Home Public Vishya ಬಿಳಿ ಹಾಳೆ ತೋರಿಸುತ್ತಿದ್ದಂತೆ ಮಂಕಾಗಿ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ, CC ಕ್ಯಾಮೆರಾದಲ್ಲಿ ಅಚ್ಚರಿ ಹಿಪ್ನಾಟಿಸಂ ದೃಶ್ಯ ದಾಖಲು.!

ಬಿಳಿ ಹಾಳೆ ತೋರಿಸುತ್ತಿದ್ದಂತೆ ಮಂಕಾಗಿ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ, CC ಕ್ಯಾಮೆರಾದಲ್ಲಿ ಅಚ್ಚರಿ ಹಿಪ್ನಾಟಿಸಂ ದೃಶ್ಯ ದಾಖಲು.!

0
ಬಿಳಿ ಹಾಳೆ ತೋರಿಸುತ್ತಿದ್ದಂತೆ ಮಂಕಾಗಿ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ, CC ಕ್ಯಾಮೆರಾದಲ್ಲಿ ಅಚ್ಚರಿ ಹಿಪ್ನಾಟಿಸಂ  ದೃಶ್ಯ ದಾಖಲು.!

 

ಬೆಳಗಾವಿಯ ಚಿಕ್ಕೋಡಿಯ ಬಳಿ ರೂಪಿನಾಳ ಎನ್ನುವ ಗ್ರಾಮದಲ್ಲಿ ಇಂದು ಅಚ್ಚರಿಯ ಘಟನೆ ಎಂದು ನಡೆದಿದೆ. ಆ ಭಾಗದಲ್ಲಿ ಕೆಲ ದಿನಗಳಿಂದ ಇಂತಹದೊಂದು ಗುಮಾನಿ ಇತ್ತಾದರೂ ಇಂದು ಅಂಗಡಿಯಲ್ಲಿದ್ದ CCTV ಕ್ಯಾಮೆರದಲ್ಲಿ ಈ ಹಿಪ್ನಾಟಿಸಂ ಕೈಚಳಕ ಬಯಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರೆಲ್ಲಾ ಬೆಚ್ಚಿ ಬೀಳುವತಾಗಿದೆ.

ವಿಷಯ ಏನೆಂದರೆ ಚಿಕ್ಕೋಡಿಯ ಬಳಿ ಹಲವು ದಿನಗಳಿಂದ ಚೀಟಿ ಗ್ಯಾಂಗ್ ಒಂದು ಸುತ್ತಾಡುತ್ತಿದೆ, ಈ ಚೀಟಿ ಗ್ಯಾಂಗ್ ಎನ್ನುವ ಹೆಸರು ಏಕೆ ಬಂತು ಎಂದರೆ ಇವರು ಬಿಳಿ ಹಾಳೆಯನ್ನು ತೋರಿಸುತ್ತಾರೆ ಆ ಹಾಳೆಯನ್ನು ನೋಡಿದ ತಕ್ಷಣ ನೋಡಿದವರಿಗೆ ಏನಾಗುತ್ತದೆ ಗೊತ್ತಿಲ್ಲ ಅವರು ಹೇಳಿದಂತೆ ಎಲ್ಲವನ್ನು ಕೇಳಲು ಶುರು ಮಾಡುತ್ತಾರೆ.

ಒಂಟಿ ಹೆಂಗಸರನ್ನು, ಅಂಗಡಿ ಮುಂಗಟುಗಳಲ್ಲಿ ಗ್ರಾಹಕರು ಇಲ್ಲದಿದ್ದನ್ನು ಹೊಂಚು ಹಾಕಿ ಕಾದು ಹಣ ಚಿನ್ನ ಹೊಡೆಯುವ ಹು’ನ್ನಾ’ರ’ಕ್ಕೆ ಕೈ ಹಾಕುವ ಇವರು ಬಹಳ ಭೀ’ಕ’ರವಾಗಿ ಎಲ್ಲೆಡೆ ಕಾಡುತ್ತಿದ್ದಾರೆ. ಅದೇ ರೀತಿ ಇಂದು ಚಿಕ್ಕೋಡಿಯ ರೂಪಿನಾಳ ಎನ್ನುವ ಗ್ರಾಮದಲ್ಲಿ ಸಾವಿತ್ರಿ ಪೋರೆವಲ್ ಎನ್ನುವವರ ಅಂಗಡಿಗೆ ಹೋಗಿದ್ದಾರೆ, CCTV ಯಲ್ಲಿ ಕಾಣುತ್ತಿರುವ ದೃಶ್ಯಗಳನ್ನು ಆಧರಿಸಿ ಹೇಳುವುದಾದರೆ ಅಂಗಡಿಗೆ ಬಂದ ಇವರು ಮೊದಲು ವಿಮಲ್ ಕೊಂಡುಕೊಂಡಿದ್ದಾರೆ.

ಅಷ್ಟರಲ್ಲಿ ಬೇರೆ ಯಾರೋ ಗ್ರಾಹಕ ಅಲ್ಲಿಗೆ ಬಂದ ಕಾರಣ ಪೂಜಾ ಸಾಮಗ್ರಿಗಳನ್ನು ತೆಗೆದುಕೊಳ್ಳುವಂತೆ ನಾಟಕವಾಡಿ ಅಲ್ಲೇ ಕೆಲಸ ಸಮಯ ಕಳೆದಿದ್ದಾರೆ. ಮೊದಲಿಗೆ 30 ರೂ. ಕೊಟ್ಟಿದ್ದಾರೆ ಸಾವಿತ್ರಿ ಅವರು ಆ ಹಣವನ್ನು ತೆಗೆದುಕೊಂಡಿದ್ದಾರೆ ನಂತರ ಜೇಬಿನಿಂದ ಒಂದು ಬಿಳಿ ಖಾಲಿ ಹಾಳೆಯನ್ನು ಕೊಟ್ಟಿದ್ದಾರೆ.

ಸಾವಿತ್ರಿ ಅವರು ಅಲ್ಲೇನಾಗುತ್ತಿದೆ ಎನ್ನುವುದನ್ನು ಅರಿಯಲಾಗದಷ್ಟು ಮಂಕಾಗಿ ಹೋಗಿದ್ದಾರೆ. ಬಳಿಕ ಆ ವ್ಯಕ್ತಿ ಹೇಳಿದ್ದನ್ನೆಲ್ಲ ಕೇಳಲು ಶುರು ಮಾಡಿದ್ದಾರೆ. ಮಾಂಗಲ್ಯ ಸರ ಕಳಚಿ, ಬಿಳಿ ಹಾಳೆ ಮೇಲೆ ಮೇಲೆ ಇಡುವಂತೆ ಹೇಳಿದ್ದಾರೆ, ಹಿಂದೂ ಮುಂದು ಯೋಚನೆ ಮಾಡದೆ ಆ ಮಹಿಳೆ ಮಾಂಗಲ್ಯ ಸರವನ್ನು ಬಿಚ್ಚಿ ಬಿಳಿ ಹಾಳೆ ಮೇಲೆ ಇಡುತ್ತಿರುವುದನ್ನು ನಾವು ಕಾಣಬಹುದಾಗಿದೆ ನಂತರ ಅದನ್ನು ಗಲ್ಲಾ ಪೆಟ್ಟಿಗೆಯಲ್ಲಿ ಇಡುವಂತೆ ಹೇಳಿದ್ದಾರೆ ಆಕೆ ಮಾಡಿದ್ದಾರೆ.

ಬಳಿಕ ತನ್ನ ಜೇಬಿನಲ್ಲಿದ್ದ ಮತ್ತೊಂದು ಚೀಟಿ ತೆಗೆದು ಅದರಲ್ಲಿ ಇದ್ದ ಮರಳನ್ನು ತೆಗೆದುಕೊಂಡು ಅದನ್ನು ಸಹ ಡ್ರಾ ನಲ್ಲಿ ಇಡುವಂತೆ ಮಾಡಿ ಸರ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆತ ಹೋದ ಸುಮಾರು ಹೊತ್ತು ನಲ್ಲಿ ಇದ್ದ ಸರ ಕಾಣದನ್ನು ನೋಡಿ ಪತಿಗೆ ಕರೆ ಮಾಡಿ ಕರೆಸಿದ್ದಾರೆ, CCTV ಚೆಕ್ ಮಾಡಿದಾಗ ತನಗೆ ಆಗಿರುವ ಮೋ’ಸ ಅರಿವಾಗಿವಾಗಿ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆ ವ್ಯಕ್ತಿ ಬಂದು ಹಾಳೆ ತೋರಿಸಿರಿದ್ದಾಗಿನಿಂದ ಬಹಳ ತಲೆ ಸುತ್ತು ಬಂತು ಮತ್ತು ಆತ ಏನು ಹೇಳುತ್ತಿದ್ದ ಎನ್ನುವುದರ ಅರಿವು ನನಗೆ ಇಲ್ಲ, ಎಚ್ಚರವಾಗಿದ್ದರೆ ನಾನು ಕೊರಳಲ್ಲಿ ಇದ್ದ ಮಾಂಗಲ್ಯ ಸರವನ್ನು ತೆಗೆಯುತ್ತಿರಲಿಲ್ಲ. ನಾನು ಏನು ಮಾಡುತ್ತಿದ್ದೆ ಎನ್ನುವುದರ ಮೇಲೆ ನನಗೆ ಪ್ರಜ್ಞೆ ಇರಲಿಲ್ಲ CCTV ಚೆಕ್ ಮಾಡಿದ ಮೇಲೆ ನನಗೆ ಆಶ್ಚರ್ಯ ಆಗುತ್ತಿದೆ ನಾನು ಇದನ್ನೆಲ್ಲ ಮಾಡಿದೆನಾ ಎನಿಸುತ್ತಿದೆ ಎಂದು ತಮಗಾದ ಕ’ಹಿ ಅನುಭವದ ಬಗ್ಗೆ ಮಾಧ್ಯಮಗಳ ಜೊತೆಗೆ ಸಾವಿತ್ರಿ ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಇಂತಹ ಕೇಸ್ ಗಳು ಹೆಚ್ಚಾಗುತ್ತಿದ್ದು ಬಿಳಿ ಹಾಳೆ ಇಟ್ಟುಕೊಂಡು ಅವರೇನು ಮಾಡಿದರು ಎನ್ನುವುದರ ಮೇಲೆ ಕುತೂಹಲ ಹೆಚ್ಚಾಗುತ್ತಿದೆ ಮತ್ತು ಈ ರೀತಿ ಒಂದು ವಿದ್ಯೆ ಇದೆಯಾ ಎನ್ನುವ ಅ’ನು’ಮಾ’ನ ಹುಟ್ಟುತ್ತಿದೆ, ಹಾಗೆ ಕ್ಯಾಮೆರಾ ಇದೆ ಎನ್ನುವ ವಿಚಾರ ಗೊತ್ತಿದ್ದರೂ ಇಷ್ಟು ರಾಜರೋಷವಾಗಿ ಓಡಾಡುತ್ತಿರುವ ಇವರ ಮಾಸ್ಟರ್ ಪ್ಲಾನ್ ಏನು ಎನ್ನುವುದರ ಬಗ್ಗೆ ಚಿಂತೆ ಹುಟ್ಟಿಸುತ್ತಿದೆ. ಸದ್ಯಕ್ಕೆ ಪೊಲೀಸರು ಬಲೆ ಬೀಸಿ ಖದೀಮನನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ ಈ ಸುದ್ದಿಯನ್ನು ಅತಿ ಹೆಚ್ಚು ಶೇರ್ ಮಾಡಿ ಆದಷ್ಟು ಎಲ್ಲರೂ ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿ.

 

LEAVE A REPLY

Please enter your comment!
Please enter your name here