Home Entertainment ದರ್ಶನ್ ವಶೀಕರಣ ಮಾಡ್ತಾನೆ, ಡಿ-ಬಾಸ್ ಮೇಲೆ ಗಂಭೀರ ಆರೋಪ ಮಾಡುತ್ತಿರುವ ಅಹೋರಾತ್ರ. ಕ್ರಾಂತಿ ಸಿನಿಮಾಗೆ ಮತ್ತೊಂದು ಕಂಟಕ

ದರ್ಶನ್ ವಶೀಕರಣ ಮಾಡ್ತಾನೆ, ಡಿ-ಬಾಸ್ ಮೇಲೆ ಗಂಭೀರ ಆರೋಪ ಮಾಡುತ್ತಿರುವ ಅಹೋರಾತ್ರ. ಕ್ರಾಂತಿ ಸಿನಿಮಾಗೆ ಮತ್ತೊಂದು ಕಂಟಕ

0
ದರ್ಶನ್ ವಶೀಕರಣ ಮಾಡ್ತಾನೆ, ಡಿ-ಬಾಸ್ ಮೇಲೆ ಗಂಭೀರ ಆರೋಪ ಮಾಡುತ್ತಿರುವ ಅಹೋರಾತ್ರ. ಕ್ರಾಂತಿ ಸಿನಿಮಾಗೆ ಮತ್ತೊಂದು ಕಂಟಕ
ದರ್ಶನ್ ಮೇಲೆ ಮತ್ತೊಂದು ಆರೋಪ

ಅಹೋರಾತ್ರ ಈ ಹೆಸರು ಈಗ ಕರ್ನಾಟಕದಾದ್ಯಂತ ಫೇಮಸ್. ವೃಕ್ಷ ರಕ್ಷಕ, ಮಹಿಳಾ ಪರವಾದಿ, ಸಾಮಾಜಿಕ ಹೋರಾಟಗಾರ, ಜ್ಯೋತಿಷಿ ಈ ರೀತಿ ನಾನಾ ಕೆಲಸಗಳಿಂದ ಫೇಮಸ್ ಆಗಿರುವ ಇವರು ಹೆಚ್ಚು ಜನರಿಗೆ ಪರಿಚಯ ಆಗಿದ್ದು ಸುದೀಪ್ ಅವರ ರಮ್ಮಿ ವಿವಾದದ ವಿಷಯವಾಗಿ ಧ್ವನಿ ಎತ್ತಿದ ನಂತರ. ರಮ್ಮಿ ಎನ್ನುವ ಆನ್ಲೈನ್ ಆಟವನ್ನು ಪ್ರೋತ್ಸಾಹಿಸುತ್ತಿರುವ ಸೆಲೆಬ್ರಿಟಿ ಗಳಿಗೆ ಅದರಲ್ಲೂ ಕನ್ನಡದಲ್ಲಿ ಸುದೀಪ ಅವರು ಆ ಜಾಹೀರಾತಿನಲ್ಲಿ ಅಭಿನಯಿಸಿದಕ್ಕೆ ಬಾರಿ ಆಕ್ರೋಶ ಹೊರಹಾಕಿ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ಅಂದಿನಿಂದ ಕಿಚ್ಚನ ಅಭಿಮಾನಿಗಳು ಹಾಗೂ ಅಹೋರಾತ್ರ ಅವರ ಅನುಯಾಯಿಗಳ ನಡುವೆ ಸೋಶಿಯಲ್ ಮೀಡಿಯಾ ವಾರ್ ಶುರು ಆಗಿತ್ತು. ಇದಾದ ನಂತರ ಅನೇಕ ವಿವಾದಗಳು ಭುಗಿಲೆದ್ದಿದ್ದವು ಇದೀಗ ಸುದೀಪ್ ನಂತರ ಯೋಗರಾಜ್ ಭಟ್ ಹಾಗೂ ದರ್ಶನ್ ಅವರ ವಿರುದ್ಧ ಮತ್ತು ಕ್ರಾಂತಿ ಸಿನಿಮಾದ ವಿರುದ್ಧ ಮಾತನಾಡಿ ಅಹೋರಾತ್ರ ಮತ್ತೆ ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ದರ್ಶನ್ ಅವರು ವಶೀಕರಣ ಮಾಡುತ್ತಿದ್ದಾರೆ ಎನ್ನುವಷ್ಟರ ಮಟ್ಟಿಗೆ ಗಂಭೀರವಾಗಿ ಆರೋಪ ಹೊರೆಸಿ ಮಾತನಾಡಿದ್ದಾರೆ.

ಇವರ ಮಾತಿನ ಅರ್ಥ ಈ ರೀತಿ ಇದೆ ದರ್ಶನ್ ಅವರು ಕ್ರಾಂತಿ ಸಿನಿಮಾ ವನ್ನು ಅಕ್ಷರ ಕ್ರಾಂತಿ ಕುರಿತು ಮಾಡಿರುವ ಸಿನಿಮಾ, ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸ ಹಾಗೂ ಪ್ರಾಮುಖ್ಯತೆಗಳು ಬಗ್ಗೆ ತಿಳಿಸುವ ಸಿನಿಮಾ ಎಂದೆಲ್ಲಾ ಹೇಳಿಕೊಂಡು ಸುಮ್ಮನೆ ಪ್ರಚಾರಕ್ಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ ಆದರೆ ಸಿನಿಮಾದಲ್ಲಿ ಅದಕ್ಕಿಂತಲೂ ಬೇರೆ ವಿಷಯಗಳ ಬಗ್ಗೆ ಹೆಚ್ಚು ಕೇಂದ್ರೀಕರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಅದರಲ್ಲೂ ಪುಷ್ಪವತಿ ಎನ್ನುವ ಕ್ರಾಂತಿ ಸಿನಿಮಾದ ಹಾಡು ರಿಲೀಸ್ ಆದ ಮೇಲೆ ಅದು ಇನ್ನು ತಾರಕಕ್ಕೇರಿದೆ.

ಪುಷ್ಪವತಿ ಎಂದು ಮೈ ನೆರೆದ ಹೆಣ್ಣು ಮಕ್ಕಳನ್ನು ಕರೆಯುತ್ತಾರೆ ಆದರೆ ಈ ಹಾಡಿನಲ್ಲಿ ಯೋಗರಾಜ್ ಭಟ್ ಅವರು ಬರೆದಿರುವ ಸಾಲುಗಳು ಅಕ್ಕನ ಗಂಡನನ್ನು ಬಯಸುವ ರೀತಿ ಇದೆ. ಇದು ನಮ್ಮ ಸಂಸ್ಕೃತಿ ಅಲ್ಲ, ಇಂತಹ ಹಾಡುಗಳಿಂದ ಎಂತಹ ಸಂದೇಶ ತಲುಪುತ್ತದೆ ಎಂದು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗೆಯೇ ದರ್ಶನ್ ಅವರನ್ನು ಏಕವಚನದಲ್ಲಿ ನಿಂದಿಸಿರುವ ಅವರು ರೌಡಿ ಬಾಸ್, ಹೇಡಿ ಬಾಸ್ ಎಂದೆಲ್ಲ ಕರೆದಿದ್ದಾರೆ. ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಚಾರದ ಸಮಯದಲ್ಲಿ ಅದೃಷ್ಟ ದೇವತೆಯ ಬಗ್ಗೆ ಆಡು ಭಾಷೆಯಲ್ಲಿ ಕೆಲ ಮಾತುಗಳನ್ನು ಮಾತಿನ ಬರದಲ್ಲಿ ಆಡಿದ್ದರು.

ಅಂದಿನಿಂದ ದೇವತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಇನ್ನು ಸಾಮಾನ್ಯ ಹೆಣ್ಣು ಮಕ್ಕಳ ಕಥೆ ಏನು? ಸಮಾಜದಲ್ಲಿ ಸ್ಟಾರ್ ನಟರಾಗಿರುವ ಇವರೇ ಈ ರೀತಿ ನಡೆದುಕೊಂಡರೆ ಸಮಾಜದ ಗತಿ ಏನು ಎಂದೆಲ್ಲಾ ಅಹೋರಾತ್ರ ಅವರು ಅಂದಿನಿಂದ ದರ್ಶನ್ ಅವರ ವಿರುದ್ಧ ಮಾತನಾಡುತ್ತಲೇ ಬರುತ್ತಿದ್ದಾರೆ. ಈಗ ಅಹೋರಾತ್ರ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ದೊಡ್ಡ ಮಾತಿನ ವಾಗ್ವಾದವೇ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

ಅಹೋರಾತ್ರ ಮುಂದುವರೆದು ವೇದ ಸಿನೆಮಾಗೆ ಕ್ರಾಂತಿ ಸಿನಿಮಾವನ್ನು ಕಂಪೇರ್ ಮಾಡಿ ಮಾತನಾಡಿದ್ದಾರೆ. ವೇದ ಸಿನಿಮಾದಲ್ಲಿರುವ ಹೆಣ್ಣು ಮಕ್ಕಳ ಕಾಲ ಕೆಳಗೆ ತೂರಿ ಸ್ಟಾರ್ ನಟರು ಪಾಠ ಕಲಿಯಬೇಕು. ಹೆಣ್ಣಿಗೆ ಹೇಗೆ ಗೌರವ ಕಲ್ಲಿಸಿ ಕೊಡಬೇಕು ಎನ್ನುವುದನ್ನು ವೇದ ಸಿನಿಮಾ ತಂಡದಿಂದ ಕಲಿಯಿರಿ ಹಾಗೂ ವೇದ ಸಿನಿಮಾ ಈ ಸಮಾಜಕ್ಕೆ ತಕ್ಕ ಪಾಠ ಕಲಿಸುವ ಸರಿಯಾದ ಸಿನಿಮಾ ಆಗಿದೆ ಎಂದು, ಇಂತಹ ಸಿನಿಮಾ ನೀಡಿದಕ್ಕಾಗಿ ಇಡೀ ತಂಡಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

LEAVE A REPLY

Please enter your comment!
Please enter your name here