ದಿಢೀರ್ ಎಂದು ಭಾಗ್ಯಲಕ್ಷ್ಮಿ ಸೀರಿಯಲ್ ಬಿಟ್ಟು ಹೋರ ನಡೆದ ನಟಿ ಗೌತಮಿ ಇದ್ದಕ್ಕಿದ್ದಂತೆ ಈ ರೀತಿ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?

 

ಕಿರುತೆರೆ ಪ್ರಪಂಚದಲ್ಲಿ ಹೊಸ ರೀತಿಯ ಪ್ರಯೋಗವನ್ನು ಭಾಗ್ಯಲಕ್ಷ್ಮಿ ಧಾರಾವಾಹಿ ಮತ್ತು ಲಕ್ಷ್ಮಿ ಬಾರಮ್ಮ ಧಾರವಾಹಿಗಳು ಮಾಡುತ್ತಿವೆ. ಅಕ್ಕ-ತಂಗಿಯರ ಕಥೆಗಳು ಅಕ್ಕಪಕ್ಕದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 7ರಿಂದ 7:30 ಹಾಗು 7.30 ರಿಂದ 8.00 ರವರೆಗೆ ಪ್ರಸಾರ ಆಗುತ್ತಿವೆ. ಭಾಗ್ಯ ಹಾಗೂ ಲಕ್ಷ್ಮೀ ಎನ್ನುವ ಈ ಕಸಿನ್ಸ್ ಗಳ ಕಥೆಗೆ ಕನ್ನಡಿಗರು ಮನಸೋತಿದ್ದಾರೆ. ಎಲ್ಲಾ ಪಾತ್ರಗಳ ಘನತೆ, ನಿರ್ವಹಣೆ ಆಗುವ ಆಯ್ಕೆ ಅಚ್ಚುಕಟ್ಟಾಗಿದ್ದು ಪ್ರತಿಯೊಂದು ಅಂಶವು ಕೂಡ ಧಾರಾವಾಹಿಗಳ ಗೆಲುವಿಗೆ ಕಾರಣವಾಗಿದೆ.

ಧಾರಾವಾಹಿ ಶುರುವಾದ ಕೆಲವೇ ತಿಂಗಳಲ್ಲಿ ಮುಖ್ಯಪಾತ್ರ ಬದಲಾವಣೆ ಆಗಿರುವುದು ನೋಡುಗರಿಗೆ ಬೇಸರ ತರಿಸಿದೆ. ಈ ಧಾರಾವಾಹಿಯಲ್ಲಿ ನಾಯಕನಟ ತಾಂಡವ್ ಸೂರ್ಯವಂಶಿ ಅವರ ಗರ್ಲ್ ಫ್ರೆಂಡ್ ಆಗಿ ಶ್ರೇಷ್ಠ ಎನ್ನುವ ಪಾತ್ರದಲ್ಲಿ ಕಿರುತೆರೆಯ ಫೇಮಸ್ ಫೇಸ್ ಗೌತಮಿ ಗೌಡ ಅವರು ಕಾಣಿಸಿಕೊಂಡಿದ್ದರು. ಈಗ ಆ ಪಾತ್ರದಲ್ಲಿ ಬೇರೆಯವರು ಕಾಣಿಸಿಕೊಳ್ಳುತ್ತಿದ್ದಾರೆ.

ಗೌತಮಿ ಗೌಡ ಅವರು ಕಲರ್ಸ್ ಕನ್ನಡಕ್ಕೆ ಹೊಸಬರೇನಲ್ಲ. ಈ ಹಿಂದೆ ಅಮ್ಮ ನಿನಗಾಗಿ ಎನ್ನುವ ಸೂಪರ್ ಹಿಟ್ ಧಾರವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗೌತಮಿ ಬಿಗ್ ಬಾಸ್ ಸೀಸನ್ 3 ರಲ್ಲೂ ಕೂಡ ವೈರ್ಲ್ಡ್ ಕಾರ್ಡ್ ಸ್ಪರ್ಧಿ ಆಗಿ ಮನೆಗೆ ಎಂಟ್ರಿಕೊಟ್ಟು ಸಖತ್ ಕಾಂಪಿಟೇಶನ್ ಕೊಟ್ಟಿದ್ದರು. ಕಿರುತೆರೆಯಲ್ಲಿ ಗೌತಮಿ ಗೌಡ ನಿರೂಪಕಿಯಾಗಿ ರಿಯಾಲಿಟಿ ಶೋಗಳ ಕಂಟೆಸ್ಟೆಂಟ್ ಆಗಿ ಮತ್ತು ಫೇಮಸ್ ಧಾರಾವಾಹಿಗಳಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡು ಪ್ರಖ್ಯಾತರಾಗಿದ್ದಾರೆ.

ಚಿ.ಸೌ ಸಾವಿತ್ರಿ ಎನ್ನುವ ಧಾರಾವಾಹಿಯು ಇವರಿಗೆ ಕಿರುತೆರೆಯಲ್ಲಿ ಪ್ರಮುಖ ಮೈಲುಗಲ್ಲು ಆಯಿತು ಎಂದೇ ಹೇಳಬಹುದು. ನಟಿ ಗೌತಮಿ ಗೌಡ ಅವರು ಹಿರಿತರೆಯಲ್ಲೂ ಕೂಡ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ನಾಯಕನಟಿಯಾಗಿ ಅಲ್ಲದಿದ್ದರೂ ಕೂಡ ಸಹಪಾತ್ರಧಾರಿಯಾಗಿ ಗುರು, ಜೆಸ್ಸಿ, ಅಂಬಿ ನಿಂಗೆ ವಯಸ್ಸಾಯ್ತು ಇನ್ನು ಮುಂತಾದ ಸಿನಿಮಾಗಳಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದಾರೆ.

ವರ್ಷಗಳ ಹಿಂದೆ ಮದುವೆ ಆಗಿರುವ ಗೌತಮಿ ಗೌಡ ಅವರು ತಮ್ಮ ಬಹುಕಾಲದ ಗೆಳೆಯ ಕ್ರಿಸ್ಟಿ ಅವರನ್ನು ಕೈ ಹಿಡಿದು ಮಲೇಷಿಯಾಗೆ ಹಾರಿದ್ದರು. ಅವರು ಅಲ್ಲೇ ನೆಲೆಸುತ್ತಾರೆ ಎಂದು ಬಹುತೇಕರು ಊಹಿಸಿದ್ದರೂ ಕೂಡ ಕನ್ನಡದ ಕಿರುತೆರೆ ನಂಟು ಅವರನ್ನು ಮತ್ತೊಮ್ಮೆ ಬರಮಾಡಿಕೊಂಡಿದೆ. ಈಗ ಬಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ನೆಗೆಟಿವ್ ರೋಲಲ್ಲಿ ಮಿಂಚುತ್ತಿರುವ ಶ್ರೇಷ್ಠ ಇದೇ ಮೊದಲ ಬಾರಿಗೆ ಈ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೂ ಕೂಡ ಈಕೆಯ ನಟನೆಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ದಿಢೀರ್ ಎಂದು ನಟಿ ದಾರಾವಾಹಿ ಬಿಟ್ಟಿದ್ದಾರೆ ಎನ್ನುವ ಶಾ’ಕ್ ಸುದ್ದಿ ಎಲ್ಲರಿಗೂ ಬೇಸರ ತರಿಸಿದೆ. ಎಪಿಸೋಡ್ ಒಂದರಲ್ಲಿ ಕರೆ ಬಂತು ಈಗಲೇ ಹೊರಡುತ್ತೇನೆ ಎಂದು ಹೋದವರು ಮತ್ತೆ ಯಾವ ಸೀನ್ ಗಳಲ್ಲೂ ಕೂಡ ಕಾಣಿಸಿಕೊಳ್ಳುವುದಿಲ್ಲ ಎನ್ನುವುದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ನಟಿ ಸೀರಿಯಲ್ ಬಿಟ್ಟಿದ್ದರ ಬಗ್ಗೆ ಅನೇಕ ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಆದರೆ ಇದಕ್ಕೆಲ್ಲ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಉತ್ತರಿಸುವ ಮೂಲಕ ಗೌತಮಿ ಸ್ಪಷ್ಟನೆ ನೀಡಿದ್ದಾರೆ. ನಾನು ನೆಗೆಟಿವ್ ರೋಲ್ ಮಾಡಿದ್ದರೂ ಕೂಡ ನನಗೆ ಬಹಳ ಮೆಚ್ಚುಗೆ ಹಾಗು ಪ್ರೀತಿ ಕೊಟ್ಟಿದ್ದೀರಿ ಅದಕ್ಕೆ ನಾನು ಆಭಾರಿ. ಆದರೆ ಅನಿವಾರ್ಯ ಕಾರಣಗಳಿಂದ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು, ಮತ್ತೊಂದು ಸಿಹಿ ಸುದ್ದಿಯೊಂದಿಗೆ ಮತ್ತೆ ಸಿಗುತ್ತೇನೆ. ನಗು ನಗುತ್ತಲೇ ನಾನು ಧಾರಾವಾಹಿಯಿಂದ ಹೊರ ಬಂದಿದ್ದೇನೆ ಎಂದು ನಟಿ ಬರೆದು ಕೊಂಡಿದ್ದಾರೆ.

https://www.instagram.com/p/Cqk9qsstzqX/?igshid=YmMyMTA2M2Y=

 

Leave a Comment