Sunday, June 4, 2023
HomeViral Newsಮೇಘ ಶೆಟ್ಟಿ ಪರವಾಗಿ ನಿಂತ ಡಿ-ಬಾಸ್.

ಮೇಘ ಶೆಟ್ಟಿ ಪರವಾಗಿ ನಿಂತ ಡಿ-ಬಾಸ್.

ಮೇಘ ಶೆಟ್ಟಿ ಎದುರು ವಿಜಯಲಕ್ಷ್ಮಿ ಅವರು ಮಾಡಿರುವ ಸೋಶಿಯಲ್ ಮೀಡಿಯಾ ವಾರ್ ಬಗ್ಗೆ ದರ್ಶನ್ ಪ್ರತಿಕ್ರಿಯೆ ಏನು ಗೊತ್ತಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಜನರು ಇಷ್ಟಪಡುವಂತಹ ಒಬ್ಬ ಸ್ಟಾರ್ ನಟ. ಇವರಿಗೆ ಇರುವ ಫ್ಯಾನ್ ಬೇಸ್ ನೋಡಿ ಅಕ್ಕಪಕ್ಕದ ಇಂಡಸ್ಟ್ರೀಯವರು ಸಹ ಹೊಟ್ಟೆ ಉರಿದುಕೊಳ್ಳುತ್ತಾರೆ. ಅಷ್ಟೊಂದು ಖ್ಯಾತಿಗಳಿಸಿರುವ ದರ್ಶನ್ ಅವರ ವೈಯುಕ್ತಿಕ ವಿಷಯಗಳ ಮಾತ್ರ ಸದಾ ಚರ್ಚೆಯಲ್ಲಿ ಇರುತ್ತದೆ.

ಮೊನ್ನೆ ತಾನೆ ದರ್ಶನ್ ಅವರ ಹುಟ್ಟುಹಬ್ಬ (Darshan birthday) ಇತ್ತು ತಡರಾತ್ರಿಯಿಂದಲೇ ಮನೆ ಮುಂದೆ ಅಭಿಮಾನಿಗಳೆಲ್ಲಾ ಸೇರಿ ನೆಚ್ಚಿನ ನಟನಿಗೆ ಕೈಕುಲುಕಿ ವಿಶ್ ಮಾಡಿ ಸಂತೋಷಪಟ್ಟರು. ದರ್ಶನ್ ಅವರು ಸಹ ತನ್ನ ಸೆಲೆಬ್ರಿಟಿಗಳು ಹಸಿದು ಇರಬಾರದು ಎನ್ನುವ ಕಾರಣಕ್ಕೆ ಬಂದವರಿಗೆಲ್ಲಾ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಹೀಗೆ ನಡೆದ ಹುಟ್ಟುಹಬ್ಬ ಬಹಳ ಅರ್ಥಪೂರ್ಣವಾಗಿತ್ತು ಕಾರಣ ನನ್ನ ಹುಟ್ಟುಹಬ್ಬಕ್ಕೆ ಕೇಕು ಹಾರ ಕಟೌಟ್ ಇವುಗಳಿಗೆ ಹಣ ವ್ಯರ್ಥ ಮಾಡದೆ ಕೈಲಾದರೆ ದವಸಧಾನ್ಯ ತಂದು ಕೊಡಿ ಅಸಹಾಯಕರಿಗೆ ಹಂಚೋಣ ಎಂದಿದ್ದರು ದರ್ಶನ್.

ಈ ರೀತಿ ಮೊದಲ ಬಾರಿಗೆ ಒಬ್ಬ ಹೀರೋ ಹಾಗೂ ಅಭಿಮಾನಿಗಳೆಲ್ಲ ಸೇರಿ ಇಂತಹ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಸಂಜೆವರೆಗೂ ಚೆನ್ನಾಗಿ ಆಯ್ತು ಆದರೆ ದರ್ಶನ್ ಅವರು ಅಭಿಮಾನಿಗಳ ಭೇಟಿಯಾದ ಬಳಿಕ ಖಾಸಗಿ ಪಾರ್ಟಿಯಲ್ಲಿ (private birthday party) ಬರ್ತಡೇ ಆಚರಿಸಿಕೊಂಡಿದ್ದಾರೆ. ಈ ಪಾರ್ಟಿಯನ್ನು ಅರೆಂಜ್ ಮಾಡಿದ್ದು ಜೊತೆ ಜೊತೆಯಲಿ ಖ್ಯಾತಿಯ ಮೇಘ ಶೆಟ್ಟಿ (Jothe jotheyali serial actress Megha Shetty ) ಅನ್ನುವ ಮಾತುಗಳೂ ಇವೆ.

ಮೇಘ ಶೆಟ್ಟಿ ಅವರು ಮಾತ್ರ ಅಲ್ಲದೆ ಪವಿತ್ರ ಗೌಡ, ಪಾಯಲ್ ಇನ್ನು ಮುಂತಾದ ಅನೇಕರೆಲ್ಲ ಸೇರಿ ದರ್ಶನ್ ಅವರನ್ನು ಮಹಾರಾಜರಂತೆ ವೆಲ್ಕಮ್ ಮಾಡಿ ಕೇಕ್ ಕಟ್ ಮಾಡಿಸಿ ಬಹಳ ಕ್ಲೋಸ್ ಆಗಿ ಫೋಟೋ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ (Darshan wife Vijayalakshmi) ಈ ರೀತಿ ನನ್ನ ಕುಟುಂಬದ ಸಂತೋಷವನ್ನು ಹಾಳು ಮಾಡುವ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ.

ಮಹಿಳೆಯಾಗಿ ಅದನ್ನು ಹಾಕಿದವರು ಹಾಕುವ ಮೊದಲೇ ಎರಡೆರಡು ಬಾರಿ ಯೋಚನೆ ಮಾಡಬೇಕಿತ್ತು, ಯಾಕೆಂದರೆ ಇದರಿಂದ ನನಗೂ ಹಾಗೂ ನನ್ನ ಮಗನಿಗೂ ಬಹಳ ನೋವಾಗುತ್ತಿದೆ. ನಾನು ಸುಮ್ಮನೆ ಇದ್ದೇನೆ ಎಂದ ಮಾತ್ರಕ್ಕೆ ಎಲ್ಲವನ್ನು ಸಹಿಸುತ್ತೇನೆ ಅಂದುಕೊಂಡರೆ ಅದು ನಿಮ್ಮ ದಡ್ಡತನ, ಎಂದು ಇದೆಲ್ಲ ನಿಮ್ಮ ನೈತಿಕತೆ ಇಂತದ್ದು ಅನ್ನೋದನ್ನ ತೋರಿಸುತ್ತದೆ ಎಂದು ಕ್ಲಾಸ್ (warn) ತೆಗೆದುಕೊಂಡಿದ್ದರು.

ಆ ಕೂಡಲೇ ಮೇಘ ಶೆಟ್ಟಿ ಕೂಡ ತಾವು ಹಾಕಿದ್ದ ಪೋಟೋಗಳನ್ನು ಡಿಲೀಟ್ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪತ್ನಿ ಹಾಕಿದ್ದ ಈ ಪೋಸ್ಟ್ ಹಾಗು ಮೇಘ ಶೆಟ್ಟಿ ಅವರು ಹಾಕಿದ್ದ ಆ ಫೋಟೋಸ್ ನೋಡಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ವಿಜಯಲಕ್ಷ್ಮಿ ಅವರ ಮಾತು ಕರೆಕ್ಟಾಗಿ ಇದೆ. ಎಷ್ಟಾದರೂ ಅವರು ಬೇರೆಯವರ ಪತ್ನಿ ಎಂದ ಮೇಲೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು, ಪತ್ನಿಯಾಗಿ ಇದನ್ನೆಲ್ಲಾ ಕೇಳುವ ಹಕ್ಕು ಅವರಿಗೆ ಎಂದಿದ್ದರೆ.

ಕೆಲವರು ಮೇಘ ಶೆಟ್ಟಿ ಅವರು ಮೊದಲಿನಿಂದಲೂ ದರ್ಶನ್ ಅವರನ್ನು ನನ್ನ ನೆಚ್ಚಿನ ನಟ, ಅವರು ನನ್ನ ಅಣ್ಣನ ತರಹ ಎಂದು ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಸ್ಟಾರ್ ಗಳಿಂದ ಮೇಲೆ ಅನೇಕರು ಈ ರೀತಿ ಪಾರ್ಟಿ ಕೊಡುತ್ತಾರೆ ಅದರಲ್ಲಿ ತಪ್ಪಾಗಿ ತಿಳಿದುಕೊಳ್ಳುವುದು ಏನು ಇಲ್ಲ ಎಂದು ಹೇಳಿದರೆ, ಇನ್ನು ಕೆಲವರು ಈ ಪಾರ್ಟಿಯಲ್ಲಿ ಪವಿತ್ರ ಗೌಡ ಇರುವುದೇ ವಿಜಯಲಕ್ಷ್ಮಿ ಅವರ ಅಸಮಾಧಾನಕ್ಕೆ ಮುಖ್ಯ ಕಾರಣ ಎಂದು ಊಹಿಸಿದ್ದಾರೆ. ಆದರೆ ದರ್ಶನ್ ಮಾತ್ರ ಈವರೆಗೆ ಇದರ ಬಗ್ಗೆ ಇನ್ನೂ ಏನು ಪ್ರತಿಕ್ರಿಯೆ ಅವರ ಪರವಾಗಿ ಅಭಿಮಾನಿಗಳೇ ಬ್ಯಾಟ್ ಬೀಸುತ್ತಿದ್ದಾರೆ. ದರ್ಶನ್ ಅವರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಕೆಲ ಅಭಿಮಾನಿಗಳು ಕಾಯುತ್ತಿದ್ದಾರೆ.