ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಅಡುಗೆ ಮನೆಗೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಗಳನ್ನು ನಾವು ಈಗಾಗಲೇ ತಿಳಿಸಿದ್ದೇವೆ. ಇನ್ನೂ ಕೆಲವೊಂದಷ್ಟು ಯಾವ ಟಿಪ್ಸ್ ಗಳನ್ನು ಅನುಸರಿಸಬಹುದು ಹಾಗೂ ಅದು ಹೇಗೆ ನಿಮ್ಮ ಕೆಲಸಕ್ಕೆ ಅನುಕೂಲವಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.
ಅಡುಗೆ ಮನೆಯಲ್ಲಿ ಪ್ರತಿಯೊಂದು ಕೆಲಸವನ್ನು ಕೂಡ ಇಂತಿಷ್ಟು ಸಮಯದವರೆಗೆ ಮುಗಿಸುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಹೌದು ಒಂದೊಂದು ಕೆಲಸಕ್ಕೆ ಕಡಿಮೆ ಸಮಯ ಹಾಗೂ ಒಂದೊಂದು ಕೆಲಸಕ್ಕೆ ಹೆಚ್ಚು ಸಮಯದ ಅವಶ್ಯಕತೆ ಇರುತ್ತದೆ.
ಆದ್ದರಿಂದ ಅದನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಅದನ್ನು ಹೇಗೆ ಸುಲಭವಾಗಿ ಹೆಚ್ಚು ಶ್ರಮ ಇಲ್ಲದೆ ಮಾಡಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಕೆಲವೊಂದು ಟ್ರಿಕ್ಸ್ ಅನುಸರಿಸುವುದರಿಂದ ಕೆಲವೊಂದು ಕೆಲಸವನ್ನು ಬೇಗನೆ ಮಾಡಿ ಮುಗಿಸಬಹುದು.
* ಬದನೆಕಾಯಿಯನ್ನು ಹುರಿಯುವಾಗ ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಉರಿಯುವುದರಿಂದ ಅದರ ಸಿಪ್ಪೆ ಬೇಗ ಸರಳದಿಂದ ತೆಗೆಯಬಹುದು.
* ಆಲೂಗಡ್ಡೆ ಸಿಹಿ ಎನಿಸಿದರೆ ಅವುಗಳನ್ನು ಕೊಯ್ದು ಸ್ವಲ್ಪ ಹೊತ್ತು ಉಪ್ಪಿನ ನೀರಿನಲ್ಲಿ ಇಟ್ಟರೆ ಸಿಹಿತನ ಎಲ್ಲ ಹೋಗಿಬಿಡುತ್ತದೆ.
* ಸಲಾಡ್ ಮಾಡುವಾಗ ಈರುಳ್ಳಿಯನ್ನು ಕೊಯ್ದು ಐದು ನಿಮಿಷ ನೀರಿ ನಲ್ಲಿ ಇಟ್ಟರೆ ಅದರ ಖಾರ ಕಡಿಮೆ ಆಗುತ್ತೆ.
* ಫ್ರಿಡ್ಜ್ ನಲ್ಲಿ ಅರ್ಧ ನಿಂಬೆ ಹಣ್ಣನ್ನು ಕೊಯ್ದು ಇಡುವುದರಿಂದ ದುರ್ವಾ ಸನೆ ದೂರವಾಗುತ್ತದೆ.
* ನಿಂಬೆಹಣ್ಣು ಒಣಗಿ ಹೋಗಿದ್ದರೆ ಅದನ್ನು 1 ಗಂಟೆ ನೀರಿನಲ್ಲಿ ನೆನೆಯ ಲು ಬಿಡಿ ಆಮೇಲೆ ಕಟ್ ಮಾಡಿದರೆ ರಸ ಸರಳವಾಗಿ ಹಿಂಡಬಹುದು.
* ಹಸಿಮೆಣಸಿನಕಾಯಿಯನ್ನು ಅಧಿಕ ಸಮಯದವರೆಗೆ ಫ್ರೆಶ್ ಆಗಿಡಲು ಅದರ ಮೇಲಿನ ಭಾಗವನ್ನು ಮುರಿದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿಡಿ.
* ಕಾಳನ್ನು ಹುರಿದಿಡುವುದರಿಂದ ಅದಕ್ಕೆ ಹುಳಗಳು ಬೀಳುವು ದಿಲ್ಲ.
* ಸಕ್ಕರೆಗೆ ಇರುವೆ ಬರುತ್ತಿದ್ದರೆ 2 ರಿಂದ 3 ಲವಂಗವನ್ನು ಸಕ್ಕರೆ ಡಬ್ಬಿ ಯಲ್ಲಿ ಹಾಕಿಡುವುದರಿಂದ ಇರುವೆಗಳ ಕಾಟ ಇರುವುದಿಲ್ಲ.
* ಚಪಾತಿ ಮೃದುವಾಗಿ ಆಗಿ ಚೆನ್ನಾಗಿ ಉಬ್ಬಿಕೊಂಡು ಬರಬೇಕೆಂದರೆ ಹಿಟ್ಟನ್ನು ಕಲಸುವಾಗ ಒಂದು ಚಮಚ ಅಡುಗೆ ಎಣ್ಣೆ ಅಥವಾ ತುಪ್ಪ ಬಳಸಬಹುದು. ಉಗುರು ಬಿಸಿ ನೀರನ್ನು ಬಳಸಿ ಚಪಾತಿಯ ಹಿಟ್ಟನ್ನು ಕಲಸುವುದರಿಂದ ಚಪಾತಿ ಉಬ್ಬಿಕೊಂಡು ಮೃದುವಾಗಿ ಬರುತ್ತದೆ.
* ಈರುಳ್ಳಿಯನ್ನು ಕಟ್ ಮಾಡುವಾಗ ಕಣ್ಣಲ್ಲಿ ನೀರು ಬರಬಾರದು ಎಂದರೆ ಈರುಳ್ಳಿ ಸಿಪ್ಪೆಯನ್ನು ತಲೆಯ ಮೇಲೆ ಇಟ್ಟುಕೊಂಡು ಈರುಳ್ಳಿ ಕತ್ತರಿಸಿದರೆ ಯಾವುದೇ ಕಾರಣಕ್ಕೂ ಕಣ್ಣಿನಲ್ಲಿ ನೀರು ಬರುವುದಿಲ್ಲ. ಹೀಗೆ ಮೇಲೆ ಹೇಳಿದ ಎಷ್ಟು ಟಿಪ್ಸ್ ಗಳು ನಿಮ್ಮ ಅಡುಗೆ ಮನೆಯ ವಿಚಾರವಾಗಿ ಸಂಬಂಧಿಸಿದ ಟಿಪ್ಸ್ ಗಳಾಗಿದ್ದು.
ಇದನ್ನು ಅನುಸರಿಸುವು ದರಿಂದ ಮೇಲೆ ಹೇಳಿದ ಎಲ್ಲಾ ಕೆಲಸದಲ್ಲಿಯೂ ಕೂಡ ಕೆಲವೊಂದಷ್ಟು ಪರಿಹಾರವನ್ನು ಕಂಡುಕೊಳ್ಳಬಹುದು ಎಂದೇ ಹೇಳಬಹುದು. ಕೆಲ ವೊಂದಷ್ಟು ಮಹಿಳೆಯರಿಗೆ ಈ ವಿಚಾರಗಳು ತಿಳಿದಿರುವುದಿಲ್ಲ ಆದ್ದ ರಿಂದ ಅಂತವರು ಇದನ್ನೆಲ್ಲ ತಿಳಿದುಕೊಂಡು ನಿಮ್ಮ ಅಡುಗೆ ಮನೆಯಲ್ಲಿ ಇಂತಹ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.
ಈ ರೀತಿ ಅನುಸರಿಸುವುದರಿಂದ ಅಡುಗೆ ಮನೆಯಲ್ಲಿ ಉಂಟಾಗುವ ಕೆಲ ವೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದೇ ಹೇಳ ಬಹುದು. ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರು ಕೆಲಸ ಮುಗಿದರೆ ಸಾಕು ಎಂದು ಗಡಿಬಿಡಿಯಲ್ಲಿ ಕೆಲಸ ಮಾಡಿ ಹೋಗುತ್ತಾರೆ ಆದರೆ ಅವರು ಕೆಲಸ ಮುಗಿಸಿ ಬರುವ ತನಕ ಅಲ್ಲಿ ಕೆಲವೊಂದಷ್ಟು ಸಮಸ್ಯೆಗಳು ಉಂಟಾಗಿರುತ್ತದೆ. ಆದ್ದರಿಂದ ಸಮಯ ಇರುವಾಗ ಈ ನಿಯಮಗಳನ್ನು ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಕೂಡ ಆಗುವುದಿಲ್ಲ.