Sunday, June 4, 2023
HomeViral Newsಅಪ್ಪು ಸಾ-ಯು-ವ ಒಂದು ತಿಂಗಳ ಮುಂಚೆ ದರ್ಶನ್ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್. ಈ...

ಅಪ್ಪು ಸಾ-ಯು-ವ ಒಂದು ತಿಂಗಳ ಮುಂಚೆ ದರ್ಶನ್ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್. ಈ ವಿಡಿಯೋ ನೋಡಿದ್ರೆ ಗೊತ್ತಗುತ್ತೆ ಅಪ್ಪು ಮನಸ್ಸಿನಲ್ಲಿ ದರ್ಶನ್ ಬಗ್ಗೆ ಮನೋಭಾವ

 

ಅಪ್ಪು (Appu) ಈ ನಾಡು ಕಂಡ ದೇವಮಾನವ, ಅಭಿಮಾನಿಗಳಿಂದ ದೇವರು ಎಂದು ಪೂಜೆ ಮಾಡಿಸಿಕೊಳ್ಳುತ್ತಿರುವ ಶ್ರೇಷ್ಠ ಕಲಾವಿದ. ಕಣ್ ಮುಚ್ಚಿ ಬಿಡುವಷ್ಟರಲ್ಲಿ ಮಿಂಚಿ ಮರೆಯಾದ ಮಾಣಿಕ್ಯ. ಅಪ್ಪು ಅವರ ವ್ಯಕ್ತಿತ್ವ ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರ ಕುಟುಂಬದವರು ಮತ್ತು ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದ ಕೆಲವರಿಗೆ ಅಷ್ಟೇ ತಿಳಿದಿದ್ದ ಅಪ್ಪು ಗುಣ ಇಂದು ಅವರ ಮ.ರ.ಣ.ದ ಬಳಿಕ ಜಗತ್ ಜಾಹಿರಾಗಿ ಹೋಗಿದೆ.

ಈ ಒಂದು ಕಾರಣಕ್ಕಾಗಿ ಅಪ್ಪು ಅವರನ್ನು ದೇಶ ಭಾಷೆ ಗಡಿ ಭೇದವಿಲ್ಲದೆ ಇಡೀ ಭಾರತವೇ ಕೊಂಡಾಡುತ್ತಿದೆ. ಅಪ್ಪು ಎಂದು ಕೂಡ ಯಾರಿಗೂ ಕೆಟ್ಟದ್ದು ಬಯಸಲಿಲ್ಲ, ಯಾವ ಸ್ಟಾರ್ ಬಗ್ಗೆ ಕೂಡ ತಪ್ಪಾಗಿ ಮಾತನಾಡಲಿಲ್ಲ, ಯಾರನ್ನೇ ಕಂಡರೂ ಹೆಸರಿಗೆ ತಕ್ಕಂತೆ ಪ್ರೀತಿಯಿಂದ ಅಪ್ಪಿಕೊಂಡು ಸಹೋದರನಂತೆ ಮಾತನಾಡಿಸುತ್ತಿದ್ದ ಈ ಪುಣ್ಯಾತ್ಮನ ಹೆಸರಿಗೆ ಮಸಿ ಬೆಳೆಯುವ ಕೆಲಸ ಇತ್ತೀಚಿಗೆ ನಡೆಯುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ಹೊಸಪೇಟೆಯಲ್ಲಿ (Hospet incident) ಆದ ದರ್ಶನ್ (Darshan) ಮೇಲಿನ ಹಲ್ಲೆ ಬಳಿಕ ಅಪ್ಪು ಫ್ಯಾನ್ಸ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆಯುತ್ತಿದೆ. ಇಬ್ಬರು ಸಹ ತಮ್ಮ ಹೀರೋ ಹೆಚ್ಚು ತಮ್ಮ ಹೀರೋ ಹೆಚ್ಚು ಎಂದು ಮತ್ತೊಬ್ಬ ಹೀರೋ ಬಗ್ಗೆ ಬಾಯಿಗೆ ಬಂದ ಹಾಗೆ ಬರೆಯುತ್ತಿದ್ದಾರೆ.

ಆದರೆ ಇದನ್ನೆಲ್ಲ ಮೇಲೆ ಕುಳಿತು ನೋಡುತ್ತಿರುವ ಮನಸ್ಸಿಗೆ ಎಷ್ಟು ನೋವಾಗುತ್ತಿದೆಯೋ ಬಲ್ಲವರ್ಯಾರು. ಯಾಕೆಂದರೆ ಅಪ್ಪು ಇರುವ ತನಕ ಎಂದು ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ, ದರ್ಶನ್ ಅವರನ್ನು ಆತ್ಮೀಯ ಸ್ನೇಹಿತನಂತೆ ಕಂಡು ಅದೇ ರೀತಿ ನಡೆಸಿಕೊಂಡವರು ಅಪ್ಪು. ಡಾಕ್ಟರ್ ರಾಜಕುಮಾರ್ ಅವರ ಕಾಲದಿಂದಲೂ ಸಹ ಅಪ್ಪು ಹಾಗು ದರ್ಶನ್ ಕುಟುಂಬದ ನಡುವೆ ಬಾಂಧವ್ಯ ಇದೆ.

ದರ್ಶನ್ ಅವರ ತಾಯಿಯೂ ಸಹ ಅಣ್ಣಾವ್ರ ಮನೆ ಅನ್ನದ ಋಣವನ್ನು ಕೊನೆ ತನಕ ಮರೆಯುವುದಿಲ್ಲ ಎಂದೇ ಹೇಳಿಕೊಳ್ಳುತ್ತಾರೆ ಆದರೆ ಇತ್ತೀಚೆಗೆ ಆದ ಬೆಳವಣಿಗೆಗಳಿಂದ ಅಪ್ಪು ಮತ್ತು ದರ್ಶನ್ ಹೆಸರಿನ ನಡುವೆ ಕಂದಕ ಏರ್ಪಡುತ್ತಿದೆ. ಅಂದು ಹೊಸಪೇಟೆಯಲ್ಲಿ ದರ್ಶನ್ ಗೆ ಆದ ಅವಮಾನಕ್ಕೆ ಅಪ್ಪು ಅವರ ಅಭಿಮಾನಿಗಳೇ ಕಾರಣ ಎಂದು ದರ್ಶನ್ ಅಭಿಮಾನಿಗಳು ಫಿಕ್ಸ್ ಆಗಿ ಬಿಟ್ಟಿದ್ದಾರೆ.

ಆದರೆ ಅಪ್ಪು ಅವರು ಇಂದು ಬದುಕಿದ್ದರೆ ಇಷ್ಟೆಲ್ಲಾ ಬೆಳೆಯಲು ಬಿಡುತ್ತಾ ಇರಲಿಲ್ಲ ಎನಿಸುತ್ತದೆ. ಅದಕ್ಕೆ ಆಗಲೇ ಮುಕ್ತಿ ಹೇಳಿಬಿಡುತ್ತಿದ್ದರು. ಅಪ್ಪು ಅವರು ದರ್ಶನ್ ಕುಟುಂಬದ ಮೇಲೆ ಬಹಳ ಪ್ರೀತಿ ಹೊಂದಿದ್ದರು. ಆ ಪ್ರೀತಿಗೆ ಸಾಕ್ಷಿ ಎನ್ನುವಂತೆ ಸಾಯುವ ಮೂರು ತಿಂಗಳ ಹಿಂದೆಯೂ ಕೂಡ ತೂಗುದೀಪ ದರ್ಶನ (Thoogudeepa Darshan) ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದ್ದರು.

ಈ ಪುಸ್ತಕ ದರ್ಶನ್ ಅವರ ತಂದೆಯ ಕುರಿತಾದ ಪುಸ್ತಕ ಆಗಿತ್ತು ಜೊತೆಗೆ ಆ ಪುಸ್ತಕ ಬಿಡುಗಡೆ ಸಮಯದಲ್ಲಿ ದರ್ಶನ್ ಅವರಿಗಾಗಿ ಒಂದು ಮಾತನ್ನು ಸಹ ಹೇಳಿದ್ದರು. ಕಲಾವಿದ ಆಗಿ ಬಣ್ಣ ಹಚ್ಚಿದರೆ ಸಾಕು ಅದು ನಾನೇ ಆಗಬೇಕು ಎಂದಿಲ್ಲ ಯಾರಾದರೂ ಅಷ್ಟೇ ಕಲಾವಿದ ಆಗಿಬಿಟ್ಟರೆ ಅವನು ಅಂದೇ ಶ್ರೀಮಂತ ಆಗಿಬಿಡುತ್ತಾನೆ. ಯಾಕೆಂದರೆ ಎಲ್ಲೇ ಹೋದರು ಆತನಿಗೆ ಒಂದು ಹೊತ್ತಿನ ಊಟ ಒಂದು ಲೋಟ ಕಾಫಿಗೆ ಕೊರತೆ ಹುಟ್ಟುವುದಿಲ್ಲ, ಅಷ್ಟರಮಟ್ಟಿಗೆ ಅಭಿಮಾನಿಗಳು ಪ್ರೀತಿ ತೋರಿಸುತ್ತಾರೆ.

ಕೊನೆವರೆಗೂ ಅಭಿಮಾನಿಗಳಿಗೆ ಅವರ ಹೀರೋನೇ ಸ್ಟಾರ್ ಆಗಿರುತ್ತಾರೆ ಎಂದು ಹೇಳಿದ್ದರು. ಒಂದರ್ಥದಲ್ಲಿ ಅವರು ದರ್ಶನ್ ಅವರನ್ನೇ ಕುರಿತು ದರ್ಶನ್ ಅಭಿಮಾನಿಗಳ ವಿಷಯದಲ್ಲಿ ಎಲ್ಲರಿಗಿಂತ ಶ್ರೀಮಂತ ಎಂದು ಹೇಳಿದ್ದರು ಎಂದೇ ಅರ್ಥೈಸಿಕೊಳ್ಳಬಹುದು. ಆದರೆ ಇಂದು ಅಪ್ಪು ಇಲ್ಲದೆ ಅನೇಕ ವಿಷಯಗಳು ಅಪಾರ್ಥ ಆಗಿ ಅವರ ಅಭಿಮಾನಿಗಳು ನೋವು ತಿನ್ನುವ ಹಾಗಾಗಿದೆ ಎನ್ನುವುದೇ ಬೇಸರ. ಶೀಘ್ರದಲ್ಲೇ ಇವೆಲ್ಲವೂ ಇತ್ಯರ್ಥವಾಗಲಿ ಎನ್ನುವುದು ಇಡೀ ಕರುನಾಡಿನ ಆಸೆ.