Sunday, June 4, 2023
HomeViral NewsM.L.A ಪರಮೇಶ್ವರ್ ಮಗ ಹೆಣ್ಣಾಗಿ ಬದಲಾಗಿದ್ದು ಹೇಗೆ ಗೊತ್ತ.? ಓದೋಕೆ ಅಂತ ವಿದೇಶಕ್ಕೆ ಹೋದ ಮಗ...

M.L.A ಪರಮೇಶ್ವರ್ ಮಗ ಹೆಣ್ಣಾಗಿ ಬದಲಾಗಿದ್ದು ಹೇಗೆ ಗೊತ್ತ.? ಓದೋಕೆ ಅಂತ ವಿದೇಶಕ್ಕೆ ಹೋದ ಮಗ ಒಂದು ವರ್ಷ ಬಿಟ್ಟು ಮರಳಿ ಮನೆಗೆ ಬರುವಾಗ ಹೆಣ್ಣಾಗಿದ್ದು ನಿಜಕ್ಕೂ ರೋಚಕ.

 

ವಿದೇಶದಲ್ಲಿ ಓದಲು ಎಂದು ಹೋಗಿದ್ದ ಪರಮೇಶ್ವರ್ ಅವರ ಮಗ ಯಾವ ಸ್ಥಿತಿಯಲ್ಲಿ ಬಂದರು ಗೊತ್ತಾ.? ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಆಗಿದ್ದ ಜಿ.ಪರಮೇಶ್ವರ್ ಅವರು ಆಸ್ಥಾನದಲ್ಲಿದ್ದಾಗ ರಾಜ್ಯದ ಜನತೆಗೆ ಅನುಕೂಲವಾಗಲು ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರು. ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿ ನಾನಾ ಯೋಚನೆಗಳನ್ನು ಅವರಿಗಾಗಿ ಕೊಡುವ ಮೂಲಕ ಅವರ ಬದುಕಿಗೆ ದಾರಿ ದೀಪವಾಗಿದ್ದಾರೆ.

ಆದರೆ ಇವರ ಬದುಕಿನಲ್ಲಿ ಬೆಳಕು ತುಂಬ ಬೇಕಾಗಿದ್ದ ಇವರ ಒಬ್ಬನೇ ಒಬ್ಬ ಮಗ ವಿದೇಶಕ್ಕೆ ಓದಲು ಎಂದು ಹೋಗಿ ಈಗ ಪರಮೇಶ್ವರ್ ಅವರು ಪ್ರತಿದಿನ ಅವರ ನೆನಪಿನಲ್ಲಿ ದುಃಖಿಸುವಂತೆ ಮಾಡಿದ್ದಾರೆ. ಅಷ್ಟಕ್ಕೂ ಜಿ ಪರಮೇಶ್ವರ್ ಅವರ ಮಗ ಮಾಡಿರುವ ಕೆಲಸ ಆದರೂ ಏನು ಎಂದು ನೋಡುವುದಾದರೆ ಯಾವುದೇ ಅಪರಾಧ ಮಾಡಿಲ್ಲದೆ ಇದ್ದರೂ ಅವರ ಇಚ್ಛೆಯಿಂದ ಮಾಡಿಕೊಂಡ ಒಂದೇ ಒಂದು ಕೆಲಸದಿಂದ ಈಗ ಪರಮೇಶ್ವರ್ ಅವರು ನೋವು ಅನುಭವಿಸುವಂತೆ ಆಗಿದೆ.

ಜಿ ಪರಮೇಶ್ವರ್ ಅವರ ಮಗ ಹುಟ್ಟಿದ್ದು ಬೆಂಗಳೂರಿನಲ್ಲೇ, ಬಾಲ್ಯದಿಂದಲೂ ಇವರಿಗೆ ಪೈಲೆಟ್ ಆಗಬೇಕು ಎನ್ನುವ ಆಸೆ ಇತ್ತು. ಹೀಗಾಗಿ ಪರಮೇಶ್ವರ್ ಅವರು ಇವರನ್ನು ವಿದೇಶಕ್ಕೆ ಕಳುಹಿಸಿ ಓದಿಸುತ್ತಿದ್ದರು. ವಿದ್ಯಾಭ್ಯಾಸ ಮುಗಿಯುವವರೆಗೂ ಹುಡುಗನಾಗಿಯೇ ಇದ್ದ ಇವರ ಮಗ ಮಲೇಶಿಯಾದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ.

ಹುಡುಗನಾಗಿದ್ದ ಇವರು ಈಗ ಶಾನು ಎಂದು ಹೆಸರು ಬದಲಾಗಿಸಿಕೊಂಡು ಹುಡುಗಿ ಆಗಿದ್ದಾರೆ. ಆದರೆ ತಾವು ಚಿಕ್ಕ ವಯಸ್ಸಿನಿಂದ ಕಂಡಿದ್ದ ಆ ಕನಸನ್ನು ವ್ಯರ್ಥ ಮಾಡಿಲ್ಲ, ವಿದೇಶಕ್ಕೆ ಯಾವ ಉದ್ದೇಶಕ್ಕಾಗಿ ಹೋಗಿದ್ದರೂ ಅದನ್ನು ಸಹಾ ಸಾಕಾರ ಮಾಡಿಕೊಂಡಿದ್ದಾರೆ. ತಾವು ಕಂಡ ಪೈಲೆಟ್ ಕನಸನ್ನು ನನಸು ಮಾಡಿಕೊಳ್ಳಲು ನ್ಯೂಜಿಲೆಂಡ್ ಅಲ್ಲಿ ಇದ್ದುಕೊಂಡು ಪೈಲೆಟ್ ಟ್ರೈನಿಂಗ್ ಅನ್ನು ಕೂಡ ಪಡೆದು ಇಂದು ನ್ಯೂಜಿಲೆಂಡ್ ನ ಟೂರಿಸ್ಟ್ ವಿಮಾನಗಳಲ್ಲಿ ಅಲ್ಲಿ ಪೈಲೆಟ್ ಆಗಿ ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ.

ಜೊತೆಗೆ ಕಾರ್ ರೇಸಿಂಗ್ ಬಗ್ಗೆ ಇವರಿಗೆ ವಿಪರೀತ ಕ್ರೇಜ್ ಇದೆ ಇವರೊಬ್ಬ ಪ್ರೊಫೆಷನಲ್ ಕಾರ್ ರೇಸರ್ ಕೂಡ ಆಗಿದ್ದಾರೆ. ಒಂದು ಸಂದರ್ಶನದಲ್ಲಿ ಇವರನ್ನು ಹುಡುಗಿ ಆಗಿ ಕಾರ್ ರೇಸಿಂಗ್ ನಿಮಗೆ ಕಷ್ಟ ಆಗುವುದಿಲ್ಲವೇ ಎಂದು ಪ್ರಶ್ನಿಸಿದಾಗ ಅಶ್ಚರ್ಯಕರವಾದ ಉತ್ತರವನ್ನು ಕೊಟ್ಟಿದ್ದಾರೆ. ಕಾರಿನಲ್ಲಿ ಹುಡುಗ ಹುಡುಗಿ ಎನ್ನುವ ವ್ಯತ್ಯಾಸ ಇರುತ್ತದೆಯೇ.? ಅದಕ್ಕೆ ಇಲ್ಲ ಅಂದಮೇಲೆ ನಮಗೆ ಯಾಕೇ ಬೇಕು.

ಇದರಲ್ಲಿ ಹುಡುಗ ಅಥವಾ ಹುಡುಗಿ ಎನ್ನುವ ಭೇದಭಾವ ಬರುವುದಿಲ್ಲ, ಬೇಧ ಭಾವ ಮಾಡಲೂಬಾರದು. ಪ್ರಯತ್ನ ಪಟ್ಟರೆ ಯಾರು ಏನು ಬೇಕಾದರೂ ಮಾಡಬಹುದು ಇಲ್ಲಿ ಎಲ್ಲರೂ ಒಂದೇ ಎಂದು ಉತ್ತರಿಸಿದ್ದಾರೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಪರಮೇಶ್ವರ್ ಅವರಿಗೆ ಅವರ ಮಗ ಶಾನು ಆಗಿ ಬದಲಾಗಿರುವುದು ಇಷ್ಟ ಇಲ್ಲವಂತೆ ಇದರಿಂದ ಅವರು ಬಹಳ ಮುಜುಗರ ಅನುಭವಿಸಿದ್ದಾರಂತೆ.

ನಾವೆಲ್ಲರೂ ”ನಾನು ಅವನಲ್ಲ ಅವಳು” ಎನ್ನುವ ಸಿನಿಮಾವನ್ನು ನೋಡಿ ಅದೊಂದು ಸಿನಿಮಾ ಕಥೆ ಅಥವಾ ಪಕ್ಕದ ರಾಜ್ಯದವರ ಜೀವನಾಧಾರಿತ ಚಿತ್ರಕಥೆ ಎಂದು ಮಾತನಾಡಿಕೊಳ್ಳುತ್ತಿದ್ದೆವು. ಆದರೆ ಇಂದು ನಮ್ಮ ರಾಜ್ಯದ ಗಣ್ಯ ರಾಜಕೀಯ ಪುತ್ರನು ಕೂಡ ಈ ರೀತಿ ಉದಾಹರಣೆ ಆಗುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಅದೇನೆ ಇದ್ದರೂ ಅವರವರ ಬದುಕು ಅವರಿಚ್ಛೆ. ಶಾನು ಅವರು ಈಗ ಹುಡುಗಿಯಾಗಿ ಬಹಳ ಸಂತೋಷದಲ್ಲಿ ಇದ್ದಾರೆ ಎನ್ನುವ ವಿಷಯದಿಂದ ಸಮಾಧಾನ ಪಟ್ಟುಕೊಳ್ಳಬೇಕು ಅಷ್ಟೇ. ಪರಮೇಶ್ ಮಗ ಮಗಳಾಗಿ ಬದಲಾದ ನಂತರ ಹೇಗೆ ಕಾಣಿಸುತ್ತಿದ್ದಾರೆ ಎಂಬ ವಿಡಿಯೋ ಒಂದು ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.