Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ...

ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್

ಕನ್ನಡ ಚಲನಚಿತ್ರರಂಗಕ್ಕೆ ಯಾರ ಕೆ.ಟ್ಟ ದೃಷ್ಟಿ ಬಿದ್ದಿದ್ದೀಯೋ ಏನೋ ಕಳೆದ ಎರಡು ವರ್ಷದಿಂದ ಹಲವಾರು ಪ್ರತಿಭಾವಂತ ನಟರು ಹಾಗೂ ಸಹೃದಯಿ ಜೀವಿಗಳನ್ನು ಸಿನಿಮಾರಂಗವು ಕಳೆದುಕೊಳ್ಳುತ್ತಿದೆ. ಇದು ಕೇವಲ ಚಲನಚಿತ್ರರಂಗಕ್ಕೆ ಮಾತ್ರ ಆದ ನ.ಷ್ಟ.ವಂತು ಖಂಡಿತ ಅಲ್ಲ, ಇದು ಇಡೀ ಕರ್ನಾಟಕಕ್ಕೆ ಆದ ಅನ್ಯಾಯ ಎಂದು ಹೇಳಬಹುದು. ಚಿರಂಜೀವಿ ಸರ್ಜಾ ಸಂಚಾರಿ ವಿಜಯ್ ಇತ್ತೀಚಿಗೆ ಪುನೀತ್ ರಾಜಕುಮಾರ್ ಎಸ್ ಪಿ ಬಾಲಸುಬ್ರಮಣ್ಯಂ ಜಯಂತಿ ರಾಮು ಸತ್ಯಜಿತ್ ಶಿವರಾಮ್ ಅವರು ಹೀಗೆ ಹಲವಾರು ಕಣ್ಮಣಿಗಳನ್ನು ನಾವು ಕಳೆದುಕೊಂಡಿದ್ದೇವೆ. ಅದರಲ್ಲೂ ಅಕಾಲಿಕ ಮ.ರ.ಣ.ಕ್ಕೆ ತುತ್ತಾಗಿರುವ ಚಿರಂಜೀವಿ ಸರ್ಜಾ ಸಂಚಾರಿ ವಿಜಯ್ ಮತ್ತು ಪುನೀತ್ ರಾಜಕುಮಾರ್ ಅವರನ್ನು ನೆನೆದರೆ ಎಲ್ಲರ ಕರುಳು ಕೂಡ ಕಿತ್ತು ಬರುತ್ತದೆ. ದೇವರು ನಿಜಕ್ಕೂ ಕ್ರೂರಿ ಎಂದು ಅಭಿಮಾನಿಗಳು ಆ ವಿಧಿಗೆ ಶಾಪ ಹಾಕುತ್ತಿದ್ದಾರೆ.

ಯಾಕೆಂದರೆ ಚಿರಂಜೀವಿ ಸರ್ಜಾ ಅವರು ಮ.ರ.ಣ ಹೊಂದಿದಾಗ ಅವರ ವಯಸ್ಸು ಕೇವಲ 35 ಅಷ್ಟೇ. ಹತ್ತು ವರ್ಷಗಳ ಪ್ರೀತಿಯ ನಂತರ ವಿವಾಹ ಜೀವನಕ್ಕೆ ಕಾಲಿಟ್ಟಿದ ಮೇಘನಾ ರಾಜ್ ಹಾಗೂ ಚಿರಂಜೀವಿ ಅವರ ಮುದ್ದಾದ ಜೋಡಿ ಇಡೀ ಕರ್ನಾಟಕದಾದ್ಯಂತ ಫೇಮಸ್ ಆಗಿತ್ತು. ಸ್ಯಾಂಡಲ್ ವುಡ್ನ ಮೋಸ್ಟ್ ಕ್ಯೂಟೆಸ್ಟ್ ಕಪಲ್ ಗಳಾಗಿ ಹೆಸರುವಾಸಿಯಾಗಿದ್ದ ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮೇಘನ ಅವರು ಚಿರು ಅವರ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದರು. ಆದರೆ ತನ್ನ ಕರುಳ ಕುಡಿ ಕಣ್ಣು ಬಿಡುವ ಮುನ್ನ ಆ ಕೂಸನ್ನು ನೋಡಿ ಕಣ್ತುಂಬಿಕೊಳ್ಳುವ ಮುನ್ನವೇ ಅಂದರೆ ಮೇಘನಾ ರಾಜ್ ಅವರು ಐದು ತಿಂಗಳ ಗರ್ಭಿಣಿ ಆಗಿರುವಾಗಲೇ ಚಿರಂಜೀವಿ ಸರ್ಜಾ ಅವರು ವಿಧಿಯಾಟಕ್ಕೆ ಬಲಿಯಾಗಿ ಹೋಗಿದ್ದಾರೆ. ಈ ವಿಷಯವನ್ನು ಕೇಳಿ ಇಡೀ ಕರ್ನಾಟಕವೇ ಮೇಘನಾ ರಾಜ್ ಅವರ ಮೇಲೆ ಕರುಣೆ ತೋರಿತ್ತು.

ನಗು ಮುಖದ ಚಿರು ಮುಂದೆಂದೂ ಮನಸ್ಪೂರ್ತಿ ನಗಲಾದಷ್ಟು ನೋವನ್ನು ಕುಟುಂಬಕ್ಕೆ ತುಂಬಿ ಕಾಣದ ಲೋಕಕ್ಕೆ ಮರೆಯಾಗಿ ಹೋದರು. ಚಿರಂಜೀವಿ ಸರ್ಜಾ ಅವರನ್ನು ಅವರ ತಮ್ಮ ಧ್ರುವ ಸರ್ಜಾ ಕೂಡ ಅಷ್ಟೇ ಪ್ರೀತಿಸುತ್ತಿದ್ದರು ಚಿಕ್ಕ ವಯಸ್ಸಿನಿಂದಲೂ ಅಣ್ಣನ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಇವರಿಬ್ಬರ ಬಾಂಧವ್ಯ ನೋಡಿ ಇಡೀ ಕರ್ನಾಟಕವೇ ಕೊಂಡಾಡಿತ್ತು. ಆದರೆ ಇಂದು ಧ್ರುವ ಸರ್ಜಾ ಅವರ ಮುಖದಲ್ಲಿ ಅವರ ಅಣ್ಣ ಇಲ್ಲದ ದುಃಖ ಎದ್ದು ಕಾಣುತ್ತಿದೆ. ಹಾಗೂ ಪತ್ನಿ ಮೇಘನಾ ರಾಜ್ ಅವರ ಸಂ.ಕ.ಟ.ವ.ನ್ನಂತು ಹೇಳತೀರದು. ಚಿರು ಪುತ್ರನಾದ ರಾಯನ್ ಸರ್ಜಾ ಅವರಿಗೆ ತಂದೆ ತಾಯಿ ಎಲ್ಲವೂ ಕೂಡ ಆಗಿ ಮೇಘನಾ ಅವರೇ ನೋಡಿಕೊಳ್ಳುತ್ತಿದ್ದಾರೆ. ಮಗನ ಎಲ್ಲ ಮೂಮೆಂಟ್ಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ಮೇಘನಾ ಅವರು.

ಮೇಘನಾ ರಾಜ್ ಅವರು ಇತ್ತೀಚೆಗೆ ಚಿರಂಜೀವಿ ಸರ್ಜಾ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಪತಿ ಕುಟುಂಬದವರ ಜೊತೆ ರಾಯನ್ ಸರ್ಜಾ ಸಮಯ ಕಳೆದ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಫೋಟೋ ವೈರಲ್ ಆಗುತ್ತಿದೆ. ಚಿರಂಜೀವಿ ಸರ್ಜಾ ಅವರು ಅವರ ಅಜ್ಜಿ ಲಕ್ಷ್ಮೀದೇವಿ ಅವರ ಜೊತೆಯಲ್ಲಿ ತೆಗೆಸಿಕೊಂಡ ವೈಟ್ ಅಂಡ್ ಬ್ಲಾಕ್ ಫೋಟೋ ಅದು. ಇದರಲ್ಲಿ ವಿಶೇಷತೆ ಏನೆಂದರೆ ಈ ಫೋಟೋದಲ್ಲಿ ಚಿರಂಜೀವಿ ಸರ್ಜಾ ಅವರು ಥೇಟ್ ರಾಯನ್ ಸರ್ಜಾ ಅವರ ರೀತಿಯಲ್ಲೇ ಇದ್ದಾರೆ. ಅವರಿಬ್ಬರ ಫೋಟೋವನ್ನು ಒಟ್ಟಿಗೆ ಇಟ್ಟರೆ ಎರಡು ಬೇರೆ ಬೇರೆ ಫೋಟೋ ಎಂದು ಗುರುತಿಸಲಾಗದಷ್ಟು ಹೊಂದಾಣಿಕೆ ಅಪ್ಪ ಮಗನಲ್ಲಿ ಇದೆ. ಇದನ್ನು ನೋಡಿದ ಅಭಿಮಾನಿಗಳು ಚಿರು ಅವರೇ ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುತ್ತಿದ್ದಾರೆ. ನಿಮಗೆ ಏನಾನಿಸುತ್ತದೆ ಈ ಚಿತ್ರ ನೋಡಿದರೆ.? ತಪ್ಪದೆ ನಮಗೆ ಕಾಮೆಂಟ್ ಮಾಡಿ ಧನ್ಯವಾದಗಳು.