ದೇವಸ್ಥಾನಗಳಲ್ಲಿ ಪಾರ್ಕಗಳಲ್ಲಿ ರಸ್ತೆಗಳಲ್ಲಿ ಇನ್ನು ಬೇರೆ ಬೇರೆ ಜಾಗಗಳಲ್ಲಿ ಹೆಚ್ಚಾಗಿ ನಾವು ಭಿಕ್ಷುಕರನ್ನು ನೋಡುತ್ತೇವೆ. ಭಿಕ್ಷಕರು ಹರಿದು ಹೋದ ಬಟ್ಟೆಗಳನ್ನು ಹಾಕಿಕೊಂಡು ಒಂದು ಹಳೆಯ ತಟ್ಟೆಯನ್ನು ಇಟ್ಟುಕೊಂಡು ಭಿಕ್ಷೆಯನ್ನು ಬೇಡುತ್ತಾರೆ. ಇಂತಹವರನ್ನು ನೋಡಿದರೆ ಯಾರಿಗಾದರೂ ಅಯ್ಯೋ ಪಾಪ ಎಂದು ಅನಿಸುತ್ತದೆ. ಆದರೆ ಭಿಕ್ಷುಕರ ಬಳಿಯೂ ಕೂಡ ಲಕ್ಷಗಟ್ಟಲೆ ಹಣ ಇರುವುದನ್ನು ಕೂಡ ನಾವು ಈಗಾಗಲೇ ಮಾಧ್ಯಮಗಳಲ್ಲಿ ನೋಡಿದ್ದೇವೆ. ಅಂತಹ ಮತ್ತೊಂದು ಕಥೆ ಇಲ್ಲಿ ಕೂಡ ಇದೆ ಆ ಭಿಕ್ಷುಕ ಯಾರು ಮತ್ತು ಲಕ್ಷಗಟ್ಟಲೆ ಹಣ ಎಲ್ಲಿತ್ತು ಎಂದು ತಿಳಿಯೋಣ.
ಗುಜರಾತಿನ ಸುಬ್ರಹ್ಮಣ್ಯ ಎಂಬ ವ್ಯಕ್ತಿಯು ತನ್ನ ಜೀವನವಿಡಿ ಭಿಕ್ಷೆಯನ್ನು ಬೇಡಿ ಜಾಸ್ತಿ ಖರ್ಚು ಮಾಡದೆ ತನ್ನ ಕಷ್ಟಕಾಲಕ್ಕೆ ಬೇಕಾಗುತ್ತದೆ ಎಂದು ಬಿಕ್ಷೆ ಬೇಡಿದ ಹಣವನ್ನೆಲ್ಲ ತನ್ನ ಬಳಿಯೇ ಇಟ್ಟುಕೊಂಡಿರುತ್ತಾನೆ. ಆ ಭಿಕ್ಷುಕನು ಒಂದು ಚಿಕ್ಕ ಗುಡಿಸಿನಲ್ಲಿ ವಾಸಿಸುತ್ತಿರುತ್ತಾನೆ. ಭಿಕ್ಷುಕ ಹೆಂಡತಿ ಏಳು ವರ್ಷಗಳ ಹಿಂದೆ ಸಾ.ವನ್ನಪ್ಪಿರುತ್ತಾಳೆ. ಹಾಗೆ ಈ ಭಿಕ್ಷುಕನಿಗೆ ಒಬ್ಬ ಮಗ ಕೂಡ ಇದ್ದು ಆತ ಬೇರೆ ಜಾಗದಲ್ಲಿ ವಾಸಿಸುತ್ತಿದ್ದನು ಭಿಕ್ಷುಕನಿಗೆ ಅನಾರೋಗ್ಯ ಇರುತ್ತದೆ.
ಒಂದು ದಿನ ಭಿಕ್ಷುಕ ಹೃದಯಘಾತದಿಂದ ಸಾ.ವನ್ನಪ್ಪುತ್ತಾನೆ ಭಿಕ್ಷುಕನ ಗುಡಿಸಿಲ ಅಕ್ಕಪಕ್ಕದ ಜನರು ಭಿಕ್ಷುಕ ಸ.ತ್ತು ಹೋಗಿರುವ ವಿಷುವನ್ನು ಅವನ ಸಂಬಂಧಿಕರಿಗೆ ತಿಳಿಸುತ್ತಾರೆ. ನಂತರ ಅಕ್ಕ ಪಕ್ಕದವರು ಭಿಕ್ಷುಕನ ಮನೆಗೆ ಹೋಗಿ ನೋಡಿದಾಗ ಮೂಲೆ ಮೂಲೆಗಳಲ್ಲಿ, ಮಂಚದ ಕೆಳಗೆ ಚೀಲಗಳು ಕಾಣುತ್ತವೆ. ಆ ಚೀಲಗಳನ್ನು ತೆಗೆದು ನೋಡಿದರೆ ಒಂದು ಚೀಲದಲ್ಲಿ 50 ರೂಪಾಯಿ ನೋಟುಗಳು, ಮತ್ತೊಂದು ಚೀಲದಲ್ಲಿ 500 ರೂಪಾಯಿ ನೋಟುಗಳು, ಮತ್ತೊಂದರಲ್ಲಿ 100 ರೂಪಾಯಿ ನೋಟುಗಳು ಹೀಗೆ ಇನ್ನೂ ಬೇರೆ ರೀತಿಯ ನೋಟುಗಳು ಇದ್ದವು.
ಅಲ್ಲದೆ ಹಾಸಿಗೆಯ ಕೆಳಗೆ ಹಾಗೂ ಇತರೆ ಬೇರೆ ಬೇರೆ ಜಾಗಗಳಲ್ಲಿ ಆ ಭಿಕ್ಷುಕ ದುಡ್ಡನ್ನು ಇಟ್ಟಿರುತ್ತಾನೆ. ಇದನ್ನು ನೋಡಿದ ಅಲ್ಲಿನ ಜನರು ಆಶ್ಚರ್ಯದಿಂದ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ತಿಳಿಸುತ್ತಾರೆ. ಮಾಹಿತಿಯನ್ನು ತಿಳಿದ ಪೋಲೀಸರು ಮತ್ತು ಮಾಧ್ಯಮದವರು ಎಲ್ಲರೂ ಅಲ್ಲಿಗೆ ಬರುತ್ತಾರೆ. ಆ ಭಿಕ್ಷುಕನ ಅಂತ್ಯ ಕ್ರಿಯೆಯೆಲ್ಲಾ ಮುಗಿದ ನಂತರ ಪೊಲೀಸರು ತನಿಖೆಯನ್ನು ನಡೆಸಿ ದುಡ್ಡನ್ನು ಎಣಿಸುವುದಕ್ಕೆ ಶುರು ಮಾಡಿದರು ಆದರೆ ಅದು ಮುಗಿಯಲಿಲ್ಲ ಆದ ಕಾರಣ ಅಲ್ಲೇ ಪಕ್ಕದಲ್ಲಿರುವ ಬ್ಯಾಂಕ್ ನಲ್ಲಿ ದುಡ್ಡನ್ನು ಎಣಿಸುವ ಯಂತ್ರವನ್ನು ತಂದು ದುಡ್ಡನ್ನು ಎಣಿಸುವುದಕ್ಕೆ ಶುರು ಮಾಡಿದರು.
ಎಣಿಸಿದಾಗ ಭಿಕ್ಷುಕನ ಬಳಿ ಇದ್ದ ದುಡ್ಡು ಬರೋಬ್ಬರಿ 25 ಲಕ್ಷ ರೂ.ಗಳು. ಇನ್ನು ಇಷ್ಟು ದುಡ್ಡು ಭಿಕ್ಷುಕನಿಗೆ ಹೇಗೆ ಬಂತು ಎಂದು ಪೊಲೀಸರು ಆಶ್ಚರ್ಯರಾದರು. ಹಾಗೆಯೇ ಭಿಕ್ಷುಕನಿಗೆ ಒಬ್ಬ ಮಗನಿದ್ದ ಕಾರಣ ಈ ದುಡ್ಡೆಲ್ಲವೂ ಕೂಡ ಮಗನಿಗೆ ಸೇರುತ್ತದೆ ಎಂದು ಮಗನನ್ನು ಕರೆಸಿದರು. ಆದರೆ ಭಿಕ್ಷುಕನ ಮಗ ಇದು ನನ್ನ ಹಣವಲ್ಲ ನಮ್ಮ ತಂದೆ ಕಷ್ಟ ಪಟ್ಟು ಭಿಕ್ಷೆ ಬೇಡಿ ಕೂಡಿಟ್ಟಿರುವ ಹಣ ಆದ್ದರಿಂದ ಇದು ನನ್ನ ಸ್ವತ್ತು ಅಲ್ಲ ಈ ದುಡ್ಡನ್ನು ನಾನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಡುತ್ತೇನೆ ಎಂದು ಹೇಳಿದರು ಭಿಕ್ಷುಕನ ಮಗನ ಈ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.