ಹೊಸ ವರ್ಷದ ದಿನವೇ ಹೊಸ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ…
ನೆನ್ನೆ ಅಷ್ಟೇ ಮುಗಿದ 2020ರ ವರ್ಷದಲ್ಲಿ ಕನ್ನಡದ ಹಲವು ಸೆಲೆಬ್ರಿಟಿಗಳು ಮದುವೆ ಆಗಿದ್ದಾರೆ. ಕೆಲವರು ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಹಸೆಮಣೆ ಇರುವ ಸುಳಿವು ನೀಡಿದ್ದಾರೆ. ವರ್ಷದ ಕೊನೆಯ ತಿಂಗಳಿನಲ್ಲಂತೂ ತರಾತುರಿಯಲ್ಲಿ ಹಲವರ ವಿವಾಹ ನಡೆದಿದೆ. ನಟಿ ಅಧಿತಿ ಪ್ರಭುದೇವ್ ಅವರ ವಿವಾಹ ಕೂಡ ಕಳೆದ ತಿಂಗಳು ಜರುಗಿತ್ತು ಮತ್ತು ಅಭಿಷೇಕ ಅಂಬರೀಶ್ ಅವರು ಸಹ ಡಿಸೆಂಬರ್ ತಿಂಗಳಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡರು.
ಧನುರ್ಮಾಸ ಶುರುವಾಗುತ್ತದೆ ಎನ್ನುವ ಆತುರದಲ್ಲಿ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕೂಡ ಮನೆಯಲ್ಲಿಯೇ ಎಂಗೇಜ್ಮೆಂಟ್ ಮಾಡಿಕೊಂಡು ಮುಂದಿನ ವರ್ಷ ಅದ್ದೂರಿಯಾಗಿ ಮದುವೆ ಆಗುವ ಬಗ್ಗೆ ಸುದ್ದಿ ಕೊಟ್ಟಿದ್ದಾರೆ. ಈ ರೀತಿ ಸಿನಿಮಾ ನಟರು ಮಾತ್ರವಲ್ಲದೇ ಧಾರಾವಾಹಿ ಕಲಾವಿದರು ಕೂಡ ಸದ್ದಿಲ್ಲದೆ ಹೊಸ ಜೀವನ ಶುರು ಮಾಡುತ್ತಿದ್ದಾರೆ.
ಗಟ್ಟಿಮೇಳ ಖ್ಯಾತಿಯ ಅಧಿತಿ ಅಲಿಯಾಸ್ ಪೂಜ ಹಾಗೂ ಪಾರು ಧಾರವಾಹಿಯಲ್ಲಿ ಆದಿ ತಮ್ಮ ಪ್ರೀತು ಪಾತ್ರಧಾರಿ ಇಬ್ಬರು ನವೆಂಬರ್ ತಿಂಗಳಿನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡರು ಈಗಿವರು ಮದುವೆ ತಯಾರಿಯಲ್ಲಿ ಇದ್ದಾರೆ. ಗಟ್ಟಿಮೇಳ ಧಾರಾವಾಹಿಯ ಸುಹಾಸಿನಿ ಪಾತ್ರಧಾರಿ ಸ್ವಾತಿ ಕೂಡ ವರ್ಷದ ಕೊನೆಯಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟರು. ಇದೀಗ ವರ್ಷದ ಆರಂಭದ ದಿನವೇ ಮತ್ತೊಬ್ಬ ಝೀ ಕನ್ನಡದ ಪ್ರತಿಭೆ ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದಾರೆ.
ಕಾಮಿಡಿ ಕಿಲಾಡಿಗಳು ಎನ್ನುವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಈಗ ಕರ್ನಾಟಕದ ಪೂರ್ತಿ ಪ್ಯಾಕು ಪ್ಯಾಕು ಎಂದು ಕರೆಸಿಕೊಳ್ಳುತ್ತಿರುವ ಹಿತೇಶ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿತೇಶ್ ಅವರು ಮೂಲತಃ ಮಂಗಳೂರು ಕಡೆಯವರು ಹಿತೇಶ್ ಪೂಜಾರಿ ಎನ್ನುವುದು ಇವರ ಪೂರ್ತಿ ಹೆಸರು. ತಮ್ಮ ಬಾಲ್ಯದ ಗೆಳತಿ ಹಾಗೂ ಪ್ರೇಯಸಿ ಆದ ಸ್ವಾತಿ ಪೂಜಾರಿ ಅವರನ್ನು ಪ್ರೀತಿಸಿ ಕುಟುಂಬಸ್ಥರು ಹಾಗೂ ಗುರುಹಿರಿಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಕೈ ಹಿಡಿದಿದ್ದಾರೆ.
ಕಳೆದ ವರ್ಷ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಈಗ ವರ್ಷದ ಮೊದಲ ದಿನವೇ ಮದುವೆ ಆಗಿದ್ದಾರೆ ಈ ವಿವಾಹ ವಾರ್ಷಿಕೋತ್ಸವಕ್ತವಾಗಿ ಹಾಗೂ ಅದ್ದೂರಿಯಾಗಿ ನಡೆದಿದೆ. ಸದ್ಯಕ್ಕೆ ಅವರ ಮದುವೆಯ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಮದುಮಕ್ಕಳಿಬ್ಬರು ಕೆಂಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ಈ ವಿಡಿಯೋಗಳಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಮಡೆನೂರು ಮನು, ಮಿಂಚು ಸೇರಿದಂತೆ ಹಲವು ಕಲಾವಿದರುಗಳು ಕಾಣಿಸಿರುತ್ತಾರೆ.
ಎಲ್ಲರೂ ಸಹ ಸ್ವಾತಿ ಹಾಗೂ ಹಿತೇಶ್ ಅವರ ಮದುವೆಗೆ ಸಾಕ್ಷಿಯಾಗಿದ್ದು ಅನುಶ್ರೀ ಹಾಗೂ ಶಿವಣ್ಣ ಕೂಡ ಮದುವೆಗೆ ಹಾಜರಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ತೆರೆಕಂಡ ಕಾಮಿಡಿ ಕಿಲಾಡಿಗಳು ಎನ್ನುವ ಹಾಸ್ಯ ಕಾರ್ಯಕ್ರಮವು ಹಲವು ಜನ ಕಾಮಿಡಿ ಪ್ರತಿಭೆಗಳಿಗೆ ವೇದಿಕೆ ಗಿಟ್ಟಿಸಿ ಕೊಟ್ಟಿದ್ದು ಕರ್ನಾಟಕದಾದ್ಯಂತ ಇವರನ್ನು ಫೇಮಸ್ ಮಾಡಿದೆ. ಜೊತೆಗೆ ಮತ್ತಷ್ಟು ಕಾರ್ಯಕ್ರಮಗಳಲ್ಲಿ ಹಳೆಯ ಕಂಟೆಸ್ಟೆಂಟ್ಗಳಿಗೆ ಮತ್ತೊಮ್ಮೆ ಕಾಣಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೆ.
ಕಾಮಿಡಿ ಕಿಲಾಡಿಗಳು, ಡಿಕೆಡಿ, ಕಾಮಿಡಿ ಚಾಂಪಿಯನ್ ಜೊತೆಗೆ ಹೊಸ ಕಾಮಿಡಿ ಕಿಲಾಡಿಗಳು ಸೀಸನ್ ಹೀಗೆ ಎಲ್ಲದರಲ್ಲೂ ಸಹ ಹಿತೇಶ್ ಅವರು ಕಾಣಿಸಿರುತ್ತಾರೆ. ಈಗ ಎಲ್ಲಾ ಚಾನೆಲ್ ಅಲ್ಲೂ ಸಹ ಹಿತೇಶ್ ಅವರು ಕಾಣಿಸಿಕೊಳ್ಳುತ್ತಿದ್ದು ಸಿನಿಮಾ ಕಡೆ ಕೂಡ ಮುಖ ಮಾಡಿದ್ದಾರೆ. ಈಗ ಹೊಸ ಜೀವನ ಆರಂಭ ಮಾಡಿರುವ ಹಿತೇಶ್ ಅವರಿಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಹಾಗೂ ಕೆರಿಯರ್ ಎರಡರಲ್ಲೂ ಸಹ ಹೇಳಿಕೆ ಸಿಗಲಿ ಎಂದು ಹಾರೈಸೋಣ ಹಾಗೂ ಸ್ವಾತಿ ಮತ್ತು ಹಿತೇಶ್ ಅವರ ಜೋಡಿ ಬಹಳ ಮುದ್ದಾಗಿತ್ತು ಮದುವೆಯ ಶುಭಾಶಯಗಳು ತಿಳಿಸೋಣ.
https://youtu.be/kIPGQYgQ3KQ