Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ಸ್ಟಾರ್ ನಟ ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.

Posted on August 29, 2022 By Kannada Trend News No Comments on ಈ ಸ್ಟಾರ್ ನಟ ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.

ಒಂದು ಸಿನಿಮಾ ಎಂದ ಮೇಲೆ ಆ ಸಿನಿಮಾಕ್ಕೆ ಆ ಸಿನಿಮಾದ ನಟ ಅಥವಾ ನಟಿ ಎಷ್ಟು ಮುಖ್ಯವೋ ಹಾಗೆ ತೆರೆ ಮೇಲೆ ಅವರಷ್ಟೇ ಸಮಕ್ಕೆ ಕಾಣಿಸಿಕೊಳ್ಳುವ ವಿಲ್ಲನ್ ಅಗಲಿ ಕಾಮಿಡಿ ಆಕ್ಟರ್ ಆಗಲಿ ಸಹಕಲಾವಿದರಾಗಲಿ ಪೋಷಕ ಪಾತ್ರದವರೆ ಆಗಲಿ ಜೂನಿಯರ್ ಆರ್ಟಿಸ್ಟ್ ಗಳು ಎಲ್ಲರೂ ಮುಖ್ಯವೇ. ಹೀಗೆ ಒಂದು ತಂಡ ಪೂರ್ತಿ ಒಟ್ಟಿಗೆ ಸೇರಿ ಸಿನಿಮಾದಲ್ಲಿ ಕಾಣಿಸಿಕೊಂಡಾಗ ಮಾತ್ರ ಅದು ಸಂಪೂರ್ಣವಾಗುತ್ತದೆ ಇದು ತೆರೆ ಮೇಲೆ ಇರುವವರ ಕಥೆಯಾದರೆ ತೆರೆ ಹಿಂದೆ ಕೂಡ ಇದಕ್ಕೆ ಸಾವಿರಾರು ಕೈಗಳು ಕೆಲಸ ಮಾಡಬೇಕಾಗುತ್ತದೆ ಡೈರೆಕ್ಟರ್ ಅಸಿಸ್ಟೆಂಟ್ ಡೈರೆಕ್ಟರ್ ಡ್ಯಾನ್ಸ್ ಮಾಸ್ಟರ್ ಫೈಟಿಂಗ್ ಮಾಸ್ಟರ್ ಕೋ ಡ್ಯಾನ್ಸರ್ ಮ್ಯೂಸಿಕ್ ಡೈರೆಕ್ಟರ್ ಸಿಂಗರ್ ಡಬ್ಬಿಂಗ್ ಆರ್ಟಿಸ್ಟ್ ಕ್ಯಾಮೆರಾಮನ್ ಅಸಿಸ್ಟೆಂಟ್ ಕ್ಯಾಮರ ಮ್ಯಾನ್ ಹೀಗೆ ಕ್ಯಾಬ್ ಕ್ಯಾರಾವಾನ್ಗಳ ಡ್ರೈವರ್ ತನಕ ಎಲ್ಲರೂ ಕೂಡ ಮುಖ್ಯವೇ.

ಆದರೆ ನಾವು ಹೆಚ್ಚಾಗಿ ಮುಖಗಳನ್ನು ನೆನಪಿಟ್ಟುಕೊಳ್ಳುವುದು ತೆರೆ ಮೇಲೆ ನಮ್ಮನ್ನು ರಂಜಿಸುವವರನ್ನು ಮಾತ್ರ. ಹೀಗಾಗಿ ಬೇರೆ ಎಲ್ಲಾ ಕಲಾವಿದರಿಗಿಂತಲೂ ಸಿನಿಮಾದಲ್ಲಿ ಸಿನಿಮಾದ ನಾಯಕ ಹಾಗೂ ನಾಯಕಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ ಅದನ್ನು ಹೊರತುಪಡಿಸಿ ಹಾಸ್ಯ ಕಲಾವಿದರನ್ನು ಹೆಚ್ಚಾಗಿ ಜನರು ಇಷ್ಟಪಡುತ್ತಾರೆ. ಈ ಸಾಲಿನಲ್ಲಿ ನಮ್ಮ ಕನ್ನಡದ ಹಲವಾರು ಹಾಸ್ಯ ಕಲಾವಿದರುಗಳು ಇಂದಿಗೂ ಕೂಡ ನಮ್ಮ ಜನರನ್ನು ನಕ್ಕಿನಲಿಸಿ ಮನೋರಂಜಸಿ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಉಳಿದಿದ್ದಾರೆ. ಆ ಸಾಲಿನಲ್ಲಿ ನಾವು ಹೆಚ್ಚಾಗಿ ಉದಾಹರಿಸುವುದು ನರಸಿಂಹರಾಜು ಬಾಲಕೃಷ್ಣ ಉಮೇಶ್ ಹೊನ್ನವಡಿ ಕೃಷ್ಣ ಸಿಹಿ ಕಹಿ ಚಂದ್ರು ಬ್ಯಾಂಕ್ ಜನಾರ್ಧನ್ ಇತ್ತೀಚೆಗೆ ಜಗ್ಗೇಶ್ ಕೋಮಲ್ ಸಾಧುಕೋಕಿಲ ನಯಕೋಕಿಲ ಬುಲೆಟ್ ಪ್ರಕಾಶ್ ಮಾಸ್ಟರ್ ಆನಂದ್ ಮಿತ್ರ ಪವನ್ ಶರಣ್ ಚಿಕ್ಕಣ್ಣ ಮುಂತಾದವರನ್ನು ಹೆಸರಿಸುತ್ತೇವೆ.

ಆದರೆ ಇನ್ನೂ ಅನೇಕ ಹಾಸ್ಯ ಕಲಾವಿದರುಗಳು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಇದ್ದಾರೆ. ಇವರು ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಹೆಚ್ಚಾಗಿ ಜನರು ಇವರನ್ನು ಗುರುತಿಸುವುದಿಲ್ಲ. ಯಾಕೆಂದರೆ ಅಷ್ಟೊಂದು ಪವರ್ ಫುಲ್ ಆದ ಪ್ಲೇಸ್ ಸಿನಿಮಾದಲ್ಲಿ ಅವರಿಗೆ ಇರುವುದಿಲ್ಲ ಕೇವಲ ಒಂದೆರಡು ಸೀನ್ಗಳಲ್ಲಿ ಅಥವಾ ಕಾಮಿಡಿ ಮಾಡುವ ತಂಡದಲ್ಲಿ ಇವರು ಗುರುತಿಸಿಕೊಂಡಿರುತ್ತಾರೆ. ಹೀಗಾಗಿ ಎಷ್ಟೇ ಸಿನಿಮಾಗಳಲ್ಲಿ ನಟಿಸಿದರು ಕೂಡ ಇವರು ಎಲ್ಲರಿಗೂ ರಿಚ್ ಆಗಿರುವುದಿಲ್ಲ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಇವರು ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಹೊತ್ತು ಇಲ್ಲಿ ಉಳಿದುಕೊಂಡಿರುವುದರಿಂದ ಉಳಿದ ಕ್ಷೇತ್ರಗಳನ್ನು ಕೂಡ ಇವರ ಗಮನ ಹೋಗಿರುವುದಿಲ್ಲ.

ಸಿನಿಮಾ ಮೇಲೆ ಇವರು ಡಿಪೆಂಡ್ ಆಗಿರುವುದರಿಂದ ಇವರ ಗಮನವೆಲ್ಲ ಸಿನಿಮಾ ಅವಕಾಶಗಳನ್ನು ಪಡೆಯುವುದು ಹಾಗೂ ಅಭಿನಯಿಸುವುದರಲ್ಲಿ ಇರುತ್ತದೆ ಆದರೆ ಇವರನ್ನು ಸಿನಿಮಾ ತಂಡ ಕೂಡ ನಿರ್ಲಕ್ಷಿಸುತ್ತದೆ. ಇದನ್ನು ಹಾಸ್ಯನಟ ಅರಸು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರೇ ಹೇಳಿರುವ ಪ್ರಕಾರ ಅವರು ತುಂಬಾ ಸಣ್ಣ ಕಲಾವಿದ ಆಗಿರುವುದರಿಂದ ಸಿನಿಮಾ ರಂಗದಲ್ಲಿ ಅವರಿಗೆ ಹೆಚ್ಚಾಗಿ ಬೆಲೆ ಕೊಡುವುದಿಲ್ಲವಂತೆ. ತುಂಬಾ ಅವಮಾನ ಮಾಡುತ್ತಾರಂತೆ. ಒಮ್ಮೆ ಇವರಿಗಾದ ಕಹಿ ಅನುಭವವನ್ನು ಕೂಡ ಹೇಳಿಕೊಂಡಿದ್ದಾರೆ. ಲವಕುಶ ಎನ್ನುವ ಶಿವಣ್ಣ ಮತ್ತು ಉಪೇಂದ್ರ ಅವರ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಜೂನಿಯರ್ ಆರ್ಟಿಸ್ಟ್ ಗಳಿಗೆ ಮಾತ್ರ ಫೈಟಿಂಗ್ ಸೀನ್ ಒಂದಕ್ಕಾಗಿ ಕಳಿಸಲಾಗಿತ್ತಂತೆ ಅಲ್ಲಿ ಅರಸು ಅವರು ತಮಗೆ ಆಫರ್ ಇಲ್ಲದಿದ್ದರೂ ಹೋಗಿದ್ದರಂತೆ.

ಆಹ್ವಾನ ಇಲ್ಲದೆ ಬಂದ ಕಾರಣ ಕಲಾವಿದ ಎನ್ನುವುದನ್ನು ಕೂಡ ನೋಡದೆ ಇವರಿಗೆ ಊಟ ಹಾಕದೆ ಹಾಗೇ ಕಳುಹಿಸಿದರಂತೆ. ಇದು ಬಹುಶಃ ಶಿವಣ್ಣ ಮತ್ತು ಉಪೇಂದ್ರ ಅವರ ಗಮನಕ್ಕೆ ಬರದೇ ಇರಬಹುದು ಆದರೆ ಪ್ರೊಡಕ್ಷನ್ ಟೀಮ್ ಈ ರೀತಿ ನಡೆದುಕೊಂಡಿರುವುದು ತುಂಬಾ ತಪ್ಪು ಅನಿಸುತ್ತದೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾದಲ್ಲೇ ಹೀಗೆ ಮಾಡಿದ್ದಾರೆ ಅಂದ ಮೇಲೆ ಇನ್ನೂ ಬೇರೆ ಸಿನಿಮಾದಲ್ಲಿ ಈ ಕಲಾವಿದರನ್ನು ಹೇಗೆ ನೆಡೆಸಿಕೊಳ್ಳುತ್ತಾರೆ ಎಂಬುದನ್ನು ಊಹೆ ಮಾಡಿ, ಚಿತ್ರರಂಗದಲ್ಲೂ ಮೇಲು ಕೀಳು ಎಂಬುದು ಇದೆ ಎಂಬುದು ಇದರಿಂದಲೇ ಅರ್ಥ ಆಗುತ್ತೆ. ಚಿತ್ರರಂಗದ ಈ ತಾರತಮ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

Entertainment Tags:Arasu, Shivarajkumar, Upendra
WhatsApp Group Join Now
Telegram Group Join Now

Post navigation

Previous Post: ಸೃಜನ್ ಜೊತೆ ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಡ್ಯಾನ್ಸ್ ನೋಡಿದರೆ ಬಾಯಲ್ಲಿ ಲೀಟರ್ ಗಟ್ಟಲೆ ನೀರು ಬಿಟ್ಟುಕೊಳ್ಳುತ್ತೀರ ಅಬ್ಬಾಬ್ಬ ಏನು ಮಸ್ತ್ ಡಾನ್ಸ್ ಮಾಡ್ತಾರೆ ನೋಡಿ.
Next Post: ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore