Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಮೊದ್ಲು ದಿನಕ್ಕೆ 1 ಕೋಟಿ ಕೇಳಿದ್ದೆ, ಆಮೇಲೆ ಸುದೀಪ್ ಲೆವೆಲ್ಗೆ ಪೇಮೆಂಟ್ ಕೇಳ್ದೆ, ಆದ್ರೆ ಎಲ್ಲಾ...

ಮೊದ್ಲು ದಿನಕ್ಕೆ 1 ಕೋಟಿ ಕೇಳಿದ್ದೆ, ಆಮೇಲೆ ಸುದೀಪ್ ಲೆವೆಲ್ಗೆ ಪೇಮೆಂಟ್ ಕೇಳ್ದೆ, ಆದ್ರೆ ಎಲ್ಲಾ ಕಂಟೆಸ್ಟಂಟ್ ಗಿಂತ ಕಡಿಮೆ ಹಣ ಕೊಟ್ರು ಎಂದು ಬೇಸರ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದೇ ಫೇಮಸ್ ಆಗಿರುವ ಖ್ಯಾತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಅವರು ಕಿರುತೆರೆಯ ಫೇಮಸ್ ಫೇಸ್. ಹೀಗಾಗಿ ಅವರನ್ನು ಬಿಗ್ ಬಾಸ್ ಸೀಸನ್ 2ರಿಂದಲೂ ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿ ಎಂದು ಕಾರ್ಯಕ್ರಮದ ಹೆಡ್ ಪರಮೇಶ್ವರ್ ಗುಂಟ್ಕಲ್ ಅವರು ಆಹ್ವಾನಿಸುತ್ತಿದ್ದರಂತೆ.

ಆದರೆ ಆರ್ಯವರ್ಧನ್ ಅವರಿಗೆ ಅವರ ಪರಿಚಿತರು, ಕೆಲವು ವಿಐಪಿ ಗಳು ಮತ್ತು ಅಭಿಮಾನಿಗಳು ನೀವು ಬಿಗ್ ಬಾಸ್ ಗೆ ಹೋಗಬೇಡಿ ಎಂದೇ ಸಲಹೆ ನೀಡುತ್ತಿದ್ದರಂತೆ. ಹಾಗಾಗಿ ಇಷ್ಟು ವರ್ಷದ ಸೀಸನ್ ಗಳನ್ನು ಸಂಭಾವನೆ ನೆಪ ಹೇಳಿ ಮುಂದೂಡಿಕೊಂಡು ಬಂದಿದ್ದ ಆರ್ಯವರ್ಧನ್ ಅವರು ಈ ಬಾರಿ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಹಾಗೂ ಕಿರುತೆರೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗಿದ್ದರು.

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದಕ್ಕೂ ಮುಂಚೆ ಹಲವು ಬಾರಿ ಹಲವು ವಿಷಯಕ್ಕೆ ಟ್ರೋಲ್ ಆಗಿರುವ ಆರ್ಯವರ್ಧನ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅವರು ಡಿಮ್ಯಾಂಡ್ ಮಾಡಿದ್ದ ಸಂಭಾವನೆ ವಿಷಯವಾಗಿ ಕೂಡ ಒಮ್ಮೆ ಟ್ರೊಲ್ ಆಗಿದ್ದರು. ಈಗ ಅಂತಿಮವಾಗಿ ಸೀಸನ್ 9 ಕ್ಕೆ ತೆರೆ ಬಿದ್ದಿದ್ದು ರಾಕೇಶ್ ಅಡಿಗ ರನ್ನರ್ ಅಪ್ ಮತ್ತು ರೂಪೇಶ್ ಶೆಟ್ಟಿ ಅವರ ವಿನ್ನರ್ ಆಗಿದ್ದಾರೆ.

ಈ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆದ್ದ ಸ್ಪರ್ಧಿಗಳಿಗೆ ಬಹುಮೊತ್ತದ ಹಣವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಅದನ್ನು ಹೊರತುಪಡಿಸಿ ಉಳಿದ ಸ್ಪರ್ಧಿಗಳಿಗೆ ಅವರು ಮನೆಯಲ್ಲಿ ಇರುವಷ್ಟು ವಾರಕ್ಕೆ ಅನುಗುಣವಾಗಿ ಸಂಭಾವನೆಯನ್ನು ನಿರ್ಧಾರ ಮಾಡಿ ಒಪ್ಪಂದ ಮಾಡಿಕೊಂಡು ಮನೆ ಒಳಗೆ ಕಳುಹಿಸಲಾಗಿರುತ್ತದೆ. ಈಗ ಮನೆಯಿಂದ ಹೊರ ಬಂದ ಮೇಲೆ ಎಲ್ಲಾ ಸ್ಪರ್ಧಿಗಳು ಕೂಡ ಮನೆ ಒಳಗಿನ ಅನುಭವಗಳ ಬಗ್ಗೆ ಇಂಟರ್ವ್ಯೂ ನೀಡುತ್ತಿದ್ದಾರೆ.

ಇದೇ ರೀತಿ ಆರ್ಯವರ್ಧನ್ ಅವರು ಸಹ ಕೆಲವು ಯೂಟ್ಯೂಬ್ ಚಾನಲ್ಗಳಿಗೆ ಮತ್ತು ಮಾಧ್ಯಮಗಳಿಗೆ ಇಂಟರ್ವ್ಯೂ ಕೊಡುತ್ತಿದ್ದು, ಇಂಟರ್ವ್ಯೂ ಅಲ್ಲಿ ತಮ್ಮ ಬಿಗ್ ಬಾಸ್ ಜರ್ನಿಯ ಅನುಭವ ಮತ್ತು ಅವರು ಗೆಲ್ಲುವುದಕ್ಕೆ ಇದ್ದ ಅರ್ಹತೆ ಮತ್ತು ಅವರು ಮಧ್ಯರಾತ್ರಿ ಟಾಪ್ 5 ಸ್ಥಾನದಿಂದ ಆಚೆ ಬರಬೇಕಾದ ಆ ಪರಿಸ್ಥಿತಿಗೆ ಕಾರಣ ಮತ್ತು ಇಲ್ಲಿಯವರೆಗಿನ 150 ದಿನಗಳ ಆಟಕ್ಕಾಗಿ ಅವರು ಪಡೆದ ಸಂಭಾವನೆ ಇನ್ನಿತರ ವಿಷಯಗಳ ಬಗ್ಗೆ ವಿಷಯ ಹಂಚಿಕೊಳ್ಳುತ್ತಿದ್ದಾರೆ.

ಈ ಮಾತಿನ ಬರದಲ್ಲಿ ಅವರೇ ಹೇಳಿಕೊಂಡಂತೆ ಅವರು ಮೊದಲು ಬಿಗ್ ಬಾಸ್ ಗೆ ಹೋಗುವುದಕ್ಕೂ ಮುನ್ನ ಸುದೀಪ್ ಅವರಿಗೆ ಸಮನಾಗಿ ಸಂಭಾವನೆ ಕೇಳಿದ್ದರಂತೆ. ಆದರೀಗ ಅವರೇ ಎಲ್ಲರಿಗಿಂತ ಕಡಿಮೆ ಹಣವನ್ನು ಪಡೆದಿದ್ದಾರಂತೆ. ಮನೆಯಿಂದ ಆಚೆ ಬಂದ ಮೇಲೆ ಹೊರ ಜಗತ್ತನ್ನು ನೋಡುವುದು ಕಷ್ಟ ಆಗಿದೆ, ಅಡ್ಜಸ್ಟ್ ಆಗುವುದು ಕಷ್ಟ ಆಗಿದೆ, ಈಗ ತುಂಬಾ ಭಯ ಕಾಡುತ್ತಿದೆ ಎಂದು ಹೇಳುತ್ತಿರುವ ಆರ್ಯವರ್ಧನ್ ಗುರೂಜಿ ಅವರು ಈಗಿರುವ ಬಿಗ್ ಬಾಸ್ ಫೇಮ್ ಇಂದ ಇನ್ನಿತರ ಯಾವ ಚಾನ್ಸ್ ಗಳನ್ನು ಗಿಟ್ಟಿಸಿಕೊಳ್ಳುತ್ತಾರೆ ಕಾದು ನೋಡಬೇಕಾಗಿದೆ.

ಯಾಕೆಂದರೆ ಇದುವರೆಗೆ ಜ್ಯೋತಿಷಿಯಾಗಿ ಮಾತ್ರ ಆರ್ಯವರ್ಧನ್ ಅವರನ್ನು ನೋಡಿದ್ದ ಜನರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವರನ್ನು ಒಬ್ಬ ಕಾಮಿಡಿಯನ್ ಆಗಿ ಮತ್ತು ಕೆಲವರು ವಿಲನ್ ಗೆಟಪ್ ಗೆ ಹೋಲುವ ವ್ಯಕ್ತಿ ಎಂದೆಲ್ಲಾ ಒಪ್ಪಿಕೊಂಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಮನೆಯ ಅಷ್ಟು ದಿನ ಬಹುತೇಕ 90% ಇವರೇ ಹೆಚ್ಚು ಅಡುಗೆ ಮಾಡಿರುವುದರಿಂದ ಅವರ ಆ ಟ್ಯಾಲೆಂಟ್ ಗಳೂ ಕೂಡ ಹೊರ ಬಿದ್ದಿದೆ. ಇನ್ನೂ ಇದೆಲ್ಲವನ್ನು ಬಳಸಿಕೊಂಡು ಆರ್ಯವರ್ಧನವರು ಮುಂದೆ ಭವಿಷ್ಯವನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಲು ಇಡೀ ಕರ್ನಾಟಕ ಕಾಯುತ್ತಿದೆ.