ನಮ್ಮ ಮನೆಯಲ್ಲಿ ನಾವು ಪ್ರತಿನಿತ್ಯ ಉಪಯೋಗಸುವಂತಹ ಕೆಲವೊಂದು ವಸ್ತುಗಳು ಅಂದರೆ ಟೀ, ಕಾಫಿ ಕುಡಿಯುವಂತಹ ಲೋಟಗಳಾಗಿರಬಹುದು ತಟ್ಟೆಗಳು ಟೀ ಕಾಫಿ ಸೋಸುವಂತಹ ಸ್ಟೈನರ್ ಇವೆಲ್ಲವೂ ಸಹ ಕೆಲವೊಮ್ಮೆ ಹಳೆಯದಾಗುತ್ತಾ ಅದರ ಸುತ್ತ ಕಪ್ಪು ಬಣ್ಣ ಇರುತ್ತದೆ ಆದ್ದರಿಂದ ಕೆಲವೊಂದಷ್ಟು ಜನ ಮಹಿಳೆಯರು ಇದನ್ನು ಹಾಗೆ ಆದ ತಕ್ಷಣ ಆಚೆ ಬಿಸಾಡುತ್ತಿರುತ್ತಾರೆ.
ಆದರೆ ಇನ್ನು ಮುಂದೆ ಈ ರೀತಿ ಬಿಸಾಡುವ ಅವಶ್ಯಕತೆ ಇರುವುದಿಲ್ಲ ಬದಲಿಗೆ ಅದನ್ನು ಹೇಗೆ ಮತ್ತೆ ಸ್ವಚ್ಛವಾಗಿ ಮಾಡಬಹುದು ಹಾಗೂ ಅದನ್ನು ಸ್ವಚ್ಛ ಮಾಡುವುದಕ್ಕೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹೀಗೆ ಸ್ವಚ್ಛ ಆಗುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಈ ದಿನ ಇಂತಹ ಸ್ಟೀಲ್ ಪಾತ್ರೆಗಳನ್ನು ಸ್ವಚ್ಛ ಮಾಡುವುದಕ್ಕೆ ನಾವು ಯಾವುದೆಲ್ಲ ವಿಧಾನ ಅನುಸರಿಸಬೇಕಾಗುತ್ತದೆ ಅದಕ್ಕೆ ಯಾವದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
* ಎರಡು ಚಮಚ ಅಡುಗೆ ಸೋಡಾ
* ಎರಡು ಚಮಚ ಪುಡಿ ಉಪ್ಪು
* ವಿನಿಗರ್
* ಎರಡು ಚಮಚ ಡಿಟರ್ಜೆಂಟ್ ಪೌಡರ್
ಇಷ್ಟು ಪದಾರ್ಥ ಇದ್ದರೆ ಸಾಕು ನೀವು ಹಳೆಯದಾಗಿರುವಂತಹ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು.
ಈ ಸುದ್ದಿ ಓದಿತಯಾರಿಸಿಕೊಳ್ಳಬೇಕು.
ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!
* ಮೊದಲನೆಯದಾಗಿ ಟೀ ಕಾಫಿ ಸೋಸುವಂತಹ ಸ್ಟೈನರ್ ಅನ್ನು ಹೇಗೆ ಸ್ವಚ್ಛ ಮಾಡುವುದು ಎಂದು ಈ ಕೆಳಗೆ ತಿಳಿಯೋಣ. ಮೊದಲು ಒಂದು ಪಾತ್ರೆಗೆ ಸ್ಟೈನರ್ ಮುಳುಗುವಷ್ಟು ನೀರನ್ನು ಹಾಕಿ ಅದಕ್ಕೆ ಒಂದು ಚಮಚ ಪುಡಿ ಉಪ್ಪು ಒಂದು ಚಮಚ ಡಿಟರ್ಜೆಂಟ್ ಪೌಡರ್ ಹಾಗೂ ಒಂದು ಚಮಚ ಅಡುಗೆ ಸೋಡಾ ಇಷ್ಟನ್ನು ಹಾಕಿ ಬಿಟ್ಟು ಆ ನೀರನ್ನು ಚೆನ್ನಾಗಿ ಕುದಿಸಬೇಕು.
ಆನಂತರ ಅದನ್ನು ತಣ್ಣಗಾಗಲು ಬಿಟ್ಟು ಅದನ್ನು ತೆಗೆದು ಒಂದು ಬ್ರಷ್ ಸಹಾಯದಿಂದ ವಿಂ ಲಿಕ್ವಿಡ್ ಹಾಕಿ ಒಮ್ಮೆ ಉಜ್ಜಿ ತೊಳೆದರೆ ಸಾಕು ಅದರಲ್ಲಿ ಇರುವಂತಹ ಕಪ್ಪು ಬಣ್ಣದ ಕೊಳೆ ಅಂಶ ಎಲ್ಲವೂ ಸಹ ಆಚೆ ಹೋಗುತ್ತದೆ. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಇದನ್ನು ಅನುಸರಿಸುವುದು ತುಂಬಾ ಒಳ್ಳೆಯದು.
* ಇನ್ನು ಎರಡನೆಯದಾಗಿ ನಾವು ಪ್ರತಿನಿತ್ಯ ಟೀ ಕಾಫಿ ಕುಡಿಯುವಂತಹ ಲೋಟದ ಒಳಗಿನ ಭಾಗವು ಕಪ್ಪಾಗಿ ಇರುತ್ತದೆ ಅದನ್ನು ಆಚೆ ತೆಗೆಯುವುದಕ್ಕೆ ಮೊದಲು ಒಂದು ಚಿಕ್ಕ ಬೌಲಿಗೆ ಒಂದು ಚಮಚ ಪುಡಿ ಉಪ್ಪು ಒಂದು ಚಮಚ ಡಿಟರ್ಜೆಂಟ್ ಪೌಡರ್ ಹಾಗೂ ಒಂದು ಚಮಚ ವಿನೀಗರ್ ಇಷ್ಟನ್ನು ಹಾಕಿ ಚೆನ್ನಾಗಿ ಒಂದು ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು.
ಈ ಸುದ್ದಿ ಓದಿ:- ತಪ್ಪಿಯೂ ಈ 10 ಆಹಾರಗಳನ್ನು ಫ್ರಿಡ್ಜ್ ನಲ್ಲಿ ಇಡಬೇಡಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.!
ಇದನ್ನು ಆ ಲೋಟಕ್ಕೆ ಹಚ್ಚಿ 5 ರಿಂದ 10 ನಿಮಿಷ ಹಾಗೆ ಬಿಡಬೇಕು. ಈ ರೀತಿ ಮಾಡುವುದರಿಂದ ಅದರಲ್ಲಿ ಇರುವಂತಹ ಕಪ್ಪು ಕಲೆ ಎಲ್ಲವೂ ದೂರವಾಗುತ್ತದೆ. ಆನಂತರ ಒಂದು ಬ್ರಷ್ ಸಹಾಯದಿಂದ ವಿಂ ಲಿಕ್ವಿಡ್ ಹಾಕಿ ಒಮ್ಮೆ ಉಜ್ಜಿದರೆ ಸಾಕು ಅದರಲ್ಲಿ ಇರುವಂತಹ ಕಪ್ಪು ಬಣ್ಣ ಎಲ್ಲವೂ ಕೂಡ ಆಚೆ ಹೋಗುತ್ತದೆ ಪಾತ್ರೆ ಪಳಪಳನೆ ಹೊಳೆಯುತ್ತದೆ.
ಇದೇ ರೀತಿಯಾಗಿ ನಿಮ್ಮ ಮನೆಯಲ್ಲಿ ಯಾವುದೆಲ್ಲ ಸ್ಟೀಲ್ ಪಾತ್ರೆ ಕಪ್ಪಾಗಿರುತ್ತದೆಯೋ ಅವೆಲ್ಲದಕ್ಕೂ ಕೂಡ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಎಲ್ಲಾ ಪಾತ್ರೆಗಳನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಸ್ವಚ್ಛ ಮಾಡಬಹುದು ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಅವಶ್ಯಕತೆಯೂ ಕೂಡ ಇರುವುದಿಲ್ಲ.