Friday, June 9, 2023
HomeEntertainmentಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ...

ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.

 

ಕ್ರಾಂತಿ ಸಿನಿಮಾ ಕರ್ನಾಟಕದಲ್ಲಿ ಹೊಸದೊಂದು ಕ್ರಾಂತಿ ಸೃಷ್ಟಿ ಮಾಡಿರುವುದಂತೂ ನಿಜ ಕ್ರಾಂತಿ ಸಿನಿಮಾದಿಂದ ದರ್ಶನ್ ಅವರು ಸಾಕಷ್ಟು ಕಾಂಟ್ರವರ್ಸಿಗೆ ಸಿಲುಕಿದ್ದಾರೆ. ತಮ್ಮ ಮಾತಿನಿಂದಲೇ ಹಲವಾರು ಸಮಸ್ಯೆಗಳನ್ನು ಕೂಡ ಹುಟ್ಟಿ ಹಾಕಿಕೊಂಡಿದ್ದಾರೆ ಆದರೂ ಕೂಡ ಇವರ ಅಭಿಮಾನಿಗಳು ಎಂದಿಗೂ ಇವರ ಕೈ ಬಿಡುವುದಿಲ್ಲ. ವಿಶೇಷ ಏನೆಂದರೆ ಕ್ರಾಂತಿ ಸಿನಿಮಾದ ಮೂಲಕ ಮತ್ತೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಒಂದಾಗುತ್ತಿರುವುದು ನಿಜಕ್ಕೂ ಸಂತೋಷದ ವಿಚಾರವೇ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಐದು ವರ್ಷಗಳಿಂದ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಬೇರೆಯಾಗಿದ್ದರು ಅಂದರೆ ಯಾವುದೇ ಸಿನಿಮಾದಲ್ಲಿ ಇರಬಹುದು, ಕುಟುಂಬದ ಕಾರ್ಯಕ್ರಮದಲ್ಲಿ ಇರಬಹುದು ಅಥವಾ ಇನ್ನಿತರ ಕಾರ್ಯ ಚಟುವಟಿಕೆಯಲ್ಲಿ ಇರಬಹುದು ಎಲ್ಲಿಯೂ ಕೂಡ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಯಾಕೆ ಸೋಶಿಯಲ್ ಮೀಡಿಯಾದಿಂದಲೂ ಕೂಡ ದೂರವಿದ್ದರೂ ಸಾಮಾನ್ಯವಾಗಿ ಸ್ನೇಹಿತರಾದವರು ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ.

ಪರಸ್ಪರ ಮಾತನಾಡುತ್ತಾರೆ ಎಷ್ಟೇ ಬಿಜಿ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಂತೂ ಟಚ್ ನಲ್ಲಿ ಇರುತ್ತಾರೆ ಇದ್ಯಾವುದರಲ್ಲೂ ಜೊತೆಗಿಲ್ಲ ಅಂದರೆ ಅವರು ಇಬ್ಬರೂ ಕೂಡ ಮನಸ್ತಾಪ ಮಾಡಿಕೊಂಡಿದ್ದಾರೆ ಅಥವಾ ಅವರ ಸಂಬಂಧದಲ್ಲಿ ಏನು ಹದಗಿಟ್ಟಿದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸುತ್ತಾರೆ. ಕಿಚ್ಚ ಸುದೀಪ್ ಮತ್ತು ದರ್ಶನ್ ನಡುವೆಯೂ ಕೂಡ ಇಂಥದ್ದೇ ಒಂದು ವಾತಾವರಣ ನಿರ್ಮಾಣವಾಗಿತ್ತು. ಐದು ವರ್ಷದಿಂದಲೂ ಇಬ್ಬರು ಪರಸ್ಪರ ಭೇಟಿಯಾಗಿರಲಿಲ್ಲ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ.

ಆದರೆ ಹೊಸಪೇಟೆಯಲ್ಲಿ ನಟ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣವನ್ನು ಕೇಳುತ್ತಿದ್ದ ಹಾಗೆ ಕಿಚ್ಚ ಸುದೀಪ್ ತಮ್ಮ ಜೀವದ ಗೆಳೆಯರ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ದೀರ್ಘ ಸಾಲುಗಳನ್ನು ಬರೆದುಕೊಂಡರು. ನಾವಿಬ್ಬರು ಜೊತೆಯಾಗಿ ಇಲ್ಲದೆ ಇದ್ದರೂ ಮಾತನಾಡದೆ ಇದ್ದರೂ ಕೂಡ ಇಂತಹ ಘಟನೆ ನಡೆದಾಗ ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗುವುದಿಲ್ಲ. ನಾನು ಈ ಘಟನೆಯನ್ನು ಖಂಡಿಸುತ್ತೇನೆ ಇಂತಹ ಘಟನೆ ಯಾವ ನಟನಿಗೂ ಆಗಬಾರದು ಕಲಾವಿದರಿಗೆ ಗೌರವ ಕೊಡಿ ಎಂದು ಬರೆದುಕೊಂಡಿದ್ದರು.

ಇದನ್ನು ನೋಡುತ್ತಿದ್ದ ಹಾಗೆ ದರ್ಶನ್ ಅವರು ಕೂಡ ಆಶ್ಚರ್ಯ ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಐದು ವರ್ಷದಿಂದಲೂ ಕೂಡ ಯಾವುದೇ ರೀತಿಯಾದಂತಹ ಸಂದೇಶ ಕಳುಹಿಸದ ದರ್ಶನ್ ಕಿಚ್ಚ ಸುದೀಪ್ ಅವರು ಮಾಡಿದಂತಹ ಟ್ವಿಟ್ ನೋಡಿ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ರೀ ಟ್ವಿಟ್ ಮಾಡಿದ್ದಾರೆ. ಇದನ್ನು ನೋಡುತ್ತಿದ್ದ ಹಾಗೆ ಕರುನಾಡ ಜನತೆ ನಿಜಕ್ಕೂ ಕೂಡ ಒಂದು ಕ್ಷಣ ಅಚ್ಚರಿಗೆ ಒಳಗಾಗುತ್ತಾರೆ. ಏಕೆಂದರೆ ಕಠಿಣ ಪರಿಸ್ಥಿತಿ ಬಂದಾಗಲೂ ಕೂಡ ದರ್ಶನ್ ಕಿಚ್ಚ ಸುದೀಪ್ ಅವರ ಜೊತೆ ಮಾತನಾಡಿರಲಿಲ್ಲ ಮೀಡಿಯಾದವರು ಕೂಡ ಸಾಕಷ್ಟು ಬಾರಿ ಈ ಪ್ರಶ್ನೆಯನ್ನು ಕೇಳಿದರು ಆಗಲು ಕೂಡ ಎಲ್ಲರಿಗೂ ಕಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು.

ಆದರೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಮಾತ್ರ ಕಿಚ್ಚ ಸುದೀಪ್ ಅವರ ಮೇಲೆ ಇದ್ದಂತಹ ಮುನಿಸು ಅಥವಾ ಕೋಪ ಇವೆಲ್ಲವನ್ನು ಕೂಡ ಸಂಪೂರ್ಣವಾಗಿ ಬಿಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ಕಿಚ್ಚ ಸುದೀಪ್ ಅವರ ಹೆಸರನ್ನು ಹೇಳುತ್ತಾರೆ ತದನಂತರ ಕಿಚ್ಚ ಸುದೀಪ್ ಮಾಡಿದ್ದಂತಹ ಟ್ವಿಟ್ ಗೆ ರೀ ಟ್ವಿಟ್ ಮಾಡುತ್ತಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ ಇವರಿಬ್ಬರು ಮೊದಲಿನಂತೆ ಒಂದಾಗಬಹುದು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ. ಇದಕ್ಕೆ ಪುಷ್ಟಿ ನೀಡಲು ಅಭಿಮಾನಿಗಳು ಕೂಡ ಹಲವಾರು ರೀತಿಯ ಫೋಟೋಗಳನ್ನು ಎಡಿಟ್ ಮಾಡಿದ್ದಾರೆ.

ಅದರಲ್ಲಿ ನೆನ್ನೆಯಷ್ಟೇ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ದರ್ಶನ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಕೂಡ ಒಟ್ಟಾಗಿ ನಿಂತಿರುವಂತಹ ಫೋಟೋ ಒಂದನ್ನು ಎಡಿಟ್ ಮಾಡಿದ್ದಾರೆ. ಈ ಫೋಟೋ ನೋಡುತ್ತಿದ್ದ ಹಾಗೆ ಎಲ್ಲರೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದನ್ನು ನೋಡಿದರೆ ಯಾರಿಂದಲೂ ಕೂಡ ಎಡಿಟೆಡ್ ಫೋಟೋ ಅಂತ ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ ಇಬ್ಬರೂ ಕೂಡ ನೈಜವಾಗಿಯೇ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅಷ್ಟರ ಮಟ್ಟಿಗೆ ಈ ಫೋಟೋ ಕಾಣುತ್ತಿದೆ ಈ ಕಲ್ಪನೆ ನಿಜವಾಗಿದ್ದರೆ ಅದೆಷ್ಟು ಚೆನ್ನಾಗಿರುತ್ತೆ ಎಂದು ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.