ಅಪ್ಪು ನಮ್ಮೆಲ್ಲರನ್ನು ಅಗಲಿ 9 ತಿಂಗಳು ಆಗಿದ್ದರು ಕೂಡ ಯಾವುದೇ ಕಾರ್ಯಕ್ರಮ ಇರಲಿ ಸಮಾರಂಭ ಇರಲಿ ಸನ್ನಿವೇಶ ಇರಲಿ ಸಿನಿಮಾದ ಕೆಲಸ ಕಾರ್ಯಗಳಿರಲಿ ಎಲ್ಲದಕ್ಕೂ ಕೂಡ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇವೆ. ಅಷ್ಟೇ ಅಲ್ಲದೆ ಅವರನ್ನು ಸ್ಪರಿಸಿದ ನಂತರವಷ್ಟೇ ನಾವು ಬೇರೆ ಕೆಲಸವನ್ನು ಪ್ರಾರಂಭ ಮಾಡುತ್ತೇವೆ ಇದು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೆ ಇದೀಗ ರಾಜ್ಯ ಸರ್ಕಾರದ ಎಲ್ಲಾ ಕೆಲಸ ಕಾರ್ಯಗಳು ಕೂಡ ಇದೇ ನಿಯಮವನ್ನು ಪಾಲಿಸಿಕೊಂಡು ಹೋಗುತ್ತಿರುವುದನ್ನು ನಾವು ನೋಡಬಹುದಾಗಿದೆ. ಇದಕ್ಕೆ ಉದಾಹರಣೆಯಾಗಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಒಂದನ್ನು ಏರ್ಪಡಿಸಲಾಗುತ್ತದೆ ಈ ಬಾರಿ ವಿಶೇಷವಾಗಿ ಈ ಲಾಲ್ ಬಾಗ್ ನಲ್ಲಿ ಏರ್ಪಡಿಸಲಾಗುವಂತಹ ಹೂಗಳ ಪ್ರದರ್ಶನಾಲಯಕ್ಕೆ ಅಪ್ಪು ಎಂಬ ಹೆಸರನ್ನು ಇಟ್ಟಿದ್ದಾರೆ.
ಅಷ್ಟೇ ಅಲ್ಲದೆ ಪಾರ್ವತಮ್ಮ ಡಾಕ್ಟರ್ ರಾಜಕುಮಾರ್ ಸೇರಿದಂತೆ ಅಪ್ಪು ಅವರು ಬಾಳಿ ಬದುಕಿದಂತಹ ಗಾಜನೂರು ಮನೆಯ ಕೆಲವು ಚಿತ್ರಪಟಗಳನ್ನು ಮತ್ತು ಅಪ್ಪು ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿದರು. ಈ ಒಂದು ಹೂವಿನ ಪ್ರದರ್ಶನ ನೋಡುವುದಕ್ಕೆ ಸುಮಾರು ಇಲ್ಲಿಯವರೆಗೂ 15 ಲಕ್ಷಕ್ಕೂ ಅಧಿಕ ಮಂದಿ ಸೇರ್ಪಡೆಯಾಗಿದ್ದರು. ತಮ್ಮ ನೆಚ್ಚಿನ ಕಲಾವಿದನನ್ನು ಹೂವಿನ ರಾಶಿಯಲ್ಲಿ ನೋಡುವಂತಹ ಭಾಗ್ಯವನ್ನು ಅಭಿಮಾನಿಗಳು ಗಿಟ್ಟಿಸಿಕೊಂಡರು. ಇದು ಅಪ್ಪು ಅವರಿಗೆ ರಾಜ್ಯ ಸರ್ಕಾರ ನೀಡಿದಂತಹ ಗೌರವವಾಗಿದೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಮತ್ತೊಂದು ಕೆಲಸಕ್ಕೆ ಕೈ ಹಾಕಿದಂತಹ ರಾಜ್ಯ ಸರ್ಕಾರ ಅಪ್ಪು ಅಭಿಮಾನಿಗಳ ಪ್ರಶಂಸೆಗೆ ಒಳಗಾಗಿದ್ದಾರೆ.
ಹೌದು, ಈ ಬಾರಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರದಿಂದ ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡು ಅಪ್ಪು ಮನೆಗೆ ಭೇಟಿ ನೀಡಿದಂತಹ ಉಪಮುಖ್ಯಮಂತ್ರಿ ಆದಂತಹ ಅಶ್ವಥ್ ನಾರಾಯಣ್ ಅವರು ಅಪ್ಪು ಅವರ ಧರ್ಮಪತ್ತಿ ಅಶ್ವಿನಿ ರಾಜ್ ಕುಮಾರ್ ಅವರಿಗೆ ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ನೀಡಿ ಈ ಬಾರಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ನೀವು ಆಗಮಿಸಬೇಕು ಎಂದು ಹೇಳಿ ಹೋಗಿದ್ದಾರೆ. ನಿಜಕ್ಕೂ ಇದೊಂದು ಹೆಮ್ಮೆ ಪಡುವಂತಹ ವಿಚಾರವೇ ಏಕೆಂದರೆ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಕಲಾವಿದರು ಮತ್ತು ಹೆಸರಾಂತ ನಟರಿದ್ದಾರೆ ಆದರೆ ಯಾರ ಮನೆಗೂ ಕೂಡ ಹೋಗಿ ರಾಷ್ಟ್ರಧ್ವಜವನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಆದರೆ ಅಪ್ಪು ಅವರ ಮನೆಗೆ ಮಾತ್ರ ಹೋಗಿ ರಾಷ್ಟ್ರಧ್ವಜವನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಇದರಿಂದಲೇ ತಿಳಿಯುತ್ತದೆ ಅಪ್ಪು ಅವರು ಎಷ್ಟು ಗೌರವ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ ಅಂತ.
ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇನ್ನೊಂದು ವಿಚಾರವನ್ನು ಕೂಡ ನಾವು ಗಮನವಹಿಸಬಹುದು ಅದೇನೆಂದರೆ ಕೇವಲ ಅಪ್ಪು ನಟನೆ ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿ ಇರಲಿಲ್ಲ ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತಿದ್ದರು ಹಾಗೂ ಸರ್ಕಾರಕ್ಕೆ ಅದೆಷ್ಟೋ ಬಾರಿ ಸಹಾಯಧನ ನೀಡಿದ್ದಾರೆ. ಕೋವಿಡ್ ಸಮಯದಲ್ಲೂ 50 ಲಕ್ಷ ರೂಪಾಯಿ ನೀಡಿದ್ದರು ಕೇವಲ ವತಿಯಿಂದ ಯಾವುದೇ ಜಾಹೀರಾತಿನಲ್ಲಿ ನಟನೆ ಮಾಡಿದರು ಕೂಡ ಅವುಗಳಿಂದ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆಯುತ್ತಿರಲಿಲ್ಲ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ ಇದೀಗ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಪ್ಪು ಅವರಿಗೆ ಗೌರವವನ್ನು ಸಲ್ಲಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಿದರೆ ಸದ್ಯಕ್ಕೆ ಈ ವಿಡಿಯೋದಲ್ಲಿ ಹರಿದಾಡುತ್ತಿದ್ದು ಅಪ್ಪು ಅಭಿಮಾನಿಗಳಿಗೆ ಹೆಮ್ಮೆ ತರುವಂತ ವಿಚಾರವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.