ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರತಿ ಮನೆ ಮನೆಗಳಲ್ಲಿ ಹಾಗೂ ಮನಮನಗಳಲ್ಲಿ ಪೂಜ್ಯನೀಯ ಸ್ಥಾನ ಪಡೆದಿರುವ ವ್ಯಕ್ತಿ. ತನ್ನ ದುಡಿಮೆಯ ಹೆಚ್ಚು ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟ ಕಾರಣದಿಂದ ಅಪ್ಪುವನ್ನು ಇಂದು ಜನ ದೇವರ ರೂಪದಲ್ಲಿ ಕಾಣುತ್ತಿದ್ದಾರೆ.
ಕರ್ನಾಟಕದ ಜನತೆಗೆ ಅಪಾರ ಪ್ರಮಾಣದಲ್ಲಿ ಯಾರಿಗೂ ಅರಿಯದ ರೀತಿ ಸಹಾಯ ಮಾಡಿ ಹೋಗಿರುವ ಅಪ್ಪುವಿನ ಈ ಅಪರೂಪದ ವ್ಯಕ್ತಿತ್ವವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಇಂದು ಅಪ್ಪು ಅವರು ನಮ್ಮ ಜೊತೆಗೆ ಇರದೆ ಇರಬಹುದು ಆದರೆ ಅವರು ಮಾಡಿದ ದಾನ ಧರ್ಮದಿಂದ ಮತ್ತು ಅವರ ನಟನೆಯಿಂದ ಜೊತೆಗಿರದಿದ್ದರೂ ನೆನಪುಗಳಲ್ಲಿ ಸದಾ ಅವರು ಜೀವಂತವಾಗಿರುತ್ತಾರೆ.
ಈಗ ಅಪ್ಪುವಿನ ಹಾದಿಯಲ್ಲಿಯೇ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಡೆಯುತ್ತಿದ್ದು ಅಪ್ಪು ಅವರು ಈಗ ಇದ್ದಿದ್ದರೆ ಏನೇನು ಕೆಲಸಗಳನ್ನು ಮಾಡುತ್ತಿದ್ದರು ಅವುಗಳನ್ನೆಲ್ಲ ಮಾಡುತ್ತಾ ಅಪ್ಪು ಹೆಸರಿಗೆ ಚ್ಯುತಿ ಬಾರದಂತೆ ಮತ್ತು ದೊಡ್ಮನೆ ಖ್ಯಾತಿ ಬೆಳಗುವಂತೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.
ವರ್ಷದಿಂದ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರು ಆಗಿರುವ ಅಶ್ವಿನಿ ಅವರು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಕಡೆಯೆಲ್ಲೆಲ್ಲಾ ಕೂಡ ಹೋಗಿದ್ದಾರೆ. ಇತ್ತೀಚೆಗೆ ಅಪ್ಪು ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಕೂಡ ನಡೆದಿತ್ತು ಆ ಕಾರ್ಯಕ್ರಮಕ್ಕೂ ಕೂಡ ರಾಘಣ್ಣ ನ ಜೊತೆ ಹೋಗಿ ನಡೆಸಿಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪುವಿನಂತೆ ಹೋದಲ್ಲೆಲ್ಲ ತಮ್ಮ ಕೈಲಾದಷ್ಟು ಸಹಾಯ ಮಾಡಿ ಬರುತ್ತಾರೆ.
ಈ ಕಾರ್ಯಕ್ರಮದಲ್ಲಿ ಕೂಡ ಕಾರ್ಯಕ್ರಮ ಮುಗಿದ ಬಳಿಕ ಅಪ್ಪು ಅಭಿಮಾನಿಗಳಿಗೆ ಬೇಸರವಾಗದಂತೆ ಎಲ್ಲರಿಗೂ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಶಾಲಾ ಮಕ್ಕಳನ್ನು ಕರೆದು ಅವರಿಗೂ ಸ್ಕಾಲರ್ಶಿಪ್ ಕೊಡುವ ಕೆಲಸವನ್ನು ಕೂಡ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರು ಇರುವಾಗಲು ಕೂಡ ಯಾವಾಗಲೂ ಸಂದರ್ಶನಗಳಲ್ಲಿ ಹೇಳುತ್ತಿದ್ದರು.
ಹೆಣ್ಣು ಮಕ್ಕಳು ಚೆನ್ನಾಗಿ ಓದಬೇಕು ಸ್ವಂತ ದುಡಿಮೆ ಮೇಲೆ ಬದುಕಬೇಕು. ನನಗೂ ಕೂಡ ಎರಡು ಹೆಣ್ಣು ಮಕ್ಕಳಿದ್ದಾರೆ. ನಮ್ಮ ತಾಯಿಯನ್ನು ನೋಡಿದಾಗ ನನಗೆ ಇನ್ಸ್ಪಿರೇಷನ್ ಆಗುತ್ತಿತ್ತು. ನನ್ನ ಮಕ್ಕಳಿಗೂ ನಾನು ನಮ್ಮ ತಾಯಿಯಂತೆ ನೀವೆಲ್ಲ ಆಗಬೇಕು ಎಂದು ಹೇಳುತ್ತೇನೆ. ಹಾಗಾಗಿ ಹೆಣ್ಣು ಮಕ್ಕಳ ಸ್ಟ್ರಾಂಗ್ ಆಗಿ ಇರಬೇಕು ಎನ್ನುತ್ತಿದ್ದರು. ಮತ್ತು ಮೈಸೂರಿನಲ್ಲಿ ಶಕ್ತಿಧಾಮ ಎನ್ನುವ ಆಶ್ರಮ ನಡೆಸಿ ಹೆಣ್ಣು ಮಕ್ಕಳಿಗೆ ವಿದ್ಯೆ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.
ಅದೇ ಹಾದಿಯಲ್ಲಿ ಸಾಗುತ್ತಿರುವ ಅಶ್ವಿನಿ ಪುನೀತ್ ಅವರು ಶಕ್ತಿಧಾಮದ ಹೆಣ್ಣು ಮಕ್ಕಳಿಗೆ ಇನ್ನೂ ಸಹಾಯ ಮುಂದುವರಿಸಿಕೊಂಡು ಹೋಗುತ್ತಿರುವುದರ ಜೊತೆಗೆ ತಾವು ಹೋದ ಕಡೆಯಲ್ಲೆಲ್ಲಾ ತಮ್ಮ ಕೈಲಾದಷ್ಟು ಮತ್ತಷ್ಟು ಸಹಾಯ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿದ್ದ ಗಂಧದಗುಡಿಯನ್ನು ಕೂಡ ತೆರೆ ಮೇಲೆ ತರುವಲ್ಲಿ ಅಶ್ವಿನಿ ಅವರ ಪಾತ್ರ ಮಹತ್ವದ್ದು.
ಪುನೀತ್ ರಾಜಕುಮಾರ್ ಅವರು ಯುವ ಪ್ರತಿಭೆಗಳನ್ನು ಬೆಳೆಸುವ ಕೆಲಸವಾಗಿ ಕಟ್ಟಿದ್ದ ಪಿಆರ್ ಕೆ ಪ್ರೊಡಕ್ಷನ್ ನ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಇವರು ತನ್ನ ಎರಡು ಮುದ್ದಾದ ಮಕ್ಕಳನ್ನು ಕರ್ನಾಟಕಕ್ಕೆ ಮಾದರಿ ಪ್ರಜೆಗಳನ್ನಾಗಿ ಕೊಡುಗೆ ನೀಡುವ ಹೊಣೆ ಕೂಡ ಹೊತ್ತಿದ್ದಾರೆ. ಜೊತೆಗೆ ಇಡೀ ಕರ್ನಾಟಕವನ್ನೇ ತಮ್ಮ ಕುಟುಂಬದ ಎಂಬಂತೆ ಅಪ್ಪು ಪತ್ನಿ ಭಾವೆಸುತ್ತಿದ್ದಾರೆ. ದೊಡ್ಮನೆ ಕುಟುಂಬಕ್ಕೆ ಈ ರೀತಿ ಜನರಿಗೆ ಸಹಾಯ ಮಾಡುವ ಶಕ್ತಿ ಮತ್ತಷ್ಟು ದೊರೆಯಲಿ ಎಂದು ಹಾರೈಸೋಣ.