ಕರ್ನಾಟಕದಲ್ಲಿ ತಾನೊಬ್ಬ ಆತ್ಮ ತಜ್ಞ, ಪುನರ್ಜನ್ಮ ತಜ್ಞ, ಸಮೋಹಿನಿ ತಜ್ಞ ಎಂದು ಹೆಸರುವಾಸಿ ಆಗಿರುವ ಬ್ರಹ್ಮಶ್ರೀ ರಾಮಚಂದ್ರ ಗುರೂಜಿ ಅವರು ಪುನೀತ್ ಅವರ ಜೊತೆ ಸಂವಾದ ನಡೆಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಅವರೇ ಹೇಳುವ ಮಾತುಗಳ ಪ್ರಕಾರ ಮನುಷ್ಯನಿಗೆ ಸಾ.ವು ಎನ್ನುವುದು ಬರುವುದಕ್ಕಿಂತ ಮುಂಚೆ ಮುನ್ಸೂಚನೆಯನ್ನು ಕೊಡುತ್ತದೆಯಂತೆ. ನಮ್ಮಲ್ಲಿ ಅನೇಕ ಹಿರಿಯರು ವಯಸ್ಸಾಗಿ ಸಾ.ಯು.ವ ಮುನ್ನ ಇಂತಹ ದಿನ ನಾನು ಸಾ.ಯು.ತ್ತೇ.ನೆ ಎಂದು ಹೇಳಿ ಆ ದಿನವೇ ಸತ್ತಿರುವ ಉದಾಹರಣೆಗಳನ್ನು ಕೇಳಿದ್ದೇವೆ ಅಥವಾ ಸಾಯುವ ದಿನಗಳಲ್ಲಿ ಬಹಳ ಹತ್ತಿರ ಇದ್ದವರಿಗೆ ಅವರಲ್ಲಿ ಇಹಲೋಕ ತ್ಯಜಿಸುವ ಲಕ್ಷಣಗಳು ಇದ್ದಿದ್ದು ನಮ್ಮ ಅರಿವಿಗೆ ಬರುತ್ತದೆ. ಆದರೆ ಎಲ್ಲರಿಗೂ ಕೂಡ ಇದರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಇದರ ಬಗ್ಗೆ ಜ್ಞಾನ ಇಟ್ಟು ಕೊಂಡಿದ್ದವರು ಖಂಡಿತ ಇದನ್ನೆಲ್ಲಾ ಗಮನಿಸಿ ತಿಳಿದುಕೊಂಡಿರುತ್ತಾರೆ.
ರಾಮಚಂದ್ರ ಗುರೂಜಿ ಅವರು ಹೇಳುವ ಪ್ರಕಾರ ಈ ರೀತಿ ನಮ್ಮ ದೇಹದೊಳಗೆ ನಮಗೆ ಸಾ.ವು ಬರುವ ಆರು ತಿಂಗಳ ಮುಂಚೆಯೇ ಸೂಕ್ಷ್ಮಪ್ರಜ್ಞೆಯಲ್ಲಿ ಅದು ದೇಹದಲ್ಲಿ ಸೇರಿರುತ್ತದೆಯಂತೆ. ಅದನ್ನು ಕೆಲವರು ಗುರುತಿಸಿಕೊಂಡು ಪರಿಹಾರ ಮಾಡಿಕೊಳ್ಳುತ್ತಾರಂತೆ ಅಥವಾ ಕೆಲವರು ಅದಕ್ಕೆ ಒಪ್ಪಿಕೊಂಡು ತಾವೇ ಇಹಲೋಕ ತ್ಯಜಿಸಲು ಸಿದ್ಧರಾಗುತ್ತಾರಂತೆ. ಟಿಬೇಟಿಯನ್ ಭಾಷೆಯಲ್ಲಿರುವ ಒಂದು ಫೇಮಸ್ ಬುಕ್ ಅದ ಬುಕ್ ಆಫ್ ಡೆತ್ ಎನ್ನುವ ಪುಸ್ತಕವು ಇಂತಹ ಹಲವು ಅಂಶಗಳನ್ನು ಸಾವಿನ ಬಗ್ಗೆ ಒಳಗೊಂಡಿದೆಯಂತೆ. ಆ ಪುಸ್ತಕದಲ್ಲಿ ಇರುವ ಪ್ರಕಾರ ಸಾವು ಎನ್ನುವುದು ಎಂದಿಗೂ ಅಕಾಲಿಕವಾಗಿ ಬರಲು ಸಾಧ್ಯವಿಲ್ಲ ಹೇಗೆ ಮನುಷ್ಯನಿಗೆ ಕೋಪ ಬರುವ ಮುಂಚೆ ಅಥವಾ ಸುನಾಮಿ ಬರುವ ಮುಂಚೆ ಅಥವಾ ಭೂಕಂಪ ಆಗುವ ಮುಂಚೆ ಮುನ್ಸೂಚನೆ ಸಿಕ್ಕಿರುತ್ತದೆಯೋ ಅದೇ ರೀತಿ ಸಾವಿಗೂ ಮುಂಚೆ ಮುನ್ಸೂಚನೆ ಸಿಕ್ಕಿರುತ್ತದೆ ಎಂದು ಹೇಳುತ್ತದೆ ಈ ಪುಸ್ತಕದಲ್ಲಿರುವ ವಿಷಯ.
ಹಾಗಾಗಿ ಪುನೀತ್ ಅವರಿಗೂ ಕೂಡ ಸಾವು ಬರೋದಕ್ಕೆ ಮುಂಚೆಯೇ ಈ ವಿಷಯ ಗಮನಕ್ಕೆ ಬಂದಿರಬಹುದು ಅಥವಾ ಅವರಿಗೆ ಇದು ಅರಿವಾಗದೇ ಇರಲು ಬಹುದು. ಅಕಸ್ಮಾತ್ ಅದು ಅವರಿಗೆ ಗೊತ್ತಿದ್ದರೂ ಕೂಡ ಅವರೇ ಇಹಲೋಕ ತ್ಯಜಿಸಲು ಒಪ್ಪಿಕೊಂಡಿರಬಹುದು ಎಂದು ರಾಮಚಂದ್ರ ಗುರೂಜಿ ಹೇಳುತ್ತಿದ್ದಾರೆ. ಮತ್ತು ಈ ರೀತಿಯ ಸೂಕ್ಷ್ಮಪ್ರಜ್ಞೆ ಸಾವಿನ ಬಗ್ಗೆ ಶರೀರದೊಳಗೆ ಸಿಕ್ಕಿದಾಗ ಅದನ್ನು ಗುರುತಿಸಿಕೊಂಡರೆ ಅಕಾಲಿಕ ಮರಣಕ್ಕೆ ತುತ್ತಾಗುವವರನ್ನು ಪಾರು ಮಾಡಬಹುದು ಎಂದು ಕೂಡ ಅವರು ಹೇಳುತ್ತಾರೆ. ಆದರೆ ನೂರು ವರ್ಷ ದಾಟಿದವರಲ್ಲಿ ಇದು ಸಾಧ್ಯವಾಗುವುದಿಲ್ಲ 40 ರ ಆಸು ಪಾಸಿನವರು ಇದನ್ನು ಗುರುತಿಸಿಕೊಂಡರೆ ಖಂಡಿತವಾಗಿ ಸಾ.ವಿ.ನ ದವಡೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುತ್ತಾ ಇದ್ದಾರೆ ಇವರು. ಅಲ್ಲದೆ ರಾಮಚಂದ್ರ ಗುರೂಜಿ ಅವರು ಪುನೀತ್ ಅವರ ಆತ್ಮದೊಂದಿಗೆ ಸಂವಾದ ನಡೆಸಿದ್ದಾಗಿ ಕೂಡ ಹೇಳಿಕೊಳ್ಳುತ್ತಿದ್ದಾರೆ.
ನಾನು ಈವರೆಗೆ ಎಲ್ಲೂ ಕೂಡ ಈ ವಿಷಯವನ್ನು ಬಹಿರಂಗಪಡಿಸಲಿಲ್ಲ ಯಾಕೆಂದರೆ ನಾನು ಈ ವಿಷಯ ಆಚೆ ಹೇಳಿದರೆ ಅದು ಎಂತಹ ಕಾಂಟ್ರವರ್ಸಿ ಸೃಷ್ಟಿ ಮಾಡುತ್ತದೆ ಎನ್ನುವುದರ ಅರಿವು ನನಗಿದೆ. ಆದರೆ ನಾನು ನನ್ನ ಆತ್ಮ ತೃಪ್ತಿಗಾಗಿ ಪುನೀತ್ ಅವರ ಆತ್ಮದ ಜೊತೆ ಮಾತನಾಡಿದೆ. ನಾನು ಎಲ್ಲೇ ಹೋದರು ಕೂಡ ಅಭಿಮಾನಿಗಳು ಸೇರಿದಂತೆ ಎಲ್ಲಾ ಜನರು ಕೇಳುವ ಮೊದಲ ಪ್ರಶ್ನೆ ಪುನೀತ್ ಅವರು ಮತ್ತೆ ನಮ್ಮ ಕರ್ನಾಟಕದಲ್ಲಿ ಹುಟ್ಟುತ್ತಾರಾ? ಪುನೀತ್ ಅವರು ಮತ್ತೆ ರಾಜವಂಶದಲ್ಲಿಯೇ ಹುಟ್ಟುತ್ತಾರ ಎಂದು ಈ ಬಗ್ಗೆ ನಾನು ಪುನೀತ್ ಅವರಲ್ಲೇ ಪ್ರಶ್ನೆ ಕೇಳಿದಾಗ ನಾನು ಈಗ ತುಂಬಾ ಬೆಳಕಿನ ಪ್ರದೇಶ ಒಂದರಲ್ಲಿ ಇದ್ದೇನೆ ನಾನು ಮತ್ತೆ ಹುಟ್ಟಬೇಕಾ ಅಥವಾ ಇಲ್ಲಿಂದ ನಾನು ಬೇರೆ ಕಡೆ ಹೋಗಬೇಕಾ ಎಂದು ತಿಳಿಯುತ್ತಿಲ್ಲ. ಸದ್ಯಕ್ಕೆ ನಾನು ನಮ್ಮ ಅಪ್ಪ ಅಮ್ಮನ ಹುಡುಕಾಟದಲ್ಲಿ ಇದ್ದೇನೆ ಎಂದು ಹೇಳಿಕೊಂಡಿದ್ದಾರಂತೆ.
ಜೊತೆಗೆ ನಾನು ಅಪ್ಪು ಅವರ ಜೊತೆ ಇನ್ನೂ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ ಆದರೆ ಸಮಯ ಬಂದಾಗ ಅದನ್ನೆಲ್ಲ ಬಹಿರಂಗ ಪಡಿಸುತ್ತೇನೆ ಎಂದು ಗುರೂಜಿ ಅವರು ಹೇಳಿಕೊಂಡಿದ್ದಾರೆ. 21ನೇ ಶತಮಾನದಲ್ಲೂ ಕೂಡ ಈ ರೀತಿ ಆತ್ಮಗಳ ಜೊತೆ ಮಾತನಾಡುವುದು ಸಾಧ್ಯವಾ ಎಂದು ಹಲವು ಜನ ಅನುಮಾನ ಪಟ್ಟನೆ ಭಾರತ ದೇಶದಲ್ಲಿ ಮಾತ್ರವಲ್ಲದೆ ಹಲವು ದೇಶಗಳಲ್ಲಿ ಈ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಈ ಹಿಂದೆ ಅಮೇರಿಕಾದ ತಂತ್ರಜ್ಞರೊಬ್ಬರು ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮದ ಜೊತೆ ಮಾತನಾಡಿದ್ದಾಗಿ ಜೊತೆಗೆ ಅದರ ರೆಕಾರ್ಡಿಂಗ್ಸ್ ಕೂಡ ಶೇರ್ ಮಾಡಿ ಸುದ್ದಿ ಆಗಿದ್ದರು. ರಾಮಚಂದ್ರ ಗುರೂಜಿ ಅವರು ಹೇಳಿರುವ ಈ ಮಾತುಗಳ ಮೇಲೆ ಕೆಲವರಿಗೆ ನಂಬಿಕೆ ಇದ್ದರೆ ಇದನ್ನು ಪ್ರಶ್ನಿಸುವ ಹಲವರು ಇದ್ದಾರೆ. ರಾಮಚಂದ್ರ ಗುರೂಜಿ ಹೇಳಿದ್ದು ನಿಜಾನಾ ಅಥವಾ ಸುಳ್ಳ ಎಂಬುದು ಸಾಕಷ್ಟು ಅಭಿಮಾನಿಗಳಲ್ಲಿ ಗೊಂದಲವನ್ನು ಉಂಟುಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.