Sunday, May 28, 2023
HomeEntertainmentಬಿಗ್ ಬಾಸ್ ವೇದಿಕೆ ಮೇಲೆ ಕಣ್ಣೀರಿಟ್ಟ ಕಿಚ್ಚ ಸುದೀಪ್ ಕಾರಣವೇನು ಗೊತ್ತಾ.?

ಬಿಗ್ ಬಾಸ್ ವೇದಿಕೆ ಮೇಲೆ ಕಣ್ಣೀರಿಟ್ಟ ಕಿಚ್ಚ ಸುದೀಪ್ ಕಾರಣವೇನು ಗೊತ್ತಾ.?

ಬಿಗ್ ಬಾಸ್ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಕಿಚ್ಚ ಸುದೀಪ್

ನಿನ್ನೆಯಷ್ಟೇ ಬಿಗ್ ಬಾಸ್ ಸೀಸನ್ 9 ಮುಕ್ತಾಯವಾಗಿದೆ ಈ ಬಾರಿಯ ವಿನ್ನರ್ ರೂಪೇಶ್ ಶೆಟ್ಟೆ ಎಂದು ಘೋಷಣೆ ಮಾಡಿದ್ದಾರೆ ರಾಕೇಶ್ ಅಡಿಗ ಅವರು ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಸುಮಾರು 150 ದಿನಗಳಿಂದ ಕಾತುರದಿಂದ ಕಾಯುತ್ತಿದ್ದಂತಹ ಅಭಿಮಾನಿಗಳಿಗೆ ಕೊನೆಗೂ ನೆನ್ನೆ ಒಂದು ಅಂತಿಮ ನಿರ್ಧಾರ ಎಂಬುದು ಸಿಕ್ಕಿದೆ. ಕರಾವಳಿ ಮೂಲದ ರೂಪೇಶ್ ಶೆಟ್ಟಿ ಅವರು ಈ ಬಾರಿಯ ಬಿಗ್ ಬಾಸ್ ಗೆದ್ದಿದ್ದು ಅಲ್ಲಿನ ಜನರಿಗೆ ಬಹಳಷ್ಟು ಖುಷಿ ತಂದುಕೊಟ್ಟಿದೆ. ಮಿನಿ ಬಿಗ್ ಬಾಸ್ ಓಟಿಟಿ ಯಲ್ಲೂ ಕೂಡ ರೂಪೇಶ್ ಶೆಟ್ಟಿ ವಿಜೇತರಾಗಿದ್ದರು ಇದಾದ ನಂತರ ಬಿಗ್ ಬಾಸ್ ಸೀಸನ್ 9 ಪಟ್ಟವನ್ನು ಕೂಡ ತಮ್ಮ ಮುಡುಗೇರಿಸಿಕೊಂಡಿದ್ದಾರೆ.

ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಬಿಗ್ ಬಿಗ್ ಬಾಸ್ ಸೀಸನ್ ಒಂದರಿಂದ ಹಿಡಿದು ಒಂಬತ್ತರ ವರೆಗೂ ಈ ಕಾರ್ಯಕ್ರಮ ಎಷ್ಟು ಅಚ್ಚುಕಟ್ಟಾಗಿ ಮೂಡಿ ಬಂದಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಕಿಚ್ಚ ಸುದೀಪ್ ಅಂತಾನೇ ಹೇಳಬಹುದು. ಕಿಚ್ಚ ಸುದೀಪ್ ಅವರನ್ನು ಬಿಟ್ಟರೆ ಮತ್ಯಾರು ಈ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಸಾಧ್ಯಾನೆ ಇಲ್ಲ ಎಂಬುವಷ್ಟರ ಮಟ್ಟಿಗೆ ಈ ಕಾರ್ಯಕ್ರಮಕ್ಕೆ ಜೀವವನ್ನು ತುಂಬಿದ್ದಾರೆ. ಪ್ರತಿಯೊಂದು ಸಂದರ್ಭದಲ್ಲಿಯೂ ಕೂಡ ನ್ಯಾಯಯುತವಾದಂತ ಹೇಳಿಕೆಯನ್ನೇ ನೀಡಿದ್ದಾರೆ ಕಂಟೆಸ್ಟೆಂಟ್ ಗಳಿಗೆ ಪ್ರೋತ್ಸಾಹ ಉತ್ಸಹವನ್ನು ತುಂಬಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಭಾಗವಹಿಸಿದಂತಹ ಪ್ರತಿಯೊಬ್ಬ ಸ್ಪರ್ದಿಯು ಕೂಡ ತಮ್ಮ ಜರ್ನಿ ವಿಟಿಯನ್ನು ನೋಡುವುದಕ್ಕೆ ಬಹಳ ಕಾತುರದಿಂದ ಕಾದಿರುತ್ತಾರೆ. ಏಕೆಂದರೆ ಈ ಜರ್ನಿ ವಿಟಿಯಲ್ಲಿ ಅವರು ಅನುಭವಿಸಿದಂತಹ ಎಲ್ಲಾ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲಾಗುತ್ತದೆ. ನೋವು ಇರಬಹುದು, ನಲಿವು ಇರಬಹುದು, ಕೋಪ ಇರಬಹುದು, ಬೇಸರ, ಮುನಿಸು ಅಷ್ಟೇ ಯಾಕೆ ಸಂತೋಷದಿಂದ ಕಾಲ ಕಳೆದಂತಹ ಪ್ರತಿಯೊಂದು ಕ್ಷಣವನ್ನು ಕೂಡ ಕ್ಯಾಮೆರಾ ಸೆರೆ ಹಿಡಿದಿರುತ್ತದೆ.

ಹಾಗಾಗಿ ಬಿಗ್ ಬಾಸ್ ಗೆ ಬರುವಂತಹ ಪ್ರತಿಯೊಬ್ಬ ಸ್ಪರ್ದಿಯು ಕೂಡ ತಮ್ಮ ಜರ್ನಿ ವಿಟಿಯನ್ನು ನೋಡುವುದಕ್ಕೆ ಬಹಳಷ್ಟು ಇಷ್ಟ ಪಡುತ್ತಾರೆ ಇದೇ ರೀತಿ ಕಿಚ್ಚ ಸುದೀಪ್ ಕೂಡ ಕಲರ್ಸ್ ಕನ್ನಡ ವಾಹಿನಿಯವರು ಜರ್ನಿ ವಿಟಿಯೊಂದನ್ನು ತಯಾರಿಸಿದರು. ಈ ವಿಟಿಯನ್ನು ನೋಡಿದಂತಹ ಕಿಚ್ಚ ಸುದೀಪ್ ಅವರು ಭಾವುಕರಾಗುತ್ತಾರೆ ಅಷ್ಟೇ ಅಲ್ಲದೆ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಕಣ್ಣೀರು ಹಾಕುತ್ತಾರೆ. ಕಿಚ್ಚ ಸುದೀಪ್ ಕಣ್ಣೀರು ಹಾಕಿದ್ದು ನೋಡಿದಂತಹ ಮನೆ ಮಂದಿ ಎಲ್ಲರೂ ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗುತ್ತಾರೆ.

ಏಕೆಂದರೆ ಒಬ್ಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಂತಹ ನಿರೂಪಕರಿಗೆ ಇಷ್ಟು ಅತ್ತಿರವಾಗಿರುವಂತಹ ಈ ಶೋ ಅವರ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿರಬಹುದು ಅಂತ. ಇನ್ನೂ ಮಾತನು ಮುಂದುವರಿಸಿದಂತಹ ಕಿಚ್ಚ ಸುದೀಪ್ ಅವರು ಜರ್ನಿ ವಿಟಿ ನೋಡಿದಾಗ ನಿಜಕ್ಕೂ ನನಗೆ ಕಣ್ಣೀರು ಬಂದು ಏಕೆಂದರೆ ನಾನು ಇಲ್ಲಿ ಒಬ್ಬ ಕ್ಯಾರೆಕ್ಟರ್ ಆಗಿ ಗುರುತಿಸಿಕೊಂಡಿಲ್ಲ ಬದಲಾಗಿ ಕಿಚ್ಚ ಸುದೀಪ್ ಆಗಿ ಉಳಿದುಕೊಂಡಿದ್ದೇನೆ. ಎಲ್ಲ ಕಂಟೆಸ್ಟೆಂಟ್ ಗಳಿಗೂ ಇರುವಂತೆ ನನಗೂ ಕೂಡ ಆಸೆ ಇದೆ ಪರ್ಫೆಕ್ಟ್ ಆಗಿ ಇರಬೇಕು ಅಂತ ಪ್ರಯತ್ನ ಪಡುತ್ತೇನೆ.

ಆದರೆ ದಿನ ಕಳೆದಂತೆ ನನ್ನ ಆಸೆ ಕನಸುಗಳೆಲ್ಲವೂ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ ಪ್ರತಿದಿನ ರಾತ್ರಿ ಮಲಗಿ ಬೆಳಗ್ಗೆ ಏಳುವಷ್ಟರ ಹೊತ್ತಿಗೆ ನಾನು ಸಾಮಾನ್ಯ ಮನುಷ್ಯನಂತೆ ಜೀವನ ಸಾಗಿಸಬೇಕು ಎಂಬ ಆಸೆ ಮತ್ತೆ ಹುಟ್ಟುತ್ತದೆ. ಈ ಸೆಲೆಬ್ರಿಟಿ ಜೀವನಕ್ಕಿಂತ ಸಾಮಾನ್ಯ ಮನುಷ್ಯನಾಗಿ ಬದುಕುವುದರಲ್ಲಿ ಹೆಚ್ಚು ಆತ್ಮ ಸಂತೃಪ್ತಿ ಎಂಬುದು ದೊರೆಯುತ್ತದೆ ಎಂದು ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರು ಕಣ್ಣೀರು ಹಾಕಿದ್ದಾರೆ.

ಸದ್ಯಕ್ಕೆ ಕಿಚ್ಚನ ಕಣ್ಣೀರು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇಷ್ಟು ದೊಡ್ಡ ಸ್ಥಾನಕ್ಕೆ ಹೋದರು ಕೂಡ ತಾವು ಸರಳವಾಗಿವೆ ಜೀವನ ನಡೆಸಬೇಕು ಅಂತ ಅಂದುಕೊಳ್ಳುತ್ತಿರುವುದು ನಿಜಕ್ಕೂ ಅಪರೂಪ. ಎಲ್ಲರೂ ಕೂಡ ಸೆಲೆಬ್ರಿಟಿ ಆಗಬೇಕು ಸಿರಿ ಸಂಪತ್ತು ಗಳಿಸಬೇಕು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದುಕೊಳ್ಳಬೇಕು ಅಂತ ಬಯಸುತ್ತಾರೆ. ಆದರೆ ಸುದೀಪ್ ಅವರು ಮಾತ್ರ ಸರಳವಾಗಿಯೇ ಜೀವನ ನಡೆಸಲು ಬಯಸುತ್ತಿದ್ದಾರೆ ಎಂದು ಅಭಿಮಾನಿಗಳೆಲ್ಲರೂ ಕೂಡ ಆಶ್ಚರ್ಯ ಪಟ್ಟಿದ್ದಾರೆ.