ನಾಳೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಇದ್ದು ಆ ಒಂದು ದಿನ ಪ್ರತಿಯೊಬ್ಬರೂ ಕೂಡ ತಮ್ಮ ಮನೆಗಳಲ್ಲಿ ತಾಯಿ ಸೀತಾಮಾತೆ ರಾಮ ಹಾಗೂ ಆಂಜನೇಯನ ಪೂಜೆಯನ್ನು ಮಾಡು ವುದು ಬಹಳ ಮುಖ್ಯವಾಗಿರುತ್ತದೆ. ಮಹಿಳೆಯರು ಪುರುಷರು ಮಕ್ಕಳು ವೃದ್ಧರು ಪ್ರತಿಯೊಬ್ಬರು ಈ ಪೂಜೆಯನ್ನು ಮಾಡಬಹುದು.
ಹೌದು ನೀವು ಮಾಡುವಂತಹ ಯಾವುದೇ ಪೂಜೆ ಆಗಿರಬಹುದು. ಆ ಒಂದು ಪೂಜೆಯಲ್ಲಿ ನಿಮ್ಮ ಭಕ್ತಿ ಶ್ರದ್ಧೆ ನಂಬಿಕೆ ಎನ್ನುವುದು ಇರಬೇಕು ಆಗ ಮಾತ್ರ ನೀವು ಮಾಡುವಂತಹ ಕೆಲಸದಲ್ಲಿ ಯಶಸ್ಸನ್ನು ಒಳ್ಳೆಯ ಫಲಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ರಾಮನ ಪೂಜೆಯನ್ನು ಯಾವ ರೀತಿಯಾಗಿ ಸುಲಭವಾಗಿ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಬಹುದು ಹಾಗೂ ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಯಾವ ಸಮಯದಲ್ಲಿ ರಾಮನಿಗೆ ಪೂಜೆಯನ್ನು ಅರ್ಪಿಸಬೇಕಾಗುತ್ತದೆ. ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ತಿಳಿದು ಕೊಳ್ಳುತ್ತಾ ಹೋಗೋಣ.
ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ರಾಮ ಸೀತಾಮಾತೆ ವೀರಾಂಜನೇಯ ಸ್ವಾಮಿ ಇರುವಂತಹ ಫೋಟೋ ವನ್ನು ಇಟ್ಟು ಆ ಫೋಟೋಗೆ ಪೂಜೆ ಮಾಡುವುದರ ಮೂಲಕ ಅರಿಶಿನ ಕುಂಕುಮ ಹೂವು ಎಲ್ಲವನ್ನು ಇಟ್ಟು ಆ ಫೋಟೋ ಮುಂದೆ ಎರಡು ದೀಪ ಇಟ್ಟು ಮೊದಲನೆಯದಾಗಿ ಎರಡು ದೀಪವನ್ನು ಹಚ್ಚುವುದರ ಮೂಲಕ ದೀಪವನ್ನು ಪೂಜೆ ಮಾಡಿ ಅಕ್ಷತೆಗಳನ್ನು ಹಾಕಬೇಕು.
ಆನಂತರ ನೀವು ಈ ಒಂದು ಪೂಜೆಯನ್ನು ಮಾಡುತ್ತಿರುವಂತಹ ಸಮಯದಲ್ಲಿ ಯಾವುದೇ ವಿಜ್ಞಗಳು ಬರದೆ ಇರುವ ಹಾಗೆ ಗಣಪತಿಯ ಆರಾಧನೆಯನ್ನು ಮಾಡಬೇಕು. ತದನಂತರ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಎದುರಾಗು ವಂತಹ ಎಲ್ಲಾ ಕಷ್ಟಗಳು ಎಲ್ಲ ಸಮಸ್ಯೆಗಳು ಕೂಡ ದೂರವಾಗಬೇಕು ಎಂದರೆ ಈಗ ನಾವು ಹೇಳುವಂತಹ ಈ ಒಂದು ರಾಮ ಸ್ತೋತ್ರವನ್ನು ಹೇಳಬೇಕಾಗುತ್ತದೆ.
ಹೌದು ನಿಮ್ಮ ಮನೆಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದುಕೊಂಡಿದ್ದರೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯ ಬೇಕು ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಬೇಕು ನಿಮ್ಮ ಕಷ್ಟಗಳೆಲ್ಲವೂ ಕೂಡ ದೂರವಾಗಬೇಕು ಎಂದರೆ ಈಗ ನಾವು ಹೇಳುವಂತಹ ಈ ಒಂದು ಸ್ತೋತ್ರವನ್ನು ಹೇಳಬೇಕು.
ಹೌದು ಈ ಒಂದು ಸ್ತೋತ್ರದ ಬಗ್ಗೆ ಸ್ಕಂದ ಪುರಾಣದಲ್ಲಿಯೂ ಸಹ ಇದೆ ಹೌದು ಈ ಒಂದು ಸ್ತೋತ್ರವನ್ನು ಪಾರ್ವತಿ ದೇವಿ ಹೇಳುತ್ತಿದ್ದರು ಎನ್ನುವಂತಹ ಮಾಹಿತಿ ಯು ಕೂಡ ಇದರಲ್ಲಿ ಇದೆ. ಆದ್ದರಿಂದ ಪ್ರತಿಯೊಬ್ಬರೂ ಈ ಒಂದು ಸ್ತೋತ್ರವನ್ನು ಹೇಳುವುದರಿಂದ ತಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು.
ಪ್ರಥಮಂ ಶ್ರೀಧರಂ ವಿದ್ಯಾದ್ವಿತೀಯಂ ||
ರಘುನಾಯಕಮ್ ||
ತೃತೀಯಂ ರಾಮಚಂದ್ರಂ ಚ ಚತುರ್ಥಂ ||
ರಾವಣಾಂತಕಮ್ ||
ಪಂಚಮಂ ಲೋಕಪೂಜ್ಯಂ ಚ ಷಷ್ಠಮಂ ಜಾನಕೀಪತಿಮ್ ||
ಸಪ್ತಮಂ ವಾಸುದೇವಂ ಚ ಶ್ರೀರಾಮಂ ||
ಚಾಽಷ್ಟಮಂ ತಥಾ ||
ನವಮಂ ಜಲದಶ್ಯಾಮಂ ದಶಮಂ ||
ಲಕ್ಷ್ಮಣಾಗ್ರಜಮ್ ||
ಏಕಾದಶಂ ಚ ಗೋವಿಂದಂ ದ್ವಾದಶಂ ||
ಸೇತುಬಂಧನಮ್ ||
ದ್ವಾದಶೈತಾನಿ ನಾಮಾನಿ ಯಃ ಪಠೇಚ್ಛದ್ಧಯಾನ್ವಿತಃ ||
ಅರ್ಧರಾತ್ರೇ ತು ದ್ವಾದಶ್ಯಾಂ ||
ಕುಷ್ಠದಾರಿತ್ರ್ಯನಾಶನಮ್ ||
ದ್ವಾದಶೈತಾನಿ ನಾಮಾನಿ ಯಃ ಅರ್ಧರಾತ್ರೇ ತು ದ್ವಾದಶ್ಯಾಂ || ಕುಷ್ಠದಾರಿತ್ರ್ಯನಾಶನಮ್ ||
ಪಠೇಚ್ಛದ್ಧಯಾನ್ವಿತಃ ||
ಅರಣ್ಯ ಚೈವ ಸಂಗ್ರಾಮೇ ಅಗೌ ಭಯನಿವಾರಣಮ್ ||
ಬ್ರಹ್ಮಹತ್ಯಾ ಸುರಾಪಾನಂ ಗೋಹತ್ಯಾದಿ ನಿವಾರಣಮ್ ||
ಹೀಗೆ ಈ ಸ್ತೋತ್ರವನ್ನು ಹೇಳಿಕೊಂಡು ನೀವು ಪೂಜೆ ಮಾಡುವುದರಿಂದ ಶ್ರೀರಾಮ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಸಹ ದೂರ ಮಾಡಿ ನಿಮಗೆ ರಕ್ಷಣೆಯನ್ನು ಮಾಡುತ್ತಾನೆ ಎನ್ನುವಂತಹ ನಂಬಿಕೆ ಇದೆ. ಹೀಗೆ ಈ ಸ್ತೋತ್ರವನ್ನು ಹೇಳಿದ ನಂತರ ಧೂಪ ದೀಪ ನೈವೇದ್ಯವನ್ನು ಮಾಡಬೇಕು.