ಪ್ರತಿಯೊಬ್ಬ ಮನುಷ್ಯನು ತನಗೆ ಇಷ್ಟಪಟ್ಟು ಮಾಡುವ ಶಾಪಿಂಗ್ ಗಳಲ್ಲಿ ಬಟ್ಟೆಗೆ ಹೆಚ್ಚು ಸಮಯ ತೆಗೆದುಕೊಂಡು ಆರಿಸುತ್ತಾನೆ ಮತ್ತು ಅತಿ ಹೆಚ್ಚು ಬಟ್ಟೆಗೆ ಹಣ ಸುರಿಯುತ್ತಾನೆ. ಬಟ್ಟೆ ಎನ್ನುವುದು ಫ್ಯಾಷನ್ ಟ್ರಡಿಷನ್ ಎಲ್ಲವೂ ಆಗಿ ಹೋಗಿದೆ ಬಟ್ಟೆಯಿಂದ ನಮ್ಮ ಲುಕ್ ಬದಲಾಗುತ್ತದೆ ಎನ್ನುವುದು ಅಷ್ಟೇ ಸತ್ಯ.
ಡ್ರೆಸ್ಸಿಂಗ್ ಸೆನ್ಸ್ ಎನ್ನುವುದು ಬಹಳ ಮುಖ್ಯವಾದ ಇಂಪ್ರೆಶನ್ ಇದರಲ್ಲಿ ಬಟ್ಟೆಯ ಪಾತ್ರವೇ ಮಹತ್ವದ್ದು. ಒಬ್ಬರು ಹಾಕಿರುವ ಬಟ್ಟೆಯಿಂದ ವ್ಯಕ್ತಿತ್ವ ಅಳೆಯಲಾಗದು ಎಂದು ಹೇಳಿದರು ಹೆಚ್ಚಿನವರು ಬಟ್ಟೆಯಿಂದಲೇ ಪೂರ್ವಾಪರ ಊಹಿಸುತ್ತಾರೆ.
ಬಟ್ಟೆಗಳಿಂದ ಇದಿಷ್ಟೇ ಅಲ್ಲ ಮನಸ್ಸಿನ ಭಾವನೆಗಳು ಕೂಡ ಬದಲಾಗುತ್ತವೆ. ಅದಕ್ಕಾಗಿ ಕೆಲವರು ಕೆಲವು ಬಣ್ಣದ ಬಟ್ಟೆಗಳನ್ನು ತಮಗೆ ಲಕ್ಕಿ ಕಲರ್ ಎಂದುಕೊಳ್ಳುತ್ತಾರೆ ಅಥವಾ ಕೆಲವರು ಅವರದ್ದೇ ಯಾವುದೋ ಬಟ್ಟೆಗಳನ್ನು ಅದೃಷ್ಟದ ಬಟ್ಟೆ ಎಂದು ನಿರ್ಧರಿಸಿ ತುಂಬಾ ವಿಶೇಷವಾದ ಸಂದರ್ಭಗಳಲ್ಲಿ ಅದನ್ನು ಧರಿಸುತ್ತಾರೆ.
ಕೆಲವರಂತೂ ಈ ಬಟ್ಟೆ ಹಾಕಿದಾಗಲೆಲ್ಲ ಹೀಗೆ ಎಂದು ಬಟ್ಟೆಗಳ ಮೇಲೆ ಕೋ’ಪ ತೋರುತ್ತಾರೆ. ಹೀಗೆ ಬಟ್ಟೆಗೂ ನಮಗೂ ದೈಹಿಕ ಮಾತ್ರವಲ್ಲದೆ ಮಾನಸಿಕವಾಗಿಯೂ ಸಂಬಂಧವಿದೆ ಎಂದು ಹೇಳಬಹುದು. ಈ ಬಟ್ಟೆಯ ಕುರಿತು ಕೆಲ ಪ್ರಮುಖ ವಿಷಯಗಳಿವೆ, ಅವುಗಳನ್ನು ಪಾಲಿಸದೆ ಇದ್ದಲ್ಲಿ ನಾವು ಧರಿಸುವ ಬಟ್ಟೆ ನಮ್ಮನ್ನು ಬ’ರ್ಬಾ’ದ್ ಮಾಡಬಹುದು. ಹಾಗಾಗಿ ಕೆಲ ಉಪಯುಕ್ತ ಟಿಪ್ಗಳನ್ನು ಈ ಅಂಕಣದಲ್ಲಿ ನೀಡುತ್ತಿದ್ದೇವೆ.
* ಹರಿದ ಬಟ್ಟೆಗಳನ್ನು ಧರಿಸುವುದು ಅಥವಾ ಬಹಳ ಹಳೆಯದಾದ ಬಟ್ಟೆಗಳನ್ನು ಧರಿಸುವುದು ನಮ್ಮ ಅದೃಷ್ಟಕ್ಕೆ ಕು’ತ್ತು ತರುತ್ತದೆ. ಇದರಿಂದ ನಮ್ಮ ಲಕ್ ಫ್ಯಾಕ್ಟರ್ ಕಡಿಮೆ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ಹಾಗಾಗಿ ಅದೆಷ್ಟೇ ಇಷ್ಟದ ಬಟ್ಟೆ ಆಗಿದ್ದರೂ ಕೂಡ ಬಹಳ ಹಳೆಯದಾಗಿದ್ದರೆ ಅಥವಾ ಅದು ಹರಿದಿದ್ದರೆ ಸರಿ ಮಾಡಿಕೊಂಡು ಧರಿಸಲು ಹೋಗಬೇಡಿ.
* ಕೆಲವರು ಸ್ನಾನ ಮಾಡಿದ ತಕ್ಷಣ ಹೊಸ ಬಟ್ಟೆಯನ್ನು ಧರಿಸುತ್ತಾರೆ. ಇದು ತಪ್ಪು, ಯಾಕೆಂದರೆ ಕೆಲವು ಸಂಪ್ರದಾಯದ ಪ್ರಕಾರ ಯಾರಾದರೂ ತೀ’ರಿಕೊಂಡಾಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸುತ್ತಾರೆ. ಹಾಗಾಗಿ ಇಂತಹ ತಪ್ಪು ಮಾಡಬೇಡಿ ಸ್ನಾನ ಮಾಡಿ ಸ್ವಲ್ಪ ಸಮಯ ಕಳೆದ ಬಳಿಕ ಹೊಸ ಬಟ್ಟೆಯನ್ನು ಧರಿಸಿ.
* ಯಾವಾಗಲೂ ಕಪ್ಪು ಬಟ್ಟೆಗಳನ್ನು ಧರಿಸುವುದು ಅಷ್ಟೊಂದು ಶ್ರೇಯಸ್ಕರವಲ್ಲವಲ್ಲ. ಯಾರಿಗಾದರೂ ಶನಿ ಪ್ರಭಾವ ಕಡಿಮೆ ಇದ್ದರೆ ಅಥವಾ ದೋಷಗಳು ಇದ್ದರೆ ಅದರ ಪರಿಹಾರಕ್ಕಾಗಿ ಅಥವಾ ಶನಿ ದೇವರ ಆಶೀರ್ವಾದಕ್ಕಾಗಿ ಶನಿವಾರದಂದು ಕಪ್ಪು ಬಟ್ಟೆಯನ್ನು ಧರಿಸಬಹುದ.
ಅದನ್ನು ಹೊರತುಪಡಿಸಿ ವಾರದ ಇನ್ನಿತರ ದಿನಗಳಲ್ಲಿ ಕಪ್ಪು ಬಟ್ಟೆಯನ್ನು ಧರಿಸುವುದರಿಂದ ಅದು ನೆ’ಗೆ’ಟಿ’ವ್ ಎನರ್ಜಿಯನ್ನು ಅಟ್ರಾಕ್ಟ್ ಮಾಡುತ್ತದೆ ಮತ್ತು ಕಪ್ಪು ಬಟ್ಟೆ ಧರಿಸಿದಾಗ ವ್ಯಕ್ತಿಯ ಭಾವನೆಗಳು ನ’ಕಾ’ರಾ’ತ್ಮ’ಕವಾಗಿ ಹೆಚ್ಚು ಕೆಲಸ ಮಾಡುತ್ತವೆ ಎಂದು ಸಹ ಹೇಳಲಾಗುತ್ತದೆ ಹಾಗಾಗಿ ಕಪ್ಪು ಬಟ್ಟೆಯನ್ನು ಅವಾಯ್ಡ್ ಮಾಡಿದರೆ ಉತ್ತಮ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.
* ಯಾವುದೇ ಕಾರಣಕ್ಕೂ ಇನ್ನೊಬ್ಬರ ಬಟ್ಟೆಯನ್ನು ಧರಿಸಬಾರದು. ಎಲ್ಲರ ಅದೃಷ್ಟವೂ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಮತ್ತೊಬ್ಬರ ಬಟ್ಟೆಯು ಎಷ್ಟೇ ಅಂದ ಚಂದದಿಂದ ಇದ್ದರೂ ಕೂಡ ಅದನ್ನು ಧರಿಸಬೇಡಿ, ಇದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಒಳ್ಳೆಯದು.
* ಶುದ್ಧವಾದ ಬಟ್ಟೆಗಳು ಶುದ್ಧ ಆಲೋಚನೆಗಳನ್ನು ಉಂಟುಮಾಡುತ್ತವೆ ಹಾಗಾಗಿ ಸ್ವಚ್ಛವಾಗಿರುವ ಬಟ್ಟೆಗಳನ್ನು ಧರಿಸಿ. ಕೊಳಕು ಬಟ್ಟೆಗಳನ್ನು ಧರಿಸುವುದರಿಂದ ದ’ರಿ’ದ್ರ ಬರುತ್ತದೆ. ತಾಯಿ ಲಕ್ಷ್ಮಿ ಅವರ ಮೇಲೆ ಕೋ’ಪಿ’ಸಿಕೊಳ್ಳುತ್ತಾರೆ.
ಸಾಧ್ಯವಾದಷ್ಟು ಬಟ್ಟೆಗಳನ್ನು ದಾನ ಮಾಡಿ. ಒಂದು ವೇಳೆ ನೀವು ಉಪಯೋಗಿಸಿರುವ ಬಟ್ಟೆಗಳನ್ನು ದಾನ ಮಾಡುವುದಾದರೆ ಅದನ್ನು ವಾಶ್ ಮಾಡಿ ಐರನ್ ಮಾಡಿದ ಬಳಿಕವಷ್ಟೇ ದಾನ ಮಾಡಬೇಕು
* ಯಾವುದೇ ಕಾರಣಕ್ಕೂ ಸುಟ್ಟ ಬಟ್ಟೆಗಳನ್ನು ಧರಿಸಬೇಡಿ. ಅದು ನಿಮ್ಮ ಇಷ್ಟದ ಅಥವಾ ದುಬಾರಿಯ ಬಟ್ಟೆ ಆಗಿದ್ದರು ಅದಕ್ಕೆ ಪ್ಯಾಚ್ ಹಾಕಿ ಕವರ್ ಮಾಡಿ ಧರಿಸುವ ತಪ್ಪು ಮಾಡಬೇಡಿ.
* ಮುಂಗೋಪಿಗಳು ಸಾಧ್ಯವಾದಷ್ಟು ಗುಲಾಬಿ ಹಾಗೂ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ ಇದು ಉತ್ತಮ ಬದಲಾವಣೆ ತರುತ್ತದೆ
* ವಿದ್ಯಾರ್ಥಿಗಳು ಹಸಿರು ಬಣ್ಣದ ಬಟ್ಟೆಯನ್ನು ಧರಿಸಿದರೆ ಏಕಾಗ್ರತೆ ಹೆಚ್ಚಾಗುತ್ತದೆ.