ಕೆಲವರು ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ ಆಕರ್ಷಣೀಯ ಬಣ್ಣವನ್ನು ಸಹ ಹೊಂದಿರುತ್ತಾರೆ, ಆದರೆ ಅವರ ಕಣ್ಣುಗಳ ಸುತ್ತ ಆಗಿರುವ ಕಪ್ಪು ಕಲೆಯು ಅವರ ಅಂದವನ್ನು ಹಾಳು ಮಾಡುತ್ತಿರುತ್ತದೆ. ಅನೇಕ ಹೆಣ್ಣುಮಕ್ಕಳಿಗೆ ಈ ರೀತಿ ಸಮಸ್ಯೆ ಇರುವುದನ್ನು ನಾವು ನೋಡುತ್ತಿರುತ್ತೇವೆ.
ಈಗ ಹೆಣ್ಣುಮಕ್ಕಳು ಮಾತ್ರವಲ್ಲದೆ ಗಂಡು ಮಕ್ಕಳಲ್ಲಿ ಕೂಡ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅನೇಕ ಕಾರಣಗಳಿಂದಾಗಿ ಈ ರೀತಿ ಕಣ್ಣಿನ ಸುತ್ತ ಕಪ್ಪು ಕಲೆ ಆಗುತ್ತದೆ. ಮುಖ್ಯವಾಗಿ ನಿದ್ರೆಯ ಕೊರತೆಯಿಂದಲೇ ಎಂದು ಹೇಳಬಹುದು ಓದುವ ಮಕ್ಕಳು ಅಥವಾ ನೈಟ್ ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿರುವವರು ಕಂಪ್ಯೂಟರ್ ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುವವರು ಹೆಚ್ಚು ಹೊತ್ತು ಮೊಬೈಲ್ ನೋಡುವವರು ಮೀಡಿಯಾ ಗಳಲ್ಲಿ ಕೆಲಸ ಮಾಡುತ್ತಾ ಯಾವಾಗಲೂ ಕ್ಯಾಮೆರಾಗಳನ್ನು ಎದುರಿಸುವವರು ಅವರಿಗೆಲ್ಲ ಈ ಸಮಸ್ಯೆ ಇದ್ದೇ ಇರುತ್ತದೆ.
ಜೊತೆಗೆ ನಾವು ತಿನ್ನುವ ಆಹಾರದಲ್ಲಿ ಕೆಲ ಪೋಷಕಾಂಶಗಳ ಕೊರತೆ ಉಂಟಾದಾಗ ಆ ಕಾರಣದಿಂದಲೂ ಈ ರೀತಿ ಕಣ್ಣಿನ ಸುತ್ತ ಕಲೆಗಳು ಆಗುತ್ತದೆ. ಹಿಮೋಗ್ಲೋಬಿನ್ ಕಡಿಮೆ ಆದಾಗ ಕ್ಯಾಲ್ಸಿಯಂ, ಪೊಟ್ಯಾಶಿಯಂ ಐರನ್ ಅಂಶ ಮುಂತಾದ ಲವಣಾಂಶಗಳ ಕೊರತೆ ದೇಹದಲ್ಲಿ ಉಂಟಾದಾಗ ಈ ರೀತಿ ಆಗುತ್ತದೆ.
ಇದಕ್ಕೆ ಪರಿಹಾರ ನಾವು ತಿನ್ನುವ ಆಹಾರದಿಂದ ಇವುಗಳನ್ನು ಬ್ಯಾಲೆನ್ಸ್ ಮಾಡಿಕೊಳ್ಳುವುದರ ಜೊತೆಗೆ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ನಿದ್ರೆ ಮಾಡುವುದು. ಆದರೆ ಈಗಿನ ಕಾಲದಲ್ಲಿ ಇದನ್ನು ಪ್ಯಾಚ್ ಅಪ್ ಮಾಡುವ ಸಲುವಾಗಿ ದುಬಾರಿ ಬೆಲೆಯ ಕಾಸ್ಮೆಟಿಕ್ ಗಳನ್ನು ಬಳಸುತ್ತಾರೆ.
ಆದರೆ ಅದು ಎಲ್ಲರಿಗೂ ರಿಸಲ್ಟ್ ಕೊಡುವುದಿಲ್ಲ ಅಥವಾ ಆ ರಿಸಲ್ಟ್ ಶಾಶ್ವತವಾಗಿರುವುದಿಲ್ಲ. ಹಾಗಾಗಿ ಹೇಗೆ ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಶಾಶ್ವತವಾಗಿ ಈ ಸಮಸ್ಯೆಯಿಂದ ಹೊರಬರುವುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಅರಿಶಿಣಕ್ಕೆ ನಮ್ಮ ದೇಹಕ್ಕೆ ಕಾಂತಿ ಕೊಡುವ ಗುಣ ಇದೆ. ಇದು ಸೌಂದರ್ಯ ಹೆಚ್ಚಿಸುವುದಕ್ಕೆ ಆರೋಗ್ಯ ವೃದ್ಧಿಸುವುದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಇರುವ ನ್ಯಾಚುರಲ್ ಔಷಧಿ ಎನ್ನಬಹುದು. ಈ ಅರಿಶಿಣವನ್ನು ಕಡಲೆಹಿಟ್ಟಿನ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಾಗೂ ಕಣ್ಣಿನ ಸುತ್ತ ಪ್ಯಾಕ್ ಹಾಕಿ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತದೆ.
* ಸೌತೆಕಾಯಿಯ ಪೇಸ್ಟ್ ಮಾಡಿ ಅದಕ್ಕೆ ಚಿಟಿಕೆ ಅರಿಶಿಣ ಹಾಕಿ ಅದನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಬಹಳ ಬೇಗ ಈ ಸಮಸ್ಯೆ ಪರಿಹಾರ ಆಗುತ್ತದೆ ಅಥವಾ ಸೌತೆಕಾಯಿ, ಆಲೂಗಡ್ಡೆ ಗಳನ್ನು ಸ್ಲೈಸ್ ಗಳಾಗಿ ಕಟ್ ಮಾಡಿ ಕೂಡ ಇಟ್ಟುಕೊಳ್ಳಬಹುದು.
* ಹಾಲಿನ ಕೆನೆಗೆ ಅರಿಶಿನ ಹಾಕಿ ಮಿಕ್ಸ್ ಮಾಡಿ ಅದನ್ನು ಈ ಕಪ್ಪು ಕಲೆಗಳು ಆಗಿರುವ ಕಡೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ವಾಷ್ ಮಾಡುವುದರಿಂದ ಉತ್ತಮ ರಿಸಲ್ಟ್ ಸಿಗುತ್ತದೆ.
* ರೋಜ್ ವಾಟರ್ ಹತ್ತಿಯಲ್ಲಿ ಅದ್ದಿ ಅದನ್ನು ಕಣ್ಣಿನ ಸುತ್ತ ಇಟ್ಟುಕೊಳ್ಳುವುದರಿಂದ ಕೂಡ ಕಲೆ ಕಡಿಮೆ ಆಗುತ್ತದೆ.
* ಮನೆಯಲ್ಲಿರುವ ಕೊಬ್ಬರಿ ಎಣ್ಣೆ ಸ್ವಲ್ಪ ಬಿಸಿ ಮಾಡಿ ಅದಕ್ಕೆ ಅರಿಶಿನ ಹಾಕಿ ಅವೆರಡು ಮಿಶ್ರಣವನ್ನು ಕಪ್ಪು ಕಲೆಗಳು ಆಗಿರುವುದರಸುತ್ತ ಹಚ್ಚಿ ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ ಅದ್ಭುತ ರಿಸಲ್ಟ್ ಕಾಣುತ್ತೀರಿ.
* ಕಿತ್ತಳೆ ಹಣ್ಣಿನ ಹೋಳುಗಳು ಅಥವಾ ಟೊಮೊಟೊ ಹಣ್ಣಿನ ಹೋಳುಗಳನ್ನು ಕೂಡ ಕಣ್ಣಿನ ಸುತ್ತ ಇಡುವುದರಿಂದ ಈ ಕಲೆ ಕಡಿಮೆ ಆಗುತ್ತದೆ, ಆದರೆ ಕೆಲವರಿಗೆ ಇದು ಆಗುವುದಿಲ್ಲ ಹಾಗಾಗಿ ನಿಮ್ಮ ಚರ್ಮದ ಪ್ರಕೃತಿಗೆ ಇದು ಹೊಂದಿದ್ದರೆ ಪ್ರಯತ್ನಿಸಬಹುದು.