ಮನುಷ್ಯ ದಪ್ಪ ಹಾಗೂ ಸಣ್ಣ ಇರುವುದು ಕೆಲವೊಮ್ಮೆ ಅವರ ಜೆನಟಿಕ್ ರೀಸನ್ ನಿಂದ ಕೂಡ ಆಗಿರುತ್ತದೆ. ತಂದೆ ಅಥವಾ ತಾಯಿಯಲ್ಲಿ ಒಬ್ಬರು ತುಂಬಾ ಸಣ್ಣ ಇದ್ದರೆ ಮಕ್ಕಳು ಕೂಡ ಸಣ್ಣ ಆಗುತ್ತಾರೆ ಇದನ್ನು ಹೊರತುಪಡಿಸಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆ ಆಗಿಬಿಡುತ್ತದೆ.
ಆಗ ಅವರು ನೋಡಲು ಚೆನ್ನಾಗಿ ಕಾಣುವುದಿಲ್ಲ ಅಥವಾ ಕೆಲವೊಂದು ಉದ್ಯೋಗಗಳಿಗೆ ಇಂತಿಷ್ಟೇ ತೂಕ ಇರಬೇಕು ಎನ್ನುವ ನಿಯಮ ಇರುತ್ತದೆ. ಇಂತಹ ಸಮಯದಲ್ಲಿ ಕಳೆದುಕೊಂಡಿರುವ ತೂಕವನ್ನು ಹೇಗೆ ಗಳಿಸಬೇಕು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದಕ್ಕೂ ಮುನ್ನ ಏಕೆ ಸಣ್ಣವಾಗುತ್ತೇವೆ ಎಂದು ತಿಳಿದುಕೊಳ್ಳಬೇಕು.
ಸಕ್ಕರೆ ಕಾಯಿಲೆ ಬಂದ ವ್ಯಕ್ತಿ ಇದ್ದಕ್ಕಿದ್ದಂತೆ 5kg ರಿಂದ 10kg ಸಣ್ಣ ಆಗಿಬಿಡುತ್ತಾರೆ, ಅತಿ ಹೆಚ್ಚು ವ್ಯಾಯಾಮ ಮಾಡುವವರು ಸಣ್ಣ ಆಗುತ್ತಾರೆ, ಹೈಪೋಥೈರಾಯಿಡಿಸಂ ನಿಂದ ಕೂಡ ದಪ್ಪ ಆಗುತ್ತಾರೆ ಇದನ್ನು ಹೊರತುಪಡಿಸಿ ಜೀವನದಲ್ಲಿ ಯಾವುದೋ ಒಂದು ವಿಷಯದಿಂದ ಬಹಳ ಕೊರಗಿದಾಗ ಕೂಡ ವ್ಯಕ್ತಿ ಸಣ್ಣ ಆಗುತ್ತಾನೆ.
ಹಾಗಾಗಿ ಮೊದಲು ಇವುಗಳನ್ನು ಸರಿಪಡಿಸಿಕೊಳ್ಳಬೇಕು. ಹೈಪೋಥೈರಾಯಿಡಿಸಂ ಸಕ್ಕರೆ, ಕಾಯಿಲೆಗಳು ಇದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಂಡು ಆ ಡಿಸಾರ್ಡರ್ ಸರಿಪಡಿಸಿಕೊಳ್ಳಬೇಕು ಮತ್ತು ಆಗಿಹೋದ ವಿಷಯದ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು. ನಾವು ಮೋ’ಸ ಹೋಗಿದ್ದಕ್ಕಾಗಿ, ಹಣ ಕಳೆದುಕೊಂಡಿದ್ದಕ್ಕಾಗಿ, ಉದ್ಯೋಗ ಹೋಗಿದ್ದಕ್ಕಾಗಿ, ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ ಬಂತು ಎಂದು ಬಹಳ ಯೋಚನೆ ಹಿಡಿದಾಗ ಸಣ್ಣವಾಗುತ್ತೇವೆ.
ಆಗಿದ್ದು ಆಯ್ತು ಮುಂದೇನು ಎನ್ನುವುದರ ಬಗ್ಗೆ ಯೋಚನೆ ಮಾಡಿ ಆ ನೋವಿನಿಂದ ಹೊರ ಬರಬೇಕು. ಸದಾ ಮನಸ್ಸಿನಲ್ಲಿ ಖುಷಿಯಾಗಿ ಇರಬೇಕು ಇದು ಕೂಡ ಮನುಷ್ಯ ದಪ್ಪ ಆಗಲು ಸಹಾಯ ಮಾಡುತ್ತದೆ. ಇನ್ನೊಬ್ಬರ ಬಗ್ಗೆ ಅ’ಸೂ’ಯೆ ಇರಬಾರದು, ಇದನ್ನು ಹೊರತುಪಡಿಸಿ ಯಾವ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಬಹಳ ಬೇಗ ದೇಹ ದಪ್ಪವಾಗುತ್ತದೆ ಎನ್ನುವುದರ ವಿವರ ಹೀಗಿದೆ.
ಪ್ರತಿನಿತ್ಯ ಆಹಾರದಲ್ಲಿ ತಪ್ಪದೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸುವುದರ ಮೂಲಕ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು. ಧಾನ್ಯಗಳಲ್ಲಿ ಹುರುಳಿಕಾಳು ಉದ್ದಿನಕಾಳು ಹೆಚ್ಚು ಸೇವನೆ ಮಾಡುವುದರಿಂದ ಅಥವಾ ಉದ್ದಿನಬೇಳೆಯಿಂದ ತಯಾರಿಸುವ ಇಡ್ಲಿ ದೋಸೆ ವಡೆ ಇತ್ಯಾದಿ ಪದಾರ್ಥಗಳನ್ನು ಸೇವಿಸುವುದರಿಂದ ಬಹಳ ಬೇಗ ದಪ್ಪ ಆಗಬಹುದು.
ಪಪ್ಪಾಯಿ, ಸೇಬು ಸೇವನೆ ಅದರಲ್ಲೂ ಅತಿ ಮುಖ್ಯವಾಗಿ ಬಾಳೆಹಣ್ಣಿನ ಸೇವನೆಯು ನಾವು ಬೇಗ ದಪ್ಪ ಆಗುವಂತೆ ಮಾಡುತ್ತದೆ. ಊಟ ಆದ ನಂತರ ಬಾದಾಮಿ ಚೂರ್ಣ ಅಥವಾ ಬಾದಾಮಿ ಪುಡಿ ಹಾಕಿಕೊಂಡು ಹಾಲು ಕುಡಿದು ಮಲಗುವುದರಿಂದ ಕೂಡ ಬಹಳ ಬೇಗ ದಪ್ಪ ಆಗುತ್ತಾರೆ.
ಮಾಂಸಾಹಾರಿಗಳಾಗಿದ್ದರೆ ಅತಿ ಹೆಚ್ಚು ಮಾಂಸದ ಸೇವನೆ ಮಾಡುವುದರಿಂದ ದಪ್ಪ ಆಗುತ್ತಾರೆ, ಇವರು ಊಟ ಆದನಂತರ ಮೊಟ್ಟೆ ತಿಂದು ಮಲಗಬೇಕು. ಆಗ ಬಹಳ ಬೇಗ ದಪ್ಪವಾಗುತ್ತಾರೆ. ಇದರೊಂದಿಗೆ ಮೂರು ಸಮಯವು ಕೂಡ ಚೆನ್ನಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು ಊಟದಲ್ಲಿ ಸೊಪ್ಪು ತರಕಾರಿ ಕಾಳುಗಳು ಹೀಗೆ ಎಲ್ಲವೂ ಇರಬೇಕು.
ಊಟ ಆದ ನಂತರ ಸಿಹಿ ಪದಾರ್ಥವನ್ನು ಸೇವಿಸಬೇಕು ಬೇಕರಿ ಪದಾರ್ಥಗಳ ಮೊರೆ ಹೋಗುವುದು ತಪ್ಪು, ಮನೆಯಲ್ಲೇ ಮಾಡಿದ ಪಾಯಸ ರಸಾಯನ ಅಥವಾ ಸಿಹಿ ಅನ್ನ, ಮನೆಯಲ್ಲಿ ತಯಾರಿಸಿದ ಸಿಹಿ ಪದಾರ್ಥಗಳನ್ನು ತಿನ್ನಬೇಕು ಆಗ ಬಹಳ ಬೇಗ ದೇಹದ ತೂಕ ಹೆಚ್ಚಾಗುತ್ತದೆ. ಇದರೊಂದಿಗೆ ನೆಮ್ಮದಿಯಾಗಿ ಕನಿಷ್ಠ 8 ಗಂಟೆಗಳಾದರೂ ನಿದ್ದೆ ಮಾಡಬೇಕು ವಾರಕ್ಕೊಮ್ಮೆ ಎಳ್ಳಣ್ಣೆಯಿಂದ ದೇಹವನ್ನು ಮಸಾಜ್ ಮಾಡಬೇಕು ಹೀಗಿದ್ದಾಗ ಆಟೋಮೆಟಿಕ್ ಆಗಿ ಬಹಳ ಬೇಗ ದಪ್ಪ ಆಗುತ್ತಾರೆ.