ಕೇಸರಿ ಬಾತ್ ಮಾಡುವುದಕ್ಕೆ ಹಲವಾರು ವಿಧಾನಗಳು ಇವೆ. ಆದರೆ ನಾವು ಯಾವಾಗಲೋ ಒಮ್ಮೆ ಹಬ್ಬ ಹರಿದಿನ ವಿಶೇಷತೆಗಳಲ್ಲಿ ಮಾತ್ರ ಮಾಡುವುದರಿಂದ ಆ ಸಮಯಕ್ಕೆ ಮಾಡಿ ನಂತರ ಆ ರೆಸಿಪಿ ಮರೆತೇ ಬಿಡುತ್ತೇವೆ. ಹಾಗಾಗಿ ಪ್ರತಿ ಬಾರಿ ಕೇಸರಿ ಬಾತ್ ಮಾಡುವಾಗಲೂ ಅಮ್ಮನಿಗೋ, ಸ್ನೇಹಿತೆಯರಿಗೋ ಕರೆ ಮಾಡಿ ಅಳತೆ ಕೇಳುವುದು ತಪ್ಪುವುದಿಲ್ಲ ಅಥವಾ ಯೂಟ್ಯೂಬ್ ನೋಡಿ ಕೇಸರಿಬಾತ್ ಮಾಡುವ ಅಭ್ಯಾಸ ಪರಿಪಾಠವಾಗಿ ಹೋಗಿದೆ.
ಇದರಿಂದ ನೀವು ಈ ಮೆಜರ್ಮೆಂಟ್ ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದೀರಿ ಎಂದರೆ ಇಂದು ನಾವು ಬಹಳ ಸುಲಭವಾಗಿ ಮಾಡುವ ಮತ್ತು ಅಳತೆ ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಸಿಂಪಲ್ ಟ್ರಿಕ್ ನೊಂದಿಗೆ ರುಚಿಕರವಾದ ಒಳ್ಳೆಯ ಹದದಲ್ಲಿ ಇರುವ ಕೇಸರಿಬಾತ್ ರೆಸಿಪಿ ಮಾಡುವುದರ ಬಗ್ಗೆ ಹೇಳಿಕೊಡುತ್ತಿದ್ದೇವೆ. ನೀವು ಒಮ್ಮೆ ಇದನ್ನು ಟ್ರೈ ಮಾಡಿದರೆ ಮತ್ಯಾವತ್ತೂ ಇದನ್ನು ಮರೆಯೋದೇ ಇಲ್ಲ.
ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.
ಕೇಸರಿ ಬಾತ್ ಮಾಡುವುದಕ್ಕೆ ಇರುವ ಒಂದು ಸಿಂಪಲ್ ಟ್ರಿಕ್ ಏನೆಂದರೆ ನೀವು 1-2-3-4 ಎನ್ನುವ ಈ ಸಿಂಪಲ್ ಟ್ರಿಕ್ ನೆನಪಿನಲ್ಲಿ ಇಟ್ಟುಕೊಂಡರೆ ಸಾಕು. ನೀವು ಎಷ್ಟೇ ದಿನಗಳಾದ ನಂತರ ಮಾಡಿದರು ಇದರ ಅಳತೆ ಮರೆತು ಹೋಗುವುದಿಲ್ಲ. 1-2-3-4 ಟ್ರಿಕ್ ಎಂದರೆ ಕೇಸರಿ ಬಾತ್ ಗೆ ಬಳಸುವ ಪದಾರ್ಥಗಳ ಅನುಪಾತ ಆಗಿದೆ.
ಕೇಸರಿ ಬಾತ್ ಮಾಡಲು ಮುಖ್ಯವಾಗಿ ಬೇಕಾದ ನಾಲ್ಕು ಪದಾರ್ಥಗಳು ತುಪ್ಪ, ರವೆ, ಸಕ್ಕರೆ ಹಾಗೂ ನೀರು. ಇವು ಸರಿ ಪ್ರಮಾಣದಲ್ಲಿ ಇದ್ದಾಗ ಕೇಸರಿಬಾತ್ ಒಂದು ಸರಿಯಾದ ಹದಕ್ಕೆ ಬರುತ್ತದೆ ಹಾಗಾಗಿ ಈ ಟ್ರಿಕ್ ಪ್ರಕಾರ ಯಾವುದನ್ನು ಎಷ್ಟು ಹಾಕಬೇಕು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಈ ಸುದ್ದಿ ಓದಿ:- ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!
ಈ ಅಳತೆ ಮಾಡಲು ನೀವು ಯಾವುದೇ ಲೋಟ ಅಥವಾ ಬೌಲ್ ತೆಗೆದುಕೊಂಡರು ನಾಲ್ಕನ್ನು ಕೂಡ ಅದರಲ್ಲಿ ಅಳತೆ ಮಾಡಬೇಕು. ಉದಾಹರಣೆಗೆ ಒಂದು ಬೌಲ್ ತುಪ್ಪ, ಎರಡು ಬೌಲ್ ರವೆ, ಮೂರು ಬೌಲ್ ಸಕ್ಕರೆ ಮತ್ತು ನಾಲ್ಕು ಬೌಲ್ ನೀರು ಇದು ಸರಿಯಾದ ಪ್ರಮಾಣ. ಇದರೊಂದಿಗೆ ಇನ್ಯಾವ ಸಾಮಾಗ್ರಿ ಬಳಸಿದರೆ ಟೇಸ್ಟ್ ಚೆನ್ನಾಗಿ ಆಗುತ್ತದೆ ಎನ್ನುವ ವಿಚಾರ ಮತ್ತು ಮಾಡುವ ವಿಧಾನದ ಮಾಹಿತಿ ಹೀಗಿದೆ.
ಮೊದಲಿಗೆ ಒಂದು ಅಗಲವಾದ ಪಾತ್ರೆ ತೆಗೆದುಕೊಳ್ಳಿ. ಕೇಸರಿಬಾತ್ ಮಾಡುವುದಕ್ಕೆ ಅಗಲವಾದ ಪಾತ್ರೆ ತೆಗೆದುಕೊಂಡರೆ ಬೆಸ್ಟ್. ಈಗ ಅದಕ್ಕೆ ಒಂದು ಕಪ್ ತುಪ್ಪ ಹಾಕಿ, ನೀವು ಅರ್ಧ ಕಪ್ ತುಪ್ಪ ಅರ್ಧ ಕಪ್ ಎಣ್ಣೆ ಬೇಕಾದರೂ ಹಾಕಬಹುದು ಅಥವಾ ಅರ್ಧ ಕಪ್ ತುಪ್ಪ ಹಾಕಿ ಕೊನೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿದರೂ ನಡೆಯುತ್ತದೆ.
ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!
ಈಗ ಸದ್ಯಕ್ಕೆ ಒಂದು ಕಪ್ ತುಪ್ಪ ಹಾಕಿದ್ದೀರಾ ಎಂದುಕೊಳ್ಳೋಣ ಅದು ಸ್ವಲ್ಪ ಬಿಸಿಯಾದ ಮೇಲೆ ಲೋ ಫ್ಲೇಂ ನಲ್ಲಿಯೇ ಉರಿ ಇಟ್ಟುಕೊಂಡು ಎರಡು ಕಪ್ ರವೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ ನೀವು ಎಷ್ಟು ಚೆನ್ನಾಗಿ ಹುರಿಯುತ್ತಿರೋ ಅಷ್ಟು ಚೆನ್ನಾಗಿ ಕೇಸರಿಬಾತ್ ಬರುತ್ತದೆ.
ಈಗ ಮೂರು ಕಪ್ ಸಕ್ಕರೆ ಸೇರಿಸಿ ಇದನ್ನೆಲ್ಲ ಮಾಡಲು ಆರಂಭಿಸಿದಾಗಲೇ ಬೇರೆ ಪಾತ್ರೆಯಲ್ಲಿ ನಾಲ್ಕು ಕಪ್ ನೀರು ಹಾಕಿ ಬಿಸಿ ಮಾಡಲು ಇಟ್ಟುಕೊಂಡಿರಬೇಕು. ಈಗ ಆ ನಾಲ್ಕು ಕಪ್ ನೀರನ್ನು ಸೇರಿಸಿ ಒಂದು ಚಿಟಿಕೆ ಕೇಸರಿ ಹಾಕಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ ತಿರುಗುತ್ತಾ ಬಂದರೆ ಐದು ನಿಮಿಷದಲ್ಲಿ ಸೂಪರ್ ಆಗಿ ಕೇಸರಿಬಾತ್ ರೆಡಿ ಆಗುತ್ತದೆ.