Sunday, June 4, 2023
HomeEntertainmentಬಿಗ್ ಬಾಸ್ ಸೀಸನ್ 9 ರ ವಿನ್ನರ್ ರೂಪೇಶ್ ಶೆಟ್ಟಿ. ರನ್ನರ್ ಅಪ್ ಆದ ರಾಕೇಶ್...

ಬಿಗ್ ಬಾಸ್ ಸೀಸನ್ 9 ರ ವಿನ್ನರ್ ರೂಪೇಶ್ ಶೆಟ್ಟಿ. ರನ್ನರ್ ಅಪ್ ಆದ ರಾಕೇಶ್ ಅಡಿಗ.

ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡ ರೂಪೇಶ್ ಶೆಟ್ಟಿ

ಈ ಬಾರಿಯ ಬಿಗ್ ಬಾಸ್ ಸೀಸನ್ 9.ರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮಿನಿ ಬಿಗ್ ಬಾಸ್ ಓಟಿಟಿ ಯಲ್ಲಿ ಮೂರನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆಗೆ ಕೊಟ್ಟಂತಹ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರು ಇದೀಗ ಬಿಗ್ ಬಾಸ್ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮಿನಿ ಬಿಗ್ ಬಾಸ್ ಓಟಿಟಿಯಲ್ಲೂ ಕೂಡ ವಿಜೇತರಾಗಿ ಸುಮಾರು 5 ಲಕ್ಷ ರೂಪಾಯಿಗಳು ನಗದು ಬಹುಮಾನವನ್ನು ಪಡೆದುಕೊಂಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ವಿಜೇತರಾಗಿ 50 ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ ಟ್ರೋಫಿ ಇದರ ಜೊತೆಗೆ ಇವರು ನೂರು ದಿನಗಳ ಕಾಲ ಇದ್ದಂತಹ ಸಂಭಾವನೆ ಇವೆಲ್ಲವನ್ನು ಕೂಡ ಪಡೆದುಕೊಂಡಿದ್ದಾರೆ.

ಬಹಳ ಟಫ್ ಕಾಂಪಿಟೇಶನ್ ಕೊಟ್ಟು ರೂಪೇಶ್ ಶೆಟ್ಟಿ ಅವರು ವಿನ್ ಆಗಿದ್ದಾರೆ ಕೆಲವು ಮೂಲಗಳ ಪ್ರಕಾರ ರಾಕೇಶ್ ಅಡಿಗ ವಿನ್ ಆಗಬಹುದು ಅಂತ ಹೇಳುತ್ತಿದ್ದರು. ಇವರನ್ನು ಹೊರತು ಪಡಿಸಿದರೆ ರೂಪೇಶ್ ರಾಜಣ್ಣ ಅವರಿಗೆ ಅತಿ ಹೆಚ್ಚಿನ ಅಭಿಮಾನಿ ಬಳಗ ಇದೆ ಹಾಗಾಗಿ ರಾಜಣ್ಣ ಅವರು ಗೆಲ್ಲಬಹುದು ಅಂತ ಹೇಳುತ್ತಿದ್ದರು. ಇದರ ಜೊತೆಗೆ ದೀಪಿಕಾ ದಾಸ್ ಅವರು ಕೂಡ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡಿದ್ದರು ಮಹಿಳಾ ಸ್ಪರ್ಧೆಗಳಲ್ಲಿ ದೀಪಿಕಾ ದಾಸ್ ಅವರು ಫಿನಾಲೆ ಅಂತಕ್ಕೆ ಬಂದಿದ್ದರು ಆದರೆ ನಾಲ್ಕನೇ ರನ್ನರ್ ಆಗಿ ರೂಪೇಶ್ ರಾಜಣ್ಣ ಮೂರನೇ ರನ್ನರ್ ಅಪ್ ಆಗಿ ದೀಪಿಕಾ ದಾಸ್ ಅವರು ಹೊರ ಬಂದಿದ್ದಾರೆ.

ಇಬ್ಬರು ಹೊರ ಬಂದ ನಂತರ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಅವರ ನಡುವೆ ಜಟಾಪಟಿ ಪ್ರಾರಂಭವಾಗುತ್ತದೆ ಆದರೆ ಅತಿ ಹೆಚ್ಚು ಫ್ಯಾನ್ಸ್ ಫಾಲ್ಲೋರ್ಸ್ ಇರುವ ಕಾರಣ ರೂಪ ಶೆಟ್ಟಿ ಅವರು ಅತಿ ಹೆಚ್ಚು ಪಡೆದು ಬಿಗ್ ಬಾಸ್ ಸೀಸನ್ ೯ ಗೆದ್ದಿದ್ದಾರೆ. ಅಫಿಶಿಯಲ್ ಆಗಿ ಕಲರ್ಸ್ ಕನ್ನಡ ವಾಹಿನಿಯವರು ಈ ಪ್ರೋಗ್ರಾಮನ್ನು ನಡೆಸಿಕೊಡುತ್ತಿರುವುದರಿಂದ ಇನ್ನು ವಿಜೇತರು ಯಾರು ಎಂಬುದನ್ನು ಘೋಷಣೆ ಮಾಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ಶೆಟ್ಟಿ ಅವರು ಟ್ರೋಫಿಯನ್ನು ಗೆದ್ದಿರುವಂತಹ ಕೆಲವೊಂದಷ್ಟು ಫೋಟೋಸ್ಗಳು ವೈರಲ್ ಆಗಿದೆ ಹಾಗಾಗಿ ಈ ಬಾರಿಯ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಎಂಬುದು ಸಾಬೀತು ಆಗಿದೆ.

ರೂಪೇಶ್ ಶೆಟ್ಟಿ ಅವರು ತುಳುನಾಡಿನ ಫೇಮಸ್ ನಟ ಗಾಯಕ ಕೂಡ ಹೌದು ಹಲವಾರು ಶಾರ್ಟ್ ಫಿಲಂ ಗಳನ್ನು ಮಾಡಿದ್ದಾರೆ ಇದರ ಜೊತೆಗೆ ರೇಡಿಯೋ ಜಾಕಿ ಕೂಡ ಹೌದು ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಲಾಕ್ಷೇತ್ರದಲ್ಲಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡಿದ್ದಾರೆ. ತುಳುನಾಡಲ್ಲಿ ಫೇಮಸ್ ಆಗಿದ್ದಂತಹ ಈ ನಟ ಇದೀಗ ಕರ್ನಾಟಕದ ಮನೆ ಮಾತಾಗಿದ್ದಾರೆ ರೂಪೇಶ್ ಶೆಟ್ಟಿಯವರು ಈ ಬಾರಿಯ ಬಿಗ್ ಬಾಸ್ ಗೆಲ್ಲುತ್ತಾರೆ ಅಂತ ಆರ್ಯವರ್ಧನ್ ಗುರೂಜಿ ಅವರು ಹೇಳಿದ್ದರು.

ಮೊದಲ ಬಾರಿಗೆ ಆರ್ಯವರ್ಧನ್ ಗುರೂಜಿ ನುಡಿದಂತಹ ಭವಿಷ್ಯ ಸತ್ಯವಾಗಿದೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ ಅದೇನೆ ಆಗಲಿ ಸದ್ಯಕ್ಕೆ 100 ದಿನಗಳಿಂದ ಮನೆಯಲ್ಲಿ ಇದು ಎಲ್ಲಾ ಟಾಸ್ಗಳ್ಳಲ್ಲಿಯೂ ಕೂಡ ಉತ್ತಮವಾಗಿ ಆಡಿ ತಮ್ಮದೇ ಆದಂತಹ ಫ್ಯಾನ್ ಬೇಸ್ ಅನ್ನು ಕ್ರಿಯೇಟ್ ಮಾಡಿದಂತಹ ರೂಪೇಶ್ ಶೆಟ್ಟಿ ವಿಜೇತರಗಿರುವುದು ಬಹಳಷ್ಟು ಅಭಿಮಾನಿಗಳಲ್ಲಿ ಸಂತಸ ತಂದಿದೆ ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕಿತ್ತು ತಪ್ಪದೆ ಕಾಮೆಂಟ್ ಮಾಡಿ.