ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ನಿವೇದಿತಾ ಗೌಡ ಅವರು ಪ್ರತಿನಿತ್ಯ ಕೂಡ ಯಾವುದಾದರೂ ಒಂದಲ್ಲ ಒಂದು ಸುದ್ದಿಗೆ ಸದ್ದು ಮಾಡುತ್ತಲೇ ಇರುತ್ತಾರೆ. ಅದರಲ್ಲಿಯೂ ಕೂಡ ತಮ್ಮ instagram ಖಾತೆಯಲ್ಲಿ ಹಲವಾರು ಫೋಟೋಸ್ ಮತ್ತು ವೀಡಿಯೋಸ್ಗಳನ್ನು ಅಪ್ಲೋಡ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಇನ್ನು ನಿವೇದಿತಾ ಗೌಡ ಅವರು ತಮ್ಮದೇ ಆದಂತಹ ಯುಟ್ಯೂಬ್ ಚಾನೆಲ್ ಒಂದನ್ನು ಕೂಡ ಹೊಂದಿದ್ದರೆ ಈ ಒಂದು youtube ಚಾನಲ್ನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಪಯುಕ್ತವಾಗುವಂತಹ ಹಲವಾರು ಸೌಂದರ್ಯ ಟಿಪ್ಸ್ ಹಾಗೂ ಅಡಿಗೆಗೆ ಸಂಬಂಧಪಟ್ಟಂತಹ ಟಿಪ್ಸ್ ಮೊದಲಾಗಿ ಡಯಟ್ ಮತ್ತು ತಮ್ಮ ಬಾಡಿ ಫಿಟ್ನೆಸ್ ಅನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ.
ಇನ್ನು ನಿವೇದಿತಾ ಗೌಡ ಅವರ ಪತಿ ಚಂದನ್ ಶೆಟ್ಟಿ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಹೌದು. ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ನಲ್ಲಿ ಫೇಮಸ್ ಡೈರೆಕ್ಟರ್ ಎಂಬ ಸ್ಥಾನವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ಮೊದಲು ರಾಪರ್ ಆಗಿದ್ದರು ಆದರೆ ಇವರು ಸದ್ಯಕ್ಕೆ ಮೆಲೋಡಿ ಸಾಂಗ್ ಗಳನ್ನು ಕೂಡ ಕಂಪೋಸ್ ಮಾಡುವುದರ ಮೂಲಕ ಹೆಚ್ಚಿನ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರ ಎಲ್ಲ ವಿಚಾರದಲ್ಲಿಯೂ ಕೂಡ ಸಪೋರ್ಟಿವ್ ಆಗಿ ನಿಲ್ಲುತ್ತಾರೆ. ಹೌದು ಕಿರುತೆರೆಗೆ ಸಂಬಂಧಪಟ್ಟಂತಹ ವಿಚಾರ ಆಗಿರಲಿ ಅಥವಾ ಯೂಟ್ಯೂಬ್ ವಾಹಿನಿಗೆ ಆಗಿರಲಿ ಅಥವಾ ತಮ್ಮ ನಿಜ ಜೀವನದಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ನಿವೇದಿತ ಗೌಡ ಅವರನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ.
ಪ್ರೀತಿಸಿ ಮದುವೆಯಾಗಿದಕ್ಕೂ ಕೂಡ ಸಾರ್ಥಕ ಅಂತಾನೆ ಹೇಳಬಹುದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮದುವೆಯಾಗಿ ಇನ್ನೇನು ಎರಡು ವರ್ಷಗಳ ಕಳೆಯುತ್ತಾ ಬಂತು ಆದರೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಕೂಡ ಇವರಿಬ್ಬರು ಎಲ್ಲಿಯೂ ಮಾಡಿಕೊಂಡಿಲ್ಲ ತುಂಬಾ ಅನ್ಯೋನ್ಯಯುತವಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಜೋಡಿಯನ್ನು ನೋಡುತ್ತಿದ್ದ ಹಾಗೆ ಸಾಕಷ್ಟ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನೂರು ಕಾಲವಾದರೂ ಈ ಜೋಡಿ ಸದಾ ಕಾಲ ಹೀಗೆ ಇರಲಿ ಎಂದು ಶುಭವನ್ನು ಹಾರೈಸಿದ್ದಾರೆ. ಇವೆಲ್ಲ ಒಂದು ಕಡೆಯಾದರೆ ಇದೀಗ ಚಂದನ್ ಶೆಟ್ಟಿಗೆ ನಿವೇದಿತಾ ಗೌಡ ಅವರು ಎರಬಿರ್ರಿ ಬೈದಿರುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ.
ಅಷ್ಟಕ್ಕೂ ನಿವೇದಿತಾ ಗೌಡ ಅವರು ತಮ್ಮ ಪತಿ ಚಂದನ್ ಶೆಟ್ಟಿ ಗೆ ಯಾಕೆ ಹೀಗೆ ಬೈದರು ಎಂಬುದನ್ನು ನೋಡುವುದಾದರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ತಮ್ಮ ಬಿಡುವಿನ ಸಮಯದಲ್ಲಿ ಇನ್ಸ್ಟಾಗ್ರಾಮ್ ವಿಡಿಯೋ ಮಾಡುವುದರ ಮೂಲಕ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಅದೇ ರೀತಿಯಾಗಿ ಹೊಸದೊಂದು ಕಾನ್ಸೆಪ್ಟ್ ಇಟ್ಟುಕೊಂಡು ಒಂದು ವಿಡಿಯೋ ಮಾಡಿದ್ದರೆ ಈ ವಿಡಿಯೋ ಕಾನ್ಸೆಪ್ಟ್ ಏನೆಂದರೆ ಹೆಂಡತಿ ಬೇಸರದಲ್ಲಿ ಇದ್ದಾಗ ಗಂಡ ಎಷ್ಟೇ ಟೆನ್ಶನ್ ನಲ್ಲಿ ಇದ್ದರೂ ಅಥವಾ ಆತನಿಗೆ ಎಷ್ಟೇ ನೋವು ಇದ್ದರೂ ಕೂಡ ಹೆಂಡತಿಯನ್ನು ಸಮಾಧಾನ ಪಡಿಸುವುದಕ್ಕೆ ನೋಡುತ್ತಾನೆ. ಅದೇ ರೀತಿ ಗಂಡ ಏನಾದರೂ ಸ್ವಲ್ಪ ಬೇಜಾರಲ್ಲಿ ಇದ್ದರೂ ಹೆಂಡತಿಯ ಬಳಿ ಹೋದಾಗ ಆಕೆ ಆತನಿಗೆ ಸಾಂತ್ವನ ಮಾಡುವುದಿಲ್ಲ ಬದಲಾಗಿ ತನ್ನದೇ ಆದ ಲೋಕದಲ್ಲಿ ಮುಳುಗಿ ಹೋಗಿರುತ್ತಾಳೆ.
ಬಾಯಿಗೆ ಬಂದ ಹಾಗೆ ಬೈದು ಕಳಿಸುತ್ತಾಳೆ ಎಂಬ ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ವಿಡಿಯೋ ಒಂದನ್ನು ಮಾಡಿದ್ದಾರೆ. ಸಾಕಷ್ಟು ದಂಪತಿಗಳ ಬದುಕಿನಲ್ಲಿ ಈ ವಿಡಿಯೋ ನಿಜವೇ ಆಗಿದೆ ಹಾಗಾಗಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಮಾಡಿದಂತಹ ಈ ವಿಡಿಯೋ ಮೆಚ್ಚುಗೆಯನ್ನು ಪಡೆದುಕೊಂಡು ನೆಟ್ಟಿಗರಿಂದ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದೆ. ಈ ವಿಡಿಯೋ ನೋಡಿದರೆ ನಿಜ ಜೀವನದ ವಾಸ್ತವ ಅರ್ಥ ಆಗುತ್ತದೆ ಅಷ್ಟೇ ಅಲ್ಲದೆ ಅರ್ಥಪೂರ್ಣವಾಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.