ಲೋಕಸಭಾ ಚುನಾವಣೆ (Parliment Election) ದಿನಾಂಕ ಘೋಷಣೆಯಾಗಿದ್ದು ಏಪ್ರಿಲ್ 19, 2024ರಿಂದಲೇ ಚುನಾವಣೆ (Election) ಆರಂಭಗೊಂಡಿದೆ. ದೇಶದಲ್ಲಿ 7 ಹಂತಗಳಲ್ಲಿ ಹಾಗೂ ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು ಎಲ್ಲೆಡೆ ಭರ್ಜರಿಯಾದ ಪ್ರಚಾರ ಕಾರ್ಯಕ್ರಮ ಕೂಡ ನಡೆಯುತ್ತಿದೆ.
ಇದರ ಅಂಗವಾಗಿ ಕಾಂಗ್ರೆಸ್ ಪಕ್ಷ (Congress Party) ಈ ವರ್ಷವಾದರೂ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವ ಉದ್ದೇಶದಿಂದ ಮಹಿಳೆಯರಿಗಾಗಿ ವಿಶೇಷವಾದ ಐದು ಗ್ಯಾರಂಟಿ ಯೋಜನೆಗಳನ್ನು (Nari Nyaya Guaranty Schemes) ಘೋಷಿಸಿ ತಮ್ಮ ಪಕ್ಷವು ಬಹುಮತ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದರೆ ತಕ್ಷಣವೇ ಜಾರಿಗೆ ತರುವುದಾಗಿ ಭರವಸೆ ಕೂಡ ನೀಡಿದೆ.
ಇದಕ್ಕೆ ಮಹಿಳಾ ನ್ಯಾಯ ಖಾತರಿ ಯೋಜನೆ ಎನ್ನುವ ಹೆಸರು ಕೂಡ ಇಟ್ಟಿದ್ದಾರೆ. ಇದರಲ್ಲಿ ಕರ್ನಾಟಕದಲ್ಲಿ (Karnataka State) ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಯನ್ನೇ (Gruhalakshmi Scheme) ಹೋಲುವ ರೂ.1 ಲಕ್ಷ ಸಹಾಯದ ನೀಡುವ ಮಹಾಲಕ್ಷ್ಮಿ ಯೋಜನೆಯು ದೇಶದ ಗಮನ ಸೆಳೆದಿದ್ದು ಈ ಕುರಿತದ ಮಾಹಿತಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!
ಕರ್ನಾಟಕ ವಿಧಾನಸಭಾ ಚುನಾವಣೆ- 2023ರಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಬಳಸಿದ್ದ ಗ್ಯಾರಂಟಿ ಅಸ್ತ್ರವನ್ನು ಉಪಯೋಗಿಸಿ ಇದೇ ಮಾದರಿಯಲ್ಲೇ ಇಡೀ ದೇಶಕ್ಕೆ ಅನ್ವಯವಾಗುವ ರೀತಿಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರಿಗಾಗಿ ಘೋಷಣೆ ಮಾಡಿದೆ. ಅದರಲ್ಲಿ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯನ್ನು ಹೋಲುವಂತಹ ಮಹಾಲಕ್ಷ್ಮಿ ಯೋಜನೆ (Mahalakshmi) ಜಾರಿಗೆ ತಂದಿರುವುದು ದೇಶದ ಎಲ್ಲರ ಗಮನ ಸೆಳೆದಿದೆ.
ಈ ಮಹಾಲಕ್ಷ್ಮಿ ಯೋಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ವಾರ್ಷಿಕವಾಗಿ ರೂ. 1ಲಕ್ಷ ರೂಪಾಯಿ ನೆರವು ಸಿಗುತ್ತಿದೆ. ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಯೋಜನೆಯಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥೆಯು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ಸರ್ಕಾರದಿಂದ ರೂ.2000 ಸಹಾಯಧನವನ್ನು ನೇರವಾಗಿ DBT ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ.
ಮಹಿಳೆಯರಿಗೆ ರೂಪಿಸಲಾಗಿರುವ ವಿಶೇಷ ಯೋಜನೆ ಎಂದು ಗೃಹಲಕ್ಷ್ಮಿ ಯೋಜನೆ ಹೆಸರುವಾಸಿಯಾಗಿದೆ. ರಾಜ್ಯದ 1.20 ಸೊನ್ನೆ ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಪಡೆಯುತ್ತಿದ್ದಾರೆ ಮತ್ತು ಆರಂಭದಲ್ಲಿ ಯೋಜನೆ ಕುರಿತ ಎಲ್ಲಾ ಗೊಂದಲಗಳನ್ನು ಪರಿಹರಿಸಿ ಹಣ ಪಡೆಯಲು ಆಗದಿದ್ದವರಿಗೆ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು ಏರ್ಪಡಿಸಿ ಸಮಸ್ಯೆ ಬಗೆ ಹರಿಸಿಕೊಡಲಾಗಿದೆ.
ಈ ಸುದ್ದಿ ಓದಿ:- ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!
ಈ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆಗೆ ಕಾರಣ ಎಂದು ಎಲ್ಲಡೆ ಹೇಳಲಾಗುತ್ತಿದೆ. ಈಗ ಈ ಸಾಲಿಗೆ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಘೋಷಿಸಿರುವ ಉಳಿತ 5 ಗ್ಯಾರಂಟಿ ಯೋಜನೆಗಳು ಸೇರುತ್ತಿದ್ದು ಇದರ ಕುರಿತಾದ ಮಾಹಿತಿ ಹೇಗಿದೆ ನೋಡಿ.
ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಮಹಾರಾಷ್ಟ್ರದ (Maharastra) ಧುಲೆ ಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿ ನಾರಿ ನ್ಯಾಯ ಗ್ಯಾರಂಟಿಯಡಿ ಮಹಿಳೆಯರಿಗಾಗಿಯೇ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಅವರು ಘೋಷಿಸಿರುವ ಗ್ಯಾರಂಟಿ ಯೋಜನೆಗಳ ವಿವರ ಹೀಗಿದೆ.
ಈ ಸುದ್ದಿ ಓದಿ:- ಮಾರ್ಚ್ 25ರಂದು ಶಕ್ತಿಶಾಲಿ ಹೋಳಿ ಹುಣ್ಣಿಮೆ, ನಿಮ್ಮೆಲ್ಲರ ಕಷ್ಟ, ದಾರಿದ್ರ್ಯ, ಬಡತನ ಕಳೆಯಲು ಈ ದಿನ ಶಿವ, ವಿಷ್ಣು, ಲಕ್ಷ್ಮೀ ಮುಂದೆ ಈ ವಸ್ತು ಇಟ್ಟು ಪ್ರಾರ್ಥಿಸಿ.!
1. ಮಹಾಲಕ್ಷ್ಮಿ ಯೋಜನೆ (Mahalakshmi Scheme):- ದೇಶಾದ್ಯಂತ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ಹಣಕಾಸಿನ ನೆರವನ್ನು DBT ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಭರವಸೆಯ ಯೋಜನೆಯಾಗಿದೆ.
2. ಆದಿ ಅಭಾಡಿ, ಪೂರ ಏಕ್ (Adi Abhadi Pura Ak):- ಕೇಂದ್ರ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲೂ ಮಹಿಳೆಯರಿಗೆ 50% ಮೀಸಲಾತಿ ಭರವಸೆ.
3. ಶಕ್ತಿ ಕಾ ಸಮ್ಮಾನ್ (Shakti ka Samman):- ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಮಧ್ಯಾಹ್ನದ ಬಿಸಿಯೂಟ ತಯಾರಿಕಾ ಸಿಬ್ಬಂದಿಯ ಪ್ರತಿ ತಿಂಗಳ ಗೌರವಧನವನ್ನು ದ್ವಿಗುಣ ಮಾಡೋದಾಗಿ ಭರವಸೆಯ ಯೋಜನೆ.
4. ಅಧಿಕಾರ ಮೈತ್ರಿ (Adhikar Maitri):- ದೇಶದ ಪ್ರತಿಯೊಂದು ಪಂಚಾಯತಿ ಮಟ್ಟದಲ್ಲಿ ಕಾನೂನು ಸಹಾಯಕರನ್ನು ನೇಮಕ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಅಧಿಕಾರಿ ಮೈತ್ರಿಯ ರೂಪದಲ್ಲಿ ಈ ಸಹಾಯಕರು ಕಾರ್ಯ ನಿರ್ವಹಿಸಲಿದ್ದು, ಮಹಿಳೆಯರಿಗೆ ತಮ್ಮ ಹಕ್ಕು ಹಾಗೂ ಅಧಿಕಾರಿಗಳನ್ನು ಅರಿಯಲು ಕಾನೂನು ನೆರವು ನೀಡಲಿದ್ದಾರೆ.
5. ಸಾವಿತ್ರಿಬಾಯಿ ಫುಲೆ ಹಾಸ್ಟೆಲ್ (Savitri Bai Pule Hostel):- ಉದ್ಯೋಗದ ಉದ್ದೇಶದಿಂದಾಗಿ ದೂರದ ಪ್ರದೇಶಗಳಿಗೆ ಬರುವ ಮಹಿಳೆಯರಿಗಾಗಿ ದೇಶದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಕನಿಷ್ಟ ಪಕ್ಷ ಒಂದಾದರು ಮಹಿಳಾ ಹಾಸ್ಟೆಲ್ ನಿರ್ಮಿಸಿ ನಂತರದ ದಿನಗಳಲ್ಲಿ ಈ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣ ಮಾಡುವ ಭರವಸೆ.