Friday, June 9, 2023
HomeEntertainmentರವಿಚಂದ್ರನ್ ಗೆ ಸಂತ್ವಾನ ಹೇಳಲು ಮನೆಗೆ ಬಂದ ಅಶ್ವಿನಿ, ರವಿ ಸರ್ ಗೆ ಅಶ್ವಿನಿ ಮೇಡಂ...

ರವಿಚಂದ್ರನ್ ಗೆ ಸಂತ್ವಾನ ಹೇಳಲು ಮನೆಗೆ ಬಂದ ಅಶ್ವಿನಿ, ರವಿ ಸರ್ ಗೆ ಅಶ್ವಿನಿ ಮೇಡಂ ಕೊಟ್ಟ ಭರವಸೆ ಏನು ಗೊತ್ತ.? ಇನ್ಮುಂದೆ ರವಿಚಂದ್ರನ್ ಅವರ ಅದೃಷ್ಟವೇ ಬದಲಾಗುತ್ತೆ.

ರವಿಚಂದ್ರನ್ ಅವರು ಕಳೆದ ಕೆಲ ದಿನಗಳ ಹಿಂದೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮದ ವೇದಿಕೆ ಮೇಲೆ ನಿಂತು ತಾವು ಮನೆ ಕಳೆದುಕೊಂಡ ವಿಷಯದ ಕುರಿತಾಗಿ ತಮ್ಮ ಮನಸ್ಸನ್ನು ನೋವನ್ನೆಲ್ಲಾ ಹೊರಹಾಕಿದ್ದರು. ಅಂದು ಅವರು ವೇದಿಕೆ ಮೇಲೆ ಆಡಿದ ಪ್ರತಿಯೊಂದು ಮಾತು ಕೂಡ ಅವರ ಜೀವನದ ಸಾರವನ್ನೇ ಸಾರಿತ್ತು ಮತ್ತು ಇಷ್ಟು ವರ್ಷದ ಅವರ ಬದುಕಿನ ಏಳು ಬೀಳುಗಳು ಎಲ್ಲವನ್ನು ಹೊರಹಾಕಿದ ಅವರ ಮಾತುಗಳು ಕೇಳಿ ಅಲ್ಲಿ ನೆರೆದಿದ್ದ ಎಲ್ಲರ ಹೃದಯ ಮಿಡಿದಿತ್ತು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಈ ಕಾರ್ಯಕ್ರಮ ನೋಡಿದವರು ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಅಪ್ಲೋಡ್ ಆದ ಬಳಿಕ ಕರ್ನಾಟಕದ ಮೂಲೆ ಮೂಲೆಗೂ ಇದು ತಲುಪಿ ಅನೇಕ ಸೆರೆಬ್ರೆಟಿಗಳು ಮತ್ತು ಜನಸಾಮಾನ್ಯರು ಕೂಡ ಇದರ ಬಗ್ಗೆ ಮಾತನಾಡಿದರು. ಸುದೀಪ್ ಅವರು ಸಹಾ ಇದನ್ನು ನೋಡಿದ ಬಳಿಕ ರವಿಚಂದ್ರನ್ ಅವರ ಬಗ್ಗೆ ಮಾತನಾಡಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬರಹಗಳನ್ನು ಬರೆದಿದ್ದರು.

ಸುದೀಪ್ ಅವರು ಮಗನ ಹಾಗೆ ಅವರ ಎಲ್ಲ ಕಷ್ಟಕ್ಕೂ ಹೇಗಲಾಗಿ ಇರುವುದಾಗಿ ಹೇಳಿದ್ದರು. ರವಿಚಂದ್ರನ್ ಅವರಿಗೂ ಸುದೀಪ್ ಮೇಲೆ ಬಹಳ ಪ್ರೀತಿ. ಸುದೀಪ್ ಅವರನ್ನು ತಮ್ಮ ಮೊದಲ ಮಗ ಎಂದು ಹೇಳಿಕೊಳ್ಳುತ್ತಿದ್ದರು. ಇದಾದ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ ಅವರು ರವಿಚಂದ್ರನ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಅಕ್ಟೋಬರ್ 21ನೇ ತಾರೀಖಿನಂದು ಅರಮನೆ ಮೈದಾನದಲ್ಲಿ ಪುನೀತ್ ಅಭಿಮಾನಿಗಳಿಗಾಗಿ ಗಂಧದಗುಡಿ ಪ್ರೀ ರಿಲೀಸ್ ಇವೆಂಟನ್ನು ಪುನೀತ್ ಪರ್ವ ಹೆಸರಿನಲ್ಲಿ ಏರ್ಪಡಿಸಲಾಗಿತ್ತು.

ರವಿಚಂದ್ರನ್ ಅವರನ್ನು ಆಹ್ವಾನಿಸುವ ಸಲುವಾಗಿ ಹಾಗೂ ದಕ್ಷಿಣ ವಿಚಾರಿಸುವ ಸಲುವಾಗಿ ಅಶ್ವಿನಿ ಅವರು ಕರೆ ಮಾಡಿದ್ದರು. ರವಿಚಂದ್ರನ್ ಅವರು ಮೊದಲಿನಿಂದಲೂ ಪುನೀತ್ ಕುಟುಂಬದ ಜೊತೆ ಬಹಳ ಸಂಬಂಧ ಹೊಂದಿದ್ದಾರೆ. ಪುನೀತ್ ಅವರನ್ನು ಹೃದಯವಂತ ಎನ್ನುತ್ತಿದ್ದರು. ಅಪ್ಪು ಅಗಲಿದ ಸಮಯದಲ್ಲಿ ಅತೀ ಹೆಚ್ಚು ದುಃಖ ಪಟ್ಟ ನಟರಲ್ಲಿ ಇವರೂ ಒಬ್ಬರು. ಪುನೀತ್ ಅವರು ಯಾರನ್ನೇ ಅಪ್ಪಿಕೊಂಡರು ಕೂಡ ಹೃದಯಕ್ಕೆ ತಾಗುವಂತೆ ಅಪ್ಪಿಕೊಳ್ಳುತ್ತಿದ್ದರು ಹಾಗಾಗಿ ಎಲ್ಲರೂ ಹೃದಯದಲ್ಲೂ ಅಪ್ಪುಶಾಶ್ವತವಾಗಿ ನೆನೆಸಿರುತ್ತಾರೆ ಎನ್ನುವ ಮುಂತಾದ ಅನೇಕ ಮಾತುಗಳನ್ನು ಪುನೀತ್ ರವರ ಕುರಿತಾಗಿ ಹೇಳುತ್ತಿದ್ದರು.

ಇಂದು ಪುನೀತ್ ರಾಜಕುಮಾರ್ ಅವರು ಇದ್ದಿದ್ದರೆ ನಾಡಿನ ಸಾವಿರಾರು ಜನರ ಕಷ್ಟಕ್ಕೆ ಆಗಿರುವ ಅಪ್ಪು ರವಿಮಾಮನ ಸಹಾಯಕ್ಕೆ ನಿಲ್ಲುತ್ತಿದ್ದರು. ಇಂದು ಅಪ್ಪು ಅವರ ಅನುಪಸ್ಥಿತಿಯಲ್ಲಿ ಅವರ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಅಶ್ವಿನಿ ಪುನೀತ್ ಅವರು ರವಿಚಂದ್ರನ್ ಅವರ ಈ ಪರಿಸ್ಥಿತಿಯಲ್ಲಿ ರವಿಚಂದ್ರನ್ ಅವರ ಸಹಾಯಕ್ಕೆ ನಿಲ್ಲುವ ಮಾತುಗಳನ್ನು ನುಡಿದಿದ್ದಾರೆ ಪಿ.ಆರ್.ಕೆ ಸಂಸ್ಥೆಯ ಮೂಲಕ ಹೊಸದೊಂದು ಚಿತ್ರವನ್ನು ನಿರ್ಮಾಣ ಮಾಡಿ ಅದರಿಂದ ಬರುವ ಹಣವನ್ನು ರವಿಚಂದ್ರನ್ ಅವರಿಗೆ ನೀಡುವ ಮನಸ್ಸನ್ನು ಇದೀಗ ಅಶ್ವಿನಿ ಅವರು ಮಾಡಿದ್ದಾರೆ. ಪುನೀತ್ ಅವರು ಅಗಲಿರುವ ನೋವು ಮನದಲ್ಲಿ ಇಟ್ಟುಕೊಂಡು ಅವರ ಎಲ್ಲಾ ಜವಾಬ್ದಾರಿ ಹೊತ್ತು ಕೊಂಡಿರುವ ಅಶ್ವಿನಿ ಪುನೀತ್ ಅವರು ಪುನೀತ್ ಅವರು ಇದ್ದಾಗ ಹೇಗೆ ಎಲ್ಲರ ಕಷ್ಟಕ್ಕೆ ಮಿಡಿಯುತ್ತಿದ್ದರು.

ತಾವು ಕೂಡ ಹಾಗೆ ಅದೇ ಹಾದಿಯಲ್ಲಿ ನಡೆದುಕೊಂಡು ದೊಡ್ಮನೆ ಹೆಸರು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ರವಿಚಂದ್ರನ್ ಅವರ ಆ ವಿಡಿಯೋವನ್ನು ನೋಡಿದ ಬಳಿಕ ಕರ್ನಾಟಕದ ಎಲ್ಲಾ ರವಿಚಂದ್ರನ್ ಅಭಿಮಾನಿಗಳು ಮತ್ತು ಸಿನಿಮಾ ರಸಿಕರು ಕೂಡ ರವಿಚಂದ್ರನ್ ಅವರನ್ನು ನೀವು ನಿಮ್ಮ ವೈಯಕ್ತಿಕ ಆಸೆಗಳಿಗಾಗಿ ಹಣ ಕಳೆದಿಲ್ಲ. ಸಿನಿಮಾವನ್ನೇ ಉಸಿರಾಗಿ ಜೀವಿಸಿದವರು ನೀವು ಸಿನಿಮಾದಾಗಿ ಹಣವನ್ನು ಹಾಕಿದ್ದೀರಾ ಒಂದಲ್ಲ ಒಂದು ದಿನ ಇದು ನಿಮ್ಮ ಎಲ್ಲಾ ನೋವನ್ನು ಮರೆಸುತ್ತದೆ ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡಿದ ಈ ಸಹಾಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.