Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕನ್ನಡದ ಹಿರಿಯ ನಿರ್ದೇಶಕ ಭಗವಾನ್ ವಿ.ಧಿ.ವ.ಶ.

Posted on February 20, 2023 By Kannada Trend News No Comments on ಕನ್ನಡದ ಹಿರಿಯ ನಿರ್ದೇಶಕ ಭಗವಾನ್ ವಿ.ಧಿ.ವ.ಶ.

 

ಕನ್ನಡ ಚಲನಚಿತ್ರ ರಂಗ ಇಷ್ಟು ವಿಶ್ವವಿಖ್ಯಾತಿ ಆಗಲು ಆರಂಭದಲ್ಲಿ ಅದಕ್ಕೆ ಅಡಿಪಾಯ ಹಾಕಿದ ಕೆಲ ಗಣ್ಯರಲ್ಲಿ ನಿರ್ದೇಶನ ಭಗವಾನ್ (Director Bhaghavan) ಹೆಸರು ಕೂಡ ಸೇರುತ್ತದೆ. ಭಗವಾನ್ ಎನ್ನುವ ಈ ನಿರ್ದೇಶಕರು 60ರಿಂದ 90ರ ದಶಕದಲ್ಲಿ ತಮ್ಮನ್ನು ತಾವು ಚಿತ್ರರಂಗಕ್ಕಾಗಿ ಮುಡಿಪಿಟ್ಟು ಕನ್ನಡ ತಾಯಿಯ ಸೇವೆ ಮಾಡಿದ್ದಾರೆ. ಕನ್ನಡದಲ್ಲಿ ಒಬ್ಬ ಯಶಸ್ವಿ ಪ್ರಯೋಗಾತ್ಮಕ ನಿರ್ದೇಶಕ ಮತ್ತು ಲೆಜಂಡ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟ ನಿರ್ದೇಶಕರಲ್ಲಿ ಒಬ್ಬ ಎನ್ನುವ ಖ್ಯಾತಿಗೆ ಒಳಗಾಗಿರುವ ಇವರು ಜುಲೈ 5 1933 ರಂದು ಜನಿಸಿದರು.

ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಇವರು ನಂತರ ಹಿರಣ್ಣಯ್ಯ ಮಿತ್ರ ಮಂಡಳಿ ಎನ್ನುವ ನಾಟಕ ಕಂಪನಿಯಲ್ಲಿ ಸೇರಿಕೊಂಡು ನಾಟಕಗಳತ್ತ ತಮ್ಮ ಆಸಕ್ತಿ ಬೆಳೆಸಿಕೊಂಡರು. 1955 ರಲ್ಲಿ ಭಾಗ್ಯೋದಯ (Bhagyodhaya movie) ಎನ್ನುವ ಕನ್ನಡ ಚಲನಚಿತ್ರ ತಯಾರಾಗುತ್ತಿದ್ದ ಸಮಯದಲ್ಲಿ ಆ ಸಿನಿಮಾದ ನಿರ್ದೇಶಕರಾದ ಕಣಗಲ್ ಪ್ರಭಾಕರ್ ಶಾಸ್ತ್ರಿ (assistant for Kanagal Prabhakar Shasthri) ಅವರಿಗೆ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡರು.

ಇವರು 1966ರಲ್ಲಿ ಸಂಧ್ಯಾರಾಗ (Sandhyaraga movie) ಎನ್ನುವ ಡಾಕ್ಟರ್ ರಾಜ್ ಕುಮಾರ್ ಮತ್ತು ಕಲ್ಯಾಣ್ ಕುಮಾರ್ ಅವರ ಅಭಿನಯದ ಸಿನಿಮಾಗೆ ಸಹ ನಿರ್ದೇಶಕನಾಗಿ (co-director) ಬಡ್ತಿ ಪಡೆದು, ಆ ಸಿನಿಮಾದ ಯಶಸ್ಸಿನ ಭಾಗವಾದರು. ಈ ಮೂಲಕ ತಮ್ಮದೇ ಆದ ಛಾಪನ್ನು ನಿರ್ದೇಶನದಲ್ಲಿ ಮೂಡಿಸಿದ ಇವರಿಗೆ 1966ರಲ್ಲಿ ದೊರೈ (with director Dore) ಅವರೊಂದಿಗೆ ಜೇಡರ ಬಲೆಯನ್ನು (Jedarabhale) ಸಿನಿಮಾಕ್ಕೆ ನಿರ್ದೇಶಕನಾಗುವ ಅವಕಾಶ ಸಿಗುತ್ತದೆ.

ಕನ್ನಡದಲ್ಲಿ ಮೊದಲ ಬಾರಿಗೆ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾ ಪ್ರಯೋಗ ಮಾಡಿದ ದೊರೆ ಮತ್ತು ಭಗವಾನ್ ಜೋಡಿ ಈ ಸಿನಿಮಾದ ಸಕ್ಸಸ್ ಗೋವಾದಲ್ಲಿ ಸಿಐಡಿ, ಆಪರೇಷನ್ ಡೈಮಂಡ್ ರಾಕೆಟ್, ಇನ್ನು ಮುಂತಾದ ಇದೇ ಮಾದರಿಯ ಸಿನಿಮಾಗಳನ್ನು ನಿರ್ದೇಶಿಸಲು ಸ್ಪೂರ್ತಿ ನೀಡಿತು. ದೊರೈ ಮತ್ತು ಭಗವಾನ್ ಇಬ್ಬರು ಒಬ್ಬರೇ ಎನ್ನುವಷ್ಟರ ಮಟ್ಟಿಗೆ ಆತ್ಮೀಯರಾಗಿದ್ದರು. 27 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಂಟಿಯಾಗಿ ನಿರ್ದೇಶನ ಮಾಡಿ ಗೆದ್ದರು.

ಯಾರಿವನು, ಎರಡು ಕನಸು, ಚಂದನದ ಗೊಂಬೆ, ಗಿರಿಕನ್ಯೆ, ಸಮಯದ ಗೊಂಬೆ, ಜೀವನ ಚೈತ್ರ, ಕಸ್ತೂರಿ ನಿವಾಸ ಇನ್ನು ಮುಂತಾದ ಕೌಟುಂಬಿಕ ಕಥಾಹಂದರವುಳ್ಳ ಸಿನಿಮಾಗಳು ಆ ಸಾಲಿನಲ್ಲಿ ಸೇರುತ್ತವೆ. ದೊರೈ ಅವರು 2000ರಲ್ಲಿ ತಮ್ಮ ಆಪ್ತ ಸ್ನೇಹಿತನನ್ನು ಅ-ಗ-ಲಿ ಹೋಗಿದ್ದರು. ಇದೀಗ ಫೆಬ್ರವರಿ 20, 2023ರ ಬೆಳ್ಳಂಬೆಳಗ್ಗೆ ಭಗವಾನ್ ಅವರು ಸಹ ಸ್ನೇಹಿತನನ್ನು ಸೇರಲು ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು 90ನೇ ವಯಸ್ಸಿನಲ್ಲಿ ತಮ್ಮ ದೇಹ ತ್ಯಾಗ ಮಾಡಿದ್ದಾರೆ.

ಡೈರೆಕ್ಷನ್ ಜೊತೆಗೆ ಕನ್ನಡದ ಹಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ತಮ್ಮ ಅಭಿನಯದ ಆಸೆಯನ್ನು ತಿಳಿಸಿಕೊಂಡಿದ್ದಾರೆ. ಆ ಸಿನಿಮಾ ಸಾಲುಗಳು ಹೀಗಿವೆ ಹಾಲು ಜೇನು, ವಸಂತ ಗೀತಾ, ಜೀವನ ಚೈತ್ರ ಬೆಂಗಳೂರು ಮೇಲ್ ಮಂಗಳಸೂತ್ರ ಭಾಗ್ಯೋದಯ, ಹೊಸ ಬೆಳಕು, ಬೆಂಗಳೂರು ಮೈಲ್ ಮುಂತಾದವು. ಆದರೆ ಇವರಿಗೆ ಆಕ್ಟಿಂಗ್ ಗಿಂತಲೂ ಡೈರೆಕ್ಷನ್ ಕೈ ಹಿಡಿದಿತ್ತು.

ಡಾ. ರಾಜಕುಮಾರ್ ಅವರ ಆಪ್ತಪಲಯದಲ್ಲಿ ಒಬ್ಬರಾಗಿ ಗುರುತಿಸಿಕೊಂಡು ಅವರ ಕುಟುಂಬದಂತೆ ಇದ್ದ ಇವರು ಇಂದು ಕನ್ನಡ ಚಿತ್ರರಂಗದ ಅಪಾರ ಸ್ನೇಹಿತರು ಮತ್ತು ಕನ್ನಡ ಕುಲಕೋಟಿ ಸಿನಿಪ್ರೇಕ್ಷಕರ ಬಳಗವನ್ನು ಬಿಟ್ಟು ಹೋಗಿದ್ದಾರೆ. ಗಣ್ಯರ ಸಾವಿಗೆ ಚಿತ್ರರಂಗದ ಅನೇಕರು ಕಂಬನಿ ಮಿಡದಿದ್ದು ಸೋಶಿಯಲ್ ಮೀಡಿಯಾದಲ್ಲಿ ಕೂಡ ಅನೇಕ ಕನ್ನಡಿಗರು ಇವರ ಸಾಧನೆ ನೆನೆದು ಪೋಸ್ಟ್ ಹಾಕುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಕೋರಿದ್ದಾರೆ.

Viral News
WhatsApp Group Join Now
Telegram Group Join Now

Post navigation

Previous Post: ಮಾಧ್ಯಮದವರ ಮೇಲೆ ಹ-ಲ್ಲೆ ಮಾಡಿದ ದರ್ಶನ್ & ಬಾಡಿಗಾರ್ಡ್ ಮತ್ತೊಂದು ವಿವಾದಕ್ಕೆ ಸಿಲುಕಿದ ಡಿ-ಬಾಸ್. ಗಾಯಗೊಂಡ ಕ್ಯಾಮರ ಮ್ಯಾನ್ ಲೈವ್ ನಲ್ಲಿ ಹೇಳಿದ್ದೇನು ನೋಡಿ.
Next Post: ಮೇಘ ಶೆಟ್ಟಿ ಪರವಾಗಿ ನಿಂತ ಡಿ-ಬಾಸ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore