ಈಗ ಯೋಗ ಎನ್ನುವುದು ಬಹಳ ಟ್ರೆಂಡಿಂಗ್ ಹಾಗೂ ಡಿಮ್ಯಾಂಡಿಂಗ್ ವಿಷಯ ಮತ್ತು ಯೋಗ ಕೂಡ ಮಾರ್ಕೆಟಿಂಗ್ ಆಗಿ ಹೋಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಕಾಯಿಲೆ ಬಂದರೂ ಕೂಡ ಯೋಗ ಮಾಡಿದರೆ ಪರಿಹಾರ ಆಗುತ್ತದೆ ಎನ್ನುವ ಮನೋಭಾವನೆ ಜನರಲ್ಲಿ ಬೆಳೆದು ಹೋಗಿದೆ ಹಾಗಾದರೆ ಯೋಗ ಮಾಡುವುದರಿಂದ ಏನು ಪ್ರಯೋಜನ ಇಲ್ಲವೆ ಖಂಡಿತವಾಗಿಯೂ ಇದೆ.
ಯೋಗ ಎಂದರೆ ಕಾಯಿಲೆ ವಾಸಿ ಮಾಡುವ ಚಿಕಿತ್ಸೆ ಅಲ್ಲ ಬದಲಾಗಿ ಅದು ಬದುಕುವ ವಿಧಾನವೇ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಯೋಗ ಮಾಡುವುದಕ್ಕೆ ದಿನದಲ್ಲಿ ಒಂದು ತಾಸು ಮೀಸಲು ಇಡುವುದರಿಂದ ಕೇವಲ ಆಸನಗಳನ್ನು ಮಾಡುವುದರಿಂದ ದೇಹವನ್ನು ದಂಡಿಸುವುದರಿಂದಲೇ ಎಲ್ಲವೂ ಸರಿ ಹೋಗುವುದಿಲ್ಲ ಆಹಾರ ಪದ್ಧತಿ ಮತ್ತು ಮನಸ್ಸಿನ ಆರೋಗ್ಯವೂ ಕೂಡ ಅಷ್ಟೇ ಚೆನ್ನಾಗಿರಬೇಕು.
ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!
ದೇಹವನ್ನು ಯೋಗ ಮಾಡಿ ತಾಲೀಮುಗೊಳಿಸುವುದರಿಂದ ಮೂಳೆಗಳು ಗಟ್ಟಿ ಆಗುತ್ತದೆ. ಆದರೆ ದೇಹದ ಒಳಗಡೆ ಸೇರುವ ಆಹಾರದಲ್ಲೂ ಕೂಡ ಸರಿಯಾದ ಆರೋಗ್ಯಕರ ಅಂಶಗಳು ದೇಹ ಸೇರಬೇಕು ಮತ್ತು ನೆಮ್ಮದಿಯಾದ ನಿದ್ರೆಯು ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಇದೆಲ್ಲದರ ಜೊತೆಗೆ ಮನಸಿನಲ್ಲಿ ಕೂಡ ನಾವು ಪಾಸಿಟಿವ್ ಆಗಿ ಥಿಂಕ್ ಮಾಡಬೇಕು.
ಮನಸ್ಸಿನಲ್ಲಿ ನೂರೆಂಟು ಯೋಜನೆ ಇಟ್ಟುಕೊಂಡು ಅಥವಾ ಗುಣವಾಗುತ್ತದೆ ಎನ್ನುವುದನ್ನು ಉದ್ದೇಶ ಇಟ್ಟುಕೊಂಡು ಯೋಗ ಪ್ರಾಕ್ಟೀಸ್ ಮಾಡಿದರೆ ಅದು ಪ್ರಯೋಜನಕ್ಕೆ ಬಾರದೇ ಇರಬಹುದು. ಯೋಗ ಎಂದರೆ ದೇಹದ ಕಂಟ್ರೋಲ್ ಮನಸ್ಸಿನ ಕಂಟ್ರೋಲ್ ಉಸಿರಾಟದ ಸಮತೋಲನ ಇದೆಲ್ಲವನ್ನು ಒಳಗೊಂಡ ಅಂಶವಾಗಿದೆ. ವ್ಯಾಯಾಮ ಅಥವಾ ಯೋಗ ಮಾಡಿದ ಮೇಲೆ ಹಾಯಾಗುವಂತೆ ಮನಸ್ಸಿಗೂ ನೆಮ್ಮದಿ ಇರಬೇಕು ಆಗ ಪೂರ್ಣ ಪ್ರಮಾಣದಲ್ಲಿ ಫಲ ಸಿಗುತ್ತದೆ.
ಜೊತೆಗೆ ಯಾವುದೇ ಕಾಯಿಲೆಗೆ ಬೇಕಾದರೂ ಯೋಗದಿಂದ ಚಿಕಿತ್ಸೆ ಸಿಗುತ್ತದೆ ಎಂದುಕೊಳ್ಳುವುದು ತಪ್ಪು ಇದರ ಬದಲು ಒಂದು ನಿಯಂತ್ರಣ ಸಿಗುತ್ತದೆ ಎಂದರೆ ಒಪ್ಪಬಹುದು. ಯಾಕೆಂದರೆ 70 ವರ್ಷದ ವೃದ್ಧರೊಬ್ಬರು ತನಗೆ ವಿಪರೀತವಾಗಿ ಮೂಳೆಗಳು ನೋವು ಬರುತ್ತಿದೆ ಎಂದು ಕೇಳಿದರೆ ಯೋಗ ಮಾಡುವುದರಿಂದ ಹೊಸದಾಗಿ ಏನು ಬದಲಾವಣೆ ಆಗುವುದಿಲ್ಲ.
ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!
ಯಾಕೆಂದರೆ ಈಗಾಗಲೇ ಆ ವ್ಯಕ್ತಿಗೆ ವಯಸ್ಸಾಗಿದೆ ಆತನ ಮೂಲಗಳು ದುರ್ಬಲಗೊಂಡಿದೆ, ಸವೆದಿರುತ್ತದೆ. ಆದರೆ ಆತನಿಗೆ ಆಗುತ್ತಿರುವ ನೋವನ್ನು ನಿಯಂತ್ರಣಕ್ಕೆ ತರಬಹುದು. ದೇಹವು ಲೈಟ್ ಆಗಿ ಇರುವಂತೆ ಆ ವಯಸ್ಸಿಗೆ ಎಷ್ಟು ಚೈತನ್ಯದಿಂದ ಇರಬೇಕು ಅಷ್ಟು ಎನರ್ಜಿಯಿಂದ ಇರುವಂತೆ ನಿಯಂತ್ರಣಕ್ಕೆ ತರಬಹುದು ಅಷ್ಟೇ.
ಆದರೆ 20 ವರ್ಷದ ಯುವಕನೊಬ್ಬ ತನ್ನ 20ನೇ ವಯಸ್ಸಿನಿಂದ ಯೋಗ ಪ್ರಾಕ್ಟೀಸ್ ಮಾಡಿಸುತ್ತಾ ಬಂದರೆ 70 ವರ್ಷದ ವಯಸ್ಸಾದರೂ ಕೂಡ 50 ವರ್ಷದ ತರುಣನಂತೆ ಇರುತ್ತಾರೆ ಎಂದರೆ ಅದನ್ನು ಒಪ್ಪಬಹುದು ಯಾಕೆಂದರೆ ಈಗಾಗಲೇ ಅದು ಅವರು ದೇಹ ದಂಡಿಸಿ ದೇಹವನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಂಡಿರುತ್ತಾರೆ.
ಹಾಗೆಯೇ ಎಲ್ಲಾ ಕಾಯಿಲೆಗೂ ಕೂಡ ಯೋಗದಿಂದಲೇ ಔಷಧಿ ಸಿಗುವುದಿಲ್ಲ. ಕೆಲವು ಜೀನ್ಸ್ ನಿಂದ ಬಂದಿರುತ್ತದೆ, ಒಬ್ಬ ವ್ಯಕ್ತಿ ದೇಹಕ್ಕೂ ಮತ್ತೊಬ್ಬ ವ್ಯಕ್ತಿಯ ದೇಹ ರಚನೆಗೋ ವ್ಯತ್ಯಾಸ ಆಗಿರುತ್ತದೆ ಅದಕ್ಕೆ ಆತನ ಜೀನ್ಸ್ ಕಾರಣ ಆಗಿರುತ್ತದೆ ಯೋಗ ಅದರೊಂದಿಗೆ ಸಹಕರಿಸಬಹುದು ಹೊರತು ಯೋಗದಿಂದಲೇ ಎಲ್ಲವೂ ಸಾಧ್ಯವಿಲ್ಲ.
ಈ ಸುದ್ದಿ ಓದಿ:- ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವ ಅಭ್ಯಾಸ ಇದ್ದರೆ ಇಂದೇ ನಿಲ್ಲಿಸಿ.!
ಆದರೆ ಅಷ್ಟೇ ಅಸ್ತವ್ಯಸ್ತವಾಗಿರುವ ದೇಹವು ಯೋಗ ಅಭ್ಯಾಸ ಮಾಡುತ್ತಾ ಬಂದಂತೆ ಒಂದು ಹಂತಕ್ಕೆ ಕಂಟ್ರೋಲ್ ಗೆ ಬರುತ್ತದೆ ಆ ಮೂಲಕ ನಿಧಾನವಾಗಿ ಮನಸ್ಸನ್ನು ಕಂಟ್ರೋಲ್ ಗೆ ತರಬಹುದು ಮತ್ತು ನಿಧಾನವಾಗಿ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂಬುದು ಸತ್ಯ ಹೊರತು ಎಲ್ಲಾ ಕಾಯಿಲೆಯೂ ಯೋಗ ಮಾಡಿದ ತಕ್ಷಣ ಗುಣವಾಗುತ್ತದೆ ಎನ್ನುವುದು ಮಿಥ್ಯಾ ಎನ್ನುವುದನ್ನು ಒಂದೇ ಮಾತಿನಲ್ಲಿ ಹೇಳಬಹುದು.