ಯಾವುದೇ ಒಬ್ಬ ವ್ಯಕ್ತಿಯನ್ನು ಕುಡಿತದ ಚಟದಿಂದ ಬಿಡಿಸಬೇಕು ಎಂದರೆ ಮೊದಲು ಮನೆಯಲ್ಲಿರುವಂತಹ ಸದಸ್ಯರು ಈ ರೀತಿಯಾದ ಮುಡಿಪನ್ನು ಕಟ್ಟಬೇಕು ಮುಡಿಪು ಎಂದರೆ ಒಂದು ಕೆಂಪು ಬಟ್ಟೆಗೆ ಒಂದು ಹಿಡಿ ಅಕ್ಕಿಯನ್ನು ಹಾಕಬೇಕು. ಆ ಅಕ್ಕಿಗೆ ಒಂದು ಅರಿಶಿಣದ ಕೊಂಬನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅದರಲ್ಲಿ ಬರುವಂತಹ ಅರಿಶಿನವನ್ನು ಆ ಅಕ್ಕಿಗೆ ಹಾಕಿ ಕಲಸಿ ಅದನ್ನು ಅಕ್ಷತೆ ಮಾಡಿಕೊಳ್ಳಬೇಕು.
ಇದಾದ ನಂತರ ಒಂದು ಬಿಳಿಯ ಹಾಳೆಯನ್ನು ತೆಗೆದುಕೊಳ್ಳ ಬೇಕು ಅದರ ಮೇಲೆ ಆ ವ್ಯಕ್ತಿಯ ಹೆಸರಿನ ಜೊತೆಗೆ ಅನೇಕ ವರ್ಷ ಗಳಿಂದ ಈತನು ಕುಡುಕನಾಗಿದ್ದಾನೆ ಈತನು ತನ್ನ ಕುಡಿತದ ಚಟವನ್ನು ಬಿಡಬೇಕು ಎಂದು ಆ ಕಾಗದದ ಮೇಲೆ ಬರೆಯಬೇಕು ನಂತರ ಆ ಒಂದು ಕಾಗದದ ಹಿಂಭಾಗದಲ್ಲಿ ನಿಮ್ಮ ಮನೆ ದೇವರ ಹೆಸರನ್ನು ಬರೆಯಬೇಕು.
ನಂತರ ಇದನ್ನು ಮೊದಲು ತಯಾರಿಸಿ ಇಟ್ಟುಕೊಂಡಿದ್ದಂತಹ ಅಕ್ಷತೆಯ ಮೇಲೆ ಇಡಬೇಕು ಇದಾದ ಮೇಲೆ ನಿಮ್ಮ ಮನೆ ದೇವರ ಫೋಟೋಗೆ ಅರಿಶಿನ ಕುಂಕುಮ ಹೂವನ್ನು ಇಟ್ಟು ಭಕ್ತಿಯಿಂದ ಪೂಜೆಯನ್ನು ಆರತಿಯನ್ನು ದೂಪ ದೀಪ ನೈವೇದ್ಯವನ್ನು ಮಾಡಬೇಕಾಗುತ್ತದೆ. ಆನಂತರ ಅಕ್ಷತೆ ಕಾಳಿನ ಜೊತೆ ಇದ್ದಂತಹ ಆ ಒಂದು ಬಿಳಿ ಹಾಳೆಯ ಜೊತೆ ಒಂದು ನಿಂಬೆ ಹಣ್ಣನ್ನು ಸಹ ಇಡಬೇಕು.
ಇದನ್ನು ಓದಿ:- ನಾಳೆ ಮನೆಯಲ್ಲಿ ಅಯೋಧ್ಯ ರಾಮನ ಪೂಜೆ ಎಲ್ಲರೂ ಈ ರೀತಿ ಸುಲಭವಾಗಿ ಮಾಡಿಕೊಳ್ಳಿ.!
ಇಷ್ಟನ್ನು ಸಹ ಆ ಒಂದು ಕೆಂಪು ಬಟ್ಟೆಯಲ್ಲಿ ಇಟ್ಟು ಅದನ್ನು ಒಂದು ಮೂಟೆಯಾಗಿ ಕಟ್ಟಬೇಕು ಈ ರೀತಿ ಕಟ್ಟಿದಂತಹ ಕೆಂಪು ಬಟ್ಟೆಯ ಮೂಟೆಯನ್ನು ಎಕ್ಕದ ಗಿಡಕ್ಕೆ 3 ಗಂಟನ್ನು ಹಾಕುವುದರ ಮೂಲಕ ಕಟ್ಟಬೇಕು.
ಆನಂತರ ಎಕ್ಕದ ಗಿಡವನ್ನು ಕೈಯಲ್ಲಿ ಮುಟ್ಟಿ ನಮಸ್ಕರಿಸಬೇಕು ಆನಂತರ ನಿಮ್ಮ ಮನಸ್ಸಿನಲ್ಲಿ ಯಾವ ವ್ಯಕ್ತಿ ಕುಡಿತದ ಚಟದಲ್ಲಿ ಬಿದ್ದಿರುತ್ತಾನೋ ಅವನ ಹೆಸರನ್ನು ಹೇಳುತ್ತಾ ಇವನು ತನ್ನ ಕುಡಿತದ ಚಟವನ್ನು ಬಿಡಬೇಕು ಎಂದು ಹೇಳುತ್ತಾ ಎಕ್ಕದ ಗಿಡದ ಮುಂದೆ ಒಂದು ಸಂಕಲ್ಪವನ್ನು ಮಾಡಿಕೊಂಡು.
ಆ ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿದಂತಹ ಮೂಟೆಯನ್ನು ಕೈ ಮುಗಿದು ದೇವರ ಬಳಿ ಶ್ರದ್ದೆಯಿಂದ ಕೇಳಿಕೊಳ್ಳುತ್ತಾ ಕೈ ಮುಗಿಯಬೇಕು. ಕೈಮುಗಿದು ತಕ್ಷಣವೇ ಮತ್ತೆ ಹಿಂದಿರುಗಿ ನೋಡದೆ ಬರಬೇಕು ಹೌದು. ಈ ರೀತಿಯಾಗಿ ನೀವು 9 ದಿನ ಮಾಡಬೇಕು ಹೀಗೆ ಮಾಡಿದ್ದೆ ಆದರೆ ಆ ವ್ಯಕ್ತಿ ತನ್ನ ಕುಡಿತದ ಚಟದಿಂದ ಸಂಪೂರ್ಣವಾಗಿ ಹೊರ ಬರುತ್ತಾನೆ ಎನ್ನುವಂತಹ ನಂಬಿಕೆ ಇದೆ.
ಇದನ್ನು ಓದಿ:- ಕಾರ್ಯ ಸಿದ್ಧಿ ಚಕ್ರ ಅಂದುಕೊಂಡ ಕೆಲಸ ಆಗುತ್ತೋ, ಇಲ್ಲವೋ ತಿಳಿಯಿರಿ.!
ಹಾಗಾಗಿ ಯಾರೆಲ್ಲರ ಮನೆಯಲ್ಲಿ ಇಂತಹ ಕುಡಿತದ ಚಟವನ್ನು ಅನುಭವಿಸುತ್ತಿರುತ್ತಾರೋ ಅವರ ಈ ಚಟವನ್ನು ಬಿಡಿಸಬೇಕು ಎಂದರೆ ಈಗ ನಾವು ಮೇಲೆ ಹೇಳಿದ ಈ ಒಂದು ಪೂಜಾ ವಿಧಾನವನ್ನು ಈ ಒಂದು ಅನುಷ್ಠಾನವನ್ನು ಮಾಡುವುದರಿಂದ ಆ ವ್ಯಕ್ತಿ ತನ್ನ ಜೀವನದಲ್ಲಿ ತನ್ನ ಕುಡಿತದ ಚಟದಿಂದ ಹೊರ ಬರುತ್ತಾನೆ.
ಹೌದು ಕೆಲವೊಂದಷ್ಟು ಜನ ಎಷ್ಟೇ ಔಷಧಿಗಳನ್ನು ಸಹ ಕೊಡಿಸಿದರು ಆ ವ್ಯಕ್ತಿ ತನ್ನ ಕುಡಿತದ ಚಟ ವನ್ನು ಬಿಡುವುದಿಲ್ಲ ಆದರೆ ಈ ಒಂದು ಪೂಜಾ ವಿಧಾನವನ್ನು ಮಾಡುವು ದರಿಂದ ಆ ವ್ಯಕ್ತಿ ದಿನೇ ದಿನೇ ಕುರಿತದ ಛಟವನ್ನು ಕಡಿಮೆ ಮಾಡುತ್ತಾ ಬರುತ್ತಾನೆ.
ಯಾವುದೇ ಒಂದು ಪೂಜೆಯನ್ನು ಮಾಡಬೇಕು ಎಂದರೆ ಅದರಲ್ಲಿ ಭಕ್ತಿ ಶ್ರದ್ಧೆ ನಂಬಿಕೆ ಇದ್ದರೆ ಮಾತ್ರ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಪೂಜೆಯನ್ನು ಬಹಳ ನಂಬಿಕೆಯಿಂದ ಭಕ್ತಿ ಶ್ರದ್ಧೆಯಿಂದ ಮಾಡಿದಾಗ ಆದರಿಂದ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.