸಿಂಪಡಿಸುವುದರಿಂದ ಅದು ಮನೆಯೊಳಗೆ ಪಾಸಿಟಿವ್ ಶಕ್ತಿಯನ್ನು ಆಕರ್ಷಿಸುತ್ತದೆ. ನಿಮ್ಮ ಹಣ ಕಾಸಿನ ಪರಿಸ್ಥಿತಿಯನ್ನು ಸುಧಾರಿಸುತ್ತದೆ.
ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಚಿಮುಕಿಸುವಾಗ ನೀರು-ಅರಿಶಿನದ ಪಾತ್ರೆಗೆ ನೀವು ನಾಣ್ಯವನ್ನು ಹಾಕಬೇಕು. ಅರಿಶಿನ ನೀರನ್ನು ಸಿಂಪಡಿಸಿದ ನಂತರ ಆ ನಾಣ್ಯವನ್ನು ತೆಗೆದು ಮರೆಯದೇ ಮನೆಯ ದೇವರಕೋಣೆಯಲ್ಲಿ ಇಡಬೇಕು.
* ನೀವು ಯಾರಿಗಾದರೂ ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡಿದರೆ ಅದನ್ನು ಮಣ್ಣಿನ ತೊಟ್ಟಿಯಲ್ಲಿ ಇಟ್ಟು ನಂತರ ಉಡುಗೊರೆ ಯಾಗಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.