ಬಟ್ಟೆ ಒಗೆಯುವುದು ಬಹಳ ದೊಡ್ಡ ಕಷ್ಟ. ಏಕೆಂದರೆ ಇದಕ್ಕೆ ಹೆಚ್ಚಿನ ಶ್ರಮ ಬೇಕು, ಸಮಯ ಕೂಡ ಬೇಕು ಹಾಗೂ ಮಾನ್ಯುಯಲ್ ಆಗಿ ಬಟ್ಟೆ ವಾಶ್ ಮಾಡುವುದರಿಂದ ನೀರು ಕೂಡ ಹೆಚ್ಚಿಗೆ ವ್ಯರ್ಥವಾಗುತ್ತದೆ. ಹಾಗಾಗಿ ಇದನ್ನೆಲ್ಲ ಮ್ಯಾನೇಜ್ ಮಾಡುವ ಸಲುವಾಗಿ ವಾಷಿಂಗ್ ಮಿಷನ್ ಮೊರೆ ಹೋಗುತ್ತಾರೆ.
ಅದರಲ್ಲೂ ದುಡಿಯುವ ಮಹಿಳೆಯರ ಮನೆಯಲ್ಲಂತೂ ವಾಷಿಂಗ್ ಮಿಷನ್ ಇದ್ದೇ ಇರುತ್ತದೆ ಇದು ಆಕೆ ಅಸಿಸ್ಟೆಂಟ್ ಆಗಿ ಅವಳ ಕೆಲಸವನ್ನು ಕಡಿಮೆ ಮಾಡುತ್ತದೆ. ವಾಷಿಂಗ್ ಮಿಷನ್ ನಲ್ಲಿ ಸಹ ಅನೇಕ ಕಂಪನಿಯ ಪ್ರಾಡಕ್ಟ್ ಗಳು ಇದ್ದು ಒಂದೊಂದು ಒಂದೊಂದು ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ.
ಹತ್ತು ಹಲವು ವಿಧದ ಇವುಗಳಲ್ಲಿ ತಮ್ಮ ಬಜೆಟ್ ಗೆ ಹಾಗೂ ಕ್ವಾಲಿಟಿಯಲ್ಲಿ ಯಾವುದು ತಮಗೆ ಸೂಕ್ತ ಅದನ್ನು ಆರಿಸಿಕೊಂಡು ಮನೆಗೆ ತರುತ್ತಾರೆ. ಆದರೆ ಇದಾದ ಮೇಲೆ ಕೂಡ ಸಮಸ್ಯೆಗಳು ತಪ್ಪುವುದಿಲ್ಲ ಯಾಕೆಂದರೆ ವಾಷಿಂಗ್ ಮಿಷನ್ ಗೆ ಹಾಕಿದ ಬಟ್ಟೆ ಕೊಳೆ ಹೋಗುವುದಿಲ್ಲ, ಬಿಳಿ ಮಾರ್ಕ್ ಉಳಿಯುತ್ತದೆ.
ಒಂದು ಬಣ್ಣ ಹೋಗುವ ಬಟ್ಟೆಯ ಕಲರ್ ಉಳಿದ ಬಟ್ಟೆಗಳಿಗೂ ಸ್ಪ್ರೆಡ್ ಆಗುತ್ತದೆ, ವಾಷಿಂಗ್ ಮಿಷನ್ ವಾಸನೆ ಬರುತ್ತದೆ ಇನ್ನು ಇತ್ಯಾದಿ ಕಂಪ್ಲೇಂಟ್ ಗಳು ಇದ್ದೇ ಇವೆ. ಹಾಗಾಗಿ ಎಲ್ಲಾ ಗೃಹಿಣಿಯರಿಗೂ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ವಾಷಿಂಗ್ ಮಿಷನ್ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿಸುತ್ತಿದ್ದೇವೆ ಇವುಗಳನ್ನು ಪಾಲಿಸಿ ನೋಡಿ.
● ನಿಮ್ಮ ವಾಷಿಂಗ್ ಮಿಷನ್ ಗಳಿಗೆ ಲಿಕ್ವಿಡ್ ಜಲ್ ಬಳಸುವುದು ತುಂಬಾ ಒಳ್ಳೆಯದು. ನೀವು ಡಿಟರ್ಜೆಂಟ್ ಪೌಡರ್ ಬಳಸುತ್ತಿದ್ದರೆ ಅದು ಸರಿಯಾಗಿ ಬಟ್ಟೆಗಳ ಮಧ್ಯ ಸ್ಪ್ರೆಡ್ ಆಗದೆ ಹೋದಾಗ ಬಿಳಿ ಮಾರ್ಕ್ ಗಳು ಉಳಿದುಕೊಳ್ಳುತ್ತದೆ. ಒಂದು ವೇಳೆ ಅನಿವಾರ್ಯ ಕಾರಣದಿಂದ ಬಳಸಬೇಕಾದರೆ ಮೊದಲು ಅದನ್ನು ನೀರಿಗೆ ಹಾಕಿ ನಂತರ ಮಿಷನ್ ಗೆ ಹಾಕಿ ಆಗ ಚೆನ್ನಾಗಿ ಸ್ಪ್ರೆಡ್ ಆಗುತ್ತದೆ.
● ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ, ನೀವು ಮೊದಲು ಪೌಡರ್ ಹಾಕಿ ಮಿಷನ್ ಆನ್ ಮಾಡಬೇಡಿ ಅದರ ಮೊದಲು ಪ್ರೋಗ್ರಾಂ ಸೆಲೆಕ್ಟ್ ಮಾಡಿ ಸ್ಟಾರ್ಟ್ ಮಾಡಿ ನೀರು ಬರಲು ಆರಂಭವಾದ ಮೇಲೆ ಲಿಕ್ವಿಡ್ ಹಾಕಿ ಆಗ ಬಹಳ ಚೆನ್ನಾಗಿ ಸ್ಪ್ರೆಡ್ ಆಗುತ್ತದೆ.
● ಒಂದು ಬಟ್ಟೆಯ ಬಣ್ಣ ಮತ್ತೊಂದು ಬಟ್ಟೆಗೆ ಹೋಗಬಾರದು ಎಂದರೆ ನೀವು ಹೊಸ ಬಟ್ಟೆ ಹಾಡಿದಾಗ ಮಾತ್ರ ಈ ರೀತಿ ಸಮಸ್ಯೆ ಆಗುತ್ತದೆ. ಹಾಗಾಗಿ ಹೊಸದಾಗಿ ತಂದ ಬಟ್ಟೆಯನ್ನು ಮೊದಲಿಗೆ ಒಂದು ಬಾರಿ ಕೈಯಲ್ಲಿ ವಾಷ್ ಮಾಡಿ ನೋಡಿ ಆಗ ಬಣ್ಣ ಹೋಗಿಲ್ಲ ಎಂದರೆ ಮುಂದಿನ ಸಾರಿ ಮಿಷನ್ ಗೆ ಹಾಕಬಹುದು.
● ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆಗಳನ್ನು ತೊಳೆದ ನಂತರ ವಾಸನೆ ಬರುತ್ತದೆ ಆಗ ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಸಮಯ ಬೇಕಾಗಬಹುದು. ಇದನ್ನು ಸರಿಪಡಿಸಲು ನೀವು ವಾಷಿಂಗ್ ಮಿಷಿನ್ ಕ್ಲೀನರ್ ಗಳನ್ನು ಬಳಸಿ.
● ಜೀನ್ಸ್ ಗಳನ್ನು ವಾಶ್ ಮಾಡುವಾಗ ಅದನ್ನು ಉಲ್ಟಾ ಮಾಡಿ ವಾಶ್ ಮಾಡಿ ಮತ್ತು ಆ ಸಮಯದಲ್ಲಿ ನೀವು ಬಳಕೆ ಮಾಡುವ ಡಿಟರ್ಜೆಂಟ್ ಕೂಡ ಅದು ಕ್ಲೀನ್ ಆಗುವುದಕ್ಕೆ ಮುಖ್ಯವಾಗುತ್ತದೆ. ಮತ್ತು ನಿಮ್ಮ ಜೀನ್ಸ್ ಗಳು ಚೆನ್ನಾಗಿ ಕ್ಲೀನ್ ಆಗಬೇಕು ಎಂದರೆ ವಾಶ್ ಮಾಡುವ ಮುನ್ನವೇ ಅದನ್ನು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ನೆನೆಸಿ ನಂತರ ವಾಷಿಂಗ್ ಮಿಷನ್ ಗೆ ಹಾಕಿ.
● ಹೊಸದಾಗಿ ತೊಳೆದ ಕ್ರೀಡಾ ಉಡುಪುಗಳು ಕೆಲವು ಗಂಟೆಗಳ ನಂತರ ವಾಸನೆ ಬರುತ್ತವೆ. ಅದು ಕ್ಲೀನ್ ಆಗಿದ್ದೀಯೋ ಇಲ್ಲವೋ ಎನ್ನುವ ಅನುಮಾನ ಬರುತ್ತದೆ. ನೀವು ಆಂಟಿ ಬ್ಯಾಕ್ಟೀರಿಯಲ್ ಡಿಟರ್ಜೆಂಟ್ ಗಳನ್ನು ಬಳಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ.