ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಜೊತೆ ಜೊತೆಯಲಿ ಎಂಬ ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಉತ್ತಮ ಪ್ರದರ್ಶನವನ್ನೇ ಕಂಡಿತು. ಇನ್ನು ಟಿ ಆರ್ ಪಿ ವಿಚಾರಕ್ಕೆ ಬರುವುದಾದರೆ ಯಾವಾಗಲೂ ಕೂಡ ಮೊದಲ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಧಾರಾವಾಹಿಯಲ್ಲಿ ಕಥೆಯನ್ನು ಬದಲಾವಣೆ ಮಾಡಲಾಗಿದೆ ಮೊದಮೊದಲು ಎಲ್ಲರೂ ಕೂಡ ಆರ್ಯವರ್ಧನ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಈ ಧಾರವಾಹಿಯ ರಿಯಲ್ ಹೀರೋ ಅಂತ ಮೆಚ್ಚಿಕೊಳ್ಳುತ್ತಿದ್ದರು. ಆದರೆ ಯಾವಾಗ ಆರ್ಯವರ್ಧನ್ ಅವರ ಅಸಲಿ ಮುಖ ಹೊರಬಂದು ಅಲ್ಲಿಂದ ಪ್ರೇಕ್ಷಕರು ಕೂಡ ಈ ಧಾರಾವಾಹಿಯ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಅನಿರುದ್ಧ್ ಪಾತ್ರದ ಬಗ್ಗೆಯೂ ಕೂಡ ಕಿಡಿ ಕಾರಿದ್ದರು.
ಆದರೆ ಇದೀಗ ಆರ್ಯವರ್ಧನ್ ಆಗಿ ಅಭಿನಯಿಸುತ್ತಿರುವಂತಹ ಅನಿರುದ್ಧ್ ಅವರು ಆರ್ಯವರ್ಧನ್ ಪಾತ್ರದಿಂದ ಹೊರ ಬಂದಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ. ಹೌದು ಮೊನ್ನೆಯಷ್ಟೇ ಅನಿರುದ್ಧ್ ಅವರು ಜೊತೆ ಜೊತೆಯಲಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಹೊರಡಿದ್ದಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ. “ಜೊತೆಜೊತೆಯಲಿ” ಧಾರಾವಾಹಿ ಮೂಲಕ ಆರ್ಯವರ್ಧನ್ ಅಂತಲೇ ಜನಪ್ರಿಯವಾಗಿರುವ ಅನಿರುದ್ಧ್ ಹಾಗೂ ತಂಡದ ನಡುವೆ ಮೊದಲಿನಿಂದಲೂ ವೈಮಸ್ಸು ಇತ್ತು. ಇಂದು (ಆಗಸ್ಟ್ 18) ಧಾರಾವಾಹಿ ಚಿತ್ರೀಕರಣ ಮಾಡುವಾಗ ಅನಿರುದ್ಧ್ ಒಂದು ಸೀನ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಅದನ್ನು ತಂಡ ಒಪ್ಪದೇ ಇದ್ದಾಗ ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಹೊರನಡೆದಿದ್ದಾರೆ. ಅನಿರುದ್ಧ್ ಅವರ ಈ ವರ್ತನೆಯಿಂದ ಬೇಸತ್ತಿರೋ ತಂಡ ಈ ಬಾರಿ ಖಡಕ್ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಅನಿರುದ್ದ್ ”ಜೊತೆಜೊತೆಯಲಿ” ಧಾರಾವಾಹಿ ಶೂಟಿಂಗ್ ನಿಂದ ಹೊರ ಬೀಳುತ್ತಿದ್ದಂತೆ ಇತ್ತ ನಿರ್ಮಾಪಕ ಆರೂರು ಜಗದೀಶ್ ಹಾಗೂ ನಿರ್ದೇಶಕ ಮಧು ಉತ್ತಮ್ ಇಬ್ಬರೂ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಈ ವೇಳೆ ನಿರ್ಮಾಪಕರ ಸಂಘದಲ್ಲಿ ಸಭೆ ನಡೆಸಿ ಇನ್ನು ಮುಂದೆ ಯಾವುದೇ ನಿರ್ಮಾಪಕರು ಧಾರಾವಾಹಿಯಲ್ಲಿ ಅನಿರುದ್ದ್ ಗ್ ಅವಕಾಶ ನೀಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋ ಸುದ್ದಿ ಕೂಡ ಕಿರುತೆರೆವಲಯದಲ್ಲಿ ಕೇಳಿ ಬರುತ್ತಿದೆ. ಅನಿರುದ್ಧ್ ಅವರು ಇದೇ ಮೊದಲ ಬಾರಿ ಇಂತಹ ಕಿರಿಕ್ ಮಾಡಿಕೊಂಡಿಲ್ಲ ಇದಕ್ಕೂ ಮೊದಲೇ ಎರಡರಿಂದ ಮೂರು ಬಾರಿ ಶೂಟಿಂಗ್ ನಡೆಯುವಂತಹ ಸಂದರ್ಭದಲ್ಲಿ ಪಾತ್ರವನ್ನು ಅರ್ಧಕ್ಕೆ ಬಿಟ್ಟು ಹೋರ ನಡೆದಿದ್ದರೆ. ಆದರೆ ಅಂತ ಸಂದರ್ಭದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ಇಬ್ಬರೂ ಕೂಡ ಅನಿರುದ್ಧ್ ಅವರ ಬಳಿ ಮಾತನಾಡಿ ಅವರನ್ನು ಸಮಾಧಾನಪಡಿಸಿ ವಾಪಸ್ ಕರೆದುಕೊಂಡು ಬಂದಿದ್ದರು.
ಆದರೆ ಪದೇ ಪದೇ ಅನಿರುದ್ಧ್ ಅವರ ತಮ್ಮ ಅತೀವ ವರ್ತನೆಯಿಂದ ಈ ರೀತಿ ಮಾಡುವುದನ್ನು ಖಂಡಿಸಿದಂತಹ ನಿರ್ಮಾಪಕರು ಈ ಬಾರಿ ಕಠಿಣವಾದ ನಿರ್ಧಾರವನ್ನ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಜೊತೆಯಲ್ಲಿ ಧಾರವಾಹಿಯಲ್ಲಿ ಅನಿರುದ್ಧ್ ಅವರ ಪಾತ್ರವನ್ನು ಯಾವುದೇ ಕಾರಣಕ್ಕೂ ಮುಂದೆವರಿಸುವುದು ಬೇಡ ಆ ಪಾತ್ರಕ್ಕೆ ಬೇರೆಯವರನ್ನು ತರೋಣ ಎಂಬ ನಿರ್ಧಾರವನ್ನು ಮಾಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಅನಿರುದ್ಧವರು ನೋಡುವುದಕ್ಕೆ ಮಾತ್ರ ಸಾಫ್ಟ್ ಆಗಿ ಕಾಣಿಸುತ್ತಾರೆ ಆದರೆ ಧಾರಾವಾಹಿಯ ಕಿತಕರಣದಲ್ಲಿ ಬಹಳಷ್ಟು ಕಂಡೀಶನ್ ಹಾಕುತ್ತಾರೆ ಪಾತ್ರವನ್ನು ಮಾಡುವುದಿಲ್ಲ ಎಂದು ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಈ ರೀತಿ ಆದರೆ ಧಾರಾವಾಹಿಯನ್ನು ಮುನ್ನಡೆಸಿಕೊಂಡು ಹೋಗುವುದಾದರೂ ಹೇಗೆ ಎಂಬುದು ಸೀರಿಯಲ್ ತಂಡದ ವಾದವಾಗಿದೆ.
ಚಿತ್ರರಂಗದಲ್ಲಿ ಅವಕಾಶಗಳು ಇಲ್ಲದೆ ಇದ್ದಾಗ ಅನಿರುದ್ಧ್ ಅವರನ್ನು ಕೈಬೀಸಿ ಕರೆದದ್ದು ಜೀ ಕನ್ನಡ ವಾಹಿನಿ ಮತ್ತು ಜೊತೆ ಜೊತೆಯಲಿ ಧಾರಾವಾಹಿ ತಂಡ. ಈ ಒಂದು ಧಾರವಾಹಿಯಿಂದ ಅನಿರುಧ್ ಅವರಿಗೆ ಎಲ್ಲಿಲ್ಲದ ಪ್ರಶಂಸೆ ಕೀರ್ತಿ ಹೆಸರು ಎಲ್ಲವು ದೊರೆಯಿತು ಆದರೆ ಈ ಒಂದು ಖ್ಯಾತಿ ಹೆಚ್ಚು ದಿನ ಉಳಿಯಲಿಲ್ಲ ಅಂತ ಅನಿಸುತ್ತದೆ. ಅನಿರುದ್ಧ್ ಅವರು ತಾವೇ ತಮ್ಮ ಕೈಯಾರೆ ಎಡವಟ್ಟು ಮಾಡಿಕೊಂಡು ಇದೀಗ ಜನರ ಟೀಕೆಗೆ ಒಳಗಾಗಿದ್ದಾರೆ. ಸದ್ಯಕ್ಕೆ ಅನುರುದ್ದ್ ಅವರು ಧಾರವಾಹಿ ತಂಡದಿಂದ ಹೊರ ಬಂದಿದ್ದಾರೆ ಎಂಬುದು ಖಚಿತವಾದ ಮಾಹಿತಿಯಾಗಿದೆ. ಮುಂದೆ ಈ ಆರ್ಯವರ್ಧನ್ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎಂಬುದೇ ಒಂದು ದೊಡ್ಡ ಸವಾಲಿನ ಪ್ರಶ್ನೆಯಾಗಿದೆ ಈ ಒಂದು ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.