ನಟ ಚಂದನ್ ಕಪಾಲಮೋಕ್ಷ ಮಾಡಿದ ತೆಲುಗು ಟೆಕ್ನಿಷಿಯನ್, ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುವ ವೇಳೆ ಈ ಅವಘಡ ಸಂಭವಿಸಿದೆ ಯಾವ ಕಾರಣಕ್ಕಾಗಿ ನೋಡಿ.

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಅವರು ಸದ್ಯಕ್ಕೆ ಕನ್ನಡ ತೆಲುಗು ಎರಡು ಇಂಡಸ್ಟ್ರಿಯಲ್ಲೂ ಕೂಡ ಸಖತ್ ಬ್ಯುಸಿ ಇದ್ದಾರೆ ಅಷ್ಟೇ ಅಲ್ಲದೆ ಹೆಚ್ಚು ಬೇಡಿಕೆಯನ್ನು ಗಳಿಸಿಕೊಂಡಿರುವ ನಟ. ಕನ್ನಡ ತೆಲುಗು ಎರಡು ಕಿರುತರೆ ಲೋಕದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡಕ್ಕಿಂತಲೂ ಕೂಡ ತೆಲುಗುನಲ್ಲಿಯೇ ಹೆಚ್ಚು ಸದ್ದು ಮಾಡುತ್ತಿದ್ದಾರೆ ತಿಂಗಳ ಬಹುತೇಕ ಸಮಯ ಹೈದರಾಬಾದ್ ನಲ್ಲಿ ಕಳೆಯುತ್ತಾರೆ‌. ಇನ್ನು ತೆಲುವಿನ ಖ್ಯಾತ ಧಾರಾವಾಹಿ ಆದಂತಹ “ಸಾವಿತ್ರಿಗಾರು ಅಬ್ಬಾಯಿ” ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವರು ಮುಖ್ಯ ಭೂಮಿಕೆಯ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ತೆರೆಕಂಡ ಲಕ್ಷ್ಮಿ ಬಾರಮ್ಮ ಧಾರವಾಹಿಯಂತೆ ಈ ಧಾರಾವಾಹಿಯಲ್ಲು ಕೂಡ ಇಬ್ಬರು ಹೆಂಡಿರ ಮುದ್ದಿನ ಗಂಡನ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ ಸದ್ಯಕ್ಕೆ ಧಾರಾವಾಹಿ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಚಂದನ್ ಕುಮಾರ್ ಅವರು ಟೆಕ್ನಿಷಿಯನ್ ಟೀಮ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ‌. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮತಿ ನಡೆದಿದೆ ಆಗ ಚಂದನ್ ಕುಮಾರ್ ಅವರು ಟೆಕ್ನಿಷಿಯನ್ ಮೇಲೆ ಹ.ಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಚಂದನ್ ಕುಮಾರ್ ಅವರ ಮೇಲೆ ಒರಿಸಲಾಗಿದೆ. ಇದರಿಂದ ಕೋಪಗೊಂಡಂತಹ ಟೆಕ್ನಿಷಿಯನ್ ಟೀಮ್ ಮತ್ತು ಧಾರವಾಹಿ ಟೀಂ ಎಲ್ಲರೂ ಕೂಡ ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ಚಂದನ್ ಕುಮಾರ್ ಅವರನ್ನು ತರಟಾಗೆ ತೆಗೆದುಕೊಂಡಿದ್ದರೆ ಒಬ್ಬ ಹೀರೋ ಎಂಬುದನ್ನು ಕೂಡ ನೋಡದೆ ಚಂದನ್ ಕುಮಾರ್ ಅವರಿಗೆ ಥಳಿಸಿದ್ದಾರೆ.

ಹೌದು ಚಂದನ್ ಕುಮಾರ್ ತೆಲುಗಿನ ತಂತ್ರಜ್ಞಾನರಿಗೆ ಕಿರಿಕ್ ಮಾಡಿದ್ದಾರೆ ಅವರ ಜೊತೆ ಜಗಳ ಆಡಿದ್ದಾರೆ ಎಂಬ ಕಾರಣಕ್ಕಾಗಿ ತಂತ್ರಜ್ಞಾನರೆಲ್ಲರೂ ಕೂಡ ಒಟ್ಟಾಗಿ ಸೇರಿಕೊಂಡು ಚಂದನ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರೆ. ಈ ಮಧ್ಯೆ ಮಾತಿನ ಚಕಮಕಿಯಾಗಿ ಗುಂಪಿನಲ್ಲಿ ಇದ್ದಂತಹ ವ್ಯಕ್ತಿ ಯೋಗವನ್ನು ಚಂದನ್ ಕುಮಾರ್ ಅವರಿಗೆ ಕಪಾಲ ಮೋಕ್ಷ ಮಾಡಿದ್ದಾನೆ. ಇದರಿಂದ ಚಂದನ್ ಕುಮಾರ್ ಅವರು ತುಂಬಾನೇ ಬೇಸರಗೊಂಡಿದ್ದಾರೆ ಚಂದನ್ ಕುಮಾರ್ ಅವರು ನಾನು ಮಾಡಿದ್ದು ತಪ್ಪಾಯಿತು ಎಂದು ಆ ವ್ಯಕ್ತಿಗೆ ಕೈ ಮುಗಿದು ಕ್ಷಮೆಯನ್ನು ಕೂಡ ಕೇಳಿದ್ದಾರೆ. ಆದರುಇ ಅವರು ಮಾತ್ರ ಈತ ಮಾಡಿದಂತಹ ಕ್ಷಮೆಯನ್ನು ಸ್ವೀಕರ ಮಾಡಲು ಒಪ್ಪುತ್ತಿಲ್ಲ.

ನೀನೇನು ದೊಡ್ಡ ಹೀರೋನಾ, ನೀನೇನು ದೊಡ್ಡ ಸ್ಟಾರ್ ನಟನ ನಿನ್ನ ಬ್ಯಾಗ್ರೌಂಡ್ ಏನು ನೀನು ಎಲ್ಲಿಂದ ಬಂದಿದ್ದೀಯಾ ಎಂಬುದು ನಿನಗೆ ತಿಳಿದಿದೆಯಾ ನಮ್ಮ ರಾಜ್ಯಕ್ಕೆ ಬಂದು ಅಹಂಕಾರ ತೋರಿಸಬೇಡ ನಿನಗೆ ಸರಿಯಾದ ಗತಿ ಕಾಣಿಸಿ ಬಿಡುತ್ತೇವೆ ಎಂದು ಚಂದನ್ ಕುಮಾರ್ ಅವರಿಗೆ ತಂತ್ರಜ್ಞಾನರು ಅವಾಜ್ ಹಾಕಿದ್ದಾರೆ. ಚಂದನ್ ಕುಮಾರ್ ಅವರು ಮಾತ್ರ ಇದ್ಯಾವುದಕ್ಕೂ ಕೂಡ ಪ್ರತಿಕ್ರಿಯೆ ನೀಡದೆ ಅಪರಾಧಿ ಸ್ಥಾನದಲ್ಲಿ ನಿಂತು ಟೆಕ್ನಿಷಿಯನ್ ಟೀಮ್ ಏನೇ ಹೇಳಿದರು ಕೂಡ ಕೇಳಿಸಿಕೊಂಡು ಸುಮ್ಮನೆ ನಿಂತಿದ್ದಾರೆ. ಇವರ ಪರಿಸ್ಥಿತಿಯನ್ನು ನೋಡಿದರೆ ಒಂದು ಕಡೆ ಬೇಸರವಾಗುತ್ತದೆ ನಮ್ಮ ಕನ್ನಡಿಗರಿಗೆ ಹೊರ ರಾಜ್ಯದಲ್ಲಿ ಇಂತಹ ಅನ್ಯಾಯವಾಗುತ್ತಿರುವುದನ್ನು ಖಂಡಿಸುವಂತಹ ವ್ಯಕ್ತಿ ಅಲ್ಲಿ ಯಾರು ಇಲ್ಲ ಎಂಬುದು ನಿಜಕ್ಕೂ ಕೂಡ ವಿಷಾದ ವಿಚಾರವೇ.

ಮಾತಿನ ಚಕಮಕಿಯಲ್ಲಿ ಚಂದನ್ ಕುಮಾರ್ ಅವರು ತಂತ್ರಜ್ಞಾನರೊಂದಿಗೆ ಕಿರಿಕ್ ಮಾಡಿಕೊಂಡಿರಬಹುದು ಆದರೆ ಟೆಕ್ನಿಷಿಯನ್ ಟೀಮ್ ಸಮಾಧಾನಕರವಾಗಿ ಕುಳಿತುಕೊಂಡು ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಏಕಾಏಕಿ ಚಂದನ್ ಕುಮಾರ್ ಅವರ ಮೇಲೆ ಹ.ಲ್ಲೆ ಮಾಡಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ. ಚಂದನ್ ಕುಮಾರ್ ಅವರ ಮೇಲೆ ಹ.ಲ್ಲೆ ಮಾಡಿದಂತಹ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಂತಹ ನೆಟ್ಟಿಗರು ಒಂದು ಕಡೆ ಆ.ಕ್ರೋ.ಶ.ವನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತೊಂದು ಕಡೆ ನಮ್ಮ ಕನ್ನಡ ನೆಲವನ್ನು ಬಿಟ್ಟು ಬೇರೆ ರಾಜ್ಯಕ್ಕೆ ಹೋಗಿ ಹೆಸರು ಮಾಡುತ್ತೇನೆ ಎಂದು ಮೆರೆದರೆ ಇದೇ ಗತಿ ಆಗುತ್ತದೆ ಎಂದು ಚಂದನ್ ಕುಮಾರ್ ಅವರಿಗೂ ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಚಂದನ್ ಕುಮಾರ್ ಗೆ ಹೊರ ರಾಜ್ಯದಲ್ಲಿ ಆದ ಸ್ಥಿತಿಗೆ ನಿಮ್ಮ ಅಭಿಪ್ರಾಯವೇನು.?

https://youtu.be/q4BUHirgShE

Leave a Comment

WhatsApp Group Join Now
Telegram Group Join Now