ನಿಮ್ಮ ಬಳಿ ಈ ರೀತಿಯ ಎರಡು ನಾಣ್ಯ ಇದೆಯಾ.? ಅದಕ್ಕೀಗ ಚಿನ್ನದ ಬೆಲೆ ಬಂದಿದೆ ನೋಡಿ.! 2 ರೂಪಾಯಿ ನಾಣ್ಯಕ್ಕೆ 5 ಲಕ್ಷ ಸಿಗಲಿದೆ.

ಹಳೆ ನಾಣ್ಯಗಳು, ಹಳೆ ನೋಟುಗಳು ಒಂದು ರೀತಿಯ ನಾವು ಕಳೆದ ದಿನಗಳಿಗೆ ಬೆಳಕು ಚೆಲ್ಲುವ ದೀವಟಿಕೆಗಳು ಎಂದೇ ಹೇಳಬಹುದು. ನಾಣ್ಯಗಳ ಮೌಲ್ಯ ಅವು ಚಲಾವಣೆಯಲ್ಲಿ ಇರುವಾಗ ಮಾತ್ರ ಅಲ್ಲ ಅದರಾಚೆಗೂ ಕೂಡ ಅದರ ಮಹತ್ವ ಬೇರೆ ಇದೆ. ಯಾವುದೇ ಒಂದು ಇತಿಹಾಸದ ಬಗ್ಗೆ ಚರಿತ್ರೆಕಾರರು ಅಧ್ಯಯನ ಮಾಡಬೇಕಾದಾಗ ಸಂಗ್ರಹಿಸುವ ಉತ್ಖನಗಳಲ್ಲಿ ನಾಣ್ಯವು ಸಹ ಒಂದು.

ಅದರಲ್ಲೂ ಚರಿತ್ರೆ ಕೆದುಕುವಲ್ಲಿ ನಾಣ್ಯಗಳ ಪಾತ್ರ ಅಗಾಧವಾಗಿದೆ. ಈವರೆಗೆ ನಾವು ಎಷ್ಟೋ ನಾಗರಿಕತೆಗಳ ಬಗ್ಗೆ ಹಾಗೂ ಎಷ್ಟೋ ಸಾಮ್ರಾಜ್ಯಗಳ ಬಗ್ಗೆ ಚರಿತ್ರೆ ಪುಟಗಳಲ್ಲಿ ಓದಿದ್ದೇವೆ. ಆಗ ಆ ಜನ ಬಳಸುತ್ತಿದ್ದ ನಾಣ್ಯಗಳು ಮತ್ತು ರಾಜರುಗಳು ಟಂಕಿಸುತ್ತಿದ್ದ ನಾಣ್ಯಗಳು ಅವರ ಜನಜೀವನ, ರಾಜ್ಯ ಲಾಂಛನ, ಸಾಮ್ರಾಜ್ಯದ ಪ್ರತಿಷ್ಠೆ ಮುಂತಾದವುಗಳ ಬಗ್ಗೆ ತಿಳಿಸುತ್ತಿತ್ತು. ಇತಿಹಾಸದಲ್ಲಿ ಇದು ತಪ್ಪದೇ ವರದಿ ಆಗಿರುವುದನ್ನು ನಾವೀಗ ಮತ್ತೊಮ್ಮೆ ನೆನೆಯಬಹುದು.

ಬಹುಶಃ ನಮ್ಮ ಈಗಿನ ಜನರೇಶನ್ ಗೆ ಆ ಹಳೆ ನಾಣ್ಯಗಳು ಕೈಗೆ ಸಿಗದೇ ಇರಬಹುದು. ಆದರೆ ನಾವು ಹುಟ್ಟಿದಾಗಲಿಂದ ನಾವೇ ಕಂಡ ಅದೆಷ್ಟು ವಿವಿಧ ರೂಪುರೇಷೆಯ ನಾಣ್ಯಗಳನ್ನು ನಮ್ಮ ಕೈಯಾರೆ ವಿನಿಮಯ ಮಾಡಿದ್ದೇವೆ. ನಮ್ಮ ಕೈಯಲ್ಲೇ ಓಡಾಡಿದ ಅದೆಷ್ಟೋ ನಾಣ್ಯಗಳನ್ನು ನಾವು ಎಷ್ಟೋ ಬಾರಿ ಕಣ್ಣರಳಿಸಿ ನೋಡುವ ಪ್ರಯತ್ನವೂ ಮಾಡಲಿಲ್ಲ. ಆದರೆ ಕೆಲ ವರ್ಗ ಇದೆ ಅವರಿಗೆ ಇದೆ ಹವ್ಯಾಸ ಅದೇನೆಂದರೆ ಅವರು ನಾಣ್ಯಗಳ ಸಂಗ್ರಹಣ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿರುತ್ತಾರೆ.

ಇದಕ್ಕಾಗಿ ತಮ್ಮ ಬಳಿ ಬರುವ ಪ್ರತಿ ನಾಣ್ಯವನ್ನು ಸೂಕ್ಷ್ಮವಾಗಿ ಗಮನಿಸಿ ವಿಶೇಷ ಇದ್ದಲ್ಲಿ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಒಂದು ದಿನ ಹಿಂತಿರುಗಿ ನೋಡಿದಾಗ ಅದೊಂದು ಸಂಗ್ರಹಾಲಯ ಪ್ರದರ್ಶನಕ್ಕೆ ಇಡಬಹುದಾದಂತಹ ಒಂದೊಳ್ಳೆ ವಿಷಯವಾಗಿ ಮಾರ್ಪಾಡಾಗಿರುತ್ತದೆ. ನಮ್ಮ ಸಂಬಂಧಿಕರಲ್ಲಿ ಅಥವಾ ಸ್ನೇಹಿತರಲ್ಲಿ ಈ ರೀತಿ ಹವ್ಯಾಸ ಇರುವವರನ್ನು ನಾವು ನೋಡಬಹುದು.

ಅವರ ಬಳಿ ಒಂದು ನಯಾ ಪೈಸೆ, ಎರಡು ನಯಾ ಪೈಸೆಯಿಂದ ಹಿಡಿದು ಈಗಷ್ಟೇ ಬಂದ ಹತ್ತು ರೂ ನಾಣ್ಯದವರೆಗಿನ ಅನೇಕ ರೀತಿಯ ಅನೇಕ ಬಗೆಯ ನಾಣ್ಯಗಳು ಇರುವುದನ್ನು ಕಂಡು ನಾವು ಅಚ್ಚರಿ ಪಡಬಹುದು. ಅಂತವರಿಗೆಲ್ಲ ಈಗ ತಮ್ಮ ನಾಣ್ಯಗಳಿಗೆ ಅದಕ್ಕಿಂತಲೂ ಸಾವಿರ ಪಟ್ಟಿನ ಹಣ ಪಡೆದುಕೊಳ್ಳುವ ಅದೃಷ್ಟ ಬಂದಿದೆ. ಆ ಸಾಲಿನಲ್ಲಿ ನೀವು ಇದ್ದರೆ ತಪ್ಪದೆ ಇದನ್ನು ಪೂರ್ತಿ ಓದಿ. 1994ರಲ್ಲಿ ಬಿಡುಗಡೆ ಆದ ಎರಡು ರೂ ನಾಣ್ಯಕ್ಕೆ ಈಗ 5 ಲಕ್ಷ ಬೆಲೆ ಇದೆ.

ಮುಂದೆ ಅಶೋಕ ಚಕ್ರ ಇರುವ ಸಿಂಹ ಲಾಂಛನ ಹಾಗೂ ಎರಡು ರೂಪಾಯಿ ಎಂದು ಹಿಂದಿ ಮತ್ತು ಇಂಗ್ಲಿಷ್ ಅಲ್ಲಿ ಬರೆದಿದ್ದು, ಹಿಂದೆ ಭಾರತದ ಭೂಪಟ ಇದೆ. ಕ್ವಿಕ್ಕರ್ ವೆಬ್ಸೈಟ್ ಅಲ್ಲಿ ಇದಕ್ಕೆ 5 ಲಕ್ಷ ಬೆಲೆ ನಿಗದಿ ಆಗಿದೆ. ಕ್ವಿಕರ್ ವೆಬ್ಸೈಟ್ ಗೆ ಭೇಟಿ ಕೊಟ್ಟು ನಿಮ್ಮ ಬಳಿ ಇರುವ ನಾಣ್ಯದ ಫೋಟೋ ತೆಗೆದು ಅಪ್ಲೋಡ್ ಮಾಡಿದರೆ ಖರೀದಿದಾರರೇ ನಿಮ್ಮನ್ನು ಸಂಪರ್ಕಿಸುತ್ತಾರೆ. ಅಂತಿಮವಾಗಿ ಹಣದ ಬೆಲೆಯು ತೆಗೆದುಕೊಳ್ಳುವವರ ಹಾಗು ಮಾರುವವರ ಇಚ್ಛೆಗೆ ಬಿಟ್ಟಿದ್ದು.

ಸದ್ಯಕ್ಕಿಗ ಈ ಮೌಲ್ಯದಲ್ಲಿ ಅದು ಮಾರಾಟ ಆಗುತ್ತಿರುವುದಂತೂ ನಿಜ. ಇದರಂತೆಯೇ ಸ್ವಾತಂತ್ರ್ಯಕ್ಕೂ ಮುನ್ನ ಇದ್ದ ಬ್ರಿಟನ್ ವಿಕ್ಟೋರಿಯಾ ರಾಣಿ ಚಿತ್ರ ಇರುವ ಒಂದು ರೂ ಬೆಳ್ಳಿ ನಾಣ್ಯ 2 ಲಕ್ಷ ರೂ, ಹಾಗೂ ಜಾರ್ಜ್ ವಿ ಕಿಂಗ್ ಚಿತ್ರ ಇರುವ 1918ರಲ್ಲಿ ಚಲಾವಣೆಯಲ್ಲಿದ್ದ ಬ್ರಿಟಿಷ್ ನಾಣ್ಯದ ಬೆಲೆ ಒಂಬತ್ತು ಲಕ್ಷ ಎಂದು ನಿಗದಿ ಆಗಿದೆ. ನಿಮ್ಮ ಬಳಿಯೂ ಈ ನಾಣ್ಯಗಳು ಇದ್ದರೆ ಕೂಡಲೇ ಮಾರಿ ಲಕ್ಷಾದಿಪತಿಗಳಾಗಿ.

Leave a Comment