ಹೊಲಗದ್ದೆಗಳಲ್ಲಿ ಗರಿಕೆ ಮತ್ತು ಜೇಕಿನ ಹುಲ್ಲು ಬೆಳೆಯುವುದು ಸಹಜ ಹಾಗೆಂದ ಮಾತ್ರಕ್ಕೆ ಇದೇ ಇಡೀ ಗದ್ದೆ ಪೂರ್ತಿ ಇದ್ದರೆ ನಮ್ಮ ಗದ್ದೆಯಲ್ಲಿ ಬೆಳೆಯುವಂತಹ ಬೆಳೆಗಳೆಲ್ಲವೂ ಸಹ ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗರಿಕೆ ಮತ್ತು ಜೇಕಿನ ಹುಲ್ಲು ಬಾರದ ಹಾಗೆ ನಾವು ನಮ್ಮ ಗದ್ದೆಯನ್ನು ಸಂರಕ್ಷಣೆಯಿಂದ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಇಲ್ಲವಾದರೆ ಅದು ನಮ್ಮ ಬೆಳೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಗರಿಕೆ ಮತ್ತು ಜೇಕಿನ ಹುಲ್ಲನ್ನು ಬೇರು ಸಹಿತ ನಿಯಂತ್ರಣ ಮಾಡಬೇಕು ಎಂದರೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ನಾವು ರಾಸಾಯನಿಕವಾಗಿ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಇವುಗಳನ್ನು ನಾಶಪಡಿಸಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಮೊದಲನೆಯದಾಗಿ ಗರಿಕೆ ಇದು ನಮ್ಮ ದೇಹದ ಆರೋಗ್ಯವನ್ನು ಸಹ ಕಾಪಾಡುವಂತಹ ಒಂದು ಅದ್ಭುತವಾದಂತಹ ಸಸ್ಯ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಗರಿಕೆಯ ಜ್ಯೂಸ್ ಅನ್ನು ಕುಡಿಯುವುದ ರಿಂದ ನಮ್ಮ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನ್ ಗಳ ಸಮಸ್ಯೆ ಆಗಿರಬಹುದು ಹಾಗೂ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ.
ಆಯುರ್ವೇದದ ಪದ್ಧತಿಯಲ್ಲಿ ಗರಿಕೆಯನ್ನು ಬಹಳ ಅತ್ಯುತ್ತಮವಾದಂತಹ ಮನೆಮದ್ದು ಅಂದರೆ ಗಿಡಮೂಲಿಕೆ ಎಂದೇ ಕರೆಯುತ್ತಾರೆ. ಆದರೆ ಈ ಗರಿಕೆ ಮತ್ತು ಜೇಕಿನ ಹುಲ್ಲು ನಮ್ಮ ಹೊಲಗದ್ದೆಗಳಲ್ಲಿ ನಮ್ಮ ಮನೆ ಅಕ್ಕ ಪಕ್ಕದ ಸ್ಥಳದಲ್ಲಿ ಹೆಚ್ಚಾಗಿ ಬೆಳೆದರೆ ಅದನ್ನು ನಾವು ದೂರ ಮಾಡುವುದಕ್ಕೆ ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸುವುದು ಉತ್ತಮ.
ಅದರಲ್ಲೂ ಮೊದಲನೆಯದಾಗಿ ನಮ್ಮ ಹೊಲಗದ್ದೆಗಳಲ್ಲಿ ಇವುಗಳನ್ನು ನಾವು ಕೃಷಿ ಪದ್ಧತಿಯಲ್ಲಿ ಅಂದರೆ ಕೃಷಿಯಲ್ಲಿ ಉಪಯೋಗಿಸುವಂತಹ ಯಂತ್ರೋಪಕರಣಗಳ ಸಹಾಯದಿಂದ ಇವುಗಳನ್ನು ಹೇಗೆ ತಡೆಗಟ್ಟಬಹುದು ಎಂದು ತಿಳಿಯೋಣ. ಆನಂತರ ರಾಸಾಯನಿಕವಾಗಿ ಯಾವ ಒಂದು ವಸ್ತುವನ್ನು ಉಪಯೋಗಿಸುವುದರ ಮೂಲಕ ಇದನ್ನು ಬೇರು ಸಹಿತ ನಾಶ ಮಾಡಬಹುದು ಎನ್ನುವುದನ್ನು ತಿಳಿಯೋಣ.
* ಮೊದಲನೆಯದಾಗಿ ನಮ್ಮ ಕೃಷಿ ಯಂತ್ರೋಪಕರಣಗಳನ್ನು ಉಪ ಯೋಗಿಸಿ ಇದನ್ನು ಹೇಗೆ ಸರಿಪಡಿಸಬಹುದು ಎಂದರೆ ನಾವು ಹೊಲಗದ್ದೆ ಗಳಲ್ಲಿ ಬೆಳೆಯನ್ನು ಬೆಳೆದ ತಕ್ಷಣ ನಾವು ಹೊಲವನ್ನು ನೇಗಿಲು ಅಥವಾ ಟ್ರ್ಯಾಕ್ಟರ್ ಮೂಲಕ ಉಳಿಸುತ್ತೇವೆ. ಈ ರೀತಿ ತಕ್ಷಣವೇ ನಾವು ಮಾಡು ವುದರಿಂದ ಬೇಗನೆ ಅಲ್ಲಿ ಗರಿಕೆ ಮತ್ತು ಜೇಕಿನ ಹುಲ್ಲು ಬರುವುದಿಲ್ಲ.
ಬದಲಿಗೆ ನಿಧಾನವಾಗಿ ಬರುತ್ತದೆ ಆನಂತರ ನೀವು ಆ ಒಂದು ಸ್ಥಳದಲ್ಲಿ ಬೆಳೆಯನ್ನು ಬೆಳೆಯುವಂತಹ ಒಂದು ತಿಂಗಳ ಮುಂಚಿತವಾಗಿ ಈ ಒಂದು ವಿಧಾನವನ್ನು ಮತ್ತೆ ಅನುಸರಿಸುವುದರಿಂದ ಇದನ್ನು ದೂರ ಮಾಡಬಹುದು.
* ಇನ್ನು ಎರಡನೆಯ ವಿಧಾನ ರಾಸಾಯನಿಕ ಔಷಧಿ ಯಾವುದು ಎಂದರೆ ರೌಂಡಪ್ ಎನ್ನುವುದು ನಿಮಗೆ ಸಿಗುತ್ತದೆ ಇದನ್ನು ನೀವು ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ಇದನ್ನು ಗರಿಕೆ ಮತ್ತು ಜೇಕಿನ ಹುಲ್ಲು ಇರುವಂತಹ ಸ್ಥಳಗಳಿಗೆ ಹಾಕುವುದರಿಂದ ಅದು ಬೇರು ಸಮೇತ ಒಣಗಿ ಹೋಗುತ್ತದೆ.
ಈ ರೀತಿ ಮಾಡುವುದರಿಂದ ಇದನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಆದರೆ ಇದನ್ನು ಹೊಲಗದ್ದೆಗಳಿಗೆ ಉಪಯೋಗಿಸುವುದಕ್ಕೂ ಮುನ್ನ ಅಂದರೆ ಬೆಳೆಯನ್ನು ಬೆಳೆದ ನಂತರ ಹಾಗೂ ಬೆಳೆಯನ್ನು ಬೆಳೆಯುವ ಒಂದು ತಿಂಗಳ ಮುಂಚಿತವಾಗಿ ಇದನ್ನು ಸಿಂಪಡಿಸುವುದು ಉತ್ತಮ.
ಇಲ್ಲವಾದರೆ ನಿಮ್ಮ ಬೆಳೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಈ ಒಂದು ಔಷಧಿಯನ್ನು ಸಿಂಪಡಿಸುವುದಕ್ಕೆ ಉತ್ತಮವಾದಂತಹ ಸಮಯ ಯಾವುದು ಎಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್.