ಮಧ್ಯಪ್ರದೇಶದ ಉಜೈನಿ ನಗರ ಎಲ್ಲರಿಗೂ ಗೊತ್ತೇ ಇದೆ ಉಜೈನಿ ನಗರವು ಭಾರತದ ದೇಶದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿಯೇ ಪ್ರಖ್ಯಾತಿ ಪಡೆದಿದೆ. ಉಜ್ಜೈನಾ ಪರಮಾತ್ಮ ಮಹಾಕಾಲೇಶ್ವರವು ಶಿವನ ನಗರ ಎಂದೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಇತ್ತೀಚಿಗೆ ಒಂದು ಅಚ್ಚರಿಯ ಘಟನೆ ನಡೆದಿದೆ. ಆ ಘಟನೆ ಒಬ್ಬ ಟೀ ಮಾರುವ ಹುಡುಗನದ್ದು. ಈತ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಆ ಹುಡುಗ ಯಾರು? ಹಾಗೂ ಹೇಗೆ ಕೋಟ್ಯಾಧಿಪತಿಯಾದ ಎಂಬುದನ್ನು ವಿವರವಾಗಿ ತಿಳಿಯೋಣ.
ಉಜೈನಿಯಲ್ಲಿ 20 ವರ್ಷದ ಹುಡುಗ ವಾಸವಾಗಿದ್ದು, ಈತ ತುಂಬಾ ಬಡ ಕುಟುಂಬದಲ್ಲಿ ಜನಿಸಿದ ಬಡ ಹುಡುಗ. ಈತ ತನ್ನ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ. ಜೀವನ ಸಾಗಿಸಲು ಟೀ ಮಾರುತ್ತಿದ್ದು ಅವನ ತಾಯಿ ಡಾಬಾ ಒಂದರಲ್ಲಿ ಕೆಲಸ ಮಾಡುತ್ತಾ ಕಷ್ಟ ಪಟ್ಟು ಜೀವನ ನಡೆಸುತ್ತಾ ನಗರದ ಒಂದು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾ ಇದ್ದಾರು. ರಾಹುಲ್ ಟೀ ಮಾರುತ್ತಾ ಇರುವಾಗ ಸೌರಬ್ ಎಂಬ ಯುವಕ ರಾಹುಲ್ ಗೆ ಪರಿಚಯವಾಗುತ್ತಾನೆ.
ನಂತರ ರಾಹುಲ್ ನ ಜೀವನದಲ್ಲಿ ತಿರುವು ಉಂಟಾಗಿದೆ. ಸೌರಬ್ ತಾನು ಇಂಡೋರ್ ನಗರದವನು ಎಂದು ರಾಹುಲ್ ಬಳಿ ಪರಿಚಯ ಮಾಡಿಕೊಂಡು ಹಣ ಸಂಪಾದನೆ ಮಾಡಲು ರಾಹುಲ್ ಗೆ ಒಂದು ಆಫರ್ ನೀಡುತ್ತಾನೆ. ನಾನು ನಿನಗೆ ಹೆಚ್ಚು ಹಣ ಸಂಪಾದಿಸುವ ಕೆಲಸ ಹೇಳಿ ಕೊಡುತ್ತೇನೆ. ಇನ್ಸ್ಟಾಗ್ರಾಂ ನಲ್ಲಿ ಕೇವಲ ರೀಲ್ಸ್ ಮಾಡಿದರೆ ಸಾಕು ಇದಕ್ಕೆ ಪ್ರತಿ ತಿಂಗಳು ರೂಪಾಯಿ 25 ಸಾವಿರಗಳನ್ನು ನೀಡುತ್ತೇನೆ ಎಂದು ಸೌರಬ್ ಹೇಳುತ್ತೇನೆ.
ರಾಹುಲ್ ಟೀ ಅಂಗಡಿಯಲ್ಲಿ ಹೆಚ್ಚಿನ ಸಂಪಾದನೆ ಆಗದಿರುವ ಕಾರಣ ಹೆಚ್ಚಿನ ಹಣ ಸಂಪಾದನೆ ಮಾಡಬೇಕೆಂಬ ಆಸೆಯಿಂದ ರಾಹುಲ್ ಒಪ್ಪಿಕೊಳ್ಳುತ್ತಾನೆ. ನಂತರ ಟ್ರೈನಿಂಗ್ ನೀಡುತ್ತೇನೆ ಎಂದು ಸೌರಬ್ ರಾಹುಲ್ ಅನ್ನು ಇಂಡೋರ್ ಗೆ ಕರೆಸಿಕೊಂಡು ಏಳು ದಿನಗಳ ಕಾಲ ಒಂದು ಹೋಟೆಲ್ ನಲ್ಲಿ ಇಟ್ಟು ಅವನ ಕೈಯಲ್ಲಿ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಹೊಸ ಹೊಸ ಖಾತೆಗಳಲ್ಲಿ ತೆರೆಸಿದರು.
ನಂತರ ರಾಹುಲ್ ತನ್ನ ಉಜೈನಿ ಮನೆಗೆ ತೆರಳುತ್ತಾನೆ. ಕೆಲವು ದಿನಗಳು ಕಳೆದ ನಂತರ ರಾಹುಲ್ ನ ಅಕೌಂಟ್ ಗೆ ಪ್ರತಿದಿನ ಲಕ್ಷಗಟ್ಟಲೆ ಹಣ ಡೆಪಾಸಿಟ್ ಆಗುತ್ತಿತ್ತು ಸರಿ ಸುಮಾರು 90 ಲಕ್ಷ ಹಣ ಡೆಪಾಸಿಟ್ ಆಗಿದೆ. ಹೀಗೆ ಪ್ರತಿದಿನ ತನ್ನ ಖಾತೆಗೆ ಹಣ ಬಂದು ಬೀಳುತ್ತಿದ್ದನ್ನು ನೋಡಿ ತನಗೆ ಟ್ರೈನಿಂಗ್ ಕೊಟ್ಟ ಸೌರಬ್ ಮತ್ತು ಅವನ ಸ್ನೇಹಿತರಿಗೆ ಕರೆ ಮಾಡಿ ಕೇಳುತ್ತಾನೆ ನನ್ನ ಖಾತೆಗೆ ಇಷ್ಟು ಹಣ ಏಕೆ ಬರುತ್ತಿದೆ? ನೀವು ನನ್ನಿಂದ ಓಪನ್ ಮಾಡಿದ ಖಾತೆಗಳಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ ಎಂದು ಕೇಳುತ್ತಾನೆ.
ಆಗ ಸೌರಬ್ ಮತ್ತು ಸ್ನೇಹಿತರು ಈಗ ಹೇಗೆ ನಡೆಯುತ್ತಿದೆ ಹಾಗೆ ನಡೆಯಲಿ ನೀನು ತಲೆ ಕೆಡಿಸಿಕೊಳ್ಳಬೇಡ ನಿನಗೆ ಎಷ್ಟು ಹಣ ಬೇಕು ಅಷ್ಟು ತೆಗೆದುಕೊ ಎಂದು ಹೇಳುತ್ತಾರೆ. ಆಗ ರಾಹುಲ್ 18 ಲಕ್ಷಗಳನ್ನು ತೆಗೆದುಕೊಂಡು ವಾಸಿಸಲು ಒಂದು ಸ್ವಂತ ಮನೆ ಖರೀದಿ ಮಾಡಿಕೊಳ್ಳುತ್ತಾನೆ. ನಂತರ ಅವನ ಖಾತೆಗೆ ಲಕ್ಷಗಟ್ಟಲೆ ಹಣಗಳು ಜಮೆ ಆಗುತ್ತಿದ್ದನು ಗಮನಿಸಿ ಭಯಗೊಂಡ ರಾಹುಲ್ ಸೌರಬ್ ಮತ್ತು ಸ್ನೇಹಿತರು ಏನಾದರೂ ಕೆಟ್ಟ ಕೆಲಸ ಮಾಡುತ್ತಿರಬಹುದು ಆದ್ದರಿಂದ ಇಷ್ಟು ಹಣ ಜಮೆಯಾಗುತ್ತಿದೆ ಎಂದು ತಿಳಿದು ಪೊಲೀಸರಿಗೆ ತಿಳಿಸಲು ಮುಂದಾಗುತ್ತಾನೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋನ ಸಂಪೂರ್ಣವಾಗಿ ವೀಕ್ಷಿಸಿ