Friday, June 9, 2023
HomeEntertainmentನನ್ನ ವಯಸ್ಸಿಗೂ ಮರ್ಯಾದೆ ಕೊಡದೆ ಸೃಜನ್ ಎಲ್ಲರ ಮುಂದೆ "ಅವನಿಗೆ ಮುಚ್ಕೊಂಡು ಇರೋಕೆ ಹೇಳು" ಅಂದಿದ್ದು...

ನನ್ನ ವಯಸ್ಸಿಗೂ ಮರ್ಯಾದೆ ಕೊಡದೆ ಸೃಜನ್ ಎಲ್ಲರ ಮುಂದೆ “ಅವನಿಗೆ ಮುಚ್ಕೊಂಡು ಇರೋಕೆ ಹೇಳು” ಅಂದಿದ್ದು ಬೇಸರ ಆಯ್ತು ಎಂದು ನೋವು ವ್ಯಕ್ತಪಡಿಸಿದ ಮಂಡ್ಯ ರಮೇಶ್.

 

ಮಜಾ ಟಾಕೀಸ್ ಅಲ್ಲಿ ಮಂಡ್ಯ ರಮೇಶ್ ಅವರು ಏನಾದರೂ ಸಜೆಶನ್ ಕೊಟ್ಟರೆ ಸೃಜನ್ ಅವರು ಬೈತಾ ಇದ್ದಿದ್ದು ಯಾಕೆ ಗೊತ್ತಾ.? ಮಂಡ್ಯ ರಮೇಶ್ ಅವರು ಕಳೆದ ಹಲವು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹಾಸ್ಯಕ್ಕೆ ಫೇಮಸ್ ಆಗಿದ್ದಾರೆ. ಜನುಮದ ಜೋಡಿ ಸಿನಿಮಾದಿಂದ ಶುರು ಆದ ಅವರ ಜರ್ನಿ ಇಂದು ಅವರನ್ನು ಜನ ಮುದ್ದೇಶ ಎನ್ನುವ ಪಾತ್ರದಿಂದ ಗುರುತಿಸುವಂತೆ ಮಾಡಿದೆ.

ಮಂಡ್ಯ ರಮೇಶ್ ಅವರಿಗೆ ಮಂಡ್ಯ ರಮೇಶ್ ಎನ್ನುವ ಹೆಸರು ಬರುವಂತೆ ಮಾಡಿದ್ದು ಬಿವಿ ಕಾರಂತ್ ಅವರು, ಆದರೆ ಮುದ್ದೇಶ ಎನ್ನುವ ಹೆಸರು ಕೊಟ್ಟಿದ್ದು ಮಜಾ ಟಾಕೀಸ್ ಕರ್ನಾಟಕದ ಮೂಲೆ ಮೂಲೆಯಲ್ಲೂ ಸಹ ಜನ ಈ ಹೆಸರು ಕೇಳಿದರೆ ಎದ್ದು ಬಿದ್ದು ನಗುತ್ತಾರೆ. ಜೊತೆಗೆ ಮುದ್ದೆಶಾ ಎಂದು ತಕ್ಷಣ ಅವರ ಭಾವೋ ಎನ್ನುವ ಕೂಗು ಹಾಗೂ ಕಬ್ಬಿನ ಗದ್ದೆ ಶಾಂತಿ ಎನ್ನುವ ಡೈಲಾಗ್ ಕೂಡ ಫುಲ್ ಫೇಮಸ್ ಆಗಿಬಿಟ್ಟಿದೆ.

ಇತ್ತೀಚಿನ ಒಂದು ಸಂದರ್ಶನದಲ್ಲಿ ಮಂಡ್ಯ ರಮೇಶ್ ಅವರು ಮಜಾ ಟಾಕೀಸ್ ತಮ್ಮ ಪಾತ್ರದ ಬಗ್ಗೆ ಹಾಗೂ ಅದು ಹೇಗೆ ಶುರುವಾಯಿತು ಎನ್ನುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಮೊದಲಿಗೆ ಮಜಾ ಟಾಕೀಸ್ ಅನ್ನು ಶುರು ಮಾಡುತ್ತೇನೆ ನಿಮಗಾಗಿ ಒಂದು ಪಾತ್ರ ಇದೆ ಬನ್ನಿ ಎಂದು ಸೃಜನ್ ಕರೆದಾಗ ನಾನು ಒಪ್ಪಿಕೊಂಡಿರಲಿಲ್ಲ, ಕಾರಣ ನನಗೆ ಸ್ಟ್ಯಾಂಡಪ್ ಕಾಮಿಡಿ ಮಾಡಲು ಬರುವುದಿಲ್ಲ.

ನಾನು ಹಾಸ್ಯ ಪಾತ್ರಗಳನ್ನು ಮಾಡುತ್ತೇನೆ, ಆದರೆ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಾ ಇರುವಾಗ ಭಾವನಾತ್ಮಕವಾಗಿ ಹೋಗಿ ಬಿಡುತ್ತೇನೆ ಅಥವಾ ಮಾತನಾಡುತ್ತಾ ಹಾಸ್ಯ ಹೋಗಿ ವಿಚಿತ್ರ ಮಾಡಿ ಬಿಡುತ್ತೇನೆ. ಹಾಗಾಗಿ ಅಂತಹ ಯೋಗ್ಯತೆ ನನಗಿಲ್ಲ ಬರುವುದಿಲ್ಲ ಎಂದೇ ಹೇಳಿದ್ದೆ ಆತ ಬಲವಂತವಾಗಿ ಒಂದು ಎಪಿಸೋಡ್ ಗೆ ಕರೆಸಿಕೊಂಡ ಆ ಎಪಿಸೋಡ್ ನೋಡಿದ ಜನರಲ್ಲಿ 500 ಜನ ನಿಮಗೆ ಇದು ತಕ್ಕ ಪಾತ್ರ ಅಲ್ಲ ಪೆದ್ದು ಪೆದ್ದಾಗಿ ಕಾಣಿಸುತ್ತಿದ್ದೀರ ಮಂಗನ ರೀತಿ ಆಗಿದ್ದೀರಾ ಎಂದು ಕಾಮೆಂಟ್ ಮಾಡಿದ್ದರು.

ಆದರೆ 5000 ಮಂದಿ ಬಹಳ ಅದ್ಭುತವಾಗಿದೆ ಹೊಟ್ಟೆ ತುಂಬಾ ನಕ್ಕೆವು ಎಂದು ಕಾಮೆಂಟ್ ಮಾಡಿದ್ದರು ಅದನ್ನು ನೋಡಿ ಬಹುಮತಕ್ಕೆ ಬೆಂಬಲ ಎಂದುಕೊಂಡು ಮುಂದಿನ ಎಪಿಸೋಡ್ ಮಾಡಿದೆ. ಆ ಎಪಿಸೋಡ್ ನಲ್ಲಿ ಎಂಟ್ರಿ ಸೀನ್ ನನ್ನದೇ ಇತ್ತು ಅದರ ಟಿ ಆರ್ ಪಿ ನೋಡಿ ಸೃಜನ್ ಗೆ ಬಹಳ ಆಶ್ಚರ್ಯವಾಯಿತು. ಜೊತೆಗೆ ತೇಜಸ್ವಿ ಎನ್ನುವ ಹುಡುಗ ಸೃಜನ್ ಜೊತೆ ಇರುತ್ತಾನೆ, ಅವನು ಸಲಹೆ ಕೊಟ್ಟ ನಿಮ್ಮಲ್ಲಿ ಒಂದು ಪೆದ್ದುತನ ಇದೆ. ಅದನ್ನು ಹಾಗೆ ಉಳಿಸಿಕೊಳ್ಳಿ ಈ ಪಾತ್ರಕ್ಕೆ ಅದೇ ಬೇಕು ಎಂದು.

ಹೆಸರು ಏನು ಇಡುವುದು ಎಂದು ಎಲ್ಲಾ ಡಿಸೈಡ್ ಮಾಡಿ ಅದು ಇದು ಸೇರಿಸಿ ಮುದ್ದೇಶಾ ಎಂದು ಇಟ್ಟುಬಿಟ್ಟರು ಅದು ಹಾಗೆ ಉಳಿದುಕೊಂಡಿತು. ಎಲ್ಲೇ ಹೋದ್ರು ಜನ ಜೋರಾಗಿ ಕಬ್ಬಿನ ಗದ್ದೆ ಶಾಂತಿ ಎಂದು ಕೂಗಿ ತಮಾಷೆ ಮಾಡುತ್ತಾರೆ ಅಷ್ಟೇ ಸಾಕು ತೃಪ್ತಿ ಆಗುತ್ತದೆ. ಜೊತೆಗೆ ಆ ಸಮಯದಲ್ಲಿ ನಾನು ಯಾರನ್ನು ಕೇಳಿದರೂ ಅವಕಾಶಗಳು ಸಿಗುತ್ತಿರಲಿಲ್ಲ, ಸೃಜನ್ ಕರೆದು ಒಂದು ಒಳ್ಳೆ ಮೊತ್ತದ ಸಂಭಾವನೆ ಕೊಟ್ಟು ಪಾತ್ರ ಮಾಡಿಸಿದ ಹಾಗಾಗಿ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

ಜೊತೆಗೆ ನೀವು ಸಹ ನಾಟಕಗಳನ್ನು ತಯಾರಿಸುತ್ತೀರಲ್ಲ ಸೃಜನ್ ಗೆ ಸಜೆಶನ್ ಕೊಡುತ್ತಿದ್ರಾ ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ಸೃಜನ್ ಐಡಿಯಾಸ್ ಬೇರೆ ಇರುತ್ತದೆ ನಾವು ಅರ್ಧ ಪ್ರಾಕ್ಟೀಸ್ ಅರ್ಧ ಸ್ಟೇಜ್ ಮೇಲೆ ಪರ್ಫಾರ್ಮ್ ಮಾಡುತ್ತಾ ಅಲ್ಲಿ ಇಂಪ್ರೂವ್ ಮಾಡಿಕೊಳ್ಳುತ್ತಿದ್ದೆವು. ಅವನಿಗೇನಾದರೂ ಈ ರೀತಿ ಮಾಡಿದರೆ ಹೇಗೆ ಎಂದು ಕೇಳಿದಾಗ ನೇರವಾಗಿ ಬೈಯದೆ ಆ ಕಡೆ ನೋಡಿಕೊಂಡು ಬೇರೆಯವರನ್ನು ನಿನ್ನನ್ನು ಯಾರು ಕೇಳಿದ್ದು ಸುಮ್ಮನೆ ಇರಕ್ಕಾಗಲ್ವ ಅನ್ನುತ್ತಿದ್ದಾ ಅಷ್ಟರಲ್ಲೇ ನಾವು ಅರ್ಥಮಾಡಿಕೊಳ್ಳಬೇಕು. ಯಾರು ಏನೇ ಐಡಿಯಾಸ್ ಕೊಟ್ಟರು ಅಂತಿಮವಾದ ತೀರ್ಮಾನ ಅದರಲ್ಲಿ ನಿರ್ದೇಶಕನಾಗಿ ಸೃಜನ್ ದೇ ಆಗಿರುತ್ತಿತ್ತು ಎಂದು ಮಜಾ ಟಾಕೀಸ್ ಅನುಭವಗಳನ್ನು ಹೇಳಿಕೊಂಡಿದ್ದಾರೆ.