ಬಿಗ್ ಬಾಸ್ ಗೆದ್ದಿದ್ದಕ್ಕಾಗಿ ಬಂದ ಹಣದಲ್ಲಿ ಒಂದು ರೂಪಾಯಿ ಕೂಡ ಯಾರಿಗೂ ಕೊಡುವುದಿಲ್ಲ ಎಂದು ನೇರವಾಗಿ ಹೇಳಿದ ರೂಪೇಶ್ ಶೆಟ್ಟಿ.
ಬಿಗ್ ಬಾಸ್ ಕನ್ನಡದ 9ನೇ ಆವೃತ್ತಿಯ ಜಿದ್ದಾಜಿದ್ದಿಯ ಆಟಕ್ಕೆ ನೆನ್ನೆ ತೆರೆ ಬಿದ್ದಿದೆ. ಇಷ್ಟು ದಿನಗಳ ಕಾಲ ಇದ್ದ ಕಂಟೆಸ್ಟೆಂಟ್ ಜಿದ್ದಾಜಿದ್ಧಿ ಸೆಣಸಾಟದಲ್ಲಿ ಅಂತಿಮವಾಗಿ ಒಬ್ಬರು ವಿನ್ ಆಗಿ ಸೀಸನ್ 9 ಅಂತ್ಯಗೊಂಡಿದೆ. ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿದ್ದ ಪ್ರೇಕ್ಷಕರ ಆಸೆಯಂತೆ ರೂಪೇಶ್ ಶೆಟ್ಟಿ ಅವರು ಈ ಬಾರಿಯ ವಿನ್ನರ್ ಆಗಿದ್ದು ರಾಕೇಶ್ ಅಡಿಗ ಅವರು ರನ್ನರ್ ಅಪ್ ಆಗಿದ್ದಾರೆ. ಬಹಳ ವಿಭಿನ್ನವಾಗಿ ನಡೆಸಿದ ಈ ಬಾರಿಯ ಬಿಗ್ ಬಾಸ್ ಅಲ್ಲಿ ಮೊದಲಿಗೆ 42 ದಿನಗಳ ಒಟಿಟಿ ಬಿಗ್ ಬಾಸ್ ನಡೆಸಲಾಗಿತ್ತು.
ಅದರಲ್ಲಿ ಕಿರುತೆರೆ ಬಿಗ್ ಬಾಸ್ ಅಲ್ಲಿ ಆಡಲು ಅಂತಿಮ ನಾಲ್ಕು ಜನರಿಗೆ ಅವಕಾಶ ನೀಡಲಾಗಿತ್ತು. ರೂಪೇಶ್ ಶೆಟ್ಟಿ, ಸಾನಿಯಾ, ರಾಜೇಶ್ ಅಡಿಗ ಹಾಗೂ ಆರ್ಯವರ್ಧನ್ ಅವರು ಸೆಲೆಕ್ಟ್ ಆಗಿದ್ದರು. ಇವರ ಜೊತೆ ಹಳೆ ಸೀಸನ್ ನ ಕಂಟೆಸ್ಟೆಂಟ್ಗಳು ಮತ್ತು ಹೊಸ 9 ಸೆಲೆಬ್ರಿಟಿಗಳನ್ನು ಸೇರಿಸಿ ದೊಡ್ಡ ಪರಿದೆಯ ಬಿಗ್ ಬಾಸ್ ಅಲ್ಲಿ ಆಡಲು ಬಿಡಲಾಗಿತ್ತು. ಈ ಆಟದಲ್ಲಿ ಓಟಿಟಿ ದಿನದಿಂದ ಅಂತಿಮ ದಿನದವರೆಗೂ ಕೂಡ ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಅವರ ನಡುವೆ ಸ್ಪರ್ಧೆ ಇತ್ತು.
ಅಂತಿಮವಾಗಿ ಸುದೀಪ್ ಅವರ ಅಕ್ಕ ಪಕ್ಕದಲ್ಲಿರುವ ಸ್ಪರ್ಧಿಗಳು ಇವರೇ ಆಗಿ ಗೆಲ್ಲುವುದು ಯಾರು ಎನ್ನುವ ವಿಚಾರಕ್ಕೆ ಬಹಳ ಕುತೂಹಲ ಸಹಾ ಉಂಟಾಗಿತ್ತು. ಟಾಸ್ಕ್ ಗಳಲ್ಲಿ ಇಬ್ಬರ ಪಾಲ್ಗೊಳ್ಳುವಿಕೆ ಅತ್ಯುತ್ತಮವಾಗಿತ್ತು, ಎಂಟರ್ಟೈನ್ಮೆಂಟ್ ವಿಷಯದಲ್ಲಿ ಕೂಡ ಇಬ್ಬರು ಹಾಡು ಹಾಡುತ್ತಾ, ಒಂದಲ್ಲ ಒಂದು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಮನೋರಂಜಿಸುತ್ತಿದ್ದರು. ಸಹ ಕಂಟೆಸ್ಟೆಂಟ್ ಗಳ ಜೊತೆಗಿನ ಹೊಂದಾಣಿಕೆ ವಿಷಯದಲ್ಲಿ ಇಬ್ಬರೂ ಸಮಾನವಾಗಿದ್ದರು.
ಆದರೆ ಅಂತಿಮವಾಗಿ ಸುದೀಪ ಅವರು ಮೇಲೆ ಎತ್ತುವ ಕೈ ಶೆಟ್ಟಿ ಅವರದ್ದಾಗಿದ್ದು ಇವರಿಗೆ ಬಿಗ್ ಬಾಸ್ ಟ್ರೋಫಿ ಜೊತೆ ಬರೋಬ್ಬರಿ 60 ಲಕ್ಷ ಹಣವನ್ನು ಬಹುಮಾನವಾಗಿ ನೀಡಲಾಗಿದೆ. ಸಹಜವಾಗಿ ಗೆದ್ದ ಬಳಿಕ ಪ್ರತಿಬಾರಿ ಕೇಳುವಂತೆ ಈ ಬಾರಿ ಕೂಡ ಸುದೀಪ್ ಅವರು ಗೆದ್ದ ಹಣದಿಂದ ಏನು ಮಾಡುತ್ತೀರಿ ಎಂದು ರೂಪೇಶ್ ಶೆಟ್ಟಿ ಅವರನ್ನು ಕೇಳಿದ್ದಾರೆ. ಅದಕ್ಕೆ ರೂಪೇಶ್ ಶೆಟ್ಟಿ ಅವರು ನನಗೆ ಹಣದ ಅವಶ್ಯಕತೆ ಬಹಳ ಇದೆ ಸರ್ ನನಗೆ ಸಿನಿಮಾ ಮಾಡಬೇಕು ಎನ್ನುವ ಕ್ರೇಝ್ ಇದೆ. ಸಿನಿಮಾಕ್ಕಾಗಿಯೇ ನಾನು ಇಷ್ಟು ದೂರ ಬಂದಿರುವುದು ಕಷ್ಟ ಪಡುತ್ತಿರುವುದು ಹಣ ಸಿಕ್ಕಿರುವುದಕ್ಕಿಂತ ಬಿಗ್ ಬಾಸ್ ಟ್ರೋಫಿ ಸಿಕ್ಕಿರುವುದು ನನಗೆ ಬಹಳ ಖುಷಿ ನೀಡಿದೆ.
ಅಲ್ಲದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನನ್ನ ಹೆಸರು ಸದಾ ಕಾಲ ಇರುತ್ತದೆ ಎನ್ನುವ ಹೆಮ್ಮೆ ಕೂಡ ನನಗಿದೆ. ನಾನು ಗೆದ್ದಿರುವ ಈ 60 ಲಕ್ಷ ಹಣದಲ್ಲಿ ಕಷ್ಟ ಎಂದು ಬಂದರೆ ಯಾರಿಗೂ ಸಹ ಹಣ ಕೊಡುವ ಮನಸ್ಸು ನನಗಿಲ್ಲ ಹಾಗಾಗಿ ಇದನ್ನು ಯಾವುದಾದರೂ ಒಳ್ಳೆಯ ಸಾಧನೆಗೆ ಬಳಸಿಕೊಳ್ಳುತ್ತೇನೆ ಎಂದು ನೇರವಾಗಿ ಉತ್ತರ ಕೊಟ್ಟಿದ್ದಾರೆ. ಈ ಹಿಂದೆ ಬಿಗ್ ಬಾಸ್ ಸೀಸನ್ ಮೂರರಲ್ಲಿ ವಿನ್ನರ್ ಆಗಿದ್ದ ಒಳ್ಳೆ ಹುಡುಗ ಪ್ರಥಮ್ ಅವರು ತಾವು ಗೆದ್ದ ಅಷ್ಟು ಹಣವನ್ನು ಸಹ ಜನಸೇವೆಗಾಗಿ ಕೊಡುವುದಾಗಿ ನೀಡುವುದಾಗಿ ವೇದಿಕೆಯಲ್ಲೇ ಹೇಳಿದ್ದರು. ಈ ಬಾರಿ ಸಹಾ ಕಂಟೆಸ್ಟೆಂಟ್ ರೂಪೇಶ್ ರಾಜಣ್ಣ ಅವರು ಸಹ ತಾವು ವಿನ್ ಆದರೆ ಅಷ್ಟೂ ಹಣವನ್ನು ಕರ್ನಾಟಕದ ಏಳಿಗೆಗಾಗಿ ಹಾಗೂ ಕನ್ನಡಕ್ಕಾಗಿ ಬಳಸಿಕೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು.