ನಟ ಬಾಲರಾಜ್ ಕನ್ನಡಿಗರಿಗೆಲ್ಲರಿಗೂ ಪರಿಚಿತರು. ಕಳೆದ ಒಂದು ದಶಕದ ಹಿಂದಿನ ಸಿನಿಮಾಗಳಲ್ಲಿ ನಾಯಕನಾಗಿ, ನಾಯಕನ ಸ್ನೇಹಿತನಾಗಿ ಮತ್ತು ಸಿಪಾಯಿ ಅಂತಹ ಸಿನಿಮಾಗಳಲ್ಲಿ ರವಿಚಂದ್ರನ್ ಅವರ ಎದುರಿಗೆ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಇವರು ಸದ್ಯಕ್ಕೆ ಕಿರುತೆರೆ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿದ್ದಾರೆ. ಬಾಲರಾಜ್ ಅವರು ಡಾಕ್ಟರ್ ರಾಜಕುಮಾರ್ ಅವರ ತಂಗಿಯ ಮಗ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ.
ಡಾಕ್ಟರ್ ರಾಜಕುಮಾರ್ ಅವರು ಬಾಲರಾಜ್ ಅವರಿಗೆ ಮಾವನೆ ಆಗಬೇಕಿತ್ತು. ಹೀಗಾಗಿ ಶಿವರಾಜ್ ಕುಮಾರ್, ರಾಘಣ್ಣ ಬಾಲರಾಜ್ ಇವರೆಲ್ಲ ಒಂದೇ ಕುಟುಂಬದಲ್ಲಿ ಒಂದೇ ತಾಯಿಯ ಮಕ್ಕಳಂತೆ ಒಟ್ಟಿಗೆ ಆಡಿ ಬೆಳೆದವರು. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಅವರು ಮದ್ರಾಸಿನಲ್ಲಿ ಕಳೆದಿದ್ದ ಅಣ್ಣಾವ್ರ ಕುಟುಂಬದ ಜೊತೆಗಿನ ಕೆಲವು ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಅದರಲ್ಲಿ ಅವರ ಮನೆಯಿಂದ ಕಾರು ಕದ್ದು ಕಾರು ಕಲಿತ ಪ್ರಸಂಗವನ್ನು ಸಹ ನೆನೆಸಿಕೊಂಡು ಹೇಳಿಕೊಂಡಿದ್ದಾರೆ.
ಅಣ್ಣಾವ್ರು ಆಗಸ್ಟ್ 1983 ರಲ್ಲಿ ಅಂಬಾಸಿಡರ್ ಕಾರನ್ನು ತೆಗೆದುಕೊಂಡಿದ್ದರಂತೆ. ಬಾಲರಾಜ್ ಅವರ ಸ್ನೇಹಿತನೊಬ್ಬನಿಗೆ ಚೆನ್ನಾಗಿ ಕಾರು ಓಡಿಸಲು ಬರುತ್ತಿತ್ತಂತೆ ಅವನನ್ನು ನೋಡಿ ಬಾಲರಾಜ್ ನಾನು ಕಾರು ಕಲಿಯಬೇಕು ಕಲಿಸಿಕೊಡು ಎಂದು ಕೇಳುತ್ತಿದ್ದರಂತೆ. ಅದಕ್ಕೆ ಅವನು ಕಾರು ತೆಗೆದುಕೊಂಡು ಬಾ ಎಂದು ಸಲಹೆ ನೀಡಿದ್ದನಂತೆ ಹೊಸ ಕಾರು ಕೇಳಲು ಭಯ ಹೀಗಾಗಿ ವಾಚ್ ಮೆನ್ ಮಲಗಿದ ಮೇಲೆ ಪ್ರತಿದಿನ ಕೂಡ ಕಾರ್ ಶೆಡ್ ಇಂದ ಕಾರು ತಳ್ಳಿಕೊಂಡು ಬಂದು ನಂತರ ಹೊರಗಡೆ ಸ್ಟಾರ್ಟ್ ಮಾಡಿಕೊಂಡು ಹೋಗಿ ಮದ್ರಾಸಿನ ಅನೇಕ ರಸ್ತೆಗಳಲ್ಲಿ ಸುತ್ತಾಡಿಕೊಂಡು ಮತ್ತೆ ತಂದು ಮನೆತನಕ್ಕೆ ಡ್ರೈವ್ ಮಾಡಿ ನಂತರ ಅದೇ ರೀತಿ ತಳ್ಳಿ ಶೆಡ್ ಒಳಗೆ ನಿಲ್ಲಿಸಿ ಬಿಡುತ್ತಿದ್ದರಂತೆ.
ಪಾರ್ವತಮ್ಮರ ಬಳಿ ದಿನ ಡ್ರೈವರ್ ಕಂಪ್ಲೇಂಟ್ ಮಾಡುತ್ತಿದ್ದರಂತೆ. ಯಾರೋ ಕಾರು ತೆಗೆದುಕೊಂಡು ಹೋಗುತ್ತಿದ್ದಾರೆ, ದಿನ ಪೆಟ್ರೋಲ್ ಕಮ್ಮಿಯಾಗಿ ಇರುತ್ತದೆ ಎಂದು. ಆದರೆ ಪಾರ್ವತಮ್ಮನವರು ಕಳ್ಳ ಕಾರು ತೆಗೆದುಕೊಂಡು ಹೋಗಿರುತ್ತಾನಾ, ಹೋಗಿದ್ದರೆ ಮತ್ತೆ ನಿಲ್ಲಿಸುತ್ತಿದ್ದನಾ ಬಿಡು ಎಂದು ಹೇಳಿ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲವಂತೆ.
ಒಂದು ದಿನ ಇವರ ಮನೆಯ ಡ್ರೈವರ್ ಆಗಿದ್ದ ಎಲ್ಲಪ್ಪ ಎನ್ನುವವರು ರಜಾ ಹಾಕಿದ್ದ ಕಾರಣ ಚಿ.ಉದಯಶಂಕರ್ ಅವರ ಮನೆಗೆ ಪಾರ್ವತಮ್ಮನವರನ್ನು ಬಿಡಲು ಯಾರಾದರೂ ಡ್ರೈವರ್ ಬೇಕಿತ್ತಂತೆ. ಡ್ರೈವರ್ ಬರುವಷ್ಟರಲ್ಲಿ ಅಲ್ಲೇ ಇದ್ದ ಒಬ್ಬರು ಬಾಲರಾಜ್ ಕಾರು ಓಡಿಸುವುದನ್ನು ಕಲಿತು ಬಿಟ್ಟಿದ್ದಾನೆ ಎಂದು ಹೇಳಿದರಂತೆ. ತಕ್ಷಣ ಪಾರ್ವತಮ್ಮನವರು ಹಾಗಾದ್ರೆ ನೀನೇ ಕರೆದುಕೊಂಡು ಹೋಗಬೇಕು ಎಂದು ಹೇಳಿದರಂತೆ.
ಅವರು ಕೊಟ್ಟ ಧೈರ್ಯದಿಂದ ಕಾರು ಓಡಿಸಿದ್ದ ಬಾಲರಾಜ್ ಅವರು ಪಾರ್ವತಮ್ಮರಿಂದ ಪ್ರಶಂಸೆಯನ್ನು ಕೂಡ ಪಡೆದರಂತೆ. ಪಾರ್ವತಮ್ಮನವರು ಹಾಗಾದರೆ ಪ್ರತಿದಿನ ಶೆಡ್ ಯಿಂದ ಕಾರು ಕಳ್ಳತನ ಮಾಡಿ ಕಲಿಯುತ್ತಿದ್ದ ಕಳ್ಳ ನೀನೇನಾ ಎಂದು ಕೇಳಿ ತಮಾಷೆಯನ್ನು ಸಹ ಮಾಡಿದ್ದರಂತೆ.
ಮದ್ರಾಸಿನಲ್ಲಿ ಎಲ್ಲಾ ಮಕ್ಕಳನ್ನು ಅಣ್ಣಾವ್ರು ಮರೀನಾ ಬೀಚ್ ಗೆ ವಾಯು ವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದನ್ನು ಮತ್ತು ಅಣ್ಣಾವ್ರ ಚಿತ್ರದಲ್ಲಿ ನಟಿಸಬೇಕು ಎಂದು ಪಾರ್ವತಮ್ಮನವರನ್ನು ಕೇಳಿದಾಗ ಜೀವನ ಚೈತ್ರ ಸಿನಿಮಾದ ಆ ಪಾತ್ರಕ್ಕೆ ಭಗವಾನ್ ಅವರಿಗೆ ಹೇಳಿದ್ದನ್ನು ಮತ್ತು ಮೊದಲ ದಿನದ ಶೂಟಿಂಗ್ ವೇಳೆಗೆ ಅಣ್ಣಾವ್ರ ಎದುರು ನಿಂತು ಗಡಗಡ ನಡುಗುತ್ತಿದ್ದನ್ನು, ಆ ಎಲ್ಲಾ ನೆನಪುಗಳನ್ನು ಈ ಸಂದರ್ಶನದಲ್ಲಿ ಮನ ಬಿಚ್ಚಿ ಹಂಚಿಕೊಂಡಿದ್ದಾರೆ. ಬಾಲರಾಜ್ ಅವರ ಆ ಮಾತುಗಳನ್ನೆಲ್ಲಾ ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ. ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.