ಕೆಲವೊಂದಷ್ಟು ಜನರಿಗೆ ಫ್ರಿಡ್ಜ್ ನಲ್ಲಿ ಯಾವ ಆಹಾರ ಪದಾರ್ಥಗಳನ್ನು ಇಡಬಹುದು ಯಾವ ಆಹಾರ ಪದಾರ್ಥಗಳನ್ನು ಇಡಬಾರದು ಎನ್ನುವಂತಹ ಮಾಹಿತಿಗಳು ತಿಳಿದಿರುವುದಿಲ್ಲ ಬದಲಿಗೆ ಅವರು ಕೈಗೆ ಸಿಕ್ಕ ಎಲ್ಲಾ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟಿರುತ್ತಾರೆ. ಆದರೆ ಅದು ತಪ್ಪು ಆದರೆ ಕೆಲವೊಂದಷ್ಟು ಆಹಾರ ಹಾಗೂ ತಂಪು ಪಾನೀಯಗಳನ್ನು ಇಡುವುದಕ್ಕೆ ಫ್ರಿಡ್ಜ್ ತುಂಬಾ ಉಪಯೋಗಕಾರಿ ಎಂದು ಹೇಳಬಹುದು.
ಆದರೆ ಬಹುತೇಕ ಜನರು ಫ್ರಿಡ್ಜ್ ನಲ್ಲಿ ಪ್ರತಿನಿತ್ಯ ಸೇವನೆ ಮಾಡುವಂತಹ ಕೆಲವೊಂದು ಆಹಾರಗಳು ಹಣ್ಣು ತರಕಾರಿ ಸೊಪ್ಪು ಉಳಿದಿರುವಂತಹ ಆಹಾರ ಪದಾರ್ಥಗಳು ಬ್ರೆಡ್ ಬೇಕರಿ ತಿನಿಸುಗಳು ಡೈರಿ ಉತ್ಪನ್ನಗಳು ಹೀಗೆ ಇನ್ನೂ ಇತರ ವಸ್ತುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟಿರುತ್ತಾರೆ. ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ಫ್ರಿಡ್ಜ್ ನಲ್ಲಿ ಇಟ್ಟಂತಹ ಆಹಾರ ಪದಾರ್ಥಗಳು ಕೇವಲ ಒಂದ ರಿಂದ ಎರಡು ದಿನಗಳಿಗಷ್ಟೇ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಸುದ್ದಿ ಓದಿ:- ಬಂತು ನೋಡಿ ಮಿನಿ ಮ್ಯಾಜಿಕ್ ಏರ್ ಕೂಲರ್ ಕೇವಲ 1300 ಕ್ಕೆ ಸಿಗುತ್ತೆ.! ಕರೆಂಟ್, ಪವರ್ ಬಂಕ್ 2 ರಲ್ಲೂ ರನ್ ಮಾಡಬಹುದು ಬೇಸಿಗೆ ಕಾಲಕ್ಕೆ ರಿಲೀಫ್ ನೀಡುತ್ತೆ
ಆದರೆ ಫ್ರಿಡ್ಜ್ ನಲ್ಲಿ ಇಟ್ಟಂತಹ ಕೆಲವೊಂದಷ್ಟು ಆಹಾರ ಪದಾರ್ಥಗಳು ಕೆಡುತ್ತವೆ ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಫ್ರಿಡ್ಜ್ ನಲ್ಲಿ ಇಡುವಂತಹ ಕೆಲವೊಂದಷ್ಟು ಆಹಾರ ಪದಾರ್ಥಗಳು ತಮ್ಮ ಆಹಾರದ ರುಚಿಯನ್ನು ಕಳೆದುಕೊಳ್ಳುತ್ತವೆ ಮತ್ತು ಆ ಒಂದು ಆಹಾರ ಪದಾರ್ಥದಲ್ಲಿ ಹಾನಿಕಾರಕ ಬದಲಾವಣೆಗಳು ಸಹ ಉಂಟಾಗುತ್ತದೆ.
ಫ್ರಿಡ್ಜ್ ನಲ್ಲಿ ಇಟ್ಟಂತಹ ಎಲ್ಲಾ ಪದಾರ್ಥಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿರುತ್ತದೆ ಎಂದು ಕೊಳ್ಳುವುದು ನಮ್ಮ ತಪ್ಪು ಭಾವನೆ. ಹಾಗಾದಈ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಫ್ರಿಡ್ಜ್ ನಲ್ಲಿ ಯಾವ ಆಹಾರ ಪದಾರ್ಥಗಳನ್ನು ಇಡಬಹುದು ಹಾಗೂ ಯಾವ ಆಹಾರ ಪದಾರ್ಥಗಳನ್ನು ಇಡಬಾರದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- 10 ವರ್ಷದ ಹಳೆಯ ಕುಕ್ಕರ್ ಆಗಿದ್ದರೂ ಮತ್ತೆ ಹೊಸದರಂತೆ ಕಾಣುವ ಹಾಗೆ ಮಾಡಬಹುದು, ಈ ಸಿಂಪಲ್ ಟ್ರಿಕ್ ಉಪಯೋಗಿಸಿ…
• ಟೊಮ್ಯಾಟೋ :- ಫ್ರಿಡ್ಜ್ ನಲ್ಲಿ ಟೊಮ್ಯಾಟೋ ಇಡುವುದರಿಂದ ಅದು ತನ್ನಲ್ಲಿರುವಂತಹ ನೈಸರ್ಗಿಕ ಸತ್ವವನ್ನು ಹಾಗೂ ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಫ್ರಿಡ್ಜ್ ನಲ್ಲಿ ಟೊಮಾಟೊ ಹಣ್ಣನ್ನು ಇಡುವುದು ಸಮಂಜಸವಲ್ಲ. ಬದಲಿಗೆ ಯಾವುದಾದರೂ ಬಿದಿರಿನ ಪುಟ್ಟಿ ಒಳಗೆ ಇಟ್ಟು ಅದರ ಮೇಲೆ ಬಟ್ಟೆಯನ್ನು ಅಥವಾ ಮುಚ್ಚಳವನ್ನು ಮುಚ್ಚಿಟ್ಟು ಆನಂತರ ಟೊಮ್ಯಾಟೋ ಉಪಯೋಗಿಸುವುದು ಉತ್ತಮ.
• ಮೊಟ್ಟೆ :- ಬೇಯಿಸಿದಂತಹ ಮೊಟ್ಟೆಯನ್ನು ಫ್ರಿಡ್ಜ್ ನಲ್ಲಿ ಇಡುವುದು ತಪ್ಪು
• ಜೇನುತುಪ್ಪ :- ಔಷಧೀಯ ಗುಣಗಳಿಂದ ಸಮೃದ್ಧವಾಗಿರುವಂತಹ ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ತಾಜವಾಗಿ ಇರುತ್ತದೆ ಎಂದು ಕೆಲವೊಂದಷ್ಟು ಜನ ತಿಳಿದುಕೊಂಡಿರುತ್ತಾರೆ ಆದರೆ ಈ ರೀತಿ ಇಡುವುದರಿಂದ ಜೇನುತುಪ್ಪ ಗಂಟುಗಳಾಗಿ ತನ್ನ ಸ್ವಾದವನ್ನು ಕಳೆದುಕೊಳ್ಳುತ್ತದೆ.
ಈ ಸುದ್ದಿ ಓದಿ:- ಮೆಡಿಸಿನ್ ಇಲ್ಲದೇ ಯೋಗದಲ್ಲಿ ಖಾಯಿಲೆ ವಾಸಿ ಮಾಡಬಹುದು ಆದರೆ ಇದೊಂದು ಕಂಡೀಷನ್ ಇದೆ.!
• ಬ್ರೆಡ್ :- ಕೆಲವೊಂದಷ್ಟು ಜನ ಒಮ್ಮೆಲೇ ಹೆಚ್ಚಿನ ಬ್ರೆಡ್ ಖರೀದಿ ಮಾಡಿ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟಿರುತ್ತಾರೆ. ಆದರೆ ಅದು ಫ್ರಿಡ್ಜ್ ನಲ್ಲಿ ಹೆಚ್ಚಿನ ತೇವಾಂಶವನ್ನು ಹೊಂದುವುದರ ಜೊತೆಗೆ ಅದು ಬೇಗನೆ ಹಾಳಾಗುತ್ತದೆ ಕೆಲವೊಮ್ಮೆ ಅದು ಗಟ್ಟಿಯಾಗುತ್ತದೆ ಕೆಲವೊಂದಷ್ಟು ಜನ ಅದನ್ನೇ ತಿನ್ನುತ್ತಾರೆ ಹೀಗೆ ತಿನ್ನುವುದರಿಂದ ಅವರ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ ಆದ್ದರಿಂದ ಫ್ರಿಡ್ಜ್ ನಲ್ಲಿ ಇಟ್ಟಂತಹ ಬ್ರೆಡ್ ತಿನ್ನುವುದು ಅಷ್ಟು ಸೂಕ್ತವಲ್ಲ.
• ಆಲೂಗಡ್ಡೆ :- ಆಲೂಗಡ್ಡೆಯಲ್ಲಿ ಪಿಷ್ಟ ಅಥವಾ ಸ್ಟಾರ್ಚ್ ಅಂಶ ಹೆಚ್ಚಾಗಿ ಇರುತ್ತದೆ ಆದ್ದರಿಂದ ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಅದು ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿ ಇಡುವುದು ಸೂಕ್ತವಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.