ಅಮ್ಮಮ್ಮ ಪಾತ್ರ ಮುಗಿದ ಬಳಿಕ ಸನ್ಯಾಸಿನಿ ಆದ್ರಾ ಚಿತ್ಕಲಾ ಬಿರಾದರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿ ನೋಡುಗರ ನಂಬರ್ ಒನ್ ಫೇವರೆಟ್ ಧಾರಾವಾಹಿ. ಇದು ಶುರುವಾದ ಮೊದಲ ದಿನದಿಂದಲೂ ಕೂಡ ಬಹಳಷ್ಟು ವಿಷಯಗಳಿಂದ ಎಲ್ಲರ ಮನ ಗೆದ್ದಿದೆ. ಮೊದಲನೆಯದಾಗಿ ನಾಯಕಿಯು ಇಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸುವುದು ಹಾಗೂ ನಾಯಕನ ಆಟಿಟ್ಯೂಡ್ ಹಾಗೂ ನಾಯಕನ ತಾಯಿಯಾದ ಅಮ್ಮಮ್ಮ ಪಾತ್ರ ಮತ್ತು ಸಾನಿಯಾ ಹಾಗೂ ವರು ಅವರ ಕುತಂತ್ರ ಧಾರಾವಾಹಿಯಲ್ಲಿ ಚೆನ್ನಾಗಿ ವರ್ಕ್ ಆಗುತ್ತಿದೆ.
ಅಮ್ಮಮ್ಮ ಪಾತ್ರ ಮಾಡಿರುವ ಚಿತ್ಕಲಾ ಬಿರಾದರ್ ಅವರು ಈ ಧಾರವಾಹಿಯಿಂದ ಇಡೀ ಕರ್ನಾಟಕದಾದ್ಯಂತ ಅಮ್ಮಮ್ಮ ಎಂದು ಫೇಮಸ್ ಆಗಿದ್ದಾರೆ. ಇದೀಗ ಧಾರವಹಿಯು ಕ್ಲೈಮಾಕ್ಸ್ ಹಂತ ತಲುಪಿದ್ದು ಈಗಾಗಲೇ ತಿಂಗಳ ಹಿಂದೆ ಚಿತ್ಕಲಾ ಬಿರಾದರ್ ಅವರ ಪಾತ್ರವು ಮುಗಿದಿದೆ. ಸೌಪರ್ಣಿಕಾ ಹೆಸರಿಗೆ ತಮ್ಮೆಲ್ಲ ಆಸ್ತಿಯನ್ನು ಬರೆದು ಮರಣ ಹೊಂದಿದ್ದಾರೆ, ಇನ್ನು ಭೂಮಿ ಅಮ್ಮಮ್ಮನ ಕನಸಿನಂತೆ ಅಮ್ಮಮ್ಮನ ಹಾದಿ ಮಾರ್ಗದರ್ಶನದಂತೆ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಭಾಯಿಸುತ್ತಿದ್ದಾರೆ.
ಆದರೆ ಅಮ್ಮಮ್ಮ ಪಾತ್ರ ಮುಗಿದಿರೋದು ಧಾರಾವಾಹಿ ಅಭಿಮಾನಿಗಳಿಗೆ ಬಹಳ ಬೇಸರ ತರಿಸಿದೆ. ಈ ಧಾರಾವಾಹಿ ತಂಡವು ಕೂಡ ಅಮ್ಮಮ್ಮನ ಕೊನೆ ಎಪಿಸೋಡ್ ಗಳಲ್ಲಿ ಅವರನ್ನು ಕಣ್ಣೀರು ಹಾಕಿ ಬಿಳ್ಕೊಟ್ಟಿದ್ದಾರೆ. ಈ ಎಲ್ಲಾ ವಿಡಿಯೋಗಳನ್ನು ಚಿತ್ಕಲಾ ಹಾಗೂ ತಂಡವು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಈಗ ಸನ್ಯಾಸಿನಿ ಅವತಾರದಲ್ಲಿ ಚಿತ್ಕಲಾ ಅವರು ಮತ್ತೊಂದು ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ ಇದನ್ನು ನೋಡಿದ ಅವರ ಫಾಲೋವರ್ಸ್ ಗಳು ಇದೇನಿದು ಎಂದು ಆಶ್ಚರ್ಯಪಟ್ಟಿದ್ದಾರೆ.
ಅದಕ್ಕೆ ಕನ್ನಡತಿಯಿಂದ ಸನ್ಯಾಸಿನಿ ಕಡೆಗೆ, ಧಾರಾವಾಹಿಯಿಂದ ಸಿನಿಮಾ ತಂಡದ ಜೊತೆಗೆ ಎನ್ನುವ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಇದರಿಂದ ಈಗ ಅವರು ಬೇರೆ ಯಾವುದೇ ಸಿನಿಮಾದಲ್ಲಿ ಸನ್ಯಾಸಿನಿ ಪಾತ್ರ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಈಗ ಅವರು ಹಿರಿತೆರೆಯಲ್ಲೂ ಗುರುತಿಸಿಕೊಳ್ಳುತ್ತಿದ್ದು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷ ತೆರೆಕಂಡ ಹಲವು ಸಿನಿಮಾಗಳಲ್ಲಿ ಇವರು ಸಹ ಪಾತ್ರ ಮಾಡಿದ್ದಾರೆ. ವಿಕ್ರಂತ್ ರೋಣ ಸಿನಿಮಾದಲ್ಲಿ ನಾಯಕಿಯ ತಾಯಿಯ ಪಾತ್ರ ಹಾಗೂ ದಿಲ್ ಪಸಂದ್ ಚಿತ್ರದಲ್ಲಿ ಮೇಘಾ ಶೆಟ್ಟಿ ಅವರ ತಾಯಿಯ ಪಾತ್ರ ಹೀಗೆ ನಾನಾ ಪಾತ್ರಗಳಲ್ಲಿ ಸಣ್ಣ ಪಾತ್ರವಾದರೂ ಸಿನಿಮಾದ ಭಾಗ ಎನಿಸಿಕೊಂಡಿದ್ದಾರೆ.
ಈ ಹಿಂದೆ ಅವರು ಅಗ್ನಿಸಾಕ್ಷಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಪೋಷಕ ಪಾತ್ರ ಮಾಡಿದ್ದರು. ಆದರೆ ಕನ್ನಡತಿ ಇವರಿಗೆ ಇವರ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಏಕೆಂದರೆ ಈ ಧಾರಾವಾಹಿಯಲ್ಲಿ ಈ ಪಾತ್ರ ತುಂಬಾ ಗಟ್ಟಿಯಾಗಿತ್ತು. ರತ್ನಮಾಲ ಎನ್ನುವ ಹಸಿರುಪೇಟೆ ಒಬ್ಬ ಮಹಿಳೆ ಬೆಂಗಳೂರಿಗೆ ಬಂದು ಕಾಫಿ ಕೆಫೆ ಮತ್ತು ಇತರ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಅದನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದ ಅವರ ತಾಳ್ಮೆ ಜಾಣ್ಮೆ ಬುದ್ಧಿವಂತಿಕೆ ಆ ಪಾತ್ರದ ಪ್ಲಸ್ ಪಾಯಿಂಟ್ ಆಗಿತ್ತು ಹಾಗೂ ಅಮ್ಮಮ್ಮನ ಬಾಯಿಯಿಂದ ಬರುತ್ತಿದ್ದ ಪ್ರತಿ ಮಾತು ಕೂಡ ಅರ್ಥಪೂರ್ಣವಾಗಿ ವೇದದಂತಿರುತ್ತಿತ್ತು.
ಹಾಗಾಗಿ ಆ ಸಂಭಾಷಣೆಯನ್ನು ಕೇಳಲು ಪ್ರೇಕ್ಷಕರು ಅರ್ಧಗಂಟೆ ಟಿವಿ ಮುಂದೆ ಮಂತ್ರಮುಗ್ಧರಾಗಿ ಕುಳಿತು ಬಿಡುತ್ತಿದ್ದರು. ಈಗ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಅವರ ಅಭಿಮಾನಿಗಳು instagram ನಲ್ಲಿ ಆ ಕುರಿತು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ನೀವೇ ಇಲ್ಲ ಅಂದಮೇಲೆ ನಾವು ಇನ್ನೆಲ್ಲಿ ಹೋಗುವುದು ನೀವು ನಮ್ಮ ಗುರು ನೀವೆಲ್ಲೋ ನಾವು ಅಲ್ಲೇ ಎಂದು ಒಬ್ಬ ಫಾಲೋವರ್ ತಮಾಷೆಯಾಗಿ ಕಮೆಂಟ್ ಮಾಡಿದ್ದರೆ ಮತ್ತೊಬ್ಬರು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ನೀವು ಇಲ್ಲದೆ ಕನ್ನಡತಿ ಬೋರಾಗಿತ್ತಿದೆ ಎಂದು ಹೇಳಿದ್ದಾರೆ. ಅಮ್ಮಮ್ಮನ ಪಾತ್ರದಂತೆ ಹಲವು ಪಾತ್ರಗಳು ಅವರ ಪಾಲಿಗೆ ದೊರಕಲಿ ಎಂದು ಹರಸೋಣ.