ಕಾಫಿ ನಾಡು, ಚಂದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಭಿನ್ನವಾದಂತಹ ಹಾಡುಗಳಿಂದಲೇ ಫೇಮಸ್ ಆದವರು ತಮ್ಮ ಬಾಯಿಗೆ ಬಂದಂತಹ ಪದಗಳನ್ನು ಜೋಡಣೆ ಮಾಡಿ ಅಮೋಘವಾದಂತಹ ಹಾಡನ್ನು ರಚಿಸುವಂತಹ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಫೇಮಸ್ ಆದ ವ್ಯಕ್ತಿಗಳ ಪೈಕಿ ಕಾಫಿ ನಾಡು ಚಂದು ಅವರು ಕೂಡ ಒಬ್ಬರು ಕಳೆದ ನಾಲ್ಕೈದು ತಿಂಗಳ ಹಿಂದೆ ಕಾಫಿ ನಾಡು ಚಂದು ಅಂದರೆ ಯಾರೂ ಕೂಡ ತಿಳಿದಿರಲಿಲ್ಲ ಆದರೆ ಇಂದು ಕರ್ನಾಟಕದಾದ್ಯಂತ ಕಾಫಿನಾಡು ಚಂದು ಎಂಬ ಹೆಸರನ್ನು ಹೇಳಿದರೆ ಸಾಕು ಎಲ್ಲರು ಕೂಡ ಹುಟ್ಟು ಹಬ್ಬದ ಹಾಡನ್ನು ಆಡುವುದಕ್ಕೆ ಫೇಮಸ್ ಅಂತ ಹೇಳುತ್ತಾರೆ ಅಷ್ಟರ ಮಟ್ಟಿಗೆ ಇವರು ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ.
ಕಾಫಿನಾಡು ಚಂದು ಯಾವುದೇ ವಿಡಿಯೋವನ್ನು ರೆಕಾರ್ಡ್ ಮಾಡುವುದಕ್ಕಿಂತ ಮುಂಚೆ ನಾನು ಪುನೀತ್ ಅಣ್ಣ ಶಿವಣ್ಣ ಅವರ ಅಭಿಮಾನಿ ಅಂತ ಹೇಳುವುದರಿಂದಲೇ ಇಂದು ಸಾಕಷ್ಟು ಫ್ಯಾನ್ ಫಾಲೋವರ್ಸ್ ಅನ್ನು ಗಿಟ್ಟಿಸಿಕೊಂಡಿದ್ದಾರೆ ಅಂತ ಹೇಳಬಹುದು. ಹೌದು ನೀವು ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಒಮ್ಮೆ ನೋಡಿದರೆ ಇದು ನಿಮಗೆ ತಿಳಿಯುತ್ತದೆ. ಏಕೆಂದರೆ ಇವರಿಗೆ ಇರುವಂತಹ ಫ್ಯಾನ್ ಪಾಲವರ್ಸ್ ಸಂಗೀತ ಮಾಂತ್ರಿಕ ಆದಂತಹ ಅರ್ಜುನ್ ಜನ್ಯ ಅವರಿಗೂ ಇಲ್ಲ ಹಾಗೂ ಡಾಕ್ಟರ್ ಶಿವರಾಜಕುಮಾರ್ ಅವರಿಗೂ ಕೂಡ ಇಲ್ಲ. ಕಾಫಿನಾಡು ಚಂದು ಅವರಿಗೆ instagram ಖಾತೆಯಲ್ಲಿ ಸುಮಾರು 369K ಗೂ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ.
ಮೊದಲೆಲ್ಲಾ ತಮ್ಮ ಊರಿನಲ್ಲಿ ಮತ್ತು ಅಕ್ಕಪಕ್ಕದಲ್ಲಿ ಇರುವಂತಹ ಹುಡುಗಿಯರಿಗೆ ಮತ್ತು ಹುಡುಗರಿಗೆ ಹುಟ್ಟು ಹಬ್ಬದ ಹಾಡನ್ನು ಹೇಳುವುದರ ಮೂಲಕ ರಂಜಿಸುತ್ತಿದ್ದರು. ಆದರೆ ರಾತ್ರೋರಾತ್ರಿ ಇವರ ಹಾಡುಗಳು ಫೇಮಸ್ ಆಗಿ ಸ್ಯಾಂಡಲ್ವುಡ್ ನ ಸಾಕಷ್ಟು ನಟ ನಟಿಯರ ಹುಟ್ಟುಹಬ್ಬಕ್ಕೂ ಕೂಡ ಕಾಫಿ ನಾಡು ಚಂದು ಅವರೇ ಹಾಡನ್ನು ಹಾಡುತ್ತಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಲವ್ ಮೊಕ್ಟೈಲ್ ಸಿನಿಮಾದಲ್ಲಿ ನಟಿಸಿರುವಂತಹ ಜೋ ಅವರ ಹುಟ್ಟುಹಬ್ಬಕ್ಕೂ ಕೂಡ ಕಾಫಿ ನಾಡು ಚಂದು ಅವರೇ ಹಾಡನ್ನು ಹಾಡಿದ್ದರು. ಕೇವಲ ಇದಿಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯ ಹಾಗೂ ಸ್ಯಾಂಡಲ್ ವುಡ್ ನ ಸಾಕಷ್ಟು ಸೆಲೆಬ್ರೆಟಿಗಳ ಹುಟ್ಟುಹಬ್ಬ ಕೂಡ ಕಾಫಿ ನಾಡು ಚಂದು ಅವರೇ ಹಾಡನ್ನು ಹಾಡಿದ್ದಾರೆ.
ಇನ್ನು ಕಾಫಿನಾಡು ಚಂದು ಅವರಿಗೆ ಫಿದಾ ಆಗದವರೆ ಇಲ್ಲ ಅಂತ ಹೇಳಬಹುದು ತಮ್ಮ ಮುಗ್ಧತೆಯಿಂದಲೇ ಸಾಕಷ್ಟು ಜನರ ಗಮನವನ್ನು ಸೆಳೆದಿದ್ದರೆ ಈ ಪೈಕಿ ನಟಿ ಅನುಶ್ರೀ ಅವರು ಕೂಡ ಕಾಫಿ ನಾಡು ಚಂದು ಅವರ ಹಾಡಿಗೆ ಫಿದಾ ಆಗಿದ್ದಾರೆ. ಕಾಫಿ ನೋಡು ಚಂದು ಅವರು ಒಮ್ಮೆ ಅನುಶ್ರೀ ಅವರನ್ನು ಭೇಟಿಯಾಗಿ ದಯವಿಟ್ಟು ಹೇಗಾದರೂ ಮಾಡಿ ನನ್ನನ್ನು ಶಿವಣ್ಣ ಅವರನ್ನು ಭೇಟಿ ಮಾಡಿಸುವಂತೆ ಮನವಿ ಮಾಡಿ ಅಂತ ಹೇಳಿಕೊಂಡಿದ್ದರು. ಆದರೆ ಇದನ್ನು ಸೋಶಿಯಲ್ ಮೀಡಿಯಾದ ಮುಖಾಂತರ ಮನವಿ ಮಾಡಿಕೊಂಡಿದ್ದರು ಆದರೆ ಇದೀಗ ಕಾಫಿ ನಾಡು ಚಂದು ಅವರು ನೇರವಾಗಿ ಅನುಶ್ರೀ ಅವರನ್ನೇ ಭೇಟಿಯಾಗಿದ್ದಾರೆ. ಬೆಂಗಳೂರಿಗೆ ಬಂದಿರುವಂತಹ ಕಾಫಿ ನಾಡು ಚಂದು ಅವರು ಅನುಶ್ರೀ ಅವರನ್ನು ಭೇಟಿಯಾಗಿ ಅವರಿಗಾಗಿ ಒಂದು ವಿಶೇಷ ಹಾಡೊಂದನ್ನು ರಚಿಸಿದ್ದಾರೆ. ಈ ಹಾಡನ್ನು ಕೇಳಿ ಸ್ವತಃ ಅನುಶ್ರೀಯವರೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಸದ್ಯಕ್ಕೆ ಕಾಫಿ ನಾಡು ಚಂದು ಅವರು ಅನುಶ್ರೀ ಅವರಿಗಾಗಿ ರಚನೆ ಮಾಡಿದಂತಹ ಈ ಹಾಡು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ಹಾಡನ್ನು ಒಮ್ಮೆ ನೀವು ಕೇಳಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಈ ಹಾಡು ಇಷ್ಟ ಆದರೆ ಲೈಕ್ ಕೊಟ್ಟು ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.
https://www.instagram.com/reel/ChZewQph5V6/?igshid=YmMyMTA2M2Y=