Friday, June 9, 2023
HomeEntertainmentದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ...

ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್

ದರ್ಶನ್ ಅವರ ಈ ಸ್ಥಿತಿಗೆ ಯಾರು ಕಾರಣ ಎಂದು ಶಾ-ಕಿಂ-ಗ್ ಹೇಳಿಕೆ ಕೊಟ್ಟ ಮೀನ ತೂಗುದೀಪ್…

ದರ್ಶನ್ ಅವರು ಸದಾ ಒಂದಲ್ಲ ಒಂದು ವಿಚಾರವಾಗಿ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗಾಗಲೇ ಹಲವು ವಿಷಯಗಳಲ್ಲಿ ಇವರ ಹೆಸರು ಸುದ್ದಿಯಲ್ಲಿ ಇತ್ತು, ಇದೀಗ ಸುದ್ದಿ ಮಾಧ್ಯಮದಿಂದಲೇ ಇವರನ್ನು ಬ್ಯಾನ್ ಮಾಡುವ ತನಕ ಅವರ ಗಲಾಟೆಗಳು ಜೋರಾಗಿದೆ. ಈ ವರ್ಷ ಜನವರಿ 26ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ ಮಾಧ್ಯಮಗಳು ಎಲ್ಲೂ ಈ ಬಗ್ಗೆ ಪ್ರಚಾರ ಮಾಡುತ್ತಿಲ್ಲ ಹಾಗು ದರ್ಶನ್ ಅವರ ಯಾವುದೇ ಸುದ್ದಿಯನ್ನು ಪ್ರಸಾರ ಮಾಡುತ್ತಿಲ್ಲ ಇದಕ್ಕೆ ಸೆಡ್ಡು ಹೊಡೆದು ನಿಂತಿರುವ ದರ್ಶನ್ ಅಭಿಮಾನಿಗಳು.

ತಾವೇ ಸೋಶಿಯಲ್ ಮೀಡಿಯಾಗಳ ಮೂಲಕ ವಾಹನಗಳಲ್ಲಿ ಪೋಸ್ಟರ್ ಅಟಿಸುವ ಮೂಲಕ ಊರು ಊರಲ್ಲಿ ದರ್ಶನ್ ಕ್ರಾಂತಿ ಸುದ್ದಿ ಹಂಚುವ ಮೂಲಕ ಕಾಂತಿ ಸಿನಿಮಾಕ್ಕೆ ಪ್ರಚಾರ ನೀಡಿ ಸಿನಿಮಾವನ್ನು ಗೆದ್ದೇ ಗೆಲ್ಲುತ್ತೇವೆ ಎಂದು ತೊಡೆತಟ್ಟಿ ನಿಂತಿದ್ದಾರೆ. ಇದರ ಅಂಗವಾಗಿ ಕಳೆದ ತಿಂಗಳಿನಿಂದ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗುತ್ತಿದೆ. ದರ್ಶನ್ ಹಾಗೂ ಇಡೀ ಕ್ರಾಂತಿ ಚಿತ್ರ ತಂಡ ಕರ್ನಾಟಕದ ಹಲವು ಕಡೆ ಹೋಗಿ ಸಿನಿಮಾಗೆ ಪ್ರಚಾರ ನೀಡುತ್ತಿದೆ.

ಅಲ್ಲದೆ ಅಭಿಮಾನಿಗಳ ಎದುರೇ ಕ್ರಾಂತಿ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡುತ್ತಿದೆ. ಮೊದಲಿಗೆ ಧರಣಿ ಮಂಡಲ ಎನ್ನುವ ಹಾಡನ್ನು ರಿಲೀಸ್ ಮಾಡಿದ ತಂಡವು ಹೊಸಪೇಟೆಯಲ್ಲಿ ಬೊಂಬೆ ಬೊಂಬೆ ಹಾಡು ಹಾಗೂ ಹುಬ್ಬಳ್ಳಿಯಲ್ಲಿ ಪುಷ್ಪವತಿ ಹಾಡನ್ನು ರಿಲೀಸ್ ಮಾಡಿದೆ. ಆದರೆ ಹೊಸಪೇಟೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕಿಡಿಗೇಡಿಗಳು ದರ್ಶನ್ ಅವರಿಗೆ ಚಪ್ಪಲಿ ಎಸೆದು ಸ್ಟಾರ್ ನಟನೊಬ್ಬನಿಗೆ ಅವಮಾನ ಆಗುವಂತೆ ನಡೆದುಕೊಂಡು ಅದಕ್ಕೆ ನಾನಾ ಅರ್ಥಗಳು ಬರುವಂತೆ ಸಂಚು ಮಾಡುತ್ತಿದ್ದಾರೆ.

ದರ್ಶನ್ ಅವರೇ ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದರು ಸಹ ಅಭಿಮಾನಿಗಳ ಮಾತ್ರ ಇದಕ್ಕೆ ಅವರು ಕಾರಣ ಇವರು ಕಾರಣ ಎಂದು ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಹಾಗೂ ದೊಡ್ಡಮನೆ ಕುಟುಂಬಕ್ಕೂ ಈ ಘಟನೆಗೂ ಲಿಂಕ್ ಇದೆ ಎಂದು ಚರ್ಚೆ ನಡೆಯುತ್ತಿದೆ. ಇದಕ್ಕೆ ಹಳೆಯ ನಾನಾ ಘಟನೆಗಳನ್ನು ಸೇರಿಸಿ ಬಣ್ಣ ಹಚ್ಚುವ ಪ್ರಯತ್ನವೂ ನಡೆಯುತ್ತಿದೆ.

ಇದರಲ್ಲಿ ಸತ್ಯನುಸತ್ಯತೆ ಏನು ಎನ್ನುವುದು ಇಡೀ ಕರ್ನಾಟಕಕ್ಕೆ ತಿಳಿದಿದೆ, ಈಗ ದರ್ಶನ್ ಅವರ ತಾಯಿ ಕೂಡ ಈ ಘಟನೆ ಬಗ್ಗೆ ಮಾತನಾಡಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.  ದರ್ಶನ್ ಅವರು ಇಂದು ಈ ರೀತಿ ಪರ್ಸನಾಲಿಟಿ ಹೊಂದಿದ್ದಾರೆ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎಂದರೆ ಅದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ, ಅವರು ಕೊಟ್ಟ ಬೆಂಬಲ ಸಹಕಾರದಿಂದ ನಾವು ಇಂದು ಈ ರೀತಿ ಬದುಕುತ್ತಿದ್ದೇವೆ. ಅದಕ್ಕಾಗಿ ನಾವು ಎಂದೆಂದಿಗೂ ಅವರಿಗೆ ಚಿರಋಣಿ ಎಂದಿದ್ದಾರೆ.

ಜೊತೆಗೆ ಸಿನಿಮಾದಿಂದ ಪತಿ ಹಾಗೂ ಮಗನನ್ನು ಹೊರ ಹಾಕುವ ಮೂಲಕ ವಂಚನೆ ಮಾಡಿದ್ದ ಸಂದರ್ಭದಲ್ಲಿ  ಅಂದು ಪಾರ್ವತಮ್ಮ ಅವರ ಬಳಿ ಅವರು ಅವರ ದುಃಖವನ್ನು ಹೇಳಿಕೊಂಡಿದ್ದ ವಿಚಾರವನ್ನು ನೆನೆದು ಹಂಚಿಕೊಂಡಿದ್ದಾರೆ. ದರ್ಶನ್ ಅವರು ಸಹ ದೊಡ್ಮನೆ ಬಗ್ಗೆ ನಾನಾ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ದರ್ಶನ್ ಹಾಗೂ ಪುನೀತ್ ಅವರ ಕುಟುಂಬಕ್ಕೆ ಎಷ್ಟು ಅವಿನಾಭವ ಸಂಬಂಧ ಇದೆ ಎಂದು ಆದರೆ ಕೆಲವು ಕಿಡಿಗೇಡಿಗಳು ಹಾಗೂ ನಖಲಿ ಅಭಿಮಾನಿಗಳಿಂದ ಸ್ಟಾರ್ ವಾರ್. ಶುರುವಾಗಿದೆ ಶೀಘ್ರದಲ್ಲೇ ಎಲ್ಲವೂ ಇತ್ಯರ್ಥ ಆಗಲಿ ಎಂದು ಹರಸೋಣ.