ಪ್ರತಿಯೊಬ್ಬರಿಗೂ ಕೂಡ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ. ಮುಂದೆ ಏನಾಗುತ್ತದೆ ಎನ್ನುವುದರ ಸುಳಿವು ಸಿಕ್ಕದರೂ ನಾವು ಅದನ್ನು ಎದುರಿಸಲು ಸಿದ್ಧವಾಗಬಹುದು ಅಥವಾ ಅದಕ್ಕೆ ಪೂರಕವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಹೀಗಾಗಿ ಭವಿಷ್ಯದ ಎಂದರೆ ಅಪಾರವಾದ ಕುತೂಹಲ.
ನಿಮಗೂ ಈ ರೀತಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಶೀಘ್ರದಲ್ಲಿ ನಿಮಗೆ ಎದುರಾಗಲಿರುವ ಒಂದು ಬಹಳ ಮುಖ್ಯವಾದ ವಿಷಯ ಯಾವುದೆಂದು ಈಗ ನಾವು ಹೇಳುವ ಈ ಒಂದು ಚಟುವಟಿಕೆ ಮಾಡಿ ತಿಳಿದುಕೊಳ್ಳಿ. ಈಗ ನೀವು ಕಣ್ಣು ಮುಚ್ಚಿ, ನಿಮ್ಮ ಕಣ್ಣು ಮುಂದೆ ಬಂಗಾರದ ಬಣ್ಣದ ನಾಲ್ಕು ಕೊಡಗಳು ಇವೆ ಎಂದು ಊಹಿಸಿಕೊಳ್ಳಿ.
ಪ್ರತಿಯೊಂದೂ ಕೊಡದ ಮೇಲೂ 1, 2, 3, 4 ಎಂದು ಬರೆದಿರುತ್ತದೆ ಇದರಲ್ಲಿ ನಿಮಗೆ ಯಾವ ಸಂಖ್ಯೆ ಬೇಕು ಆ ಸಂಖ್ಯೆಯನ್ನು ನಿಮ್ಮ ಮನೆ ದೇವರನ್ನು, ಇಷ್ಟ ದೇವರನ್ನು ಪ್ರಾರ್ಥಿಸಿ ಆರಿಸಿ.
* ನೀವೇನಾದರೂ ಸಂಖ್ಯೆ 1 ಆರಿಸಿದ್ದರೆ ನೀವು ನಿಮ್ಮ ವೃತ್ತಿ ಬದುಕಿನ ಕುರಿತು ಮುಖ್ಯವಾದ ಸುದ್ದಿ ಕೇಳುತ್ತೀರಿ ಎಂದು ಅರ್ಥ. ನೀವು ನಿಮಗೆ ಇಷ್ಟವಾಗುವ ಉದ್ಯೋಗವನ್ನು ಪಡೆಯಬಹುದು ಅಥವಾ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ನಿಮ್ಮ ಉದ್ಯೋಗದಲ್ಲಿ ನಿಮಗೆ ಪ್ರಮೋಷನ್ ಸಿಗಬಹುದು ಅಥವಾ ನಿಮ್ಮ ಸಂಬಳ ಹೆಚ್ಚಾಗಬಹುದ, ಬೋನಸ್ ಸಿಗಬಹುದು.
ನಿಮಗೆ ಹೆಚ್ಚಿನ ಉದ್ಯೋಗವಕಾಶಗಳು ಸಿಗಬಹುದು. ನಿಮಗೆ ಇಷ್ಟ ಇಲ್ಲದೆ ಯಾವುದೋ ಒಂದು ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಬದಲಾಯಿಸುವ ಅವಕಾಶ ಸಿಗಬಹುದು ಅಥವಾ ನೀವು ಮಾಡುತ್ತಿರುವ ಕೆಲಸಕ್ಕಿಂತ ಒಳ್ಳೆ ಕೆಲಸದ ಆಫರ್ ಬರಬಹುದು ಈ ರೀತಿಯಾಗಿ ಕೆಲಸದ ವಿಚಾರವಾಗಿ ಯಾವುದಾದರೂ ಒಂದು ಸಿಹಿ ಸುದ್ದಿಯನ್ನು ಶೀಘ್ರದಲ್ಲಿ ಕೇಳುತ್ತೀರಿ ಎಂದು ಅರ್ಥ.
* ನೀವೇನಾದರೂ ಸಂಖ್ಯೆ 2 ಆರಿಸಿದರೆ ನೀವು ಪ್ರೀತಿ ಪ್ರೇಮ ಎನ್ನುವ ವಿಚಾರದ ಕುರಿತು ಎಂದು ಬಹು ಮುಖ್ಯವಾದ ಸಂಗತಿಯನ್ನು ಕೇಳುತ್ತೀರಿ. ಉದಾಹರಣೆಗೆ ನೀವು ಯಾರನ್ನು ಇಷ್ಟ ಪಡುತ್ತಿದ್ದೀರೋ ಅವರೇ ಬಂದು ನಿಮಗೆ ಪ್ರಪೋಸ್ ಮಾಡಬಹುದು ಅಥವಾ ನೀವು ಮಾಡುವ ಪ್ರಪೋಸ್ ಗೆ ಅವರು ಒಪ್ಪಿಕೊಳ್ಳ ಬಹುದು ಅಥವಾ ಇದುವರೆಗೂ ನಿಮಗೆ ವಿವಾಹ ಬಲ ಕೂಡಿ ಬಂದಿಲ್ಲ ಎಂದರೆ ಈಗ ಆ ಯೋಗ ಬರಬಹುದು.
ನೀವು ಇಷ್ಟಪಟ್ಟವರನ್ನು ಮದುವೆಯಾಗಲು ನಿಮ್ಮ ಮನೆಯಲ್ಲಿ ಅನುಮತಿ ಸಿಗಬಹುದು ಅಥವಾ ನಿಮಗೆ ಬ್ರೇ’ಕ್ ಅ’ಪ್ ಕೂಡ ಆಗಬಹುದು. ಬ್ರೇ’ಕ್ ಅ’ಪ್ ಬೇಸರಸಿದರೂ ನಿಮ್ಮ ಜೊತೆ ಸಂಬಂಧ ಕಡಿದು ಕೊಂಡವರು ಒಳ್ಳೆಯವರಾಗಿರುವುದಿಲ್ಲ. ಹಾಗಾಗಿ ನಿಮಗೆ ಮುಂದಿನ ದಿನದಲ್ಲಿ ಈ ರೀತಿ ಆಗಿದ್ದೇ ಒಳ್ಳೆಯದಾಯಿತು ಎನ್ನುವ ಸಮಾಧಾನ ಸಿಗುತ್ತದೆ.
* ಸಂಖ್ಯೆ 3 ಆರಿಸಿದರೆ ನಿಮಗೆ ಶೀಘ್ರದಲ್ಲಿ ನಿಮ್ಮ ಇಷ್ಟವಾದ ಜಾಗಕ್ಕೆ ಇಷ್ಟಪಟ್ಟವರ ಜೊತೆ ಹೋಗುವ ಅವಕಾಶ ಸಿಗಲಿದೆ ಅದಕ್ಕೆ ನೀವು ಪ್ರಯತ್ನ ಪಡಬಹುದು ಎಂದು ಅರ್ಥ. ಜೊತೆಗೆ ಯಾವುದೇ ಕೆಲಸ ಕಾರ್ಯ ಮಾಡಿದ್ದರು ಅದರಲ್ಲಿ ಯಶಸ್ವಿ ಆಗುವಂತಹ ಅದೃಷ್ಟವೂ ಕಾದಿದೆ. ವಿದ್ಯಾಭ್ಯಾಸದ ಅಥವಾ ಇನ್ಯಾವುದೇ ತರಬೇತಿಯಲ್ಲಿ ಇರುವವರು ಆ ಕ್ಷೇತ್ರದಲ್ಲಿ ಸಾಧನೆ ಮಾಡುತ್ತೀರಿ. ನಿಮ್ಮ ಕಲೆಯ ಪ್ರದರ್ಶನ ಮಾಡಲು ವೇದಿಕೆ ನಿಮಗೆ ಸಿಗಲಿದೆ ಎನ್ನುವ ಸೂಚನೆ.
* ಸಂಖ್ಯೆ 4 ನ್ನು ಆರಿಸಿದರೆ ನಿಮ್ಮ ಮೇಲೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಬಹುದು, ಅದಕ್ಕೆ ತಯಾರಾಗಿರಿ. ನೀವು ಮನೆ ಕಟ್ಟಿಸಲು ಯೋಜನೆ ಮಾಡಬಹುದು ಅಥವಾ ಆಸ್ತಿ ಖರೀದಿಸುವ ನಿರ್ಧಾರ ಮಾಡಬಹುದು ಅಥವಾ ನಿಮ್ಮ ಮನೆಯಲ್ಲಿ ಶುಭಕಾರ್ಯ ನಡೆಯುವುದರಿಂದ ನಿಮಗೆ ಜವಾಬ್ದಾರಿ ಬರಬಹುದು ಅಥವಾ ನೀವು ಓದಿದ್ದು ಸಾಕು ಎಂದು ಕೆಲಸ ಮಾಡಲು ನಿರ್ಧಾರ ಮಾಡಬಹುದು. ಈ ರೀತಿಯಾದ ಜವಾಬ್ದಾರಿಗಳು ಹೆಚ್ಚಾಗಲಿದೆ ಎಂದು ಅರ್ಥ.